Politics: ದಲಿತ ದೌರ್ಜನ್ಯ ಪ್ರಕರಣದಲ್ಲಿ ತಾನು ನಿರಪರಾಧಿ: ಸಚಿವ ಸುಧಾಕರ್‌


Team Udayavani, Sep 13, 2023, 12:21 AM IST

d sudhakar

ಬೆಂಗಳೂರು: ದಲಿತ ದೌರ್ಜನ್ಯ ಪ್ರಕರಣದಲ್ಲಿ ತಾನು ನಿರಪರಾಧಿ ಎಂದು ಸಚಿವ ಸುಧಾಕರ್‌ ಸ್ಪಷ್ಟಪಡಿಸಿದ್ದಾರೆ. ವಿವಾದಕ್ಕೆ ಸಂಬಂಧಪಟ್ಟಂತೆ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಇದು ಹದಿನೈದು ವರ್ಷಗಳಷ್ಟು ಹಳೆಯ ಪ್ರಕರಣ. 2008ರಲ್ಲಿ ನಡೆದ ಘಟನೆಗೆ ಈಗ್ಯಾಕೆ ಎಫ್ಐಆರ್‌ ದಾಖಲಿಸಿದ್ದಾರೆಂಬುದು ಗೊತ್ತಿಲ್ಲ. ಇದೊಂದು ವ್ಯವಸ್ಥಿತ ಷಡ್ಯಂತ್ರ. ನಮ್ಮ ನಾಯಕರಿಗೆ ಈ ಬಗ್ಗೆ ದಾಖಲೆ ಸಮೇತ ವರದಿ ನೀಡಿದ್ದೇನೆ. ಎಸ್‌ಸಿ, ಎಸ್‌ಟಿ ಸಮುದಾಯದ ಮತಗಳಿಂದಲೇ ನಾನು ನಾಲ್ಕು ಬಾರಿ ಗೆದ್ದಿದ್ದೇನೆ. ನಾನು ನಿರಪರಾಧಿ. ನನ್ನ ಬಗ್ಗೆ ಆರೋಪ ಮಾಡಲು ಬಿಜೆಪಿಯವರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದ್ದಾರೆ.

ಡಿಸಿಎಂ ಸಮರ್ಥನೆ
ಸಚಿವ ಡಿ. ಸುಧಾಕರ್‌ ಅವರನ್ನು ಸಮರ್ಥನೆ ಮಾಡಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು, “ಈ ಬಗ್ಗೆ ನಾನು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದು, ಇದೊಂದು ಸುಳ್ಳು ಕೇಸ್‌. ಹೀಗಾಗಿ ಸುಧಾಕರ್‌ ರಾಜೀನಾಮೆ ನೀಡುವ ಅಗತ್ಯವಿಲ್ಲ. ಪಕ್ಷದ ಅಧ್ಯಕ್ಷನಾಗಿ ನಾನು ಎಲ್ಲ ಮಾಹಿತಿ ತೆಗೆದುಕೊಂಡಿದ್ದೇನೆ’ ಎಂದು ತೀರ್ಪಿತ್ತಿದ್ದಾರೆ.

“ಬಿಜೆಪಿಯವರು ಈ ಬಗ್ಗೆ ಏನಾದರೂ ಕುತಂತ್ರ ಮಾಡಲಿ. ಸುಧಾಕರ್‌ ಅವರು ಅನುಮತಿ ಮೇರೆಗೆ ಖಾಸಗಿ ಜಮೀನು ಖರೀದಿ ಮಾಡಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಬೇರೆಯವರು ಕಾಂಪೌಂಡ್‌ ಹಾಕಿದ್ದರು. ಹೀಗಾಗಿ ಇವರ ಕಡೆಯವರು ಜಾಗ ಭದ್ರ ಮಾಡಿಕೊಳ್ಳಲು ಮುಂದಾಗಿದ್ದಾರೆ. ಈ ವಿಚಾರವಾಗಿ ಪರಿಶಿಷ್ಟ ಜಾತಿಯವರು ದೂರು ನೀಡಿದ್ದಾರೆ. ಈ ಪ್ರಕರಣ ಸಿವಿಲ್‌ ಸ್ವರೂಪದ್ದಾಗಿದೆ. ಇದು ಸುಳ್ಳು ಪ್ರಕರಣ. ನಾಳೆ ಬೆಳಗ್ಗೆ ನನ್ನ ವಿರುದ್ಧವೂ ಸುಳ್ಳು ದೂರು ನೀಡಬಹುದು. ಸುಧಾಕರ್‌ ರಾಜೀನಾಮೆ ನೀಡಲಿದ್ದಾರೆ ಎಂದು ಬಿಜೆಪಿಯವರು ಕನಸು ಕಾಣುವ ಅಗತ್ಯವಿಲ್ಲ’ ಎಂದು ವ್ಯಂಗ್ಯವಾಡಿದ್ದಾರೆ.

