ಅಜೆಕಾರು, ಹೆಬ್ರಿ: ಗಾಳಿ ಮಳೆಗೆ ಅಪಾರ ನಷ್ಟ
Team Udayavani, Apr 28, 2021, 3:30 AM IST
ಅಜೆಕಾರು : ಅಜೆಕಾರು ಹಾಗೂ ಸುತ್ತಲ ಪರಿಸರದಲ್ಲಿ ಎ.26ರ ರಾತ್ರಿ ಹಾಗೂ ಎ.27ರ ಮಧ್ಯಾಹ್ನ ಬೀಸಿದ ಗಾಳಿ ಮಳೆಗೆ ಅಪಾರ ನಷ್ಟ ಉಂಟಾಗಿದೆ. ಅಜೆಕಾರು ಕುರ್ಸುಕಟ್ಟೆ ಪರಿಸರದಲ್ಲಿ ಬಿರುಗಾಳಿಗೆ ವಿದ್ಯುತ್ ತಂತಿಗಳ ಮೇಲೆ ಬೃಹತ್ ಮರಗಳು ಉರುಳಿ ಹಲವು ವಿದ್ಯುತ್ ಕಂಬಗಳು ಹಾನಿಗೊಂಡಿವೆ.
ಇದೇ ಪರಿಸರದ ಹಲವರ ಅಡಿಕೆ ಮರಕ್ಕೆ ಹಾನಿಯಾಗಿದೆ. ಕುರ್ಸುಕಟ್ಟೆ ಪರಿಸರದಲ್ಲಿ 10 ವಿದ್ಯುತ್ ಕಂಬಗಳು, ಶಿರ್ಲಾಲು ಮುಂಡ್ಲಿ ರಸ್ತೆಯಲ್ಲಿ 4 ವಿದ್ಯುತ್ ಕಂಬಗಳು, ಹೆರ್ಮುಂಡೆ ರೆಂಜ ಪರಿಸರದಲ್ಲಿ 2 ವಿದ್ಯುತ್ ಕಂಬಗಳಿಗೆ ಹಾನಿಯಾಗಿ ಮೆಸ್ಕಾಂಗೆ ಸುಮಾರು 2 ಲಕ್ಷದ 60 ಸಾವಿರ ರೂ. ನಷ್ಟ ಉಂಟಾಗಿದೆ.
ಕೆರ್ವಾಶೆ ಗ್ರಾಮದಲ್ಲಿ ಬೀಸಿದ ಗಾಳಿಗೆ ಭಾರೀ ಗಾತ್ರದ ಮರಗಳು ರಸ್ತೆಗಳಿಗೆ ಉರುಳಿ ಬಿದ್ದು ಸಂಚಾರ ವ್ಯತ್ಯಯವಾಗಿತ್ತು. ವಿದ್ಯುತ್ ತಂತಿಗಳಿಗೆ ಹಾನಿಯಾಗಿ ವಿದ್ಯುತ್ ವ್ಯತ್ಯಯವಾಗಿತ್ತು
ಹೆಬ್ರಿ: ಹೆಬ್ರಿ ಸುತ್ತಮುತ್ತ ಮಂಗಳವಾರ ಬೀಸಿದ ಭಾರೀ ಗಾಳಿ-ಮಳೆಗೆ ಹಲವು ಮರಗಳು ಧರೆಗುರುಳಿ ಅಪಾರ ನಷ್ಟ ಸಂಭವಿಸಿದೆ .
ಹೆಬ್ರಿ ಸಮೀಪ ಪಾಡಿಗಾರದಲ್ಲಿ ಬೃಹತ್ ಮರವೊಂದು ರಸ್ತೆಗೆ ಉರುಳಿದುದರಿಂದ ಸುಮಾರು 1 ಗಂಟೆಗಳ ಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಸ್ಥಳೀಯರ ನೆರವಿನಿಂದ ಮರ ತೆರವು ಮಾಡಲಾಯಿತು. ವಾಹನ ಸವಾರರು ಸಂತೆಕಟ್ಟೆ ಮಾರ್ಗವಾಗಿ ಹೆಬ್ರಿಗೆ ಸಂಚರಿಸಿದರು.
ಹೆಬ್ರಿ ಶ್ಯಾಮ ಪ್ರಭು ನಿವಾಸದ ಬಳಿಯ ಮರವೊಂದು ಅವರ ಕಾರಿನ ಮೇಲೆ ಬಿದ್ದ ಪರಿಣಾಮ ಕಾರು ಜಖಂಗೊಂಡಿದೆ. ಹೆಬ್ರಿ, ಕುಚ್ಚಾರು, ಪಾಡಿಗಾರ, ಶಿವಪುರ, ಮುದ್ರಾಡಿ, ಶಿವಪುರ, ಸೀತಾನದಿ ಸುತ್ತ ಮುತ್ತ ಭಾರೀ ಮಳೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಧೂಳು ತಿನ್ನುತ್ತಿದೆ ಉಡುಪಿ ಉಪ ವಿಭಾಗ ಪ್ರಸ್ತಾವ
Thekkatte: ಮನೆಯೊಂದರ ಅಂಗಳದಲ್ಲಿ ಚಿರತೆ ಸಂಚಾರ; ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ
Shirva: ಏಷ್ಯನ್ ಜೂನಿಯರ್ ವೇಟ್‌ಲಿಫ್ಟಿಂಗ್ ತೀರ್ಪುಗಾರರಾಗಿ ಶಿರ್ವದ ಕೃಷ್ಣರಾಜ್.ಕೆ
Malpe: ಮೀಟಿಂಗ್ ರೂಮ್‌ಗೆ ಬೆಂಕಿ, ಭಸ್ಮವಾದ ಕಚೇರಿ ಕಡತಗಳು
Udupi: ಗೀತಾರ್ಥ ಚಿಂತನೆ-128: ರಾಮನ ವನವಾಸ, ಪಾಂಡವರ ಅಜ್ಞಾತವಾಸದ ಹಿಂದಿನ ತರ್ಕ
MUST WATCH
ಹೊಸ ಸೇರ್ಪಡೆ
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್
Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ
Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾದ ಜಗದೀಶ್
Ujire: ಕಥನ ಸೃಜನಶೀಲತೆಯಿಂದ ಪ್ರಾದೇಶಿಕ ಸಂವೇದನೆಯ ಅಭಿವ್ಯಕ್ತಿ; ಅನುಪಮಾ ಪ್ರಸಾದ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.