ಆರೋಗ್ಯ ವಿಮೆ ನಾವು ಅರಿಯಬೇಕಾಗಿದ್ದೇನು?
ದೂರು ನೀಡಲು ಸ್ಪಷ್ಟ ವೇದಿಕೆ ಇರಲಿ
Team Udayavani, Apr 28, 2021, 6:40 AM IST
ದೇಶದ ಆಸ್ಪತ್ರೆಗಳು ಕೊರೊನಾ ರೋಗಿಗಳಿಂದ ತುಂಬಿವೆ. ಇಂತಹ ಪರಿಸ್ಥಿತಿಯಲ್ಲಿ ಆಸ್ಪತ್ರೆಗಳು ಕ್ಯಾಶ್‌ಲೆಸ್ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸುತ್ತಿಲ್ಲ ಎಂಬ ಅನೇಕ ದೂರುಗಳಿವೆ. ಆದರೆ ಆಸ್ಪತ್ರೆಯ ಈ ವರ್ತನೆಗೆ ವಿಮಾ ಕಂಪೆನಿಗಳು ಏನೂ ಮಾಡುವಂತಿಲ್ಲ. ಏಕೆಂದರೆ ಆಸ್ಪತ್ರೆಗಳ ಮೇಲೆ ಕ್ರಮ ಕೈಗೊಳ್ಳಲು ಪ್ರಸ್ತುತ ಯಾವುದೇ ವ್ಯವಸ್ಥೆ ಇಲ್ಲ. ಆದರೆ ವಿಮಾ ಕಂಪೆನಿಗಳ ಮೇಲೆ ನಿಗಾ ಇಡಲು ನಿಯಂತ್ರಣ ಸಂಸ್ಥೆ ಇದೆ.
ವಿಮಾ ಕಂಪೆನಿಗಳು ನಿಮಗೆ ನೀಡುವ ಆರೋಗ್ಯ ವಿಮಾ ಪಾಲಿಸಿಯ ಅಡಿಯಲ್ಲಿ ಚಿಕಿತ್ಸೆ ಪಡೆದುಕೊಳ್ಳ ಬಹುದಾದ ಆಸ್ಪತ್ರೆ ಗಳನ್ನು ಹೆಸರಿಸಿದ್ದರೆ ಅದೇ ಆಸ್ಪತ್ರೆಗಳಲ್ಲಿ ನೀವು ಶುಲ್ಕವಿಲ್ಲದೇ ಚಿಕಿತ್ಸೆಯನ್ನು ಪಡೆಯಬಹುದು. ಇಲ್ಲಿ ವಿಮಾ ಕಂಪೆನಿಗಳೊಂದಿಗೆ ಆಸ್ಪತ್ರೆಗಳು ಒಪ್ಪಂದ ಮಾಡಿಕೊಂಡಿರುತ್ತವೆ. ಇದನ್ನು “ನೆಟವರ್ಕ್ ಆಸ್ಪತ್ರೆ’ ಎಂದು ಕರೆಯಲಾಗುತ್ತದೆ. ಆಸ್ಪತ್ರೆ ಮತ್ತು ವಿಮಾ ಕಂಪೆನಿಗಳ ನಡುವೆ ಟಿಪಿಎ ಮೂರನೇ ವ್ಯವಸ್ಥೆ ಕೆಲಸ ಮಾಡುತ್ತದೆ.
ಆಸ್ಪತ್ರೆಗಳ ವ್ಯತ್ಯಾಸವೇನು?
