ಗಂಗಾವಳಿ ತೀರದಲ್ಲಿ ಪ್ರವಾಹ: ಜನಜೀವನ ಅಸ್ತವ್ಯಸ್ತ
Team Udayavani, Aug 6, 2020, 1:46 PM IST
ಅಂಕೋಲಾ: ತಾಲೂಕಿನ ಗಂಗಾವಳಿ ನದಿ ಉಕ್ಕಿ ಹರಿದು ಸುತ್ತಲಿನ ಕೃಷಿ ಭೂಮಿ ಹಾಗೂ ಜನವಸತಿ ಪ್ರದೇಶಕ್ಕೆ ಹೊಕ್ಕಿದ್ದು, ತೀರದ ನಿವಾಸಿಗಳಲ್ಲಿ ಆತಂಕ ಸೃಷ್ಟಿಸಿದೆ. ಯಲ್ಲಾಪುರ ಭಾಗದಲ್ಲಿ ಕಳೆದೆರಡು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಗಂಗಾವಳಿ ನದಿಗೆ ಹರಿದು ಬರುವ ನೀರಿನ ಪ್ರಮಾಣ ಹೆಚ್ಚಾಗಿದೆ. ನದಿ ತೀರ ಪ್ರವಾಹ ಪರಿಸ್ಥಿತಿ ಎದುರಿಸುತ್ತಿದ್ದು, ತೀರದ ಜನಜೀವನ ತತ್ತರಿಸಿದೆ.
ಮುಂದಿನ ನಾಲ್ಕು ದಿನ ಭಾರಿ ಮಳೆ ಆಗುವ ಸಾಧ್ಯೆತೆಗಳಿವೆ ಎಂದು ಜಿಲ್ಲಾಡಳಿತ ಹೇಳಿದೆ. ಈಗಾಗಲೆ ಹುಬ್ಬಳ್ಳಿ-ಅಂಕೋಲಾ ರಾಷ್ಟ್ರೀಯ ಹೆದ್ದಾರಿ ಮೇಲೆ ನೀರು ತುಂಬಿದ ಪರಿಣಾಮ ಹೆದ್ದಾರಿ ಸಂಚಾರ ಬುಧವಾರ ಬೆಳಗ್ಗೆಯಿಂದ ಸ್ಥಗಿತಗೊಂಡಿದೆ. ಮೊಗಟಾ ಗ್ರಾಮದ ಆಂದ್ಲೇ ಬಳಿ ರಾಜ್ಯ ಹೆದ್ದಾರಿಯಲ್ಲಿ ನೀರು ತುಂಬಿಕೊಂಡಿದ್ದರಿಂದ ಈ ಮಾರ್ಗದಿಂದ ಸಾಗುವ ಹಿಲ್ಲೂರು ಅಂಗಡಿಬೈಲ್ ಅಚವೆ ಗ್ರಾಮಗಳ ಸಂಪರ್ಕವು ಕಡಿತವಾಗಿದೆ.
ತಾಲೂಕಿನ ಹಿಚ್ಕಡ ಕುರ್ವೆ, ಮೋಟನ ಕುರ್ವೆ, ದಂಡೆಬಾಗ, ಶಿರಗುಂಜಿ, ವಾಸರೆ, ಕೊಡ್ಸಣಿ, ಆಂದ್ಲೇ, ಡೋಂಗ್ರಿ, ಹೆಗ್ಗಾರ, ವೈದ್ಯ ಹೆಗ್ಗಾರ, ಸುಂಕಸಾಳ, ರಾಮನಗುಳಿಯ ಗಂಗಾವಳಿ ಹೊಳೆ ಬದಿಯ ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ಬಿಳಿಹೊಯ್ಗಿ ಗ್ರಾಮದಲ್ಲಿಯು ಮನೆಗಳಿಗೆ ನೀರು ನುಗ್ಗಿದೆ. ಕೃಷಿ ಭೂಮಿ ಸಂಪೂರ್ಣ ಜಲಾವೃತವಾಗಿದ್ದು, ರಸ್ತೆ ಮೇಲೆ ನೀರು ತುಂಬಿರುವುದರಿಂದ ಬಿಳಿಹೊಯ್ಗಿ ಹೊಗುವ ಸಂಪರ್ಕ ಕಡಿತಗೊಂಡಿದೆ. ಅಗ್ರಗೋಣದ ಜೂಗ ಗ್ರಾಮದ 68 ಜನರನ್ನು ಈಗಾಗಲೇ ಕ್ಷೇಮ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.
ಜಲಾವೃತ ಪ್ರದೇಶದ13 ಭಾಗದಲ್ಲಿ ತಹಶೀಲ್ದಾರ್ ಉದಯ ಕುಂಬಾರವರರು ಅಲ್ಲಿಯ ನಿವಾಸಿಗಳಿಗೆ ಸುರಕ್ಷಿತ ಸ್ಥಳಕ್ಕೆ ಸಾಗಿಸಲು ದೋಣಿ ವ್ಯವಸ್ಥೆ ಕಲ್ಪಿಸಿದ್ದಾರೆ. ತಾಲೂಕಾಡಳಿತ, ಪೊಲೀಸ್ ಇಲಾಖೆ, ಅಗ್ನಿಶಾಮಕ, ಅರಣ್ಯ ಇಲಾಖೆ ಸೇರಿದಂತೆ ಆಯಾ ಭಾಗಗಳ ಗ್ರಾಮಸ್ಥರು ಜನರನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Order: ಶಿರೂರು ಗುಡ್ಡ ಕುಸಿತ: 2 ತಿಂಗಳೊಳಗೆ 5 ಲ.ರೂ. ಪರಿಹಾರಕ್ಕೆ ಹೈಕೋರ್ಟ್ ಸೂಚನೆ
Dandeli: ಸಾರಿಗೆ ಬಸ್ಸಿನಲ್ಲೇ ಪ್ರಯಾಣಿಕನಿಗೆ ಹೃದಯಾಘಾತ… ಆಸ್ಪತ್ರೆ ಮಾರ್ಗದಲ್ಲಿ ಮೃತ್ಯು
Dandeli: ಅಪರಿಚಿತ ವಾಹನ ಡಿಕ್ಕಿ; ಕರು ಸಾವು
Dandeli: ವಕ್ಫ್ ಮಂಡಳಿ ಮತ್ತು ರಾಜ್ಯ ಸರ್ಕಾರದ ಕ್ರಮ ವಿರೋಧಿಸಿ ಬಿಜೆಪಿಯಿಂದ ಪ್ರತಿಭಟನೆ
Dandeli: ನಗರಸಭೆಯ ಜವಾನನನ್ನು ನಿಂದಿಸಿರುವುದರ ವಿರುದ್ಧ ನಗರ ಸಭೆಯ ಪೌರಾಯುಕ್ತರಿಗೆ ದೂರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.