ಶಬರಿಮಲೆಯಲ್ಲಿ ಭಾರೀ ಮಳೆ: ಭಕ್ತರಿಗೆ ತೊಂದರೆ
Team Udayavani, Dec 7, 2021, 7:40 AM IST
ಸಾಂದರ್ಭಿಕ ಚಿತ್ರ.
ಕಾಸರಗೋಡು: ಶಬರಿಮಲೆ ಪರಿಸರದಲ್ಲಿ ಸೋಮವಾರದಿಂದ ಭಾರೀ ಮಳೆಯಾಗುತ್ತಿದ್ದು, ಭಕ್ತರ ಯಾತ್ರೆಗೆ ಅಡ್ಡಿಯಾಗಿ ಪರಿಣಮಿಸಿದೆ.
ಪಂಪಾ ನದಿಯಲ್ಲಿ ತೀರ್ಥಸ್ನಾನ ಮಾಡಿ ಭಕ್ತರು ಮಲೆ ಏರುವುದು ರೂಢಿ. ಆದರೆ ಭಾರೀ ಮಳೆಯ ಕಾರಣ ಪಂಪಾ ನದಿ ಉಕ್ಕಿ ಹರಿಯುತ್ತಿದ್ದು, ಯಾರಿಗೂ ಸ್ನಾನಕ್ಕೆ ಅವಕಾಶವಿಲ್ಲ.
ಶಬರಿಮಲೆ ಸನ್ನಿಧಾನ, ಪಂಪಾ ಗಣಪತಿ ಸನ್ನಿಧಾನ ಸೇರಿದಂತೆ ಎಲ್ಲಿಯೂ ಭಕ್ತರಿಗೆ ತಂಗಲು ಅವಕಾಶವಿಲ್ಲ. ಸಂಜೆ 7ರಿಂದ ರಾತ್ರಿ 1ರ ತನಕ ನೀಲಕ್ಕಲ್ಲಿನಿಂದ ಪಂಪಾ ಕಡೆಗೆ ಸಂಚಾರವನ್ನು ಸಂಪೂರ್ಣ ನಿಷೇಧಿಸಲಾಗಿದೆ.
ಭಕ್ತರು ಆನ್‌ಲೈನ್ ಟಿಕೆಟ್ ಮತ್ತು ಕೋವಿಡ್ 2 ಡೋಸ್ ಲಸಿಕೆ ಪಡೆದಿರುವ ಪ್ರಮಾಣ ಪತ್ರ ಅಥವಾ RT PCR Negative ವರದಿಯನ್ನು ಹೊಂದಿರುವುದು ಕಡ್ಡಾಯ.
ಇದನ್ನೂ ಓದಿ:ಕದ್ರಿ ಗೋಪಾಲನಾಥ್ ಪುಣ್ಯಸ್ಮರಣೆ ; ಪತ್ನಿ ಆರೋಗ್ಯ ಏರುಪೇರು; ಡಿಸಿಯಿಂದಲೇ ಚಿಕಿತ್ಸೆ
ನೀಲಕ್ಕಲ್‌ನಲ್ಲಿ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಭಕ್ತರಿಗೆ ಶಬರಿಮಲೆಗೆ ಹೋಗಲು ಅನುಮತಿ ನೀಡಲಾಗುತ್ತದೆ.
ನೀಲಕ್ಕಲ್ ಮಹಾದೇವ ದೇವಸ್ಥಾನದ ಆವರಣದಲ್ಲಿ ಮಧ್ಯಾಹ್ನ 12.30ರಿಂದ ಅನ್ನದಾನದ ವ್ಯವಸ್ಥೆಯನ್ನು ದೇವಸ್ಥಾನ ಹಾಗೂ ತಿರುವಾಂಕೂರು ದೇವಸ್ವಂ ಬೋರ್ಡ್ ವತಿಯಿಂದ ಮಾಡಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.