ಕುರಿ ರೀತಿ ಜನರ ತುಂಬಿದ್ದ ವಾಹನ ಪಲ್ಟಿ: ಇಬ್ಬರಿಗೆ ಗಂಭೀರ ಗಾಯ, ಹಲವರಿಗೆ ಸಣ್ಣಪುಟ್ಟ ಗಾಯ
Team Udayavani, Dec 5, 2020, 10:20 AM IST
ಎಚ್.ಡಿ.ಕೋಟೆ: ಮಿತಿ ಮೀರಿ ಪ್ರಯಾಣಿಕರನ್ನು ತುಂಬಿದ್ದ ಆಟೋ ಪಲ್ಟಿ ಹೊಡೆದ ಪರಿಣಾಮ ಇಬ್ಬರು ಮಹಿಳೆಯರು ಗಂಭೀರವಾಗಿ ಗಾಯಗೊಂಡು, ಹಲವಾರು ಮಂದಿ ಸಣ್ಣಪುಟ್ಟ ಗಾಯ ಮಾಡಿಕೊಂಡಿರುವ ಘಟನೆ ಪಟ್ಟಣದ ತಾರಕ ಸೇತುವೆ ಬಳಿ ಸಂಭವಿಸಿದೆ.
ತಾಲೂಕಿನ ಮಂಚೇಗೌಡನಹಳ್ಳಿ ಹಾಡಿಯ ಹಾಡಿಯ ಶಿವಮ್ಮ (45) ಮತ್ತು ವಿದ್ಯಾರ್ಥಿನಿ ರೀನಾ (21) ತೀವ್ರವಾಗಿ ಗಾಯಗೊಂಡವರು. ನೆರೆಯ ಹುಣಸೂರು ತಾಲೂಕಿನ ಶುಂಠಿ ಕೆಲಸಕ್ಕಾಗಿು 4 ಮಂದಿ ಪ್ರಯಾಣಿಕರಿಗೆ ಪರವಾನಗಿ ಇರುವ ಆಟೋ ರಿಕ್ಷಾದಲ್ಲಿ 12 ಮಂದಿ ಕೂಲಿ ಕಾರ್ಮಿಕ ಮಹಿಳೆಯರು ಮತ್ತು ಅದೇ ಹಾಡಿಯ ಮತ್ತೂಬ್ಬ ಪದವಿ ವಿದ್ಯಾರ್ಥಿನಿ ರೀನಾ ಇದ್ದಳು. ತಾರಕ ಸೇತುವೆ ಬಳಿ ಆಟೋ ಸಂಚರಿಸುತ್ತಿದ್ದಾಗ ರಾಸು ಅಡ್ಡ ಬಂದಾಗ ಅವಘಡ ಸಂಭವಿಸಿದೆ.
ಅತಿವೇಗಹಾಗೂಅಜಾಗರೂಕತೆಯಿಂದಮಿತಿಮೀರಿದ ಸಂಖ್ಯೆಯಲ್ಲಿ ಅಂದರೆ 13 ಕೂಲಿ ಕಾರ್ಮಿಕರನ್ನು ಸಾಗಿಸುತ್ತಿದ್ದ ಆಟೋ ಚಾಲಕನ ನಿಯಂತ್ರಣ ಕಳೆದುಕೊಂಡ ಪರಿಣಾಮ ಆಟೋ ರಸ್ತೆ ಮಾರ್ಗದಲ್ಲಿಯೇ ಪಲ್ಪಿ ಹೊಡೆದಿದೆ. ಈ ಸಂದರ್ಭದಲ್ಲಿ ಆಟೋದಲ್ಲಿದ್ದ 13 ಮಂದಿ ಪೈಕಿ ಇಬ್ಬರಿಗೆ ಗಂಭೀರ ಗಾಯಗಳಾದರೆ, ಮತ್ತೆ ಹಲವು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗಾಯಾಳುಗಳಿಬ್ಬರನ್ನು ತಾಲೂಕು ಸರ್ಕಾರಿ ಅಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಿಂದ ಆಟೋ ಜಖಂಗೊಂಡಿದೆ. ಈ ಸಂಬಂಧ ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಕೊಪ್ಪಳದಲ್ಲಿ ಬಂದ್ ನೀರಸ: ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ
ತಾಲೂಕಿನಲ್ಲಿ ಬಹುಸಂಖ್ಯೆಯಲ್ಲಿ ಕೂಲಿ ಕಾರ್ಮಿಕರಿದ್ದು, ಪ್ರತಿದಿನ ಕೂಲಿ ಕೆಲಸಕ್ಕಾಗಿ ನೆರೆಯಕೊಡಗು,ಕೇರಳ ಸೇರಿದಂತೆ ಜಿಲ್ಲೆಯ ವಿವಿಧೆಡೆ ತೆರಳುತ್ತಾರೆ. ಒಂದು ದಿನಕ್ಕೆ 200 ರೂ. ಕೂಲಿ ನೀಡಲಾಗುತ್ತಿದೆ. ಪ್ರತಿದಿನ ಕೂಲಿ ಕಾರ್ಮಿಕರಿರುವ ಸ್ಥಳಕ್ಕೇ ಆಟೋರಿಕ್ಷಾ, ಗೂಡ್ಸ್ ಆಟೋ, ವಿಂಗರ್, ತೂಫಾನ್ ವಾಹನಗಳು ಬಂದು ಅವರನ್ನು ಬೆಳಗ್ಗೆ ತುಂಬಿಕೊಂಡು ಹೋಗಿ ಕೆಲಸ ಮುಗಿದ ನಂತರ ಸಂಜೆ ಮನೆಗೆ ವಾಪಸ್ ತಲುಪಿಸುತ್ತಿವೆ. ಆದರೆ, ಯಾವುದೇ ಸುರಕ್ಷತಾ ಕ್ರಮಗಳಿಲ್ಲದೇ ಕುರಿ ತುಂಬಿದಂತೆ ಮಹಿಳೆ
ಯನ್ನು ತುಂಬಿಕೊಂಡು ಸಂಚರಿಸಲಾಗುತ್ತಿದೆ. ಐದಾರು ಮಂದಿ ಮಾತ್ರ ಸಂಚರಿಸಬಹುದಾದ ವಾಹನಗಳಲ್ಲಿ 25 ರಿಂದ 30 ಮಂದಿ ಪ್ರಯಾಣಿ ಕರನ್ನೂ ಸಾಗಿಸುತ್ತಿರುವುದು ಈ ಭಾಗದಲ್ಲಿ ಸಾಮಾನ್ಯವಾಗಿದೆ.
