ಕೋವಿಡ್ 19 ಸಮಯದಲ್ಲಿ ತಾಯ್ತನಾ
Team Udayavani, Jun 24, 2020, 4:42 AM IST
1.ಗರ್ಭಿಣಿಯರಿಗೆ ಈ ಸೋಂಕು ತಗುಲುವ ಸಂಭವ ಹೆಚ್ಚೇ?
ವಿಶೇಷವಾಗಿ, ಇದೇ ಸೋಂಕು ತಗುಲುವ ಸಾಧ್ಯತೆ ಹೆಚ್ಚೇನೂ ಇಲ್ಲ. ಅದರೆ, ಗರ್ಭಿಣಿಯರಲ್ಲಿ ರೋಗ ನಿರೋಧಕ ಶಕ್ತಿಯ ಕೊರತೆಯಿಂದ, ಎಲ್ಲ ಬಗೆಯ ಸೋಂಕು ತಗುಲುವ ಸಾಧ್ಯತೆಯೂ ಇರುತ್ತದೆ. ಆದ್ದರಿಂದ, ಹೆಚ್ಚಿನ ಕಾಳಜಿ ಅವಶ್ಯಕ. ಗರ್ಭಿಣಿಯ ಮನೆಯವರು, ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಅವರಿಂದ ಸಾಮಾಜಿಕ ಅಂತರವನ್ನು ಮನೆಯಲ್ಲೂ ಪಾಲಿಸಬೇಕಾಗುತ್ತದೆ.
2.ಗರ್ಭಿಣಿಗೆ ಸೋಂಕು ತಗುಲಿದರೆ, ಗರ್ಭದಲ್ಲಿರುವ ಮಗುವಿಗೆ ತೊಂದರೆಗಳು ಕಾಣಿಸಬಹುದೆ?
ಮೊದಲ ಮೂರು ತಿಂಗಳು ಈ ಸೋಂಕು ಕಾಣಿಸಿದಲ್ಲಿ, ಜ್ವರವು ತೀವ್ರವಾಗಿದ್ದರೆ ಗರ್ಭಪಾತವಾಗುವ ಸಾಧ್ಯತೆ ಇರುತ್ತದೆ. ಅವಧಿ ಪೂರ್ವ ಹೆರಿಗೆ, ಕಡಿಮೆ ತೂಕದ ಮಗು ಹುಟ್ಟುವ ಸಾಧ್ಯತೆ ಇರುತ್ತದೆ. ಜನ್ಮಪಾತ ವೈಪರೀತ್ಯಗಳು, ಈ ಸೋಂಕಿನಿಂದ ಕಂಡುಬಂದಿಲ್ಲ.
3.ತಾಯಿಯಿಂದ ಮಗುವಿಗೆ ಸೋಂಕು ಹರಡುವುದೇ?
ಇಲ್ಲ. ಇದುವರೆಗೆ, ಗರ್ಭದಲ್ಲಿರುವಾಗ ಅಥವಾ ಹೆರಿಗೆ ಸಮಯದಲ್ಲಿ, ಮಗುವಿಗೆ ಸೋಂಕು ತಗುಲಿದ ಉದಾಹರಣೆಗಳು ಇಲ್ಲ.
4.ತಾಯಿಗೆ ಸೋಂಕು ಇರುವಾಗ, ಪ್ರಸೂತಿಯ ಮಾರ್ಗ ಯಾವುದು ಉತ್ತಮ? ಸಿಜೇರಿಯನ್ ಅವಶ್ಯಕತೆ ಎಲ್ಲರಲ್ಲೂ ಇರುತ್ತದೆಯೇ?
ಹಾಗೇನೂ ಇಲ್ಲ. ಬೇರೆ ಯಾವ ತೊಂದರೆಗಳೂ ಇಲ್ಲದ್ದಿದ್ದರೆ, ಸಹಜ ಹೆರಿಗೆಯ ಪ್ರಯತ್ನವನ್ನು ಮಾಡಬಹುದು. ಆದರೆ, ಪ್ರಸವಕ್ಕೆ ಸಂಬಂಧಿಸಿದ ತೊಂದರೆ ಕಂಡುಬಂದಲ್ಲಿ ಸಿಜೇರಿಯನ್ ಮಾಡಬೇಕಾಗುತ್ತದೆ.
5.ತಾಯಿಗೆ ಸೋಂಕು ಇರುವಾಗ, ಎದೆಹಾಲು ಕುಡಿಸಬಹುದೇ ?
