ಆ.24 ರಂದು ಹಸೆಮಣೆ ಏರಲಿದ್ದಾರೆ ಹರ್ಷಿಕಾ, ಭುವನ್
Team Udayavani, Jul 1, 2023, 12:51 PM IST
ನಟಿ ಹರ್ಷಿಕಾ ಪೂಣಚ್ಛ ಹಾಗೂ ನಟ ಭುವನ್ ಪೊನ್ನಣ್ಣ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.
ಇವರ ವಿವಾಹ ಆಗಸ್ಟ್ 24ರಂದು ಕೊಡವ ಸಂಪ್ರದಾಯದಂತೆ ನಡೆಯಲಿದೆ. ಕೊಡವ ಭಾಷೆಯಲ್ಲಿ ಮುದ್ರಿಸಲಾಗಿರುವ ಇವರ ವಿವಾಹ ಆಮಂತ್ರಣ ಪತ್ರಿಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಹರ್ಷಿಕಾ ಹಾಗೂ ಭುವನ್ ಕೋವಿಡ್ ಸಮಯದಲ್ಲಿ ಜೊತೆಯಾಗಿ ಸಾಕಷ್ಟು ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಂಡು ಅನೇಕರಿಗೆ ನೆರವು ನೀಡಿದ್ದರು.
ಇವರ ಕಾರ್ಯಕ್ಕೆ ಶ್ಲಾಘನೆ ಕೂಡಾ ವ್ಯಕ್ತವಾಗಿತ್ತು. ಈಗ ಈ ಜೋಡಿ ಹಸೆಮಣೆ ಏರುತ್ತಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.