ಹೆಲ್ತ್‌ ಈಸ್‌ ವೆಲ್ತ್‌!

ಆರೋಗ್ಯ ವಿಮೆ ಕೊಳ್ಳುವ ಮುನ್ನ ತಿಳಿಯಬೇಕಾದ ಸಂಗತಿಗಳು

Team Udayavani, Jun 8, 2020, 5:20 AM IST

health-wealth

ಇಂದಿನ ಸಂದರ್ಭದಲ್ಲಿ ಮೆಡಿಕಲ್‌ ಖರ್ಚು ಹಿಂದೆಂದಿಗಿಂತ ಹೆಚ್ಚುತ್ತಿದೆ. ಇದರಿಂದಾಗಿ, ಹೆಲ್ತ್ ಇನ್ಷೊರೆನ್ಸ್‌ ಮೊರೆ ಹೋಗುತ್ತಿರುವವರ ಸಂಖ್ಯೆಯೂ ದಿನೇ ದಿನೆ ಹೆಚ್ಚುತ್ತಿದೆ. ಮಾರುಕಟ್ಟೆಯಲ್ಲಿ ಹಲವು ಬಗೆಯ ಪಾಲಿಸಿಗಳು ಲಭ್ಯ ಇವೆ.  ಆದರೆ, ಅವು ನೀಡುವ ಸವಲತ್ತುಗಳು ಜನಸಾಮಾನ್ಯರಲ್ಲಿ ಗೊಂದಲ ಮೂಡಿಸುವ ಸಾಧ್ಯತೆಯೇ ಹೆಚ್ಚು. ಎಲ್ಲಾ ಪಾಲಿಸಿಗಳ ವಿವರಗಳು ಆನ್‌ಲೈನಿನಲ್ಲಿ ಸಿಗುತ್ತವೆ. ಕೂತಲ್ಲೇ ವಿಮೆಯ ಪಾಲಿಸಿಗಳ ಕುರಿತು ಮಾಹಿತಿ  ಪಡೆದುಕೊಳ್ಳಬಹುದು. ಆದರೆ, ಯಾವುದೇ ಬಗೆಯ ವಿಮೆಯ ಕುರಿತು, ಸಂಸ್ಥೆಯ ಪ್ರತಿನಿಧಿ ಯೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವುದು ಕಂಫ‌ರ್ಟೆಬಲ್‌ ಎನ್ನಿಸುತ್ತದೆ. ವಿಮೆ ಕೊಳ್ಳುವ ಮುನ್ನ, ಅದನ್ನು ಕುರಿತು ತಿಳಿಯಬೇಕಾದ  ನಾಲ್ಕು ಸಂಗತಿಗಳು ಇಲ್ಲಿವೆ.

ಒಳಗೊಂಡಿರುವುದೇನು?: ವಿಮೆ ಕೊಳ್ಳುವಾಗ ಎಲ್ಲರೂ ಪ್ರೀಮಿಯಂ ವಿಷಯಕ್ಕೇ ಮೊದಲ ಪ್ರಾಶಸ್ತ್ಯ ಕೊಡುತ್ತಾರೆ. ಆದರೆ ಆ ಪಾಲಿಸಿ ಏನೆಲ್ಲವನ್ನೂ ಕವರ್‌ ಮಾಡುತ್ತದೆ ಎಂಬುದರ ಕುರಿತು ತಿಳಿಯುವುದೇ ಮುಖ್ಯವಾಗ ಬೇಕು. ಬೇಸಿಕ್‌  ಆಸ್ಪತ್ರೆಯ ಖರ್ಚನ್ನು ಕವರ್‌ ಮಾಡುವ ಪ್ಲ್ಯಾನ್‌, ಗಂಭೀರ ಕಾಯಿಲೆಯ ಚಿಕಿತ್ಸೆ ಕವರ್‌ ಮಾಡುವ ಪ್ಲ್ಯಾನ್‌… ಹೀಗೆ ಹಲವು ವಿಚಾರಗಳ ಕುರಿತು ಮಾಹಿತಿ ತಿಳಿದುಕೊಳ್ಳಬೇಕಾ ಗುತ್ತದೆ. ಹೀಗೆ ಮಾಡುವುದರಿಂದ ಗ್ರಾಹಕರಿಗೆ ವಿಮೆ  ಕೊಳ್ಳಬೇಕೋ ಬೇಡವೋ ಎಂಬುದನ್ನು ನಿರ್ಧರಿಸಲು ಅನುಕೂಲವಾಗುತ್ತದೆ. ಗಂಭೀರ ಕಾಯಿಲೆ  ಯನ್ನು ಕವರ್‌ ಮಾಡುವ ಪಾಲಿಸಿಯಾದರೆ, ಎಷ್ಟು ಬಗೆಯ ಕಾಯಿಲೆಗಳನ್ನು ಕವರ್‌ ಮಾಡುತ್ತದೆ ಎಂದು ತಿಳಿದುಕೊಳ್ಳಬೇಕು. ಕೆಲ  ಪಾಲಿಸಿಗಳು ಸುಮಾರು 37 ಕಾಯಿಲೆಗಳನ್ನು ಕವರ್‌ ಮಾಡುತ್ತವೆ.

