Guttigaru: ಅಸೌಖ್ಯದಿಂದ ನಾಲ್ಕೂರು ಗ್ರಾಮದ ಯುವಕ ಸಾವು
Team Udayavani, Sep 17, 2024, 11:23 PM IST
ಗುತ್ತಿಗಾರು: ಅಸೌಖ್ಯದಿಂದ ಯುವಕನೋರ್ವ ಸಾವನ್ನಪ್ಪಿದ ಘಟನೆ ನಾಲ್ಕೂರು ಗ್ರಾಮದ ಕಲ್ಲಾಜೆಯಲ್ಲಿ ನಡೆದಿದೆ. ಗ್ರಾಮದ ಲಕ್ಷ್ಮಣ ಗೌಡ ಕಲ್ಲಾಜೆ ಅವರ ಪುತ್ರ ಲಿಖೀತ್ ಕಲ್ಲಾಜೆ (25) ಮೃತ ಯುವಕ.
ಅವರು ಸೆ. 16ರ ರಾತ್ರಿ ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ನಿಧನರಾದರು. ಮಂಗಳೂರಿನಲ್ಲಿ ಖಾಸಗಿ ಉದ್ಯೋಗದಲ್ಲಿದ್ದ ಅವರಿಗೆ ಕೈಕಾಲು ಬಲಹೀನತೆಯ ಸಮಸ್ಯೆ ಕಾಣಿಸಿಕೊಂಡಿದ್ದು, ಅದಕ್ಕೆ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ ರಾತ್ರಿ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಮೃತರು ತಂದೆ, ತಾಯಿ, ಸಹೋದರನನ್ನು ಅಗಲಿದ್ದಾರೆ.