ಮಳೆಗಾಲದಲ್ಲಿ ಯಾವ ಆಹಾರ ದೇಹಕ್ಕೆ ಉತ್ತಮ ಗೊತ್ತಾ?
Team Udayavani, May 4, 2020, 11:58 AM IST
ಮಳೆಗಾಲ ಬಂತೆಂದರೆ ಸಾಕು ಏನೋ ಅರಿಯದ ಸಂತಸ, ಮನುಷ್ಯನೂ ಸೇರಿದಂತೆ ಎಲ್ಲಾ ಜೀವಿಗಳ ಆರೋಗ್ಯದ ಮೇಲೆ ವರ್ಷ ಋತು ಪರಿಣಾಮ ಬೀರುತ್ತದೆ. ಕಾಲ ಬದಲಾದಂತೆ ಕಾಲಕ್ಕೆ ತಕ್ಕಂತೆ ನಮ್ಮ ಆಹಾರ ಕ್ರಮವೂ ಕೂಡ ಬದಲಾಗಿಸಿಕೊಳ್ಳಬೇಕಾಗುತ್ತದೆ. ಕಾಲ ಬದಲಾದಂತೆ ನಮ್ಮ ಬಾಯಿ ರುಚಿ ಕೂಡ ಬದಲಾಗುತ್ತದೆ. ಬಾಯಿ ರುಚಿಗೆ ಯಾವ ಆಹಾರ ಒಳ್ಳೆಯದು, ಯಾವ ಆಹಾರ ಕೆಟ್ಟದು ಎಂದು ಗೊತ್ತಿರುವುದಿಲ್ಲ. ಅದು ರುಚಿ ರುಚಿಯಾದ ಆಹಾರವನ್ನು ಮಾತ್ರ ಬಯಸುತ್ತದೆ. ಆದರೆ ನಾಲಗೆಯ ರುಚಿಗಿಂತ ಆರೋಗ್ಯಕರ ಆಹಾರ ಮುಖ್ಯ.
ಮಳೆಗಾಲದಲ್ಲಿ ಯಾವ ಆಹಾರ ಆರೋಗ್ಯಕ್ಕೆ ಒಳ್ಳೆಯದು ಯಾವ ಆಹಾರವನ್ನು ಮಿತವಾಗಿ ಬಳಸಹುದು ಎಂಬುದನ್ನು ತಿಳಿದುಕೊಳ್ಳೋಣ:
ಮಳೆಗಾಲದಲ್ಲಿ ಸೇವಿಸಬಹುದಾದ ಆಹಾರಗಳು:
ಈ ಸಮಯದಲ್ಲಿ ಸೋಂಕು ನಿವಾರಕ ಆಹಾರಗಳನ್ನು ಹೆಚ್ಚಾಗಿ ಸೇವಿಸಿ. ಉದಾ: ಬಿನ್ಸ್, ಹಾಗಾಲಕಾಯಿ, ಅರಶಿಣ, ಮೆಂತೆ, ಜೋಳ, ಬಾರ್ಲಿ, ಗೋಧಿ, ಕಿತ್ತಲೆ ಮತ್ತು ನಿಂಬೆ ರಸ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಸಹಕಾರಿಯಾಗುತ್ತದೆ.
ಬೇಸಿಗೆಯಲ್ಲಿ ತಿನ್ನಲು ಹಿತವೆನ್ನಿಸುವ ಮೊಸರನ್ನು ಮಳೆಗಾಲದಲ್ಲೂ ಬಳಸಿ, ಮೊಸರು ಜೀರ್ಣಕ್ರಿಯೆಗೆ ಸಹಕಾರಿಯಾಗುತ್ತದೆ. ಶುಂಠಿ ಜೀರ್ಣಕ್ರಿಯೆಗೆ ಸಹಕಾರಿಯಾಗುವುದರಿಂದ ಆಹಾರ ಪದಾರ್ಥಗಳಲ್ಲಿ ಶುಂಠಿ ಸೇರಿಸಿ ಇದರೊಂಗೆ ಶುಂಠಿ ಟೀ ಮಾಡಿ ಕುಡಿಯುವುದು ಉತ್ತಮ. ಶುಂಠಿ ಜೀರ್ಣಕ್ರಿಯೆ ಜೊತೆಗೆ ದೇಹವನ್ನು ಬೆಚ್ಚಗಿಡುತ್ತದೆ. ಶೀತ, ಕೆಮ್ಮು ಇವುಗಳ ವಿರುದ್ದ ಹೋರಾಡುತ್ತದೆ.