ಹೊರಗುಳಿಯುವುದೇನು?: ಪಾಲಿಸಿ ಏನನ್ನು ಕವರ್‌ ಮಾಡುತ್ತದೆ ಎಂದು ತಿಳಿಯುವುದು ಮಾತ್ರವಲ್ಲ; ಅದು ಏನನ್ನು ಕವರ್‌ ಮಾಡುತ್ತಿಲ್ಲ ಎಂದು ತಿಳಿದುಕೊಳ್ಳುವುದೂ ಅಷ್ಟೇ ಮುಖ್ಯ. ಏಕೆಂದರೆ, ನಮಗೆ ಬೇಕಾಗಿರುವ ಸವಲತ್ತನ್ನು  ಪಾಲಿಸಿ ಒದಗಿಸದೇ ಇದ್ದ ಪಕ್ಷದಲ್ಲಿ, ಅದನ್ನು ಪಡೆದುಕೊಳ್ಳಲು ಹೆಚ್ಚುವರಿ ಹಣ ಕೊಡಬೇಕಾಗುತ್ತದೆ. ಎಲ್ಲಾ ಪಾಲಿಸಿಗಳೂ ಕೆಲ ಸವಲತ್ತುಗಳನ್ನು ಹೊರಗಿಡುತ್ತವೆ. ಇವನ್ನು ಎಕ್ಸ್‌ಕ್ಲೂಷನ್ಸ್‌ ಎಂದು ಕರೆಯುತ್ತಾರೆ. ಕೆಲ ಬೇಸಿಕ್‌ ಆರೋಗ್ಯ ವಿಮೆಗಳನ್ನು, ಕೊಂಡ ದಿನಾಂಕದಿಂದ 1- 2 ತಿಂಗಳ ಅವಧಿಯೊಳಗೆ ಕ್ಲೈಮ್‌ ಮಾಡಿಕೊಳ್ಳಲು ಆಗುವುದಿಲ್ಲ. ಹಾಗಾಗಿ, ಪಾಲಿಸಿಯ ಎಕ್ಸ್‌ಕ್ಲೂಷನ್‌ಗಳು ಏನೇನು ಎಂಬುದನ್ನು, ಏಜೆಂಟರಿಂದ ತಿಳಿದುಕೊಳ್ಳಬೇಕು.

ವೇಯ್ಟಿಂಗ್‌ ಪಿರಿಯೆಡ್‌: ಮಾರುಕಟ್ಟೆಯಲ್ಲಿ ಲಭ್ಯವಿರುವ ವಿಮೆಗಳಲ್ಲಿ ಹೆಚ್ಚಿನವು, ಹಿಂದಿನಿಂದಲೂ ಇರುವ ಗಂಭೀರ ಕಾಯಿಲೆ ಗಳಿದ್ದರೆ, ಅದನ್ನು ಕವರ್‌ ಮಾಡುವುದಿಲ್ಲ. ಮಾಡಿದರೂ 3- 4 ವರ್ಷಗಳ ಒಳಗೆ ಆಕ್ಟಿವೇಟ್‌ ಆಗಿರು  ವುದಿಲ್ಲ. ಅಂದರೆ, ನಿಗದಿತ ಅವಧಿಯ ನಂತರವೇ ವಿಮೆಯಿಂದ ರಕ್ಷಣೆ ಸಿಗುತ್ತದೆ. ಇದನ್ನೇ ವೇಯ್ಟಿಂಗ್‌ ಪಿರಿಯೆಡ್‌ ಎನ್ನಲಾಗುತ್ತದೆ. ಗ್ರಾಹಕರಿಗೆ ಕಡಿಮೆ ಅವಧಿಯಲ್ಲಿ ಕ್ಲೈಮ್‌ ಮಾಡಲು ಸಾಧ್ಯವಾಗು ವಂಥ ಪಾಲಿಸಿ ಬೇಕಿದ್ದಲ್ಲಿ, ವೇಯ್ಟಿಂಗ್‌ ಪಿರಿಯೆಡ್‌ ಕಡಿಮೆಯಿರುವ ಪಾಲಿಸಿಯನ್ನು ಆಯ್ದುಕೊಳ್ಳಬೇಕು. ಆರ್ಥೈಟಿಸ್‌, ಮೂತ್ರಕೋಶದಲ್ಲಿ ಕಲ್ಲು, ಕ್ಯಾಟರಾಕ್ಟ್ ಮುಂತಾದ ಚಿಕಿತ್ಸೆಗಳಿಗೆ, ಕೆಲ ಪಾಲಿಸಿಗಳು ಮೊದಲ ಒಂದೆರಡು ವರ್ಷಗಳ ಅವಧಿಯಲ್ಲಿ ಕವರ್‌  ಮಾಡುವುದಿಲ್ಲ. ಹೀಗಾಗಿ ಪಾಲಿಸಿಗಳ ವೇಯ್ಟಿಂಗ್‌ ಪಿರಿಯೆಡ್‌ ತಿಳಿದುಕೊಳ್ಳಬೇಕಾಗುತ್ತದೆ.

