ಆರೋಗ್ಯ ಭಾರತದ ಕನಸು
Team Udayavani, May 30, 2021, 6:30 AM IST
ಏಪ್ರಿಲ್ 15ರಂದು ಟ್ವೀಟ್ ಮಾಡಿದ್ದ ಕಾಂಗ್ರೆಸ್‌ನ ರಾಹುಲ್ ಗಾಂಧಿ, ದೇಶದಲ್ಲಿ ಕೊರೊನಾ ಟೆಸ್ಟ್ ನಡೆಯುತ್ತಿಲ್ಲ, ಸೋಂಕಿತ ರಿಗೆ ಹಾಸಿಗೆಗಳಿಲ್ಲ. ವೆಂಟಿಲೇಟರ್ ಇಲ್ಲ, ಆಕ್ಸಿಜನ್ ಇಲ್ಲ. ವ್ಯಾಕ್ಸಿನ್ ಸಹಿತ ಇಲ್ಲ, ಕೇವಲ ಉತ್ಸವದ ನಾಟಕ ಮಾಡುತ್ತಿದ್ದಾರೆ ಎಂದರು. ಏಪ್ರಿಲ್ 20ರಂದು ಮತ್ತೂಂದು ಟ್ವೀಟ್ ಮಾಡಿದ ಅವರು ಭಾರತ ಆಕ್ಸಿಜನ್‌ಗಾಗಿ ಹಾತೊರೆಯುತ್ತಿದೆ. ಭಾರತ ಸರಕಾರ ಈ ಸಮಸ್ಯೆ ನೀಗಿಸುವ ಸಾಮರ್ಥ್ಯ ಹೊಂದಿಲ್ಲ ಎಂದರು. ಅದೇ ದಿನ ಟ್ವೀಟ್ ಮಾಡಿದ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್, ದೆಹಲಿಯಲ್ಲಿ ಆಕ್ಸಿಜನ್ ಕೊರತೆ ಗಂಭೀರ ಹಂತಕ್ಕೆ ತಲುಪಿದೆ. ಕೇಂದ್ರ ಸರಕಾರ ಕೂಡಲೇ ಪೂರೈಸಬೇಕು ಎಂದರು. ಹಾಗಾದರೆ 2014ರಿಂದ ಅಧಿಕಾರದಲ್ಲಿರುವ ಕೇಂದ್ರ ಸರಕಾರ ಆರೋಗ್ಯ ಕ್ಷೇತ್ರಕ್ಕೆ ಏನು ಕೊಡುಗೆ ನೀಡಿದೆ? ಆ ಕೊಡುಗೆಯೇನಾದರೂ ಕೊರೊನಾ ಸಂಕಷ್ಟದ ಸಮಯದಲ್ಲಿ ಉಪಯೋಗಕ್ಕೆ ಬಂದಿದೆಯೇ ಎಂಬ ಪ್ರಶ್ನೆ ಏಳುವುದು ಸಹಜ. ಹಾಗಾದರೆ ಕೊರೊನಾ ಸಮಯದಲ್ಲಿ ಕೇಂದ್ರ ಸರಕಾರ ಜನರಿಗಾಗಿ ಏನು ಮಾಡಿದೆ ಎಂಬುದನ್ನು ತಿಳಿಯೋಣ.
