ಹಳೆಯಂಗಡಿ: ರೈಲ್ವೇ ಕ್ರಾಸಿಂಗ್ ಗೇಟ್ ಲಾಕ್! ಮೂವತ್ತು ನಿಮಿಷ ಸಂಚಾರಕ್ಕೆ ತಡೆ
Team Udayavani, Feb 27, 2022, 1:23 PM IST
ಹಳೆಯಂಗಡಿ : ಹಳೆ ಯಂಗಡಿಯ ರೈಲ್ವೇ ಕ್ರಾಸಿಂಗ್‌ನಲ್ಲಿ ತಾಂತ್ರಿಕ ತೊಂದರೆಯಿಂದ ಗೇಟ್ ಲಾಕ್ ಆಗಿ ಸುಮಾರು ಮೂವತ್ತು ನಿಮಿಷ ಸಂಚಾರ ಸಂಪೂರ್ಣ ಸ್ಥಗಿತಗೊಂಡ ಘಟನೆ ಶನಿವಾರ ಸಂಭವಿಸಿದೆ. ಹಳೆಯಂಗಡಿ-ಪಕ್ಷಿಕೆರೆ ರಸ್ತೆಯಲ್ಲಿ ರೈಲ್ವೇ ಗೇಟ್‌ನ ಕ್ರಾಸಿಂಗ್‌ನಲ್ಲಿ ರೈಲಿನ ಎಂಜಿನ್ ಸಂಚರಿಸಲು ಗೇಟ್ ಅನ್ನು ಬಂದ್ ಮಾಡಲಾಗಿತ್ತು. ಈ ನಡುವೆ ಕ್ರಾಸಿಂಗ್‌ನಿಂದ ಸುಮಾರು 100 ಮೀ. ದೂರ ಸಂಚರಿಸಿದಾಗ ವಿದ್ಯುತ್ ಕೈ ಕೊಟ್ಟಿತು. ಇದರಿಂದ ಎಂಜಿನ್ ಏಕಾಏಕಿ ರೈಲು ಹಳಿಯಲ್ಲಿಯೇ ನಿಂತಿತು ಇದರಿಂದ ಗೇಟ್ ಸಹ ಲಾಕ್ ಆಗಿ ಕ್ರಾಸಿಂಗ್‌ನ ಎರಡೂ ಬದಿಯಲ್ಲಿ ನಿಂತಿದ್ದ ವಾಹನಗಳು ಸಂಚರಿಸಲಾಗದೇ ಸುಮಾರು 30 ನಿಮಿಷಗಳ ಬಳಿಕ ತಾಂತ್ರಿಕ ತೊಂ ದರೆಯನ್ನು ಸರಿಪಡಿಸಲಾಯಿತು. ಆಗ ಗೇಟ್ ತೆರೆಯಿತು. ಗೇಟ್‌ನ ಹತ್ತಿರದಲ್ಲಿ ಸಿಲುಕಿಕೊಂಡ ವಾಹನಗಳ ಮಾಲಕರ ಹಾಗೂ ಗೇಟ್ ಅನ್ನು ನಿರ್ವಹಣೆ ನಡೆ ಸುತ್ತಿರುವವರ ನಡುವೆ ಮಾತುಕತೆ ನಡೆಯಿತು. ತಾಂತ್ರಿಕ ತೊಂದರೆಯ ಬಗ್ಗೆ ಮಾಹಿತಿ ನೀಡಿದರೂ ಕೆಲವರು ಸಮಾಧಾನವಾಗದೇ ಗೇಟ್ ತೆರೆಯಲು ಆಕ್ರೋಶ ವ್ಯಕ್ತಪಡಿಸಿದರು.
ಈ ಬಗ್ಗೆ ಗೇಟ್ ನಿರ್ವಹಣೆ ನಡೆಸುತ್ತಿರುವ ವಿಶ್ವನಾಥ್ ಅವರು ಉದಯವಾಣಿ ಸುದಿನಕ್ಕೆ ಪ್ರತಿ ಕ್ರಿಯಿಸಿ, ಹಳೆಯಂಗಡಿಯ ಗೇಟ್ ವಿಶೇಷತೆ ಎಂದರೆ ಗೇಟ್‌ನಿಂದ ಕೇವಲ 100 ಮೀ. ದೂರದಲ್ಲಿ ರೈಲು ಅಥವ ಎಂಜಿನ್ ಸಾಗಿದಲ್ಲಿ ಗೇಟ್ ತೆರೆಯುತ್ತದೆ. ಇಲ್ಲಿನ ಸಂಚಾರದ ಒತ್ತಡ ಇದಕ್ಕೆ ಮೂಲ ಕಾರಣವಾಗಿದೆ. ಉಳಿದ ಎಲ್ಲ ಗೇಟ್‌ಗಳಲ್ಲಿ ಸುಮಾರು ಒಂದು ಕಿ.ಮೀ. ಅಂತರದಲ್ಲಿ ಗೇಟ್ ಲಾಕ್ ಆಗುತ್ತದೆ. ಶನಿವಾರ ಎಂಜಿನ್ 100 ಮೀ. ಅಂತರದಲ್ಲಿಯೇ ಸಂಚ ರಿಸುವಾಗಲೇ ವಿದ್ಯುತ್ ಕೈ ಕೊಟ್ಟಿದೆ. ಇತ್ತೀಚಿನ ದಿನಗಳಲ್ಲಿ ವಿದ್ಯುತ್ ಸಂಪರ್ಕದಿಂದಲೇ ರೈಲುಗಳು ಹಳಿ ಯಲ್ಲಿ ಸಂಚರಿಸುತ್ತಿದ್ದು, ಮೊದಲ ಬಾರಿ ಇಂತಹ ಸಮಸ್ಯೆ ಕಂಡು ಬಂದಿದೆ. ವಾಹನಗಳ ಸವಾರರಿಗೆ ಮನವರಿಕೆ ಮಾಡಲಾಗಿತ್ತು. ತಾಂತ್ರಿಕ ವ್ಯವಸ್ಥೆಯಲ್ಲಿ ವ್ಯತ್ಯಯ ಆದಲ್ಲಿ ಜನರೂ ಸಹಕರಿಸಬೇಕು ಎಂದರು.
ಮರಳಿ ನೆನಪಾದ ಮೇಲ್ಸೇತುವೆ
ಹಳೆಯಂಗಡಿಯ ರೈಲ್ವೇ ಗೇಟ್‌ನಲ್ಲಿ ವಾಹನಗಳ ಸಂಚಾರ ದಟ್ಟಣೆ ಹೆಚ್ಚಾಗುತ್ತಿದ್ದು, ಇಲ್ಲಿ ಅತೀ ಅಗತ್ಯವಿರುವ ಮೇಲ್ಸೇತುವೆ ನಿರ್ಮಾಣ ಮಾಡಲು ಜನಪ್ರತಿನಿಧಿ ಗಳು ಮುಂದಾಗಬೇಕು ಇಲ್ಲದಿದ್ದಲ್ಲಿ ಮುಂದೊಂದು ದಿನ ಇಂತಹ ಘಟನೆಗಳೇ ಜನರ ಪ್ರತಿರೋಧಕ್ಕೆ ಕಾರಣವಾಗಿ ಪ್ರತಿಭಟನೆ ನಡೆಯುವ ಸಾಧ್ಯತೆ ಹೆಚ್ಚಾಗಿದೆ ಎಂದು ಸಾಮಾ ಜಿಕ ಕಾರ್ಯಕರ್ತ ಅದ್ದಿ ಬೊಳ್ಳೂರು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.