ಹಳ್ಳಿಹೊಳೆ: ಸೌಲಭ್ಯ ಸಿಗದಿದ್ದರೆ ಮತ ಬಹಿಷ್ಕಾರ! ಗ್ರಾಮಸ್ಥರ ಎಚ್ಚರಿಕೆ
Team Udayavani, Jul 13, 2021, 7:20 AM IST
ಕುಂದಾಪುರ: ಹಳ್ಳಿಹೊಳೆ ಗ್ರಾಮಕ್ಕೆ ರಸ್ತೆ, ಸೇತುವೆ, ನೆಟ್‌ವರ್ಕ್‌ನಂತಹ ಸೌಲಭ್ಯ ಗಳನ್ನು ಆದಷ್ಟು ಬೇಗ ಕಲ್ಪಿಸ ದಿದ್ದರೆ ಮುಂಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಗಳನ್ನು ಬಹಿಷ್ಕರಿ ಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಈ ಸಂಬಂಧ ಕಲ್ಸಂಕ, ಇರಿಗೆ, ವಾಟೆಬಚ್ಚಲು ಮತ್ತಿತರ ಪ್ರದೇಶಗಳ ಗ್ರಾಮಸ್ಥರು ರವಿವಾರ ಸಂಜೆ ಇರಿಗೆ ಶಾಲೆಯ ಆವರಣದಲ್ಲಿ ಸಭೆ ನಡೆಸಿದ್ದಾರೆ. ಸಭೆಯಲ್ಲಿ 35ರಿಂದ 40ಕ್ಕೂ ಹೆಚ್ಚು ಮನೆಗಳ ಜನರು ಸೇರಿದ್ದು, ನೆಟ್‌ವರ್ಕ್, ರಸ್ತೆ, ಸೇತುವೆ ಮತ್ತಿತರ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಸೂಕ್ತ ಕ್ರಮ ಕೈಗೊಳ್ಳದಿದ್ದರೆ, ಪ್ರತೀ ಮನೆಯವರು “ನಮ್ಮ ಬೇಡಿಕೆ ಈಡೇರಿಸದಿದ್ದಕ್ಕೆ ಮತದಾನ ಬಹಿಷ್ಕರಿಸುತ್ತೇವೆ’ ಎನ್ನುವ ಫಲಕವನ್ನು ಮನೆ ಮುಂದೆ ಹಾಕಿಕೊಳ್ಳುವ ನಿರ್ಧಾರ ಕೈಗೊಂಡಿದ್ದಾರೆ.
ಉದಯವಾಣಿ ವರದಿ
ಹಳ್ಳಿಹೊಳೆ ಗ್ರಾಮದ ಹಳ್ಳಿಹೊಳೆ ಗ್ರಾಮದ ಹತ್ತು ಹಲವು ಸಮಸ್ಯೆಗಳ ಬಗ್ಗೆ “ಉದಯವಾಣಿ’ ಪತ್ರಿಕೆಯು “ಇಳಿದಷ್ಟೂ ಸಮಸ್ಯೆ ಆಳ’ ಮತ್ತು “ಸಾಗರದಷ್ಟು ಸಮಸ್ಯೆಗಳಿಗೆ ಸಾಸಿವೆಯಷ್ಟೇ ಪರಿಹಾರ !’ ಶೀರ್ಷಿಕೆಯಡಿ ಜು. 2ರಂದು “ಗ್ರಾಮ ಭಾರತ’ ಸರಣಿಯಲ್ಲಿ ಸಮಗ್ರ ವರದಿಯನ್ನು ಪ್ರಕಟಿಸಿ ಗಮನ ಸೆಳೆದಿತ್ತು. ಈ ವರದಿಗೆ ಸ್ಪಂದಿಸಿ ಹಳ್ಳಿಹೊಳೆ ಗ್ರಾಮಕ್ಕೆ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರ ಕಚೇರಿ ತಂಡ, ಬೈಂದೂರು ತಹಶೀಲ್ದಾರ್ ಶೋಭಾಲಕ್ಷ್ಮೀ ಭೇಟಿ ನೀಡಿ, ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದ್ದರು.
ಸಂಸದರು ಸೇತುವೆ, ನೆಟ್‌ವರ್ಕ್ ಒದಗಿವ ಸಂಬಂಧ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುವುದಾಗಿ ಭರವಸೆ ನೀಡಿದ್ದರು. ಜತೆಗೆ ಜಿಯೋ ಖಾಸಗಿ ಮೊಬೈಲ್ ಸಂಸ್ಥೆಯವರನ್ನು ಹಳ್ಳಿಹೊಳೆಗೆ ಕಳುಹಿಸಿ ಅಧ್ಯಯನ ನಡೆಸಿ, ಟವರ್ ಮಾಡಿಕೊಡುವ ಬಗ್ಗೆ ಪರಿಶೀಲಿಸಲು ಸೂಚಿಸಿದ್ದರು. ಆದರೆ ಕೆಲವು ದಿನಗಳಿಂದ ಜಿಯೋ ಸಂಸ್ಥೆಯವರು ಇಲ್ಲಿ ನೆಟ್‌ವರ್ಕ್ ಸೇವೆ ನೀಡಲು ಹಿಂದೇಟು ಹಾಕಿದ್ದಾರೆ ಎನ್ನಲಾಗಿದ್ದು, ಅದಕ್ಕಾಗಿ ಗ್ರಾಮಸ್ಥರೆಲ್ಲ ಒಟ್ಟಾಗಿ ಸಭೆ ನಡೆಸಿ, ಈ ತೀರ್ಮಾನಕ್ಕೆ ಬಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kambala Kalarava: ರಾಜ ಮನೆತನದ ಐತಿಹ್ಯವಿರುವ ಮೂಲ್ಕಿ ಸೀಮೆಯ ʼಅರಸು ಕಂಬಳʼ
Manipal: ಕೇಂದ್ರ ಸರಕಾರದ ಯೋಜನೆ ಫಲಾನುಭವಿಗಳಿಗೆ ಸಾಲ ನೀಡಲು ಸತಾಯಿಸಬೇಡಿ: ಸಂಸದ ಕೋಟ
Udupi; ಗೀತಾರ್ಥ ಚಿಂತನೆ 132: ತಣ್ತೀವಿರುವುದು ಉಪದೇಶಕ್ಕಲ್ಲ, ಅಭ್ಯಾಸಕ್ಕೆ
Udupi: ವಿಶ್ವಶಾಂತಿಗೆ ಭಗವದ್ಗೀತೆಯೇ ಮೂಲಾಧಾರ: ಪುತ್ತಿಗೆ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ
Padubidri: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸಹ ಸವಾರ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.