ಕೊರೊನಾಕ್ಕೂ ಮೊದಲು ದೇಶದಲ್ಲಿ ಸಾಂಕ್ರಾಮಿಕ ರೋಗಗಳ ಪರೀಕ್ಷೆಗೆ ಇದ್ದದ್ದು ಒಂದೇ ಪ್ರಯೋಗಾಲಯ. ಇದೀಗ ದೇಶದಲ್ಲಿ ಪ್ರಯೋಗಾಲಯಗಳ ಸಂಖ್ಯೆ ಸುಮಾರು 2,500 ಆಗಿದೆ. ಕೊರೊನಾ ಸೋಂಕು ಆವರಿಸುವ ಮುನ್ನವೂ ದೇಶದ ಆಸ್ಪತ್ರೆಗಳ ಶಸ್ತ್ರಚಿಕಿತ್ಸೆ ವೇಳೆ ಪಿಪಿಇ ಕಿಟ್ ಧರಿಸಲಾ ಗುತ್ತಿತ್ತು. ಆದರೆ ದೇಶದಲ್ಲಿ ಒಂದೇ ಒಂದು ಪಿಪಿಇ ಕಿಟ್ ಉತ್ಪಾದನೆ ಆಗುತ್ತಿರಲಿಲ್ಲ ಎಂದರೆ ನಂಬಲೇಬೇಕು. ಆದರೆ ಕೊರೊ ನಾ ಸೋಂಕು ತಡೆಯಲು ಮುಖ್ಯವಾಗಿ ಆರೋಗ್ಯ ಸಿಬ್ಬಂದಿಗೆ ಅತ್ಯವಶ್ಯಕವಾದ ಪಿಪಿಇ ಕಿಟ್ ತಯಾರಿಗೆ ಕೇಂದ್ರ ಸರಕಾರ ಕರೆ ನೀಡಿದ್ದೇ ತಡ ದೇಶಾದ್ಯಂತ ಉದ್ದಿಮೆದಾರರು ಓಗೊಟ್ಟರು. ಇದೀಗ 600ಕ್ಕೂ ಹೆಚ್ಚು ದೇಶಿ ಕಂಪೆನಿಗಳು ಪ್ರತಿನಿತ್ಯ 5 ಲಕ್ಷ ಪಿಪಿಇ ಕಿಟ್ ಉತ್ಪಾದನೆ ಮಾಡು ತ್ತಿವೆ.ಈಗ ಭಾರತ ವಿಶ್ವದಲ್ಲೇ 2ನೇ ಅತಿದೊಡ್ಡ ಪಿಪಿಇ ಕಿಟ್ ಉತ್ಪಾದಕ ದೇಶ. ದೇಶದಲ್ಲಿ ಒಂದೂ ರೆಮಿಡಿಸಿವಿರ್ ಉತ್ಪಾದನೆ ಆಗುತ್ತಿರಲಿಲ್ಲ, ಈಗ ಪ್ರತಿನಿತ್ಯ 2.06 ಲಕ್ಷ ವಯಲ್ ಉತ್ಪಾದನೆ ಆಗುತ್ತಿದೆ.
ಹೆಚ್ಚಿನ ವೆಂಟಿಲೇಟರ್ ಗಳ ವ್ಯವಸ್ಥೆ: ಕೊರೊನಾ ಎದುರಾಗುವುದಕ್ಕೂ ಮುನ್ನ ದೇಶದ ಒಟ್ಟು ಸರ್ಕಾರಿ ಆರೋಗ್ಯ ವ್ಯವಸ್ಥೆಯಲ್ಲಿ ಕೇವಲ 17,850 ವೆಂಟಿಲೇಟರ್‌ಗಳಿದ್ದವು. ವೆಂಟಿಲೇಟರ್ ಉತ್ಪಾದನೆ ಹೆಚ್ಚಿಸುವಂತೆ ಉತ್ಪಾದಕ ಕಂಪೆನಿಗಳಿಗೆ ಪ್ರಧಾನಿ ಮೋದಿ ಕರೆ ನೀಡಿ ದರು. ವಾರ್ಷಿಕ ಕೇವಲ 6 ಸಾವಿರದಷ್ಟಿದ್ದ ವೆಂಟಿಲೇಟರ್ ಉತ್ಪಾದನೆ ಪ್ರಮಾಣ ದಿಢೀರನೆ ಏರಿಕೆಯಾಗಿ 2020ರ ಮೇ ಹಾಗೂ ಜೂನ್ ತಿಂಗಳಲ್ಲೇ 50 ಸಾವಿರ ವೆಂಟಿಲೇಟರ್ ಉತ್ಪಾದನೆ ಮಾಡಲಾಯಿತು. ಕೇಂದ್ರ ಸರಕಾರ ಈ ಕಾರ್ಯಕ್ಕೆ ಪಿಎಂ ಕೇರ್ಸ್ ನಿಧಿಯಿಂದ 2 ಸಾವಿರ ಕೋಟಿ ರೂ. ಮೀಸಲಿಟ್ಟಿತ್ತು. ಕೊರೊ ನಾಗೂ ಮುನ್ನ ಕರ್ನಾಟಕದ ಸರ್ಕಾರಿ ವ್ಯವಸ್ಥೆಯಲ್ಲಿ 1,743 ವೆಂಟಿಲೇಟರ್‌ಗಳಿದ್ದವು. ಜುಲೈ ಆಗಸ್ಟ್ ವೇಳೆಗೆ ರಾಜ್ಯಕ್ಕೆ ಸುಮಾರು 2,100 ವೆಂಟಿಲೇಟರ್‌ಗಳು ಲಭಿಸಿದವು.
