ಭೂಮಿಯೊಳಗಿಂದ ಕೇಳುತ್ತಿದೆ ಭಾರೀ ಸದ್ದು !
34ನೇ ನೆಕ್ಕಿಲಾಡಿ ಗ್ರಾ.ಪಂ. ಬಳಿಯ ಆದರ್ಶನಗರದಲ್ಲಿ ಘಟನೆ
Team Udayavani, May 6, 2020, 6:51 AM IST
ಉಪ್ಪಿನಂಗಡಿ/ಉಡುಪಿ: ಇಲ್ಲಿಗೆ ಸನಿಹದ 34ನೇ ನೆಕ್ಕಿಲಾಡಿ ಗ್ರಾ. ಪಂ.ನ ಆದರ್ಶನಗರ ಪರಿಸರದಲ್ಲಿ ಭೂಮಿಯಡಿ ಆಗಾಗ ಭಾರೀ ನಿಗೂಢ ಶಬ್ದ ಕೇಳಿ ಬರುತ್ತಿದ್ದು, ಪರಿಸರದ ಜನತೆಯಲ್ಲಿ ಆತಂಕಕ್ಕೆ ಕಾರಣವಾಗಿದೆ.
ಪುತ್ತೂರು- ಉಪ್ಪಿನಂಗಡಿ ರಾಜ್ಯ ಹೆದ್ದಾರಿ ದಾಟಿಕೊಂಡು ಭೂಮಿಯಡಿ ಈ ಶಬ್ದ ಮುಂದುವರಿಯುತ್ತಿದ್ದು, ಟಿಪ್ಪರ್‌ನಿಂದ ದೊಡ್ಡ ದೊಡ್ಡ ಬಂಡೆಗಳನ್ನು ಸುರಿದಂತೆ ಕೇಳಿಸುತ್ತಿದೆ. 20ರಿಂದ 30 ಸೆಕೆಂಡ್ ಇರುತ್ತದೆ. ದಿನಕ್ಕೆ ನಾಲ್ಕೈದು ಬಾರಿ ಶಬ್ದವಾಗುವುದು ನಮ್ಮ ಗಮನಕ್ಕೆ ಬಂದಿದ್ದು, ಮೇ 5ರಂದು ಬೆಳಗ್ಗೆ 10.15ಕ್ಕೆ ಕೂಡ ಕೇಳಿ ಬಂದಿದೆ ಎನ್ನುತ್ತಾರೆ ಸ್ಥಳೀಯರು.
ಈ ಬಗ್ಗೆ “ಉದಯವಾಣಿ’ ಯೊಂದಿಗೆ ಮಾತನಾಡಿದ ಸ್ಥಳೀಯ ನಿವಾಸಿ ಪ್ರಭಾಕರ ನಾಯಕ್, ಈ ಶಬ್ದ ಹಿಂದೆ ಯಾವಾಗಾದರೂ ಒಮ್ಮೆ ಕೇಳಿ ಬರುತ್ತಿತ್ತು. ಆಗ ನಾವು ಅಷ್ಟಾಗಿ ಗಮನಿಸಿರಲಿಲ್ಲ. ಆದರೆ ಈಗ ದಿನಕ್ಕೆ ನಾಲ್ಕೈದು ಭಾರಿಯಾದರೂ ಜೋರಾಗಿ ಕೇಳಿಬರುತ್ತಿದೆ. ನಮ್ಮ ಮನೆಯ ಕಾರ್ ಪಾರ್ಕಿಂಗ್ ಬಳಿ ಸದ್ದು ಜೋರಾಗಿದೆಯಲ್ಲದೆ ಭೂಮಿಯ ಕಂಪನವೂ ಅನುಭವಕ್ಕೆ ಬಂದಿದೆ. ಸುತ್ತಲಿನ ಪರಿಸರದವರಿಗೂ ಈ ಅನುಭವವಾಗಿದೆ ಎಂದಿದ್ದಾರೆ.