ಇನ್ನು ವಿಶೇಷವಾಗಿ ಮಳೆಗಾಲದ ಆರಂಭದಲ್ಲಿ ಭೂಮಿಯಲ್ಲಿ ಕಾಣ ಸಿಗುವ ಪೌಷ್ಠಿಕಾಂಶಗಳನ್ನು ಹೊಂದಿರುವ ಆಹಾರ ಪದಾರ್ಥವೆಂದರೆ ಅಣಬೆ ಇದರ ಸೇವನೆಯೂ ಆರೋಗ್ಯಕರವಾದುದು.
ಸೊಪ್ಪಿನ ಆಹಾರ ಸೇವನೆ ಎಲ್ಲಾ ಸಮಯದಲ್ಲೂ ಆರೋಗ್ಯಕರವಾಗಿರುತ್ತದೆ ಆದರೆ, ಮಳೆಗಾಲದಲ್ಲಿ ಸೊಪ್ಪನ್ನುಶುಚಿ ಮಾಡುವಾಗ ತುಂಬಾನೆ ಜಾಗರೂಕರಾಗಿರಬೇಕು ಸೊಪ್ಪು ಪದಾರ್ಥಗಳಲ್ಲಿ ಕೀಟಾಣುಗಳು ಅಧಿಕ ಪ್ರಮಾಣದಲ್ಲಿ ಇರುತ್ತದೆ. ಆದ್ದರಿಂದ ತಾಜಾ ಸೊಪ್ಪನ್ನೆ ತಿನ್ನಿ.
ಆರೋಗ್ಯದ ರಕ್ಷಣೆಗೆ ಮುಖ್ಯವಾಗಿ ಬೇಕಾಗಿರುವುದು ಶುದ್ದವಾದ ನೀರು. ಅನೇಕ ಕಾಯಿಲೆಗಳು ನೀರಿನಿಂದ ಬರುತ್ತದೆ ಆದ್ದರಿಂದ ನೀರನ್ನು ಕುದಿಸಿ ಕುಡಿಯಿರಿ.
ಬೀದಿ ಬದಿಯ ಆಹಾರಕ್ಕೆ ಬ್ರೇಕ್: ನಮ್ಮ ನಾಲಗೆಯು ಬೀದಿ ಬದಿಯ ಆಹಾರವನ್ನೇ ಹೆಚ್ಚು ಬಯಸುತ್ತದೆ. ಆದರೆ, ಇದಕ್ಕೆ ಕಡಿವಾಣ ಹಾಕುವುದು ಎತ್ತಮ ಏಕೆಂದರೆ ಈ ಸಮಯದಲ್ಲಿ ಬೀದಿ ಬದಿಯ ಆಹಾರವನ್ನು ತಿಂದರೆ ಫುಡ್ ಪಾಯಿಸನ್ನಂತಹ ತೊಂದರೆಗಳು ಕಂಡು ಬರುತ್ತದೆ. ಆದ್ದರಿಂದ ಇದಕ್ಕೆ ಬ್ರೇಕ್ ಹಾಕುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ.
ನಾನ್ವೇಜ್ ತಿನ್ನುವುದನ್ನು ಕಮ್ಮಿ ಮಾಡಿ. ತಿನ್ನುವುದಾದರೆ ತಾಜಾ ಮೀನು ಮತ್ತು ಮಾಂಸವನ್ನು ಮಿತವಾಗಿ ತಿನ್ನಿ. ಶೀತಲೀಕರಣ ಮಾಡಿದ ಆಹಾರಗಳನ್ನು ದೂರವಿಡಿ.
ಆಹಾರ ಉಳಿದರೆ ಫ್ರಿಜ್ನಲ್ಲಿ ಇಟ್ಟು ಮತ್ತೆ ತಿನ್ನುವಾಗ ಬಿಸಿ ಮಾಡಿ ತಿನ್ನಿ. ಹೂಕೋಸು, ಬಟಾಣಿ, ಬೆಂಡೆಕಾಯಿ, ಮೊಳಕೆ ಬರಿಸಿದ ಕಾಳುಗಳು , ಆಲೂಗಡ್ಡೆ ಇವುಗಳನ್ನು ಮಿತವಾಗಿ ಬಳಸಿ. ಈ ಆಹಾರ ಪದಾರ್ಥಗಳು ಅಜೀರ್ಣ ಸಮಸ್ಯೆಯನ್ನು ತರಬಹುದು.
ಮಳೆಗಾಲದಲ್ಲಿ ಆದಷ್ಟೂ ಮನೆಯನ್ನುಶುಚಿಯಾಗಿಡಿ, ಮನೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಿ ಇದರೊಂದಿಗೆ ನಮ್ಮ ಆರೋಗ್ಯದ ರಕ್ಷಣೆಯನ್ನು ನಾವು ಮಾಡಿಕೊಳ್ಳೋಣ.
– ಮಹೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ
JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?
“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…
ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!
ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.