ಈಗ ಕಾಡುತ್ತಿರುವುದು ಆಕ್ಸಿಜನ್ ಸಮಸ್ಯೆ. ಆಕ್ಸಿಜನ್ ಸಮಸ್ಯೆ ನೀಗಿ ಸಲು ಕೇಂದ್ರ ಸರಕಾರ ಆಕಾಶ ಭೂಮಿ ಒಂದು ಮಾಡಿದೆ ಎಂದು ದೇಶದ ಖ್ಯಾತ ಹೃದ್ರೋಗ ತಜ್ಞ ಡಾ| ದೇವಿ ಶೆಟ್ಟಿ ಅವರು ಹೇಳಿದ್ದಾರೆ. ಅವರೇ ಅನೇಕ ಟಿವಿ ಸಂದರ್ಶನಗಳಲ್ಲಿ ಹೇಳಿದಂತೆ, ಭಾರತದಲ್ಲಿರುವ ಸಂಖ್ಯೆಯ ಕೊರೊ ನಾ ಸೋಂಕಿತರನ್ನು ಅಮೆರಿಕದಂತಹ ಅತ್ಯಾಧುನಿಕ ವೈದ್ಯಕೀಯ ವ್ಯವಸ್ಥೆ ಉಳ್ಳ ದೇಶವೂ ನಿಭಾಯಿಸಲು ಸಾಧ್ಯ ವಾಗು ತ್ತಿರಲಿಲ್ಲ. ಅಮೆರಿಕ ಒಂದೇ ದೇಶವಲ್ಲ, ಅಮೆರಿಕದ ಜತೆಗೆ ಬ್ರಿಟನ್ ಹಾಗೂ ಎಲ್ಲ ಐರೋಪ್ಯ ದೇಶಗಳು ಒಟ್ಟಾಗಿ ಸೇರಿದರೂ ನಿರ್ವಹಣೆ ಮಾಡಲಾಗುತ್ತಿರಲಿಲ್ಲ. ಪ್ರತಿದಿನ 900 ಟನ್ ಪೂರೈಕೆ ಆಗುತ್ತಿದ್ದ ಆಕ್ಸಿಜನ್ ಕೆಲವೇ ದಿನದಲ್ಲಿ 9 ಸಾವಿರ ಟನ್‌ಗೆ ಹೆಚ್ಚಳವಾದರೆ ಅದನ್ನು ಆಸ್ಪತ್ರೆಗಳಿಗೆ ಸಾಗಿಸಲು ವ್ಯವಸ್ಥೆ ಎಲ್ಲಿಯೂ ಇರುವುದಿಲ್ಲ. ದೇಶದ ಜನರಿಗೆ ಆಕ್ಸಿಜನ್ ನೀಡಲು ಎಲ್ಲ ಪ್ರಯತ್ನ ಮಾಡಿದ್ದಾರೆ.
ಆಕ್ಸಿಜನ್ ರೈಲುಗಳ ವ್ಯವಸ್ಥೆ: ಪೂರ್ವ, ಉತ್ತರ ಭಾಗದಲ್ಲಿರುವ ಆಕ್ಸಿಜನ್ ಉತ್ಪಾದನ ಘಟಕಗಳಿಂದ ದಕ್ಷಿಣದ ರಾಜ್ಯ ಗಳಿಗೆ ಟ್ಯಾಂಕರ್ ಮೂಲಕ ಸಾಗಣೆ ಮಾಡಿದರೆ ತಡವಾಗುತ್ತದೆ ಎಂಬ ಕಾರಣಕ್ಕೆ ಗ್ರೀನ್ ಕಾರಿಡಾರ್ ಮೂಲಕ ರೈಲಿನಲ್ಲಿ ಸಾಗಣೆ ಮಾಡಲಾಗುತ್ತಿದೆ. ಪ್ರತಿ ಗಂಟೆಗೆ ಸುಮಾರು 100 ಕಿ.ಮೀ. ವೇಗದಲ್ಲಿ ಈ ರೈಲುಗಳು ದೇಶದೆಲ್ಲೆಡೆ ಸಂಚರಿಸಿ ಲಕ್ಷಾಂತರ ಜನರ ಪ್ರಾಣ ಉಳಿಸು ತ್ತಿವೆ. ಕರ್ನಾಟಕಕ್ಕೆ ಇಲ್ಲಿವರೆಗೆ 11 ಆಕ್ಸಿಜನ್ ಎಕ್ಸ್‌ಪ್ರೆಸ್ ರೈಲುಗಳು ತಲಾ 109ರಿಂದ 160 ಮೆಟ್ರಿಕ್ ಟನ್ ಆಕ್ಸಿಜನ್ ಹೊತ್ತು ತಂದಿವೆ.
