ದಕ್ಷಿಣ ಕನ್ನಡ ಜಿಲ್ಲೆಯ ಕೆಲವೆಡೆ ಭಾರೀ ಮಳೆ, ಹಾನಿ
Team Udayavani, Aug 29, 2022, 12:52 AM IST
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಬಿರುಸು ಪಡೆದಿದ್ದು, ರವಿವಾರ ಕೆಲವು ಕಡೆಗಳಲ್ಲಿ ಉತ್ತಮ ಮಳೆಯಾಗಿದೆ. ಮಂಗಳೂರು ಸಹಿತ ಜಿಲ್ಲೆಯಾದ್ಯಂತ ಶನಿವಾರ ರಾತ್ರಿ ಉತ್ತಮ ಮಳೆ ಸುರಿದಿದೆ.
ಕೆಲವೆಡೆಗಳಲ್ಲಿ ಕೃತಕ ನೆರೆ ಆವರಿಸಿತ್ತು. ರಸ್ತೆಯಲ್ಲೇ ಮಳೆ ನೀರು ಹರಿದು ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿತ್ತು.
ಉಡುಪಿ ಜಿಲ್ಲೆಯಲ್ಲಿ ರವಿವಾರ ಸಾಧಾರಣ ಮಳೆಯಾಗಿದೆ.ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯಂತೆ ರಾಜ್ಯ ಕರಾವಳಿ ಭಾಗದಲ್ಲಿ ಆ. 29ರಿಂದ ಮೂರು ದಿನಗಳ ಕಾಲ ಎಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಭಾರೀ ಮಳೆಯಾಗುವ ಸಾಧ್ಯತೆ ಇದೆ. ಮಳೆಯ ಜತೆಗೆ ಗಾಳಿ ಮತ್ತು ಸಮುದ್ರದ ಅಬ್ಬರ ಹೆಚ್ಚಿರುವ ನಿರೀಕ್ಷೆ ಇದೆ.
ಕೊಲ್ಲಮೊಗ್ರು: ರಸ್ತೆ ಜಲಾವೃತ
ಸುಳ್ಯ: ಹಗಲಿಡೀ ಬಿಸಿಲಿನ ವಾತಾವರಣವಿದ್ದ ಸುಳ್ಯ ತಾಲೂಕಿನಲ್ಲಿ ರವಿವಾರ ಸಂಜೆ ಬಳಿಕ ಭಾರೀ ಮಳೆಯಾಯಿತು. ಕೊಲ್ಲಮೊಗ್ರು ಪೇಟೆ ಸಮೀಪದ ಹೊಳೆ ತುಂಬಿ ಹರಿದು ಕಿರು ಸೇತುವೆ ಮುಳುಗಡೆಯಾಯಿತು.ಸ್ವಲ್ಪ ಕಾಲ ರಸ್ತೆ ಸಂಚಾರ ಸ್ಥಗಿತವಾಯಿತು. ಪೇಟೆಗೂ ನೀರು ಪೇಟೆಗೆ ನುಗ್ಗಿದೆ. ಸುಳ್ಯ ನಗರ, ಅರಂತೋಡು, ಸಂಪಾಜೆ, ಕಲ್ಲುಗುಂಡಿ, ಜಾಲೂÕರು, ಐವರ್ನಾಡು, ಬೆಳ್ಳಾರೆ, ಕಲ್ಮಡ್ಕ, ಪಂಜ, ಗುತ್ತಿಗಾರು, ಸುಬ್ರಹ್ಮಣ್ಯ, ಹರಿಹರ ಪಳ್ಳತ್ತಡ್ಕ ಮೊದಲಾದೆಡೆ ಉತ್ತಮ ಮಳೆಯಾಯಿತು.
