Manipal ಸೌರಶಕ್ತಿಯ ಸದುಪಯೋಗ: ಸೆಲ್ಕೋ ಕಚೇರಿಗೆ ಆಫ್ರಿಕಾ ಪ್ರತಿನಿಧಿಗಳ ಭೇಟಿ
Team Udayavani, Sep 25, 2023, 12:24 AM IST
ಮಣಿಪಾಲ: ಸೆಲ್ಕೋ ಫೌಂಡೇಶನ್ ಮತ್ತು ಗ್ಲೋಬಲ್ ಎಸ್‌ಡಿಜಿ 7 ಹಬ್ಸ್ ಜತೆಯಾಗಿ ಆಫ್ರಿಕಾದ ಇಥಿಯೋಪಿಯಾ, ಸಿಯೇರಾ ಲಿಯೋನ್ ಹಾಗೂ ತಾಂಝನಿಯಾ ದೇಶದ ಪ್ರತಿನಿಧಿಗಳಿಗೆ 10 ದಿನಗಳ ಉದ್ಯಮ ಆಧಾರಿತ ತರಬೇತಿ, ನೆಟ್‌ವರ್ಕಿಂಗ್, ಎಕ್ಸ್ ಪೋಶರ್ ಕಾರ್ಯಕ್ರಮ ಹಮ್ಮಿಕೊಂಡಿದೆ.
ಶುಕ್ರವಾರ ಇಲ್ಲಿನ ಭಾರತೀಯ ವಿಕಾಸ್ ಟ್ರಸ್ಟ್ ನ ಸೆಲ್ಕೋ ಕಚೇರಿಯಲ್ಲಿ ಆಫ್ರಿಕಾದ ಪ್ರತಿನಿಧಿಗಳೊಂದಿಗೆ ಸಂವಾದ ನಡೆಯಿತು.
ಮೂರು ದೇಶಗಳ ಸುಮಾರು 11 ಸೌರಶಕ್ತಿ ಆಧಾರಿತ ಉದ್ಯಮಿಗಳಿಂದ 23 ಪ್ರತಿನಿಧಿಗಳು ಭಾಗವಹಿಸಿದ್ದರು. ತಮ್ಮ ದೇಶದಲ್ಲಿ ಸೌರಶಕ್ತಿ ಸದ್ಬಳಕೆಯ ಮೂಲಕ ಜನರ ಜೀವನ ಮಟ್ಟ ಸುಧಾರಣೆ, ಕೃಷಿಗೆ ಸೌರಶಕ್ತಿಯ ಸಮರ್ಪಕ ಬಳಕೆ ಮತ್ತು ವಿದ್ಯುತ್ ಸೌಲಭ್ಯ ಇಲ್ಲದ ಗ್ರಾಮೀಣ ಭಾಗಗಳಿಗೆ ಸೌರ ಶಕ್ತಿ ಮೂಲಕ ಬೆಳಕಿನ ವ್ಯವಸ್ಥೆ ಮಾಡುವುದು ಮೊದಲಾದ ವಿಷಯಗಳ ಕುರಿತು ಭಾರತದಲ್ಲಿ ಸೆಲ್ಕೋ ಕೈಗೊಂಡಿರುವ ಹಲವು ಯೋಜನೆಗಳ ಮಾಹಿತಿ ಪಡೆದರು ಮತ್ತು ಸ್ಥಳ ಪರಿಶೀಲನೆ ನಡೆಸಿದರು.