ಲಸಿಕೆ ರಾಜಕೀಯ: ಈ ಹಿಂದೆ ಅನೇಕ ಸೋಂಕು ಬಂದಾಗ ಭಾರತಕ್ಕೆ ಲಸಿಕೆ ಲಭಿಸಿದ್ದು ತಡವಾಗಿ. ರೋಟಾ ವೈರಸ್‌ಗೆ ವಿಶ್ವದಲ್ಲಿ 1998ರಲ್ಲಿ ಲಸಿಕೆ ಲಭಿಸಿತು, ಭಾರತೀಯರಿಗೆ ಈ ಲಸಿಕೆ ಸಿಕ್ಕಿದ್ದು 2005ರಲ್ಲಿ. ಜಪಾ ನೀಸ್ ಎನ್ಸೆಫೆಲೈಟಿಸ್‌ಗೆ ವಿಶ್ವದಲ್ಲಿ 1930ರಲ್ಲೇ ಲಸಿಕೆ ಸಿಕ್ಕಿದ್ದರೂ ಭಾರತ ದಲ್ಲಿ ಲಭಿಸಿದ್ದು 2013ರಲ್ಲಿ. ಪೋಲಿ ಯೋಗೆ ವಿಶ್ವದಲ್ಲೇ 1955ರಲ್ಲೇ ಲಸಿಕೆ ಸಿಕ್ಕರೂ ಭಾರತದಲ್ಲಿ ಕೈಗೆಟುಕಿದ್ದು 1978ರಲ್ಲಿ. ಟೆಟಾನಸ್‌ಗೆ ವಿಶ್ವದಲ್ಲಿ 1928ರಲ್ಲಿ ಲಸಿಕೆ ಸಿಕ್ಕರೆ ಭಾರತದಲ್ಲಿ 1978ರಲ್ಲಿ ಸಿಕ್ಕಿತು. ಆದರೆ ಈ ಎಲ್ಲ ಹಿನ್ನಡೆಯನ್ನು ಕೋವಿಡ್ ವಿಚಾರದಲ್ಲಿ ಭಾರತ ಸರಿ ಪಡಿಸಿದೆ. ಇಷ್ಟೆಲ್ಲ ಇದ್ದರೂ ಪ್ರತಿಪಕ್ಷಗಳು ಎನ್ನಿಸಿಕೊಂಡವರು ನಡೆದು ಕೊಂಡ ಬಗೆ ಹೇಗಿತ್ತು?
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2021ರ ಬಜೆಟ್‌ನಲ್ಲಿ ಕೋವಿಡ್ ಲಸಿಕೆಗೆ 35 ಸಾವಿರ ಕೋಟಿ ರೂ. ಮೀಸಲಿಟ್ಟರು. ಏಕೆಂದರೆ ಲಸಿಕೆಯೊಂದೇ ಭಾರತೀಯರನ್ನು ರಕ್ಷಿಸಬಹುದು ಎಂದು ಸರಕಾರಕ್ಕೆ ತಿಳಿದಿತ್ತು. ಪ್ರಪಂಚದ ಎಲ್ಲ ವಿಚಾರವೂ ಗೊತ್ತು ಎಂದು ಬೀಗುವ ವಕೀಲ ಪ್ರಶಾಂತ್ ಭೂಷಣ್ ಟ್ವೀಟ್ ಮಾಡಿದ್ದು ಏನು? ಕೊರೊ ನಾ ಸೋಂಕು ತನ್ನಿಂತಾನೇ ಸಾಯುತ್ತಿರುವ ಸಂದರ್ಭದಲ್ಲಿ, ಪರೀಕ್ಷೆ ನಡೆಯದ ವ್ಯಾಕ್ಸಿನ್‌ಗಾಗಿ ಖಾಸಗಿ ವ್ಯಾಖೀÕನ್ ಕಂಪೆನಿಗಳಿಗೆ 35 ಸಾವಿರ ಕೋಟಿ ರೂ. ಘೋಷಣೆ ಮಾಡಿ¨ªಾರೆ. ಈ ಹಣವನ್ನು, ಕೆಲಸ ಕಳೆದುಕೊಂಡ ಬಡ ಕಾರ್ಮಿಕರಿಗೆ, ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯಾಗಿ ನೀಡಲಾಗುತ್ತಿರಲಿಲ್ಲವೇ ಎಂದು ಹೇಳಿದ್ದರು. ಕಾಂಗ್ರೆಸ್‌ನ ರಾಹುಲ್ ಗಾಂಧಿ, ಲಸಿಕೆ ಅಭಿವೃಧಿªಪಡಿಸಿದ ವಿಜ್ಞಾನಿಗಳಿಗೆ ಹಾಗೂ ಸಂಸ್ಥೆಗೆ ಒಮ್ಮೆಯೂ ಅಭಿನಂದಿಸಲಿಲ್ಲ. ಬದಲಿಗೆ, ಅದರಲ್ಲಿ ಸರಕಾರದ ಹೆಸರೇಕಿಲ್ಲ? ಎಂಬ ಅತ್ಯಂತ ಅನವಶ್ಯಕ ಪ್ರಶ್ನೆ ಎತ್ತಿದರು. ಕಾಂಗ್ರೆಸ್ ಸಂಸದ ಶಶಿ ತರೂರ್, ಇನ್ನೂ ಯಶಸ್ವಿ ಕ್ಲಿನಿಕಲ್ ಟ್ರಯಲ್ ಪೂರ್ಣಗೊಳಿಸದ ಕೋವ್ಯಾ ಕ್ಸಿನ್ ಬಳಕೆಗೆ ಒಪ್ಪಿಗೆ ನೀಡಿದ್ದು ಅಪಾಯಕಾರಿ ಎಂದರು. ಅನಂತರ ಇದೇ ಶಶಿ ತರೂರ್, ದೇಶದ ನಾರಿಕರಿಗೆ ಸಾಕಷ್ಟು ಲಸಿಕೆಯನ್ನು ಈ ಸರಕಾರ ನೀಡುತ್ತಿಲ್ಲ ಎಂದರು. ಪ್ರಾರಂಭದಲ್ಲಿ ತೆಗಳಿದವರೇ ಇಂದು ಸರತಿ ಯಲ್ಲಿ ನಿಂತು ಲಸಿಕೆ ಪಡೆಯುತ್ತಿದ್ದಾರೆ. ಉತ್ತರ ಪ್ರದೇಶ ದಂತಹ ದೊಡ್ಡ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಅಖೀಲೇಶ್ ಯಾದವ್, ಕೊವ್ಯಾಕ್ಸಿನನ್ನು ಬಿಜೆಪಿ ವ್ಯಾಕ್ಸಿನ್ ಎಂದರು.
ಇನ್ನು, ಕಳೆದ 70 ವರ್ಷದಲ್ಲಿ ದೇಶದ ಆರೋಗ್ಯ ವ್ಯವಸ್ಥೆಗೆ ಸರಕಾರಗಳು ನೀಡಿದ ಕೊಡುಗೆ ಬಗ್ಗೆ ಏಪ್ರಿಲ್ 30ರಂದು ಸುಪ್ರೀಂಕೋರ್ಟ್ ಮಾತೇ ಉದಾಹರಣೆ. ಕಳೆದ 70 ವರ್ಷದಲ್ಲಿ ನಮಗೆ ಲಭಿಸಿದ ಆರೋಗ್ಯ ಮೂಲಸೌಕರ್ಯ, ಈಗಿನ ಸಂದರ್ಭವನ್ನು ಎದುರಿಸಲು ಸಾಲುತ್ತಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿತ್ತು. ದೇಶದಲ್ಲಿ ಆರೋಗ್ಯ ಮೂಲಸೌಕರ್ಯಕ್ಕೆ ಯಾವ್ಯಾವ ಸರಕಾರಗಳು ಏನೇನು ಮಾಡಿವೆ ಎನ್ನುವುದನ್ನು ಒಂದು ಉದಾಹರಣೆ ಮೂಲಕ ನೋಡೋಣ. 1952ರಲ್ಲಿ ದೆಹಲಿಯಲ್ಲಿ ಒಂದು ಏಮ್ಸ್ (ಆಲ್ ಇಂಡಿಯಾ ಇನ್ಸ್ ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್) ಮಾಡಲಾಯಿತು, ಅದು ಜವಾರಲಾಲ್ ನೆಹರೂ ಪ್ರಧಾನಿಯಾಗಿದ್ದ ಸಮಯ. ಅನಂತರ 2003ರವರೆಗೆ ಅಂದರೆ 51 ವರ್ಷದಲ್ಲಿ ದೇಶದಲ್ಲಿ ಇನ್ನೊಂದು ಏಮ್ಸ್ ಮಾಡಲು ಆಗಲಿಲ್ಲ. 2003ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರಕಾರದ ಅವಧಿಯಲ್ಲಿ ಭೋಪಾಲ್, ಭುವನೇಶ್ವರ, ಜೋಧಪುರ, ಪಟನಾ, ರಾಯು³ರ ಹಾಗೂ ಹೃಷಿಕೇಶದಲ್ಲಿ ಏಮ್ಸ್‌ಗೆ ಅನುಮತಿ ನೀಡಲಾಯಿತು. 