ಎಸೆಸೆಲ್ಸಿ ಸಾಧಕಿ ಶ್ರಾವ್ಯಾ ಚಿಕಿತ್ಸೆಗೆ ನೆರವಿನ ಭರವಸೆ
ಉದ್ಯಮಿ, ದಾನಿ ಗೋವಿಂದ ಬಾಬು ಪೂಜಾರಿಯಿಂದ ಸಹಾಯಹಸ್ತ
Team Udayavani, Jun 8, 2022, 6:30 AM IST
ಕುಂದಾಪುರ: ಕರುಳು ಸಂಬಂಧಿ ಕಾಯಿಲೆ ನಡುವೆಯೂ ವರ್ಷವಿಡೀ ಮಲಗಿಕೊಂಡೇ ಓದಿ ಎಸೆಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ಹಕ್ಲಾಡಿ ಗ್ರಾಮದ ಬಗ್ವಾಡಿಯ ರಾಜು ಪೂಜಾರಿ ಮತ್ತು ಸುಜಾತಾದಂಪತಿಯ ಪುತ್ರಿ ಶ್ರಾವ್ಯಾ ಚಿಕಿತ್ಸೆಗೆ ನೆರವಿನ ಭರವಸೆ ಸಿಕ್ಕಿದೆ. ಉದ್ಯಮಿ, ದಾನಿ ಡಾ| ಗೋವಿಂದ ಬಾಬು ಪೂಜಾರಿ ಅವರು ಶ್ರಾವ್ಯಾಳ ಚಿಕಿತ್ಸೆಗೆ ನೆರವು ನೀಡಲು ಮುಂದಾಗಿದ್ದಾರೆ.
ಉಪ್ಪುಂದದ ವರಲಕ್ಷ್ಮೀ ಚಾರಿಟೆ ಬಲ್ ಟ್ರಸ್ಟ್ ಸಂಸ್ಥಾಪಕ ಡಾ| ಗೋವಿಂದ ಬಾಬು ಪೂಜಾರಿ ಅವರು ಶ್ರಾವ್ಯಾ ಮನೆಗೆ ಭೇಟಿ ನೀಡಿ ವಿಚಾರಿಸಿದ ಬಳಿಕ, ಚಿಕಿತ್ಸೆ ವೆಚ್ಚ ಭರಿಸಲು ನಿರ್ಧರಿಸಿದ್ದಾರೆ. ಒಂದು ವರ್ಷದ ಚಿಕಿತ್ಸೆ ವೆಚ್ಚದೊಂದಿಗೆ ಮಣಿಪಾಲ ಆಸ್ಪತ್ರೆಯ ವೈದ್ಯರು ಶಿಫಾರಸು ಮಾಡಿದ 75 ಸಾವಿರ ರೂ. ಮೌಲ್ಯದ ಚುಚ್ಚುಮದ್ದು ನೀಡಲು ಸಹಕರಿಸಿದ್ದಾರೆ.
580 ಅಂಕ
ಎಲ್ಲ ಮಕ್ಕಳಂತೆ ಚುರುಕಾಗಿದ್ದ ಶ್ರಾವ್ಯಾ ಕರುಳು ಸಂಬಂಧಿ ಅನಾ ರೋಗ್ಯ (ಐಬಿಡಿ ಕ್ರೋಮ್ಸ್)ಕ್ಕೆ ತುತ್ತಾಗಿದ್ದು, ದೇಹದ ತೂಕ ಕೇವಲ 12 ಕೆ.ಜಿ.ಗೆ ಇಳಿದಿತ್ತು. ಶಾಲೆ ಮೆಟ್ಟಿಲು ಹತ್ತಲಾರದೆ, ವರ್ಷವಿಡೀ ಕೇವಲ ನೋಟ್ಸ್ ಜೆರಾಕ್ಸ್ ಪ್ರತಿ ಮಲಗಿಕೊಂಡೇ ಓದಿ, ಎಸೆಸೆಲ್ಸಿ ಪರೀಕ್ಷೆ ಬರೆದ ಶ್ರಾವ್ಯಾ 580 ಅಂಕ ಪಡೆದಿರುವುದು ವಿಶೇಷ.
ಉದಯವಾಣಿ ವರದಿ
ಶ್ರಾವ್ಯಾಳ ಸಾಧನೆ ಬಗ್ಗೆ ಉದಯವಾಣಿಯು ಜೂ. 2ರಂದು “ಕಲಿಕಾ ಯಶೋಗಾಥೆ’ ಸರಣಿಯಲ್ಲಿ ವಿಶೇಷ ವರದಿ ಪ್ರಕಟಿಸಿ ಗಮನಸೆಳೆದಿತ್ತು. ಪಿಯು ವಿಜ್ಞಾನ ವ್ಯಾಸಂಗಕ್ಕೆ ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಹಾಗೂ ಆರ್.ಎನ್. ಶೆಟ್ಟಿ ಪಿಯು ಕಾಲೇಜು ಪ್ರಾಂಶುಪಾಲ ನವೀನ್ ಶೆಟ್ಟಿ ನೆರವಾಗಿದ್ದು, ಉಚಿತ ಶಿಕ್ಷಣಕ್ಕೆ ಅವಕಾಶ ಕಲ್ಪಿಸಿದ್ದಾರೆ. ರಾಜು ಪೂಜಾರಿ ಜಡ್ಕಲ್ ಅವರು ಅಂಗವಿಕಲರ ಕೋಟಾದಲ್ಲಿ ಮಾಸಾಶನ ಸಿಗುವ ಕುರಿತಂತೆ ಪ್ರಯತ್ನಿಸಿದ್ದಾರೆ. ಬಿಲ್ಲವ ಸಂಘಟನೆಗಳು ನೆರವಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kumbhashi: ರಾ.ಹೆ.66 ಭೀಕರ ರಸ್ತೆ ಅಪಘಾತ: ಪ್ರಾಣಾಪಾಯದಿಂದ ಪಾರಾದ ಗಾಯಾಳುಗಳು !
Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ
Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ
KMC: ನವೀಕೃತ ವೈದ್ಯಕೀಯ ಆಂಕೊಲಾಜಿ ಹೊರರೋಗಿ, ಕಿಮೊಥೆರಪಿ ಡೇ ಕೇರ್ ಕೇಂದ್ರ ಉದ್ಘಾಟನೆ
Kollur; ಉಪಚುನಾವಣೆಯ ಸೋಲು ಗೆಲುವು ದೇವರ ಫಲಾಫಲ: ಡಿಸಿಎಂ ಡಿ. ಕೆ. ಶಿವಕುಮಾರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.