ನೆಟ್‌ವರ್ಕ್ ಆಸ್ಪತ್ರೆಗೆ ದಾಖಲಾದರೆ ಅಲ್ಲಿ ನಗದುರಹಿತ ಚಿಕಿತ್ಸೆ ಪಡೆಯಬಹುದಾಗಿದೆ. ಅಲ್ಲದೆ ಎಲ್ಲ ಖರ್ಚುಗಳನ್ನು ಮೊದಲೇ ನಿಗದಿಪಡಿಸಲಾಗಿರುತ್ತದೆ. ಅಂದರೆ ಯಾವ ಔಷಧಕ್ಕೆ ಎಷ್ಟು ಬೆಲೆ, ಚಿಕಿತ್ಸಾ ವೆಚ್ಚ, ವೈದ್ಯರ ಶುಲ್ಕ..ಹೀಗೆ ಎಲ್ಲವನ್ನೂ ನಿರ್ಧರಿಸಲಾಗುತ್ತದೆ. ಇಲ್ಲಿ ಆಸ್ಪತ್ರೆಗಳಿಗೆ ನಿಮ್ಮಿಂದ ಹೆಚ್ಚು ವಸೂಲು ಮಾಡಲು ಸಾಧ್ಯವಾಗುವುದಿಲ್ಲ. ಆದರೆ ನೀವು ನೆಟ್‌ವರ್ಕ್ ಅಲ್ಲದ ಆಸ್ಪತ್ರೆಯಲ್ಲಿ ದಾಖಲಾಗುವ ಮೊದಲು ಅಥವಾ ಡಿಸ್‌ಚಾರ್ಜ್ ಸಂದರ್ಭ ನೀವು ಆಸ್ಪತ್ರೆಯ ಒಟ್ಟು ಬಿಲ್ ಪಾವತಿಸಬೇಕು. ಬಳಿಕ ನೀವು ಪಾವತಿಸಿದ ಬಿಲ್ ಅನ್ನು ಕಂಪೆನಿಗೆ ತೋರಿಸಿದರೆ ಆ ವಿಮಾ ಕಂಪೆನಿಯು ಖರ್ಚಾದ ಮೊತ್ತವನ್ನು ನಿಮಗೆ ಹಿಂದಿರುಗಿಸುತ್ತದೆ.
ಆಸ್ಪತ್ರೆಗಳಿಗೆ ನಿಯಂತ್ರಕರೇ ಇಲ್ಲ
ಆಸ್ಪತ್ರೆ ಹೆಚ್ಚು ಶುಲ್ಕ ವಿಧಿಸಿದರೆ ಅಥವಾ ನಿರಾಕರಿಸಿದರೆ ಗ್ರಾಹಕರು ಏನೂ ಮಾಡುವಂತಿಲ್ಲ. ನಮ್ಮ ದೇಶದಲ್ಲಿ ಆಸ್ಪತ್ರೆಗಳಿಗೆ ಯಾವುದೇ ನಿಯಂತ್ರಕರು ಇಲ್ಲ. ಇಂದಿನ ಪರಿಸ್ಥಿತಿಯಲ್ಲಿ ಎಲ್ಲ ಆಸ್ಪತ್ರೆಗಳು ರೋಗಿಗಳಿಂದ ತುಂಬಿವೆ. ನೆಟ್‌ವರ್ಕ್ ಆಸ್ಪತ್ರೆಗಳು ದೊಡ್ಡ ಆಸ್ಪತ್ರೆಗಳಾಗಿವೆ. ಅಂತಹ ಪರಿಸ್ಥಿತಿಯಲ್ಲಿ ಇದೀಗ ಆ ಆಸ್ಪತ್ರೆಗಳಲ್ಲಿ ಬೆಡ್ ಪಡೆಯು ವುದು ಕಷ್ಟ. ಅದಕ್ಕಾಗಿಯೇ ಜನರು ವಿಮಾ ಕಂಪೆನಿಗಳ ನೆಟ್‌ವರ್ಕ್ ಅಲ್ಲದ ಸಣ್ಣ ಆಸ್ಪತ್ರೆಗಳಿಗೆ ಹೋಗುತ್ತಿ¨ªಾರೆ. ಈ ಆಸ್ಪತ್ರೆಗಳಲ್ಲಿ ಹಣವನ್ನು ಪಾವತಿಸಬೇಕಾಗುತ್ತದೆ.
ನಿಜವಾದ ಸಮಸ್ಯೆ ಏನು?
