ಪ್ರತಿಯೊಬ್ಬರೂ ಎರಡು ಮಾಸ್ಕ್ ಹೊಂದಿರಬೇಕು: ಆರೋಗ್ಯ ಸಚಿವಾಲಯ
Team Udayavani, Apr 5, 2020, 12:23 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಕೆಮ್ಮು ಇಲ್ಲ. ನೆಗಡಿ- ಸೀನುಗಳಿಲ್ಲ. ಯಾವುದೇ ಸೋಂಕು ಇಲ್ಲ. ಮತ್ತೆ ನಮಗೇಕೆ ಮಾಸ್ಕ್ ಬೇಕು? ಎನ್ನುವಂತೆಯೇ ಇಲ್ಲ. ಈಗ ಆರೋಗ್ಯವಂತರೂ ಮಾಸ್ಕ್ ಧರಿಸಬೇಕು ಎನ್ನುವ ಸೂಚನೆಯನ್ನು ಆರೋಗ್ಯ ಸಚಿವಾಲಯ ಫರ್ಮಾನು ಹೊರಡಿಸಿದೆ.
ಮಾಸ್ಕ್ ಎಲ್ಲರಿಗೂ ಕಡ್ಡಾಯ ಎಂಬ ದಿನಗಳಲ್ಲಿ ನಾವಿದ್ದೇವೆ. ಮನೆಯಲ್ಲಿ ಮಾಡಲ್ಪಟ್ಟ (ಬೇಸಿಕ್), ಉಸಿರಾಟಕ್ಕೆ ಯೋಗ್ಯವಾಗುವಂತೆ ತಯಾರಿಸಿದ ಮಾಸ್ಕ್ ಅನ್ನು ಸೋಂಕಿನ ಲಕ್ಷಣಗಳಿಲ್ಲದ, ಆರೋಗ್ಯವಂತ ಜನರೂ ಧರಿಸಬೇಕು ಎಂದು ತಿಳಿಸಿದೆ. ಆದರೆ, ಇಂಥ ಗೃಹ ನಿರ್ಮಿತ ಮಾಸ್ಕ್ ಗಳನ್ನು ಕೋವಿಡ್ 19 ವೈರಸ್ ಸೋಂಕಿತರು, ವೈದ್ಯಕೀಯ ಸೇವೆಯಲ್ಲಿರುವವರು ಧರಿಸುವಂತಿಲ್ಲ. ಅವರು ಪಿಪಿಇ ಸುರಕ್ಷಾ ಉಡುಪಿನೊಂದಿಗೆ, ಎನ್- 95 ಮಾಸ್ಕ್ ಅನ್ನು ಧರಿಸಿ, ಸುರಕ್ಷಾ ಮಾರ್ಗಸೂಚಿಗಳನ್ನು ಪಾಲಿಸುವುದು ಕಡ್ಡಾಯ ಎಂದು ಸಚಿವಾಲಯ ಹೇಳಿದೆ.
ಆರೋಗ್ಯವಂತರು ಏನು ಮಾಡಬೇಕು?
– ಗೃಹ ನಿರ್ಮಿತ, ಬಟ್ಟೆಯಿಂದ ತಯಾರಿ ಸಲ್ಪಟ್ಟ, ಉಸಿರಾಟಕ್ಕೆ ಕಿರಿಕಿರಿ ನೀಡದಂಥ
– 2 ಮಾಸ್ಕ್ ಗಳನ್ನು ಹೊಂದಿರಬೇಕು.
– ಮಾಸ್ಕ್ ಅನ್ನು ಮುಟ್ಟುವ ಮುನ್ನ, ಕೈಗಳನ್ನು ಚೆನ್ನಾಗಿ ಸೋಪಿನಿಂದ ತೊಳೆದಿರಬೇಕು.
– ಸೋಪನ್ನು ಬಳಸಿ, ಬಿಸಿನೀರಿನಲ್ಲಿ ಮಾಸ್ಕ್ ಅನ್ನು ತೊಳೆಯಬೇಕು.
– ಮೂಗು ಮತ್ತು ಬಾಯಿಯನ್ನು ಮರೆಮಾಡುವ ಇಂಥ ಮಾಸ್ಕ್ ಗಳು, ಸರಳವಾಗಿ ಕಟ್ಟುವಂತಿರಬೇಕು.
– ಒಬ್ಬರ ಮಾಸ್ಕ್ ಅನ್ನು ಇನ್ನೊಬ್ಬರು ಧರಿಸುವುದು ನಿಷಿದ್ಧ.
– ಕುಟುಂಬದ ಪ್ರತಿಯೊಬ್ಬರೂ ತಮ್ಮದೇ ಮಾಸ್ಕ್ ಅನ್ನು ಹೊಂದಿರುವುದು ಕಡ್ಡಾಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ
Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Mumbai Coast: ಗೇಟ್‌ವೇ ಆಫ್ ಇಂಡಿಯಾ ಬಳಿ ದೋಣಿ ದುರಂತ: 13 ಮಂದಿ ದುರ್ಮರಣ!
MUST WATCH
ಹೊಸ ಸೇರ್ಪಡೆ
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ
Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.