ಕನ್ಯಾನ ಗುಡ್ಡಿ : ಕುಡಿಯುವ ನೀರಿಗೆ ತತ್ವಾರ
ಹಟ್ಟಿಯಂಗಡಿ ಪಂ. ವ್ಯಾಪ್ತಿಯ 220 ಕ್ಕೂ ಅಧಿಕ ಮನೆಗಳಿಗೆ ಸಮಸ್ಯೆ
Team Udayavani, Apr 25, 2020, 5:01 AM IST
ಕುಂದಾಪುರ: ಕೋವಿಡ್ 19ದಿಂದಾಗಿ ಲಾಕ್‌ಡೌನ್ ಆಗಿ ಮನೆಯಲ್ಲಿದ್ದು, ಅಗತ್ಯದ ಸಾಮಗ್ರಿಗಳ ಖರೀದಿಗೆ ಹರಸಾಹಸ ಪಡುತ್ತಿದ್ದರೆ, ಮತ್ತೂಂದೆಡೆ ಕುಡಿಯುವ ನೀರಿನ ಸಮಸ್ಯೆಯಿಂದಾಗಿ ಮತ್ತಷ್ಟು ಸಂಕಷ್ಟ ಅನುಭವಿಸುವಂತಾಗಿದೆ.
ಹಟ್ಟಿಯಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಲನಿಗಳಲ್ಲಿ ಜನರು ಪಡುತ್ತಿರುವ ಪಡಿಪಾಟೀಲು.
ಹಟ್ಟಿಯಂಗಡಿ ಪಂಚಾಯತ್ ವ್ಯಾಪ್ತಿಯ ಕನ್ಯಾನ – ಕೂಡ್ಲು ಗುಡ್ಡಿಯ 120 ಮನೆಗಳು, ಹಟ್ಟಿಯಂಗಡಿ ಕರ್ಕಿಗುಡ್ಡಿಯ 35 ಮನೆಗಳು, ಕೆಂಚನೂರಿನ ಕದ್ರಿಗಡ್ಡೆ ಎಸ್.ಸಿ. ಕಾಲನಿಯ 20 ಮನೆಗಳು, ಕೆಂಚನೂರು ಕಟೆRàರಿಗುಡ್ಡಿ ಎಸ್.ಸಿ ಕಾಲನಿಯ 15 ಮನೆಗಳಿಗೆ ನೀರಿನ ಸಮಸ್ಯೆ ತಲೆದೋರಿದೆ.
ಇಲ್ಲಿನ ಹೆಚ್ಚಿನ ಮನೆಗಳಲ್ಲಿ ಬಾವಿಗಳಿದ್ದರೂ, ನೀರಿಲ್ಲದೆ ಬತ್ತಿ ಹೋಗಿದೆ. ಪ್ರತಿ ವರ್ಷ ಈ ಎಲ್ಲ ಕಾಲನಿಗಳಿಗೆ ಪಂಚಾಯತ್ ವತಿಯಿಂದ ಏಪ್ರಿಲ್ ಮೊದಲ ವಾರದಿಂದ ನೀರು ಪೂರೈಕೆ ಮಾಡಲಾಗುತ್ತಿತ್ತು. ಆದರೆ ಈ ವರ್ಷ ತಾಲೂಕು ಆಡಳಿತಕ್ಕೆ ನೀರಿನ ನಿರ್ವಹಣೆಯ ಹೊಣೆಗಾರಿಕೆಯನ್ನು ವಹಿಸಿರುವುದರಿಂದ ಪ್ರಕ್ರಿಯೆ ವಿಳಂಬವಾಗುತ್ತಿದೆ ಎಂದು ತಿಳಿದು ಬಂದಿದೆ.
ಲಾಕ್‌ಡೌನ್ ಅಡ್ಡಿ
ಹಟ್ಟಿಯಂಗಡಿ ಪಂಚಾಯತ್‌ಗೆ ಈ ಸಾಲಿನಲ್ಲಿ ಗ್ರಾ.ಪಂ.ನ 14 ನೇ ಹಣಕಾಸಿನ ಹಾಗೂ ಜಿ.ಪಂ. ಅನುದಾನದಡಿ 2 ಬೋರ್‌ವೆಲ್ ಮಂಜೂರಾಗಿತ್ತು. ಅದರಲ್ಲಿ ಒಂದನ್ನು ಕನ್ಯಾನ ಬಾಡಬೆಟ್ಟುವಿನಲ್ಲಿ ತೆಗೆಸುವ ಯೋಜನೆ ರೂಪಿಸಲಾಗಿತ್ತು. ಆದರೆ ಮಾ.23 ರಿಂದ ಲಾಕ್‌ಡೌನ್ ಜಾರಿಯಲ್ಲಿರುವುರಿಂದ ಬೋರ್‌ವೆಲ್ ಕೊರೆಯಿಸಲು ಕೂಡ ತೊಡಕಾಗಿದೆ.