ಪಂಜ – ಸುಬ್ರಹ್ಮಣ್ಯ
ರಸ್ತೆ ಸಂಪರ್ಕ ಕಡಿತ
ಪಂಜ ಪರಿಸರದಲ್ಲಿ ಶನಿವಾರ ರಾತ್ರಿ ಭಾರೀ ಮಳೆಯಿಂದಾಗಿ ಪಂಜ – ಸುಬ್ರಹ್ಮಣ್ಯ ಸಂಪರ್ಕಿಸುವ ರಸ್ತೆಯ ಬೊಳ್ಮಲೆಯಲ್ಲಿ ಹೊಳೆಯ ನೀರು ರಸ್ತೆ ಮೇಲೆ ಉಕ್ಕಿ ಹರಿದು ಸ್ವಲ್ಪ ಕಾಲ ರಾಜ್ಯ ಹೆದ್ದಾರಿ ಸಂಪರ್ಕ ಕಡಿತಗೊಂಡಿತು.
ತಾರಸಿ ಮೇಲೆ ಆಶ್ರಯ ಪಡೆದರು!
ಪಣಂಬೂರು: ಶನಿವಾರ ತಡರಾತ್ರಿ ಭಾರೀ ಮಳೆ ಯಿಂದಾಗಿ ಕೊಟ್ಟಾರಚೌಕಿ ಪ್ರದೇಶ ಮಳುಗಡೆಯಾಗಿ ಸ್ಥಳೀಯರು ರಾತ್ರಿಯಿಡೀ ನಿದ್ದೆಯಿಲ್ಲದೆ ಒದ್ದಾಡ ಬೇಕಾಯಿತು. ತಗ್ಗು ಪ್ರದೇಶದಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿದ್ದರಿಂದ ತಾರಸಿ ಮೇಲೆ ಆಶ್ರಯ ಪಡೆದರು.
ಆಗ ಸ್ಟ್ ಮೊದಲ ವಾರದಲ್ಲಿಯೂ ಭಾರೀ ಮಳೆಗೆ ಇಲ್ಲಿನ ತಗ್ಗು ಪ್ರದೇಶ ಮುಳುಗಡೆಯಾಗಿತ್ತು. ಎರಡನೇ ಬಾರೀ ದಿಢೀರ್ ಮಳೆಗೆ ಸ್ಥಳೀಯರ ಬೆಲೆ ಬಾಳುವ ವಸ್ತುಗ ಳಾದ ಕಪಾಟು, ಸೀರೆ ಸಹಿತ, ಫ್ರಿಜ್, ಟಿವಿ ಮತ್ತಿತರ ಎಲೆಕ್ಟ್ರಾನಿಕ್ ವಸ್ತುಗಳು ಹಾಳಾಗಿವೆ. ಕೊಟ್ಟಾರ ಚೌಕಿಯ ಅಂಗಡಿಗಳೂ ನೆರೆಯಿಂದ ಮುಳುಗಡೆಯಾಯಿತು.
ಮರಕಡದಲ್ಲಿ ಹೊಸ ಲೇಔಟ್ ಆಗುತ್ತಿದ್ದು, ಅನುಮತಿಯಿಲ್ಲದೆ ಮಣ್ಣು ತುಂಬಿಸಿ, ತೋಡುಗಳನ್ನು ಅತಿಕ್ರಮಿಸಿಕೊಂಡ ಪರಿಣಾಮ ಬಡ ಕುಟುಂಬವೊಂದರ ಮನೆಗೆ ಮಳೆನೀರು ನುಗ್ಗಿ ಕುಸಿದು ಬಿದ್ದಿದೆ. ಭಾರೀ ಶಬ್ದ ಕೇಳಿದ್ದರಿಂದ ಎಚ್ಚರಗೊಂಡ ಮನೆ ಮಂದಿ ಓಡಿ ಜೀವ ಉಳಿಸಿಕೊಂಡಿದ್ದಾರೆ. ಉಪತಹಶೀಲ್ದಾರ್ ನವೀನ್ ಕುಮಾರ್ ಸ್ಥಳ ಪರಿಶೀಲನೆ ನಡೆಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮದ ಎಚ್ಚರಿಕೆ ನೀಡಿದ್ದಾರೆ.
ಬಡಕುಟುಂಬಕ್ಕೆ ಶಾಸಕ ಡಾ| ಭರತ್ ಶೆಟ್ಟಿ ವೈ. ಸೂಚನೆ ಮೇರೆಗೆ ಪರಿಹಾರ ಒದಗಿಸುವ ಭರವಸೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.