ಕಿಕ್ಕಿರಿದು ಜನರನ್ನು ವಾಹನಗಳಲ್ಲಿ ತುಂಬಿ ಸಾಗಿಸುತ್ತಿದ್ದರೂ ಯಾವುದೇ ಕ್ರಮವಿಲ್ಲ ಎಚ್.ಡಿ.ಕೋಟೆ ಪಟ್ಟಣದ ಮಾರ್ಗವಾಗಿ ಪ್ರತಿದಿನ ಮುಂಜಾನೆ ಮತ್ತು ಸಂಜೆಕಿಕ್ಕಿರಿದುಕಾರ್ಮಿಕರನ್ನು ತುಂಬಿಕೊಂಡಿರುವ ವಾಹನಗಳು ಸಂಚರಿಸುತ್ತಲೇ ಇರುತ್ತವೆ. ಜೀವನೋಪಾಯಕ್ಕಾಗಿ ಕೂಲಿ ಕೆಲಸ ಅನಿವಾರ್ಯ ಇರುವುದರಿಂದಕಾರ್ಮಿಕರುಕೂಡ ಹೀಗೆ ಸಂಚರಿಸುವುದು ಸಾಮಾನ್ಯವಾಗಿದೆ.
ಈ ರೀತಿ ಮನಬಂದಂತೆ ಜನರನ್ನು ತಂಬುವ ವಾಹನಗಳನ್ನುಕಟ್ಟುನಿಟ್ಟಾಗಿ ತಪಾಸಣೆ ನಡೆಸಿ ಕ್ರಮ ಕೈಗೊಳ್ಳಲು ಅಧಿಕಾರಿಗಳು ಮುಂದಾಗಿಲ್ಲ. ನೆಪ ಮಾತ್ರಕ್ಕೆ ಆಗಾಗ ಒಂದೆರಡು ವಾಹನಗಳನ್ನು ಹಿಡಿದು ದಂಡ ವಿಧಿಸಲಾಗುತ್ತಿದೆ. ಹೀಗಾಗಿ ವಾಹನಗಳ ಮಾಲೀಕರು ಜನರನ್ನುಕುರಿಯಂತೆ ತುಂಬಿಸಿಕೊಂಡು ದೂರದಊರುಗಳಿಗೆ ಸಾಗಿಸುತ್ತಿದ್ದಾರೆ. ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು, ಈ ಕುರಿತು ಗಂಭೀರವಾಗಿ ಚಿಂತಿಸಿ ಈ ರೀತಿಯ ವಾಹನಗಳ ವಿರುದ್ಧಕ್ರಮಕೈಗೊಳ್ಳಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.ಕೂಲಿ ಕಾರ್ಮಿಕರನ್ನು ಮಿತಿ ಮೀರಿ ತುಂಬುತ್ತಿರುವಕುರಿತು ಅಕ್ಟೋಬರ್27ರಂದು ಉದಯವಾಣಿಯಲ್ಲಿ “ಕುರಿಯಂತೆಕೂಲಿಯಾಳುಗಳ ತುಂಬಿ ಸಾಗಣೆ’ ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಲಾಗಿತ್ತು. ಆ ಸಂದರ್ಭದಲ್ಲಿ3-4 ವಾಹನಗಳಿಗೆ ನೆಪಮಾತ್ರಕ್ಕೆ ದಂಡ ವಿಧಿಸಿದ್ದ ಪೊಲೀಸರು ಮತ್ತೆ ವಾಹನಗಳುಕಂಡರೂ ಕಾಣದಂತೆ ಮೌನಕ್ಕೆ ಶರಣಾಗಿದ್ದರು. ಹೀಗಾಗಿ ವಾಹನಗಳ ಮಾಲೀಕರುಕೂಲಿ ಕಾರ್ಮಿಕರನ್ನು ಮಿತಿ ಮೀರಿದ ಸಂಖ್ಯೆಯಲ್ಲಿ ತುಂಬಿಕೊಂಡು ಸಾಗಿಸುತ್ತಿರುವುದು ಸಾಮಾನ್ಯವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.