ಮಂಗಳೂರು ಗಲಭೆ, ಡಿ.ಜೆ.ಹಳ್ಳಿ ಘಟನೆ ತನಿಖೆ ಏನಾಯಿತು, ಡ್ರಗ್ಸ್ ತನಿಖೆಯೂ ಅಷ್ಟೇ: HDK
Team Udayavani, Sep 3, 2020, 11:07 AM IST
ಚನ್ನಪಟ್ಟಣ: “ಕ್ರಿಕೆಟ್ ಬೆಟ್ಟಿಂಗ್, ಕಾನೂನು ಬಾಹಿರ ಡ್ಯಾನ್ಸ್ ಬಾರ್ ನಡೆಸುತ್ತಿರುವವರು, ಮಾಫಿಯಾ ಹಣದಿಂದ ನನ್ನ ಸರ್ಕಾರವನ್ನು ಅಸ್ಥಿರಗೊಳಿಸಲಾಯಿತು ಎನ್ನುವ ಮಾತನ್ನಾಡಿದ್ದೇನೆಯೇ ವಿನಃ ಬಿಜೆಪಿಯವರು ಸರ್ಕಾರ ಬೀಳಿಸಿದರು ಎಂದು ಹೇಳಿಲ್ಲ, ಕಳ್ಳನ ಮನಸ್ಸು ಹುಳ್ಳುಳ್ಳಗೆ ಎನ್ನುವಂತೆ ಬಿಜೆಪಿ ನಾಯಕರು ಪ್ರತಿಕ್ರಿಯೆ ನೀಡುತ್ತಿದ್ದಾರೆ’ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದರು.
ಹೆಸರೇಳಿಲ್ಲ:ತಾಪಂ ಕೆಡಿಪಿ ಸಭೆಯಲ್ಲಿ ಭಾಗವಹಿಸಿ ಸುದ್ದಿಗಾರ ರೊಂದಿಗೆ ಮಾತನಾಡಿದರು. ಡ್ರಗ್ಸ್ ಮಾಫಿಯಾ ಬಗ್ಗೆ ತಾನು ನೀಡಿರುವ ಹೇಳಿಕೆಯನ್ನು ಬಿಜೆಪಿ ನಾಯಕರು ಅರ್ಥ ಮಾಡಿಕೊಳ್ಳಬೇಕು, ಸರ್ಕಾರ ಪತನದಲ್ಲಿ ಮಾಫಿಯಾ ಹಣದ ಪಾತ್ರವಿದೆ ಎಂದು ಹೇಳಿದ್ದೆ, ಬಿಜೆಪಿ ನಾಯಕರ ಹೆಸರೇಳಿಲ್ಲ. ತಾನು ಮಾತ ನಾಡುತ್ತಿರುವ ಯಾವುದೇ ಪದದಲ್ಲೂ ಗೊಂದಲವಿಲ್ಲ. ನಾನು ನೇರವಾಗಿ ಮಾತ ನಾಡುವ ವ್ಯಕ್ತಿ ಎಂದರು.
ಕೆಲವರಿಗೆ ಅಮಲು: ನನಗೆ ಯಾವತ್ತೂ ಮತ್ತು ಬರಿಸೋದಿಕ್ಕೆ ಬರೋದಿಲ್ಲ, ಅಧಿಕಾರದಲ್ಲಿದ್ದರೂ, ಇಲ್ಲದಿದ್ದಾಗಲೂ ಮತ್ತು ಬಂದಿಲ್ಲ, ಕೆಲವರಿಗೆ ಅಧಿಕಾರ ಸಿಕ್ಕ ತಕ್ಷಣ ಅಮಲೇರುತ್ತಿದೆ. ಅದು ನನಗೆ ಬಂದಿಲ್ಲ ಎಂದು ಸಚಿವರ ವಿರುದ್ಧ ಹರಿಹಾಯ್ದರು. ಡ್ರಗ್ಸ್ ವಿಚಾರದಲ್ಲಿ ಇದೀಗ ತನಿಖೆ ಮಾತು ಬರುತ್ತಿದೆ. ಈ ಹಿಂದೆ ಮಂಗಳೂರು ಗಲಭೆ ನಡೆದಾಗ ಇಬ್ಬರು ಅಮಾಯಕರು ಬಲಿಯಾದರು. ಆ ಮ್ಯಾಜಿ ಸ್ಟ್ರೇಟ್ ತನಿಖೆ ಏನಾಯಿತು, ಬೆಂಗಳೂರಿನ ಡಿ.ಜೆ.ಹಳ್ಳಿ ಘಟನೆ ತನಿಖೆ ಏನಾಯಿತು, ಗಲಭೆ ಮಾಡಿದವರನ್ನು ಏನು ಮಾಡಿದ್ದಾರೆ, ಇದೀಗ ಡ್ರಗ್ಸ್ ತನಿಖೆ ವಿಚಾರ ಬಂದಿದೆ. ಅದರ ಹಣೆಬರಹವೂ ಇಷ್ಟೇ ಎಂದರು.
