ಕು. ಗೋ. ಅವರ ತೇಲ್ನೋಟ
Team Udayavani, Nov 3, 2020, 2:23 AM IST
ಈ ಅಂಕಣ ರಾಜ್ಯೋತ್ಸವ ವಿಶೇಷ. ರಾಜ್ಯದ ಯುವ ಬರಹಗಾರರು ಒಂದು ಕನ್ನಡದ ಕೃತಿ ಕುರಿತು ಬರೆಯುತ್ತಾರೆ. ಇದು ಒಂದು ರೀತಿಯಲ್ಲಿ ಓದುವ ಪಂದ್ಯ.
ಹಿಂದೆಲ್ಲ ಜ್ಞಾನವೃದ್ಧಿಗಾಗಿ ಓದುವ ಹವ್ಯಾಸ ಹೆಚ್ಚಾಗಿದ್ದರೂ ಈಗಿನ ಆಧುನಿಕ ಕಾಲ ಘಟ್ಟದಲ್ಲಿ ಅದು ತುಂಬಾ ಕಡಿಮೆಯಾಗಿದೆ.
ತಂದೆಗೆ ಪುಸ್ತಕಗಳ ಮೇಲಿದ್ದ ಪ್ರೀತಿಯಿಂದಾಗಿ ಮನೆಯಲ್ಲಿ ಪುಟ್ಟ ಗ್ರಂಥಾಲಯವೇ ಸೃಷ್ಟಿಯಾಗಿದೆ. ಅವರ ಪುಸ್ತಕ ಸಂಗ್ರಹ ಲೋಕಕ್ಕೊಮ್ಮೆ ಇಣುಕಿದಾಗ ನನ್ನ ಗಮನ ಸೆಳೆದದ್ದು, ಎಲ್ಲರಿಗೂ ಚಿರಪರಿಚಿತರಾದ ಕು. ಗೋ. ಖ್ಯಾತಿಯ ಹೆರ್ಗ ಗೋಪಾಲ ಭಟ್ ಅವರ ತೇಲ್ನೋಟ (ವಿನೋದ, ವ್ಯಂಗ್ಯ ಬರಹಗಳ) ಸಂಕಲನ.
ನಮ್ಮ ಜೀವನದಲ್ಲೇ ಆಗಿರುವ ಘಟನೆಗಳನ್ನು ಹಾಗೂ ಆಧುನಿಕ ಕಷ್ಟಕಾ ರ್ಪಣ್ಯ ಗಳಿಗೆ ಅತ್ಯಂತ ವ್ಯಂಗ್ಯ ಹಾಗೂ ಸರಳವಾಗಿ ಈ ಕೃತಿ ಯಲ್ಲಿ ಕಥೆಯ ರೂಪ ನೀಡಲಾಗಿದೆ. ಇದರಲ್ಲಿ ಕನ್ನಡದ ಪದಗಳನ್ನು ಅತ್ಯಂತ ಸುಂದರವಾಗಿ ಬಳಸಲಾಗಿದೆ. ಪಟ್ಟಿ ಮಾಡುತ್ತಾ ಹೋದರೆ ಆಡು ಭಾಷೆಯ ಹಾಗೂ ಹಳೆಗನ್ನಡದ ಎಷ್ಟೋ ಶಬ್ದಗಳು ಇಲ್ಲಿ ಕಾಣ ಸಿಗುತ್ತವೆ. ಉತ್ತರಕನ್ನಡ ಮತ್ತು ದಕ್ಷಿಣಕನ್ನಡದ ಭಾಷೆಗಳ ಸಮ್ಮಿಶ್ರಣವಿದೆ. ಪ್ರತಿಯೊಂದು ಕಥೆಯ ಆಕ ರ್ಷಕ ಶೀರ್ಷಿಕೆಗಳು ಮತ್ತೂಂದು ವಿಶೇಷ.
ಈ ಕೃತಿಯನ್ನು ಓದಿದಾತ ಸ್ವಲ್ಪ ನಗುವುದು ಅನಿವಾರ್ಯವಾಗುತ್ತದೆ. ಆದರೆ ಬಳಿಕ ಈ ಓದು ನಮ್ಮನ್ನು ಚಿಂತನೆಗೆ ಹಚ್ಚುತ್ತದೆ. ನಕ್ಕು, ಇದುವೇ ಜೀವನ ಎಂಬ ಸಕಾರಾತ್ಮಕ ನಿಲುವಿಗೆ ಬರಬೇ ಕಾಗುತ್ತದೆ. ಆಯಾ ಭಾಗದ ಜನರ ಜೀವನ, ಅವ ರಲ್ಲಿ ನಡೆಯುವ ಮಾತು ಕತೆ, ಅದರಲ್ಲೇ ಹುಟ್ಟಿ ಕೊಳ್ಳುವ ವಿಶಿಷ್ಟ ಸಂಗತಿಗಳು ಸೆಳೆಯುತ್ತವೆ.
