ಹರ್ಭಜನ್ ಕೂಡ ಐಪಿಎಲ್ನಿಂದ ದೂರ? ಚೆನ್ನೈ ತಂಡಕ್ಕೆ ಗಾಯದ ಮೇಲೆ ಬರೆ
Team Udayavani, Aug 31, 2020, 8:00 PM IST
ಚೆನ್ನೈ : ಚೆನ್ನೈ ತಂಡದ ಮತ್ತೋರ್ವ ಆಟಗಾರ, ಪ್ರಮುಖ ಸ್ಪಿನ್ನರ್ ಹರ್ಭಜನ್ ಸಿಂಗ್ ಕೂಡ ಈ ಸಲದ ಐಪಿಎಲ್ನಿಂದ ದೂರ ಉಳಿಯಲಿದ್ದಾರೆಯೇ? ಇಂಥದೊಂದು ಸುದ್ದಿ ಹುಟ್ಟಿಕೊಂಡಿದೆ.
ಮಂಗಳವಾರ ಹರ್ಭಜನ್ ಸಿಂಗ್ ಯುಎಇಗೆ ತೆರಳಬೇಕಿದೆ. ಆದರೆ ಚೆನ್ನೈ ತಂಡದ ಮೇಲೆ ಕೊರೊನಾ ಮುಗಿಬಿದ್ದಿರುವುದರಿಂದ ಹರ್ಭಜನ್ ಚಿಂತಿತರಾಗಿದ್ದಾರೆ. ಹೀಗಾಗಿ ಅವರು ತಮ್ಮ ಪ್ರಯಾಣವನ್ನು ಇನ್ನಷ್ಟು ವಿಳಂಬಗೊಳಿಸಬಹುದು ಅಥವಾ ಕೂಟದಿಂದಲೇ ಹೊರಗುಳಿಯಬಹುದು ಎಂದು ಹರ್ಭಜನ್ಗೆ ಬಹಳ ಹತ್ತಿರವಾಗಿರುವ ಮೂಲವೊಂದು ಹೇಳಿದ್ದಾಗಿ “ಇನ್ಸೈಡ್ ನ್ಪೋರ್ಟ್’ ವರದಿ ಮಾಡಿದೆ.
ತಾಯಿಯ ಅನಾರೋಗ್ಯದಿಂದಾಗಿ ಹರ್ಭಜನ್ ಚೆನ್ನೈ ತಂಡದೊಂದಿಗೆ ಪ್ರಯಾಣಿಸಿರಲಿಲ್ಲ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.