ಏನಿದು ಪ್ರಕರಣ?:
ಯಲಹಂಕ ನಿವಾಸಿ ಸುಬ್ಬಮ್ಮ ಎಂಬುವರು ಸೆಪ್ಟಂಬರ್‌ 10ರಂದು ಯಲಹಂಕ ಪೊಲೀಸ್‌ ಠಾಣೆಯಲ್ಲಿ ನೀಡಿದ ದೂರಿನ ಮೇರೆಗೆ ಸೆವೆನ್‌ ಹಿಲ್ಸ… ಡೆವಲಪರ್ಸ್‌ ಮತ್ತು ಟ್ರೇಡರ್ಸ್‌ ಪಾಲುದಾರರಾದ ಸಚಿವ ಡಿ.ಸುಧಾಕರ್‌, ಶ್ರೀನಿವಾಸ್‌, ಭಾಗ್ಯಮ್ಮ ವಿರುದ್ಧ ಯಲಹಂಕ ಗ್ರಾಮದ ಸರ್ವೆ ನಂಬರ್‌ 108/1ರ 1.30 ಎಕರೆ ಜಮೀನನ್ನು ಮೋಸದಿಂದ ಕಬಳಿಕೆ ಮಾಡಿ¨ªಾರೆ. ಈ ಪ್ರಕರಣ ನ್ಯಾಯಾಲಯದಲ್ಲಿ ಇರುವಾಗ ಗುಂಪು ಕಟ್ಟಿಕೊಂಡು ಬಂದು ದೌರ್ಜನ್ಯ ಎಸೆಗಿ¨ªಾರೆ. ಮಹಿಳೆಯರನ್ನು ಕರೆದುಕೊಂಡು ಬಂದು ಹÇÉೆ ಮಾಡಿ¨ªಾರೆ ಎಂದು ದೂರು ನೀಡಿದ್ದರು. ಸಚಿವ ಸುಧಾಕರ್‌ ಹಾಗೂ ಬೆಂಬಲಿಗರು ತಮ್ಮ ವಿರುದ್ಧ ಜಾತಿ ನಿಂದನೆ ಎಸಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖೀಸಿದ್ದರು.

ಹೋರಾಟಕ್ಕೆ ಬಿಜೆಪಿ ನಿರ್ಧಾರ
ಈ ವಿಚಾರದಲ್ಲಿ ಹೋರಾಟ ತೀವ್ರಗೊಳಿಸಲು ವಿಪಕ್ಷ ಬಿಜೆಪಿ ನಿರ್ಧರಿಸಿದೆ. ಮಾಜಿ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಮಂಗಳವಾರ ನಡೆದ ಪದಾಧಿಕಾರಿಗಳ ಸಭೆಯಲ್ಲಿ ಈ ಸಂಬಂಧ ಸುದೀರ್ಘ‌ ಚರ್ಚೆಯಾಗಿದ್ದು, ಸುಧಾಕರ್‌ ರಾಜೀನಾಮೆ ನೀಡುವವರೆಗೂ ಹೋರಾಟ ನಡೆಸಲು ನಿರ್ಧರಿಸಲಾಗಿದೆ.

ಸಚಿವ ಸುಧಾಕರ್‌ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಾಗಿದೆಯೇ? ನಾನೂ ಮಾಧ್ಯಮಗಳಲ್ಲಿ ಬಂದ ಸುದ್ದಿಯನ್ನು ನೋಡಿದ್ದೇನಷ್ಟೇ. ಸುಧಾಕರ್‌ ಅವರನ್ನು ಕರೆದು ಮಾತನಾಡುತ್ತೇನೆ.
-ಸಿದ್ದರಾಮಯ್ಯ, ಸಿಎಂ

ಸುಪ್ರೀಂಕೋರ್ಟ್‌ ನಿರ್ದೇಶನ ಇದೆ. ಯಾರ ಮೇಲೆ ದೂರು ಕೊಟ್ಟರೂ ಎಫ್ಐಆರ್‌ ಹಾಕುತ್ತಾರೆ. ಯಾರೋ ದುರುದ್ದೇಶದಿಂದ ದೂರು ಕೊಟ್ಟಿರಬಹುದು. ಎಫ್ಐಆರ್‌ ಹಾಕಿದ ತಕ್ಷಣ ಅಪರಾಧಿ ಆಗಲ್ಲ. ಪೊಲೀಸರು ಪರಿಶೀಲಿಸುತ್ತಾರೆ. ಅದರಲ್ಲಿ ಹುರುಳಿದ್ದರೆ, ಚಾರ್ಜ್‌ಶೀಟ್‌ ಆಗುತ್ತದೆ. ಇಲ್ಲದಿದ್ದರೆ ಬಿ ರಿಪೋರ್ಟ್‌ ಹಾಕುತ್ತಾರೆ.
-ರಾಮಲಿಂಗಾರೆಡ್ಡಿ , ಸಾರಿಗೆ ಸಚಿವ