ಎಕ್ಸ್‌ಟ್ರಾ ಕವರ್‌: ವಿಮಾ ಸಂಸ್ಥೆಗಳು ಆ್ಯಡ್‌ ಆನ್‌ ಸವಲತ್ತನ್ನು ನೀಡುತ್ತವೆ. ಆ್ಯಡ್‌ ಆನ್‌ ಎಂದರೆ, ಮೂಲ ಪಾಲಿಸಿಯಲ್ಲಿ ಇಲ್ಲದೇ ಇರುವ ಸವಲತ್ತನ್ನು ಹೆಚ್ಚುವರಿ ಶುಲ್ಕ ತೆತ್ತು ಸೇರಿಸಿಕೊಳ್ಳುವುದು. ಇದಕ್ಕೆ ಹೆಚ್ಚಿನ ಬೆಲೆ ನಿಗದಿಪಡಿಸಿರುತ್ತಾರೆ. ಕೆಲವೊಮ್ಮೆ ಈ ಆ್ಯಡ್‌ ಆನ್‌ ಸವಲತ್ತು ಗಳು ಪಾಲಿಸಿಯ ಜೊತೆಗೇ ಬಂದಿರುತ್ತವೆ. ಎಷ್ಟೋ ಸಲ, ತಮ್ಮ ಪಾಲಿಸಿಯಲ್ಲಿ ಆ್ಯಡ್‌ ಆನ್‌ ಸವಲತ್ತು ಇರು ವುದು ಗ್ರಾಹಕ ರಿಗೇ ತಿಳಿದಿರುವುದಿಲ್ಲ. ಅವರಿಗೆ ಆ ಸವಲತ್ತು  ಬೇಕಾಗಿಯೂ ಇರುವುದಿಲ್ಲ. ಆದರೆ, ಗೊತ್ತಿಲ್ಲದೆಯೇ ಅನವಶ್ಯಕವಾಗಿ ಹೆಚ್ಚಿನ ಬೆಲೆ ತೆತ್ತಿರುತ್ತಾರೆ. ಪಾಲಿಸಿಕೊಳ್ಳುವ ಮುನ್ನ, ಇಂಥ ಯಾವುದೇ ಸವಲತ್ತು ಸೇರಿಕೊಂಡಿಲ್ಲ ಎಂದು ಖಚಿತಪಡಿಸಿಕೊಂಡರೆ ಉತ್ತಮ. ಒಂದುವೇಳೆ ಸೇರಿದ್ದಲ್ಲಿ,  ಅದನ್ನು ಬೇಡವೆಂದು ತಿರಸ್ಕರಿಸಬಹುದು. ಆಗ ದುಡ್ಡೂ ಮಿಗುತ್ತದೆ.

ಟಾಪ್ ನ್ಯೂಸ್

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

11-elephant

Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Sandalwood: ಮಾಸ್‌ ಸಿನಿಮಾಗಳಿಗ ಜೈ ಎಂದ ಪ್ರೇಕ್ಷಕ

Sandalwood: ಮಾಸ್‌ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ

Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

kop

Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ

ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ಮಿಕ್ಸಿಂಗ್ ವಾಹನ ಪಲ್ಟಿ… ತಪ್ಪಿದ ಅನಾಹುತ

ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

12-

Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ

11-elephant

Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.