ಪ್ರತೀ ವರ್ಷ ಈ ಸಮಯದಲ್ಲಿ ಪಂಚಾಯತ್‌ನಿಂದ ಟ್ಯಾಂಕರ್ ನೀರು ಕೊಡಲಾಗುತ್ತಿತ್ತು. ಇಲ್ಲಿನ ಬಾವಿಗಳು ಕೂಡ ಬತ್ತಿ ಹೋಗಿದೆ. ಲಾಕ್‌ಡೌನ್‌ನಿಂದಾಗಿ ಮನೆಯಲ್ಲಿ ಜಾಸ್ತಿ ಜನರಿರುವುದರಿಂದ ನೀರಿನ ಬಳಕೆ ಜಾಸ್ತಿಯಾಗಿದೆ. ನೀರಿಲ್ಲದೆ ಭಾರೀ ಸಮಸ್ಯೆಯಾಗುತ್ತಿದೆ ಎನ್ನುತ್ತಾರೆ ಇಲ್ಲಿನ ಮಹಿಳೆಯರು.
ಅನುದಾನದ ಕೊರತೆ
ಇಂತಹ ತುರ್ತು ಪರಿಸ್ಥಿತಿಯಲ್ಲೂ ಕೂಡ ತಾತ್ಕಾಲಿಕವಾಗಿ ನೀರು ಸರಬರಾಜು ಮಾಡಲು ನಮ್ಮಲ್ಲಿ ಅನುದಾನವಿಲ್ಲವಾಗಿದೆ. ತಾಲೂಕು ಆಡಳಿತ ಈ ವರ್ಷ ಟ್ಯಾಂಕರ್ ನೀರಿನ ಸರಬರಾಜು ವಹಿಸಿಕೊಂಡಿರುವುದರಿಂದ ವಿಳಂಬವಾಗುತ್ತಿದೆ. ನಮ್ಮ ಗ್ರಾ.ಪಂ. ವ್ಯಾಪ್ತಿಯಲ್ಲಿ ಸುಮಾರು 300 ಕ್ಕೂ ಅಧಿಕ ಕುಟುಂಬಗಳು ಪ್ರತೀ ವರ್ಷ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತವೆ.
-ಕೆ. ರಾಜೀವ ಶೆಟ್ಟಿ, ಅಧ್ಯಕ್ಷರು, ಹಟ್ಟಿಯಂಗಡಿ ಗಾ.ಪಂ.
ಟೆಂಡರ್ : ಎ.28 ವರೆಗೆ ವಿಸ್ತರಣೆ
ನೀರಿನ ಸರಬರಾಜು ನಿರ್ವಹಣೆಗೆ ಈಗಾಗಲೇ ಕುಂದಾಪುರ ತಾಲೂಕು ವ್ಯಾಪ್ತಿಯಲ್ಲಿ ಟೆಂಡರ್ ಕರೆಯಲಾಗಿದ್ದು, ಎ.19 ರವರೆಗೆ ಅವಕಾಶ ನೀಡಲಾಗಿತ್ತು. ಆದರೆ ಈವರೆಗೆ ಯಾರೂ ಕೂಡ ಅರ್ಜಿ ಸಲ್ಲಿಸದ ಕಾರಣ, ಮತ್ತೆ ಎ.28 ವರೆಗೆ ವಿಸ್ತರಣೆ ಮಾಡಲಾಗಿದೆ.
-ತಿಪ್ಪೇಸ್ವಾಮಿ,ಕುಂದಾಪುರ ತಹಶೀಲ್ದಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Actor Darshan Bail Case: ಹತ್ಯೆ ಸ್ಥಳದಲ್ಲಿ ದರ್ಶನ್ ಇದ್ರು: ಫೋಟೋ ಸಾಕ್ಷ್ಯ ಲಭ್ಯ!
Dharmasthala: ನ.26-30: ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.