ಸಿದ್ದರಾಮಯ್ಯನವರೇ ನೀವು ಬೇರೆ ಪಕ್ಷದವರಿಗೆ ಮಾನ ಮರ್ಯಾದೆ ಇದೆಯಾ ಎಂದು ಕೇಳುತ್ತೀರಲ್ಲವೇ ? ಈಗ ನಿಮಗೆ ಏನಿದೆ ಅಂತ ನಾನು ಕೇಳಲು ಬಯಸುತ್ತೇನೆ. ಎಫ್ಆರ್‌ ದಾಖಲಿಸಿದ ಪೊಲೀಸ್‌ ಅಧಿಕಾರಿಗಳ ಮೇಲೆ ಒತ್ತಡ ಹೇರುವ ಕೆಲಸ ಮಾಡುತ್ತಿದ್ದಿರಿ. ನಿಮಗೆ ಆತ್ಮಸಾಕ್ಷಿ ಎನ್ನುವುದು ಇದೆಯಾ? ಮಚ್ಚು, ಕೊಡಲಿ, ಕತ್ತಿ ಹಿಡಿಯುವವರನ್ನು ಮಂತ್ರಿ ಮಾಡಿಕೊಂಡಿದ್ದೀರಿ. ನೀವು ಸದನದಲ್ಲಿ ಪಾಸು ಮಾಡಿಕೊಂಡ ದಲಿತಪರ ಕಾಳಜಿ ಬಿಲ್‌ ಕಸದ ಬುಟ್ಟಿಗೆ ಹಾಕಿ ಹಾಗಾದರೆ.
– ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಸಿಎಂ

ಸುಧಾಕರ್‌ ಮೊದಲು ರಾಜೀನಾಮೆ ನೀಡ ಬೇಕು. ಈ ಪ್ರಕರಣದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ ಮಧ್ಯ ಪ್ರವೇಶ ಮಾಡುತ್ತಿದ್ದಾರೆ. ಕಾನೂನು ಪ್ರಕಾರ ಗೃಹ ಸಚಿವರಿಗೆ ತನಿಖೆ ನಡೆಸಲು ಅವಕಾಶವಿಲ್ಲ. ಆ ಕೆಲಸ ಪೊಲೀಸರು ಮಾಡುತ್ತಾರೆ. ಸಿಎಂ ಸಿದ್ದರಾಮಯ್ಯನವರಿಗೆ ಸಂವಿಧಾನದ ಮೇಲೆ ವಿಶ್ವಾಸವಿದ್ದರೆ ಸುಧಾಕರ್‌ ರಾಜೀನಾಮೆ ಪಡೆಯಲಿ.
-ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ

ಟಾಪ್ ನ್ಯೂಸ್

Gudibande: ದಪ್ಪರ್ತಿ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನಕ್ಕೆ ಕನ್ನ…

Gudibande: ದಪ್ಪರ್ತಿ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನಕ್ಕೆ ಕನ್ನ…

CM-Feet

Gandhi Jayanthi:ರಾಷ್ಟ್ರಧ್ವಜ ಹಿಡಿದೇ ಸಿಎಂ ಸಿದ್ದರಾಮಯ್ಯ ಶೂ ಲೇಸ್‌ ಬಿಚ್ಚಿದ ಕಾರ್ಯಕರ್ತ!

12

Vettaiyan Trailer: ಪಾಪಿಗಳ ಎನ್‌ಕೌಂಟರ್‌ ಮಾಡಲು ಖಾಕಿ ತೊಟ್ಟು ಬಂದ ʼತಲೈವಾʼ

ಪ್ರವಾಹ ಪೀಡಿತ ಪ್ರದೇಶಕ್ಕೆ ಪರಿಹಾರ ಕಿಟ್ ಒದಗಿಸಲು ಬಂದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ

IAF Chopper: ಪ್ರವಾಹದ ನೀರಿನಲ್ಲೇ ಹೆಲಿಕಾಪ್ಟರ್ ತುರ್ತು ಲ್ಯಾಂಡಿಂಗ್… ತಪ್ಪಿದ ದುರಂತ

ಮುತ್ತೋಡಿ ಅಭಯಾರಣ್ಯಕ್ಕೆ ರಜತ ಸಂಭ್ರಮ; ಕಣ್ಮನ ಸೆಳೆಯುತ್ತಿವೆ ಜೀವ ಸಂಕುಲ

ಮುತ್ತೋಡಿ ಅಭಯಾರಣ್ಯಕ್ಕೆ ರಜತ ಸಂಭ್ರಮ; ಕಣ್ಮನ ಸೆಳೆಯುತ್ತಿವೆ ಜೀವ ಸಂಕುಲ

14-koppala

ಯುವಜನರಿಗೆ ಬಾಪೂಜಿಯನ್ನು ಸ್ಟ್ಯಾಂಪ್‌, ನೋಟ್, ನಾಣ್ಯಗಳ ಮೂಲಕ ಪರಿಚಯಿಸುವ ಜಯಂತ್ ಕುಮಾರ್!

13-sirawara

Sirawara: ಸಹೋದರತ್ತೆ ಕಾಟಕ್ಕೆ ಬೇಸತ್ತು ಅಳಿಯ ಆತ್ಮಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gudibande: ದಪ್ಪರ್ತಿ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನಕ್ಕೆ ಕನ್ನ…

Gudibande: ದಪ್ಪರ್ತಿ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನಕ್ಕೆ ಕನ್ನ…

CM-Feet

Gandhi Jayanthi:ರಾಷ್ಟ್ರಧ್ವಜ ಹಿಡಿದೇ ಸಿಎಂ ಸಿದ್ದರಾಮಯ್ಯ ಶೂ ಲೇಸ್‌ ಬಿಚ್ಚಿದ ಕಾರ್ಯಕರ್ತ!

14-koppala

ಯುವಜನರಿಗೆ ಬಾಪೂಜಿಯನ್ನು ಸ್ಟ್ಯಾಂಪ್‌, ನೋಟ್, ನಾಣ್ಯಗಳ ಮೂಲಕ ಪರಿಚಯಿಸುವ ಜಯಂತ್ ಕುಮಾರ್!

Miracle: ಲಿಂಗದ ಮೇಲಿನ ಕಲ್ಲು‌ ನಾಗರ ಮೂರ್ತಿ ಮೇಲೆ ಮೂಡಿದ ಕೂದಲು: ಕಡಣಿಯಲ್ಲೊಂದು ಅಚ್ಚರಿ

Miracle: ಶಿವಲಿಂಗದ ಮೇಲಿನ ನಾಗರ ಮೂರ್ತಿ ಮೇಲೆ ಮೂಡಿದ ಕೂದಲು… ಕಡಣಿಯಲ್ಲೊಂದು ಅಚ್ಚರಿ

Serial Actress: ಮದುವೆ ನಿರಾಕರಿಸಿದ್ದಕ್ಕೆ ಕಿರುತೆರೆ ನಟಿಯ ಮನೆಯಲ್ಲೇ ಯುವಕ ಆತ್ಮಹ*ತ್ಯೆ

Serial Actress: ಮದುವೆ ನಿರಾಕರಿಸಿದ್ದಕ್ಕೆ ಕಿರುತೆರೆ ನಟಿಯ ಮನೆಯಲ್ಲೇ ಯುವಕ ಆತ್ಮಹ*ತ್ಯೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Gudibande: ದಪ್ಪರ್ತಿ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನಕ್ಕೆ ಕನ್ನ…

Gudibande: ದಪ್ಪರ್ತಿ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನಕ್ಕೆ ಕನ್ನ…

023

Sandalwood: ಶೀಘ್ರಮೇವ ಗೆಲುವು ಪ್ರಾಪ್ತಿರಸ್ತು

CM-Feet

Gandhi Jayanthi:ರಾಷ್ಟ್ರಧ್ವಜ ಹಿಡಿದೇ ಸಿಎಂ ಸಿದ್ದರಾಮಯ್ಯ ಶೂ ಲೇಸ್‌ ಬಿಚ್ಚಿದ ಕಾರ್ಯಕರ್ತ!

12

Vettaiyan Trailer: ಪಾಪಿಗಳ ಎನ್‌ಕೌಂಟರ್‌ ಮಾಡಲು ಖಾಕಿ ತೊಟ್ಟು ಬಂದ ʼತಲೈವಾʼ

15-Chincholi

Chincholi: ಬಟ್ಟೆ ಒಗೆಯುವ ವೇಳೆ ‌ನದಿ ನೀರಿನ ಪ್ರವಾಹಕ್ಕೆ ಕೊಚ್ಚಿ ಹೋದ ಮಹಿಳೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.