ಭಾರತ ಮತ್ತು ಆಫ್ರಿಕಾ ನಡುವೆ ಸೌರ ಶಕ್ತಿ ಆಧಾರಿತ ಉದ್ಯಮ ಮತ್ತು ವ್ಯಾಪಾರ ವಿನಿಮಯದ ಸಂಪರ್ಕ ಇನ್ನಷ್ಟು ಉತ್ತಮಗೊಳಿಸುವುದು. ಉದ್ಯಮಗಳ ನಡುವೆ ನಿರಂತರವಾದ ತಂತ್ರಜ್ಞಾನ ಅಭಿವೃದ್ಧಿ, ಜ್ಞಾನದ ವಿನಿಮಯದ ಗುರಿ ಸಾಧನೆ ಇದರ ಉದ್ದೇಶವಾಗಿದೆ. ಸಮುದಾಯಗಳ ಏಳ್ಗೆ, ಸುಸ್ಥಿರ ಭವಿಷ್ಯಕ್ಕಾಗಿ ಪರಸ್ಪರ ವಿನಿಮಯದ ಮೂಲಕ ಸಂಭಾವ್ಯ ಪಾಲುದಾರಿಕೆಯನ್ನು ಸೃಷ್ಟಿಸುವ ಸಲು ವಾಗಿ ಆಫ್ರಿಕಾ ದೇಶದ ಪ್ರತಿನಿಧಿಗಳು ಭೇಟಿ ನೀಡಿದ್ದಾರೆ ಎಂದರು.
ಪ್ರಾಥಮಿಕ ಆರೋಗ್ಯ
ಕೇಂದ್ರಕ್ಕೆ ಸೋಲಾರ್ ಬೆಳಕು
ಸೆಲ್ಕೋ ವತಿಯಿಂದ ಜಿಲ್ಲೆಯ 61 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಪೈಕಿ 14 ಕೇಂದ್ರಗಳಿಗೆ ಈಗಾಗಲೇ ಸೋಲಾರ್ ಬೆಳಕಿನ ಸೌಲಭ್ಯ ಅಳವಡಿಕೆ ಮಾಡಲಾಗಿದೆ. 11 ಕೇಂದ್ರಗಳಿಗೆ ಅಕ್ಟೋಬರ್ ಅಂತ್ಯದೊಳಗೆ ಅಳವ ಡಿಕೆ ಪೂರ್ಣಗೊಳ್ಳಲಿದೆ. ಉಳಿದ 36 ಕೇಂದ್ರಗಳಿಗೆ ಡಿಎಚ್‌ಒ ಅವರಿಂದ ಅನುಮತಿ ಸಿಕ್ಕ ಬಳಿಕ ಅಳವ ಡಿಸಲಾಗುವುದು. ಇದರಿಂದ ಪ್ರತೀ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 4 ಸಾವಿರದಿಂದ 5 ಸಾವಿರ ರೂ. ಉಳಿತಾಯವಾಗಲಿದೆ ಎಂದು ಡಿಜಿಎಂ ಗುರುಪ್ರಕಾಶ್ ಶೆಟ್ಟಿ ಹೇಳಿದರು.
ಸೆಲ್ಕೋ ಡಿಜಿಎಂ ಸುದೀಪ್ತ ಘೋಷ್ ಹಾಗೂ ತಾಂಝನಿಯಾ ಪ್ರತಿನಿಧಿಗಳಾದ ಸೆಲೆಮನ್ ಎ. ರಶೀದ್, ಸಿಲಯೋ ಮಾಥಾಯಿಸ್, ಮಚೈ ಆಂಥೋನಿ ಜೋಸೆಫ್, ಸಿಯೇರಾ ಲಿಯೋನ್‌ನ ಯೂಸಿಫ್ ಕಮರ, ಮೊಹಮ್ಮದ್ ಫೊಫನ್ಹಾ, ಅಬ್ದುಲ್ ರಝಾಕ್, ಇಥಿಯೋಪಿಯಾದ ಲೆಮಿ ಅಸ್ಸೆಫಾ ಮೊಚಾ, ಯೋನಸ್ ಚೆರ್ನೆಟ್, ಅಬೆಲ್ ಮೊದಲಾದವರು ಉಪಸ್ಥಿತರಿದ್ದರು.
ಸೆಲ್ಕೋ ಸಿನೀಯರ್ ಪ್ರೋಗ್ರಾಮ್ ಮ್ಯಾನೇಜರ್ ಪ್ರಶಾಂತ್ ಕಾರ್ಯಕ್ರಮ ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ
Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.