ಈ ಸಂಕಲನದಲ್ಲಿ ನನಗೆ ಪ್ರಿಯವಾದದ್ದು “ಭಯಂಕರ ನಟ ಸೋಮಯ್ಯ’. ಇದರಲ್ಲಿ ಆ ವ್ಯಕ್ತಿತ್ವವನ್ನು ವ್ಯಂಗ್ಯವಾಗಿ ನೋಡಿದರೂ, ಮನುಷ್ಯನ ಜೀವನದ ವಾಸ್ತವ ಸ್ಥಿತಿಯಾವಾಗಾದರೂ ಬದಲಾ ಗಬಹುದು. ತುತ್ಛವಾಗಿ ನೋಡದೇ ಅಲ್ಲಿಯೂ ಧನಾತ್ಮಕವಾದ ವಿಷ ಯಗಳು ಅಡಗಿವೆ ಎನ್ನುವುದು ವ್ಯಕ್ತವಾಗಿದೆ.
ಅದರಲ್ಲಿ ಕೂಪ ಮಂಡೂಕ, ಟೊಮ್ಯಾ ಟೋ ವ್ರತ, ಕಿಸೆಯಲ್ಲಿ ತರಕಾರಿ!, ಭಯಕೃದ್, ದನ ತಿಂದ ಬೆಕ್ಕು, ಹಲೋ ಹಲೋ..! ಮಾತುಕತೆ, ಫೊನೋ ರಂಜನೆ , ಎಲ್ಲಿ? ಎಲ್ಲಿ? ಹೀಗೆ ಹಲವಾರು ಪುಟ್ಟ ಪುಟ್ಟ ಸನ್ನಿವೇಶಗಳು ನಮಗೆ ವಿನೋದವನ್ನು ಉಂಟು ಮಾಡುತ್ತವೆ.
ಈ ಕಥಾ ಸಂಕಲನವನ್ನು ಓದಿದಾಗ ನಮ್ಮ ಬದುಕಿನಲ್ಲಿಯೇ ಸಂಭವಿಸಿದ ಕೆಲವು ಘಟನೆಗಳು ಕಣ್ಣೆದುರು ನಿಲ್ಲುತ್ತವೆ. ಜತೆಗೆ ಆಕ್ರೋಶ ಗಳ ವಿಚಾರ ವನ್ನು ವ್ಯಂಗ್ಯ ಹಾಗೂ ಹಾಸ್ಯದ ರೂಪ ದಲ್ಲಿ ಮನಸ್ಪರ್ಶಿಯಾಗಿ ನಿರೂಪಿ ಸಲಾಗಿದೆ. ಸರಳವಾಗಿ ನಿರೂಪಿಸಲ್ಪ ಟ್ಟಿರುವ ಈ ಪುಸ್ತಕವನ್ನು ಓದುತ್ತಾ ಹೋದಂತೆ ಸಾಮಾಜಿಕ ಕಳಕಳಿ ಹಾಗೂ ಸಮಸ್ಯೆ ಗಳು ವ್ಯಂಗ್ಯದ ರೂಪದಲ್ಲಿ ಕಣ್ಣೆದುರು ನಿಲ್ಲುತ್ತವೆ.
ಜನರ ನಡುವಿನ ಫೋನ್ ಕರೆಗಳು, ಮಾತುಗಳು, ವಾಸ್ತು, ಹವ್ಯಾಸಗಳು ಎಲ್ಲವನ್ನೂ ಸುಲಲಿತವಾಗಿ ಲೇಖಕರು ಅಕ್ಷರ ರೂಪಕ್ಕಿಳಿಸಿದ್ದಾರೆ.
ಗಂಭೀರ ವಿಷಯಗಳನ್ನು ಓದಲು ಆಸಕ್ತರಲ್ಲ ದವರನ್ನೂ ಈ ಕೃತಿಯು ತನ್ನ ಲಘು ಧಾಟಿಯಿಂದ ಸೆಳೆಯುವಲ್ಲಿ ಯಶಸ್ವಿ ಯಾಗುತ್ತದೆ. ಇದರಿಂದ ಸಿಗುವ ಜೀವನ ಪಾಠವು ಎಲ್ಲರಿಗೂ ಅನುಕೂ ಲವಾಗಲಿದೆ ಹಾಗೂ ಮನಸ್ಸು ಹಗುರ ಮಾಡಲು ಪೂರಕವಾಗುತ್ತದೆ.
ಯಶಸ್ವಿ ದೇವಾಡಿಗ, ಶಿರಸಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
World Prematurity Day: ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನ; ನವೆಂಬರ್ 17
Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
MUST WATCH
ಹೊಸ ಸೇರ್ಪಡೆ
World Prematurity Day: ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನ; ನವೆಂಬರ್ 17
Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.