ಕುಡಿಸಬಹುದು. ಅದರೆ ಕುಡಿಸುವಾಗ ಬಹಳ ಎಚ್ಚರಿಕೆ ವಹಿಸಬೇಕಾಗುತ್ತದೆ. ತಾಯಿ, ತನ್ನ ಕೈಗಳನ್ನು ಸ್ವತ್ಛವಾಗಿ ತೊಳೆದುಕೊಂಡು, ಮಾಸ್ಕ್ ಧರಿಸಿ, ಮಗುವಿನ ಮುಖಕ್ಕೆ ತನ್ನ ಉಸಿರು ತಾಗದಂತೆ ಕುಡಿಸಬೇಕು. ತಾಯಿಯು ತೀವ್ರತರದ ಸೋಂಕಿನಿಂದ ಬಳಲುತ್ತಿದ್ದರೆ, ಹಾಲನ್ನು ತಾಯಿಯ ಎದೆಯಿಂದ ತೆಗೆದು ಕುಡಿಸಬಹುದು. ತಾಯಿಯ ಎದೆ ಹಾಲಿನಿಂದ ಮಗುವಿಗೆ ಸೋಂಕು ತಗುಲುವುದಿಲ್ಲ. ಬದಲಾಗಿ, ಮಗುವಿನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
6.ಪ್ರಸವ ಪೂರ್ವ ಸಂದರ್ಭದಲ್ಲಿ ವಹಿಸಬೇಕಾದ ಎಚ್ಚರಿಕೆ ಏನು?
ಈ ಸ್ತ್ರೀಯರಲ್ಲಿ ಸೋಂಕು ತಗುಲುವ ಸಾಧ್ಯತೆ ಹೆಚ್ಚು ಇರುವು ದರಿಂದ ಆಸ್ಪತ್ರೆಯ ಭೇಟಿಗಳನ್ನು ಕಡಿಮೆ ಮಾಡಬೇಕಾಗುತ್ತದೆ. ಮೊದಲ ಮೂರು ತಿಂಗಳಲ್ಲಿ ಒಂದು ಸಾರಿ, ಐದನೇ ತಿಂಗಳಿನಲ್ಲಿ ಒಂದು ಸಾರಿ, ಎಂಟನೇ ತಿಂಗಳಿನಲ್ಲಿ ಒಂದು ಸಾರಿ ರಕ್ತಪರೀಕ್ಷೆ ಹಾಗೂ ಸ್ಕ್ಯಾನಿಂಗ್ ಮಾಡಿಸಬೇಕಾದ ಅವಶ್ಯಕತೆ ಇರುತ್ತದೆ. ಈ ಮೂರು ಭೇಟಿಗಳು ಅತ್ಯವಶ್ಯಕ. ಸಮಯಕ್ಕೆ ಕೈತೊಳೆಯುವುದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ. ಉಳಿದಂತೆ, ವೈದ್ಯರನ್ನು ಫೋನಿನಲ್ಲಿ ಸಂಪರ್ಕಿಸಿ ಸಲಹೆಗಳನ್ನು ತೆಗೆದುಕೊಳ್ಳಬಹುದು.
7.ಪ್ರಸವದ ನಂತರದ ಆರೈಕೆಯಲ್ಲಿ, ಏನಾದರೂ ಬದಲಾವಣೆಗಳಿರುವುವೇ?
ವಿಶೇಷವಾಗಿ ಏನೂ ಇಲ್ಲ. ಅದರೆ, ಅಸ್ಪತ್ರೆ ಯಿಂದ ಇವರನ್ನು ಬೇಗನೆ ಬಿಡುಗಡೆ ಮಾಡಬೇಕಾಗುತ್ತದೆ. ಇವರು ಆಸ್ಪತ್ರೆಯಲ್ಲಿ ಇರುವವರೆಗೂ, ಅವರೊ ಡನೆ ಇರುವ ಸಂಬಂ ಧಿಕರ ಸಂಖ್ಯೆ ಕಡಿಮೆಯಾದಷ್ಟೂ ಒಳ್ಳೇದು.
* ಡಾ. ವನಮಾಲಾ, ಪ್ರಸೂತಿ ತಜ್ಞರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shirva ಹಳೆವಿದ್ಯಾರ್ಥಿ ಸಂಘ; ಡಿ.29: ದಶಮಾನೋತ್ಸವ, ನೂತನ ಉಪಹಾರ ಗೃಹ ಸಮರ್ಪಣೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು
MT Vasudevan Nair: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ
Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.