2014ರವರೆಗೆ ಸತತ ಎರಡು ಅವಧಿಗೆ ಅಂದರೆ 10 ವರ್ಷ ದೇಶದ ಪ್ರಧಾನಿ ಯಾಗಿದ್ದ ಮನಮೋಹನ ಸಿಂಗ್ ಅಧಿಕಾರಾವಧಿಯಲ್ಲಿ, ಅಂದರೆ ಪರೋಕ್ಷವಾಗಿ ಸೋನಿಯಾ ಗಾಂಧಿಯವರ ಆಡಳಿತದಲ್ಲಿ ಸ್ಥಾಪನೆಯಾಗಿದ್ದು ಒಂದೇ ಏಮ್ಸ್. 2009ರಲ್ಲಿ ಏಮ್ಸ್ ಸ್ಥಾಪನೆಗೆ ಕ್ಯಾಬಿನೆಟ್ ಒಪ್ಪಿಗೆ ನೀಡಿತು, ಅದೂ ಸಹ ಸೋನಿಯಾಗಾಂಧಿಯವರ ಲೋಕಸಭಾ ಕ್ಷೇತ್ರ ರಾಯ್‌ಬರೇಲಿಯಲ್ಲಿ. ಅನಂತರ 2014ರಲ್ಲಿ ಪ್ರಧಾನಿ ಮೋದಿಯವರ ನೇತೃತ್ವದ ಸರಕಾರ ಬಂದ ಅನಂತರ ದೇಶ ದಲ್ಲಿ ಏಮ್ಸ್ ಶಕೆ ಆರಂಭವಾಯಿತು. ಕೇವಲ ಏಳು ವರ್ಷ ದಲ್ಲಿ 14 ಏಮ್ಸ್ ಸ್ಥಾಪನೆಗೆ ಮುಂದಡಿ ಇಡಲಾಗಿದೆ.ವಾಜಪೇಯಿ ಆಡಳಿತದಲ್ಲಿ ಮಂಜೂರಾಗಿದ್ದ ಅನೇಕ ಏಮ್ಸ್‌ಗಳು ಹಂತಹಂತವಾಗಿ ಅಭಿವೃದ್ಧಿಯಾಗಿ ಯುಪಿಎ ಅವಧಿಯಲ್ಲಿ ಕಾರ್ಯ ಆರಂಭಿಸಿದವು. ಆದರೆ ಕಾಂಗ್ರೆಸ್ ಮಂಜೂರು ಮಾಡಿದ್ದ ಏಕೈಕ ಏಮ್ಸ್ ಕೆಲಸ ಆರಂಭಿಸಿದ್ದು 2018ರಲ್ಲಿ ಮೋದಿ ಆಡಳಿತ ಬಂದ ನಂತರವೇ.
– ಡಾ|ಎಂ.ಆರ್.ವೆಂಕಟೇಶ್, ಬಿಎಂಟಿಸಿ ಉಪಾಧ್ಯಕ್ಷರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Recipe: ಆರೋಗ್ಯಕ್ಕೆ ಅಮೃತ, ರುಚಿಗೆ ಅದ್ಭುತ ಈ ಚಟ್ನಿ!ಒಂದ್ಸಲ ಈ ವಿಧಾನದಲ್ಲಿ ಟ್ರೈ ಮಾಡಿ…
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
Mahakumbh 2025: 45 ಕೋಟಿ ಯಾತ್ರಾರ್ಥಿಗಳ ನಿರೀಕ್ಷೆ
INDvAUS: ಬಿಸಿಸಿಐ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ರಾ ಟ್ರಾವಿಸ್ ಹೆಡ್? Video
Sheikh ಹಸೀನಾರನ್ನು ಬಾಂಗ್ಲಾದೇಶಕ್ಕೆ ವಾಪಸ್ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.