ಇದೇನಾ ಅಭಿವೃದ್ಧಿ?: ಕೋವಿಡ್ ವಿಚಾರದಲ್ಲಿ ಕೇಂದ್ರ ಸರ್ಕಾರ ನೀಡಿದ 20 ಲಕ್ಷ ಕೋಟಿ ರೂ. ಪ್ಯಾಕೇಜ್‌ನಿಂದ ಯಾರು ಉದ್ಧಾರವಾದರು. ಬರೀ ಚಪ್ಪಾಳೆ ತಟ್ಟಿಸಿದರು. ದೀಪ ಹತ್ತಿಸಿದರು. ಇದೀಗ ದೇಶದ ಜಿಡಿಪಿ ಶೇ.23 ಕಡಿಮೆಯಾಗಿದೆ. ರಾಜ್ಯಕ್ಕೆ
ಬರಬೇಕಾದ ಹಣ ಕೊಡದೆ ಸಾಲ ಮಾಡಿ ಎಂದು ಈಗ ಹೇಳುತ್ತಿದ್ದಾರೆ. ಇದೆಯಾ ಕೇಂದ್ರದ ನಾಯಕರ ಅಭಿವೃದ್ಧಿ ಎಂದು ಕುಮಾರಸ್ವಾಮಿ ಟೀಕಿಸಿದರು.
ತೊಂದರೆ ನೀಡದಿರಿ: ಸರ್ಕಾರ ನಮ್ಮದಲ್ಲದಿದ್ದರೂ ನನಗೆ ಗೌರವ ಕೊಡುವ ಮಂದಿ ಬಿಜೆಪಿ ಸರ್ಕಾರದಲ್ಲಿದ್ದಾರೆ. ಅಧಿಕಾರಿಗಳು ಸಾರ್ವಜನಿಕರಿಗೆ ತೊಂದರೆ ಕೊಟ್ಟರೆ ಸುಮ್ಮನಿರಲ್ಲ. ಈಗಾಗಲೇ ತಾಲೂಕಿನಲ್ಲಿ ಮಂತ್ಲಿ ಕೊಡುವಂತೆ ಪಿಡಿಒಗಳಿಗೆ ಫರ್ಮಾನು
ಹೋಗಿರುವ ವಿಚಾರ ತಿಳಿದಿದೆ. ನಾನು ಯಾವ ಅಧಿಕಾರಿಗಳನ್ನೂ ಹಣ ಕೇಳಿಲ್ಲ, ಮುಂದೆಯೂ ಕೇಳಲ್ಲ. ಹಣ ಕೊಟ್ಟು ಇಲ್ಲಿ ಉಳಿಯುತ್ತೇನೆ ಎಂದರೆ ಬಿಡಲ್ಲ, ಗ್ರಾಮಾಂತರ ವಿಭಾಗದ ಪಿಎಸ್‌ಐ ಒಬ್ಬರು 4 ಲಕ್ಷರೂ. ಹಣ ಕೊಟ್ಟು ಇಲ್ಲೇ ಉಳಿದುಕೊಳ್ಳುವ ತಂತ್ರ ಮಾಡುತ್ತಿದ್ದಾರೆಂಬ ದೂರು ಬಂದಿದೆ. ಅದೆಲ್ಲಾ ಇಲ್ಲಿ ನಡೆಯಲ್ಲ, ಹಣ ಕೊಟ್ಟು ನಾಳೆ ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತೀರೆಂದು ಗೊತ್ತಿದೆ. ಇನ್ನು ಠಾಣೆಗಳಲ್ಲಿ ಸಾಧ್ಯವಾದಷ್ಟು ರಾಜಿ ಸಂಧಾನಕ್ಕೆ ಹೆಚ್ಚಿನ ಆದ್ಯತೆ ನೀಡಿ. ಇದು ಸಲಹೆ ಎಂದು ಸ್ವೀಕರಿಸಿ, ರಾಜಕಾರಣ ಮಾಡಬೇಡಿ ಎಂದು ಗುಡುಗಿದರು. ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಲಿಂಗೇಶ್ ಕುಮಾರ್, ಜೆಡಿಎಸ್ ಅಧ್ಯಕ್ಷ ಜಯಮುತ್ತು, ನಗರ ಜೆಡಿಎಸ್ ರಾಂಪುರ ರಾಜಣ್ಣ, ಪಿಕಾರ್ಡ್ ಬ್ಯಾಂಕ್ ಅಧ್ಯ ಕ್ಷ ನಾಗರಾಜು, ಮುಖಂಡರಾದ ಸತೀಶ್‌ಬಾಬು, ಹನುಮಂತು, ಬೋರ್‌ವೆಲ್ ರಾಮಚಂದ್ರು ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.