ಜನಪದ ಹಾಡಿನ ಮೋಡಿಗಾರ ಗುರುರಾಜ ಕೆಂಧೂಳಿ ಇನ್ನಿಲ್ಲ
ಗಾಯನ ನಿಲ್ಲಿಸಿದ ಜಾನಪದ `ಗುರು' ಕೆಂಧೂಳಿ
Team Udayavani, Feb 27, 2023, 5:33 PM IST
ರಬಕವಿ-ಬನಹಟ್ಟಿ : ಯಾಕ ತಂಗಿ ಇಷ್ಟ್ಯಾಕ ಸೊರಗಿದಿ…, ಹೆಂಡತಿ ಅಂದರ ನಗುತಾನ… ಹೀಗೆ ಸಾವಿರಾರು ಜಾನಪದ ಗೀತೆಗಳನ್ನು ಹಾಡಿ ಲಕ್ಷಾಂತರ ಜನರ ಮನಗೆದ್ದ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿಯ ಖ್ಯಾತ ಗಾಯಕ ಗುರುರಾಜ ಕೆಂಧೂಳಿ(72) ಸೋಮವಾರದಂದು ನಿಧನರಾದರು. ಮೃತರು ಪತ್ನಿ ಸುಪುತ್ರ ಹಾಗೂ ಸುಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
1951 ರಲ್ಲಿ ಬಡಕುಟುಂಬದಲ್ಲಿ ಜನಿಸಿದ ಗುರುರಾಜ ಕೆಂಧೂಳಿ ಹುಟ್ಟಿನಿಂದಲೇ ಜನಪದ ಕಲೆ ಮೈಗೂಡಿಸಿಕೊಂಡು ಬೆಳೆದವರು. ಕ್ಯಾಸೆಟ್‌ಗಳ ಕಾಲವಾಗಿದ್ದ 1985 ರಲ್ಲಿ `ಯಾಕ ತಂಗಿ ಇಷ್ಟ್ಯಾಕ ಸೊರಗಿದಿ’ ಎಂಬ ಜಾನಪದ ಗೀತೆ ರಾಜ್ಯದೆಲ್ಲೆಡೆ ಪಸರಿಸಿಕೊಂಡು ಮನೆಮಾತಾದರು. ಮರು ವರ್ಷವೇ ಹೆಂಡತಿ ಅಂದರ ನಗುತಾನ.. ಎಂಬ ಗೀತೆಯೆಂದಿಗೆ ತನ್ನ ಜನಪ್ರಿಯತೆ ಇಮ್ಮಡಿಗೊಳಿಸಿಕೊಂಡು ಸಾವಿರಾರು ಹಾಡುಗಳಿಗೆ ಸಾಕ್ಷಿಯಾಗಿದ್ದರು.
ಸುಮಾರು 150 ಕ್ಕೂ ಹೆಚ್ಚು ಜನಪದ ಹಾಗೂ ಭಕ್ತಿ ಗೀತೆಗಳನ್ನು ರಚಿಸಿ ಅವುಗಳನ್ನು ಧ್ವನಿ ಸುರಳಿಗೆ ಅಳವಡಿಸಿ ಹಾಡಿರುವ ಕೆಂಧೂಳಿ ಸುಮಾರು ಮೂರುನೂರುಕ್ಕೂ ಹೆಚ್ಚು ಧ್ವನಿ ಸುರಳಿಗಳಿಗೆ ಹಾಡಿದ್ದಾರೆ. ನಾಡಿನ ಶ್ರೇಷ್ಠ ಗಾಯಕರಾದ ಮಂಜುಳಾ ಗುರುರಾಜ, ಚಂದ್ರಿಕಾ ಗುರುರಾಜ, ಬಿ.ಆರ್.ಛಾಯಾ ಮತ್ತು ಕಸ್ತೂರಿ ಶಂಕರ ಅವರು ಗುರುರಾಜ ಕೆಂಧೂಳಿಯವರ ಕ್ಯಾಸೆಟ್‌ಗಳಿಗೆ ಹಾಡಿರುವುದು ಅಪರೂಪದ ಸಂಗತಿ.
ಗುರುರಾಜ ಕೆಂಧೂಳಿಯವರು ಹಾಡಿರುವ ಶ್ರೀಶೈಲ ಮಲ್ಲಿಕಾರ್ಜುನನ ಮೇಲಿನ ಭಕ್ತಿ ಗೀತೆಗಳು ಬಹಳಷ್ಟು ಪ್ರಸಿದ್ದಿಯನ್ನು ಪಡೆದಿವೆ. ನೆರೆಯ ಆಂಧ್ರದ ಶ್ರೀಶೈಲಕ್ಕೆ ಹೋಗಿ ಭಕ್ತಿ ಗೀತೆಗಳ ಕ್ಯಾಸೆಟ್‌ಗಳನ್ನು ಕೊಡಿ ಎಂದರೆ ಸಾಕು ಅವರು ಮೊದಲು ತಮ್ಮ ಮುಂದಿಡುವುದೇ ಕೆಂಧೂಳಿಯವರ ಕ್ಯಾಸೆಟ್‌ಗಳನ್ನು “ಮಾಡಿರೋ ಮಲ್ಲಯ್ಯನ ಧ್ಯಾನ”, “ಕಂಬಿ ಹಾಡುಗಳು”, “ಶ್ರೀಶೈಲ ಯಾತ್ರಾ ಮಾಡೋಣ ನಡಿ”, “ಮಲ್ಲಯ್ಯ ಬಂದಾನ ನಡಿ”, “ಉಘೇ ಮಲ್ಲಯ್ಯ”, “ಶ್ರೀಗಿರಿ ಮಲ್ಲಯ್ಯ” ಇಂತಹ ಹತ್ತಾರು ಅವರು ಧ್ವನಿ ಸುರಳಿಗಳು ಪ್ರಸಿದ್ಧವಾಗಿವೆ.
ಕ್ಯಾಸೆಟ್ ಯುಗದಲ್ಲಿ ಅವರ ಕ್ಯಾಸೆಟ್‌ಗಳು ಉತ್ತರಕರ್ನಾಟಕದ ಪ್ರತಿಯೊಂದು ಅಂಗಡಿಯಲ್ಲಿಯೂ ರಾರಾಜಿಸುತ್ತಿದ್ದವು. ಈಗಲೂ ಕೂಡಾ ಅವು ಸಿಡಿಗಳ ಮೂಖಾಂತರ ಮಾರಾಟವಾಗುತ್ತಿದ್ದು, ಹಳ್ಳಿಯ ಜನ ಇವರ ಕ್ಯಾಸೆಟ್ ಮತ್ತು ಸಿಡಿಗಳಿಗೋಸ್ಕರ ಮುಗಿಬೀಳುವುದು ಸರ್ವೆ ಸಾಮಾನ್ಯವಾಗಿತ್ತು. ಇಂತಹ ಕೆಂಧೂಳಿ ಇದೀಗ ಇಹಲೋಕ ತ್ಯಜಿಸಿದ್ದು, ಅಪಾರ ಸಂಖ್ಯೆ ಅಭಿಮಾನಿಗಳ ಮನದಲ್ಲಿ ನೀರವ ಮೌನ ಆವರಿಸಿದೆ.
ಇದನ್ನೂ ಓದಿ: ಸಚಿವ ಅಶ್ವಥ್ ನಾರಾಯಣ್ ಅವರನ್ನು ಸಂಪುಟದಿಂದ ವಜಾಗೊಳಿಸಿ; ರಕ್ಷಾ ರಾಮಯ್ಯ ಒತ್ತಾಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.