ವಿದ್ಯುತ್ ಲೈನ್ ಫಾಲ್ಟ್ ಇದ್ದದ್ದ ರಿಂದ ವಾರದ ಹಿಂದೆ ರಾತ್ರಿ ನಾನು ಮತ್ತು ಇನ್ನೊಬ್ಬ ಸಿಬಂದಿ ಅಕºರ್ ಆದರ್ಶನಗರಕ್ಕೆ ಬಂದಿದ್ದೆವು. ರಾತ್ರಿ 10ರ ಸುಮಾರಿಗೆ ಅಕºರ್ ಬೇರೆ ಕಡೆ ತೆರಳಿದ್ದರೆ ನಾನು ಆದರ್ಶನಗರದ ಪ್ರಯಾಣಿಕರ ತಂಗುದಾಣದ ಬಳಿ ನಿಂತಿದ್ದೆ. ಆಗ ಭಾರೀ ಸದ್ದು ಕೇಳಿದ್ದಲ್ಲದೆ, ಭೂಮಿ ಕಂಪಿಸಿದ ಅನುಭವವಾಯಿತು. ಆಗ ಸಿಡಿಲು, ಮಿಂಚು ಯಾವುದೂ ಇರಲಿಲ್ಲ. ನಾನು ಹೆದರಿ ಸಮೀಪದಲ್ಲೇ ಇರುವ ಪ್ರಭಾಕರ ಅವರ ಮನೆಯ ಬಳಿ ಓಡಿ ಬಂದೆ. ಅವರಿಗೂ ಇದೇ ಅನುಭವವಾಗಿದೆ ಎಂದು ವಿವರಿಸು ತ್ತಾರೆ ಉಪ್ಪಿನಂಗಡಿ ಮೆಸ್ಕಾಂನ ಪವರ್ ಮ್ಯಾನ್ ಸಾಬಣ್ಣ.ಈ ಪ್ರದೇಶದಲ್ಲಿ ಭೂಮಿಯ ಒಳಪದರವು ಕಲ್ಲಿನಿಂದಾವೃತವಾಗಿದೆ. ಒಂದೇ ಕಲ್ಲನ್ನು ಹಾಸಿದಂತೆ ಇದ್ದು, ಸ್ವಲ್ಪ ಮಣ್ಣು ಅಗೆದಾಗ ಗೋಚರಿಸುತ್ತದೆ. ಸುಮಾರು 50 ವರ್ಷಗಳ ಹಿಂದೆ ಇಲ್ಲಿ ಕಲ್ಲು ಗಣಿಗಾರಿಕೆಯನ್ನೂ ನಡೆಸಲಾ ಗುತ್ತಿತ್ತು ಎಂದು ಸ್ಥಳೀಯರು ಹೇಳಿದ್ದಾರೆ.
ಭಯಪಡುವ ಅಗತ್ಯವಿಲ್ಲ
ಉಪ್ಪಿನಂಗಡಿ – ಗುರುವಾಯನಕೆರೆ ಮಧ್ಯೆ ಬಂದಾರು ಮತ್ತು ಪಾಣಾಜೆ ಹತ್ತಿರ ಇರ್ದೆ ಎಂಬ ಜಾಗದಲ್ಲಿ ಬಿಸಿನೀರಿನ ಬುಗ್ಗೆ ಇದೆ. ಇದು ಅತೀ ಆಳವಿದ್ದು, ಕೆಲವು ಸಂದರ್ಭಗಳಲ್ಲಿ ಭೂಮಿಯೊಳಗಿನ ಒತ್ತಡದಿಂದ ಹೀಗೆ ಶಬ್ದ ಅತಿಯಾಗಿ ಕೇಳುವ ಸಾಧ್ಯತೆಗಳಿರುತ್ತವೆ. ಇದರಿಂದ ಯಾವುದೇ ಆತಂಕ ಇಲ್ಲ. ಜನರು ಆತಂಕ ಪಡುವ ಆವಶ್ಯಕತೆಯಿಲ್ಲ.
-ಉದಯ ಶಂಕರ್, ಭೂಶಾಸ್ತ್ರಜ್ಞರು, ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mudigere: ಆಕಸ್ಮಿಕ ಬೆಂಕಿ ತಗುಲಿ ಕಟ್ಟಡದಲ್ಲಿದ್ದ ಫೈನಾನ್ಸ್ ಕಚೇರಿಗೆ ಬೆಂಕಿ ಸುಟ್ಟು ಭಸ್ಮ
Afghanistan: ತಾಲಿಬಾನ್ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು
Max: ಇಂದು ಸುದೀಪ್ ಮ್ಯಾಕ್ಸ್ ತೆರೆಗೆ; ಆ್ಯಕ್ಷನ್ ಅಡ್ಡದಲ್ಲಿ ಕಿಚ್ಚ ಮಿಂಚು
Gundlupete: ಬೋನಿಗೆ ಬಿದ್ದ ಗಂಡು ಚಿರತೆ
Ayodhya ರಾಮನ ದರ್ಶನ ಪಡೆದಿದ್ದ “ಬಸಪ್ಪ” ಈಗ ಶಬರಿಮಲೆಗೆ ಪ್ರಯಾಣ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.