ದೇಶದಲ್ಲಿ ಟಿಪಿಎ (ಥರ್ಡ್ ಪಾರ್ಟಿ ಅಡ್ಮಿನಿಸ್ಟ್ರೇಟರ್) ಮತ್ತು ನೆಟ್‌ವರ್ಕ್ ಆಸ್ಪತ್ರೆಗಳ ಸಂಖ್ಯೆ ತೀರಾ ಕಡಿಮೆ ಇದೆ. ಅಲ್ಲದೆ ಆರೋಗ್ಯ ವಿಮೆಯನ್ನು ತೆಗೆದುಕೊಳ್ಳುವವರ ಸಂಖ್ಯೆ ಕಡಿಮೆ. ದೇಶದಲ್ಲಿ 30-40 ಕೋಟಿ ಜನರು ಆರೋಗ್ಯ ವಿಮೆಯನ್ನು ಹೊಂದಿದ್ದರೂ ಅವರಲ್ಲಿ ಹೆಚ್ಚಿನವರು ಕಂಪೆನಿಗಳ ಆರೋಗ್ಯ ವಿಮಾ ಯೋಜನೆಯ ವ್ಯಾಪ್ತಿಗೆ ಬರುತ್ತಾರೆ. ಕೊರೊನಾ ರೋಗಿಗಳು ಈ ವಿಮಾ ಯೋಜನೆ ವ್ಯಾಪ್ತಿಯಲ್ಲಿ ಬರುವುದಿಲ್ಲ.
ಹೆಚ್ಚಿನ ಶುಲ್ಕ ವಿಧಿಸಿದರೆ ಏನಾಗುತ್ತದೆ?
ಕೆಲವು ಆಸ್ಪತ್ರೆಗಳು ಲೆಕ್ಕಕ್ಕಿಂತ ಹೆಚ್ಚಿನ ಮೊತ್ತವನ್ನು ವಸೂಲು ಮಾಡುತ್ತವೆ ಎಂಬ ಆರೋಪ ಇದೆ. ಆದರೆ ನೆಟ್‌ವರ್ಕ್ ಆಸ್ಪತ್ರೆಯಲ್ಲಿ ಹೆಚ್ಚಿನ ಬಿಲ್‌ಗಳ ಸಾಧ್ಯತೆ ಕಡಿಮೆ. ಆದರೆ ಆಸ್ಪತ್ರೆಯು ನೆಟ್‌ವರ್ಕ್‌ನಲ್ಲಿ ಹೆಚ್ಚಿನ ಬಿಲ್‌ಗಳನ್ನು ವಿಧಿಸಿದರೆ ವಿಮಾ ಕಂಪೆನಿಯು ಅದರಲ್ಲಿರುವ ಹಣವನ್ನು ಕಡಿತಗೊಳಿಸುತ್ತದೆ. ಆಸ್ಪತ್ರೆ ವಿಧಿಸುವ ಶುಲ್ಕದ ವಿರುದ್ಧ ನೀವು ವಿಮಾ ಕಂಪೆನಿ ಅಥವಾ ನಿಯಂತ್ರಕರಿಗೆ ದೂರು ನೀಡಲು ಸಾಧ್ಯವಿಲ್ಲ.
ವಿಮಾ ಕಂಪೆನಿ ವಿರುದ್ಧ ದೂರು ನೀಡಬಹುದೇ?
ವಿಮಾ ಕಂಪೆನಿಯು ನಿಮ್ಮ ಹಕ್ಕುಗಳನ್ನು ಉಲ್ಲಂಘಿಸಿದ್ದರೆ ಮಾತ್ರ ವಿಮಾ ಕಂಪೆನಿಯ ವಿರುದ್ಧ ಒಂಬುಡ್ಸ್‌ಮನ್ ಅಂದರೆ ಲೋಕಪಾಲ್‌ಗೆ ದೂರು ನೀಡಬಹುದು. ಆದರೆ ಸಾಮಾನ್ಯವಾಗಿ ಇಂಥ ದೂರುಗಳು ಸಲ್ಲಿಕೆಯಾಗುವುದು ಕಡಿಮೆ. ವಿಮಾ ಒಂಬುಡ್ಸ್‌ಮನ್ ನಿಮ್ಮ ದೂರನ್ನು ಸರಕಾರಕ್ಕೆ ಕಳುಹಿಸುತ್ತಾರೆ. ಈ ಬಗ್ಗೆ ಕ್ರಮ ಕೈಗೊಳ್ಳುವ ಅಧಿಕಾರ ಸರಕಾರದ ಕೈಯಲ್ಲಿದೆ. ಒಂಬುಡ್ಸ್‌ಮನ್ ಇಲ್ಲಿ ಮಧ್ಯವರ್ತಿಯ ಪಾತ್ರವನ್ನು ನಿರ್ವಹಿಸುತ್ತದೆ. ಕ್ರಮ ಕೈಗೊಳ್ಳಲು ಒಂಬುಡ್ಸ್‌ಮನ್‌ಗೆ ಅಧಿಕಾರವಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.