ಸಿನಿ ಅಂಗಳದಲ್ಲಿ ರಂಗೇರುತ್ತಿದೆ ನಾಯಕಿ ಪ್ರಧಾನ ಚಿತ್ರಗಳ ಆರ್ಭಟ
Team Udayavani, Jun 3, 2020, 7:15 PM IST
ಚಿತ್ರರಂಗದಲ್ಲಿ ಮಹಿಳಾ ಪ್ರಧಾನ ಚಿತ್ರಗಳ ಕೊರತೆಯಿದೆ ಎಂಬ ಕೂಗುಗಳು ಈ ಹಿಂದಿನಿಂದಲೂ ಕೇಳಿ ಬರುತ್ತಲೇ ಇದೆ. ಆದರೆ, ಇತ್ತೀಚಿನ ದಿನಗಳಲ್ಲಿ ಆ ಮಾತುಗಳು ದೂರಾಗುತ್ತಿವೆ ಎಂದೆನಿಸತೊಡಗಿವೆ. ಕೆಲ ವರ್ಷಗಳಿಂದ ಚಿತ್ರರಂಗದಲ್ಲಿ ಸಾಕಷ್ಟು ಮಹಿಳಾ ಪ್ರಧಾನ ಚಿತ್ರಗಳು ತೆರೆಕಾಣುತ್ತಿವೆ.
ಮಹಿಳೆಯರ ಸಾಧನೆ, ಮಹಿಳೆಯರ ಮೇಲಾಗುವ ದೌರ್ಜನ್ಯ ಹೀಗೆ ಸಾಕಷ್ಟು ವಿಷಯಗಳ ಬಗ್ಗೆ ಬೆಳಕು ಚೆಲ್ಲುವ, ಸಂದೇಶ ಸಾರುವ ಚಿತ್ರಗಳು ತೆರೆಕಾಣುತ್ತಿವೆ. ಇಂತಹ ಚಿತ್ರಗಳಲ್ಲಿ ಈ ಹಿಂದೆ ಹೊಸಮುಖಗಳ ನಾಯಕ ನಟಿಯರು ಕಾಣಿಸಿಕೊಳ್ಳುತ್ತಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ದೊಡ್ಡ ದೊಡ್ಡ ಸ್ಟಾರ್‌ನಟಿಯರೂ ಕೂಡ ನಟಿಸಲು ಪ್ರಾರಂಭಿಸಿದ್ದಾರೆ.
ಇನ್ನು 2020ನೇ ವರ್ಷವನ್ನು ಮಹಿಳಾ ಕೇಂದ್ರಿತ ಸಿನಿಮಾಗಳ ವರ್ಷವೆಂದೇ ಕರೆಯಬಹುದಾಗಿದ್ದು, ಸ್ಯಾಂಡಲ್‌ವುಡ್ ಸೇರಿದಂತೆ ಬಾಲಿವುಡ್ ಅಂಗಳದಲ್ಲಿ ನಾಯಕಿ ಪ್ರಧಾನ ಚಿತ್ರಗಳು ತೆರೆಕಂಡಿದ್ದು, ಯಶಸ್ಸು ಕಂಡಿವೆ. ಈ ಹಿನ್ನೆಲೆಯಲ್ಲಿ ಸಿನಿ ಪ್ರಕ್ಷೇಕರ ಮನ ಕದ್ದಿರುವ ಕೆಲವು ಮಹಿಳಾ ಪ್ರಧಾನ ಚಿತ್ರಗಳ ಕಿರು ಪರಿಚಯ ಈ ಕೆಳಕಂಡಂತಿವೆ…
ಹೆಣ್ಣು ಮಕ್ಕಳ ಪ್ರತಿಬಿಂಬ ಅಮ್ಮಚ್ಚಿಯೆಂಬ ನೆನಪು
ರಂಗಭೂಮಿಯ ಸಕ್ರಿಯ ಮತ್ತು ಡಬ್ಬಿಂಗ್ ಕಲಾವಿದೆ ಆಗಿರುವ ಚಂಪಾ ಪಿ. ಶೆಟ್ಟಿ ನಿರ್ದೇಶನ ಮಾಡಿರುವ ಅಮ್ಮಚ್ಚಿ ಯೆಂಬ ನೆನಪು ಪ್ರೇಕ್ಷಕರ ಮನ ಗೆದಿದ್ದು, ಸದ್ಯ ಅಮೆಜಾನ್ ಪ್ರೈಮ್‌ನಲ್ಲಿ ಸದ್ದು ಮಾಡುತ್ತಿದೆ. ವೈದೇಹಿ ಅವರ ಅಕ್ಕು ನಾಟಕ ಮತ್ತು ಅಮ್ಮಚ್ಚಿ ಎಂಬ ನೆನಪು ಕಥೆಗಳನ್ನು ಇಟ್ಟುಕೊಂಡು ಅವುಗಳಿಗೆ ಸಿನಿಮಾ ಸ್ಪರ್ಶ ನೀಡಿದ್ದಾರೆ ಚಂಪಾ.
ತಾನು ಇಷ್ಟಪಟ್ಟವರನ್ನು ಮದುವೆಯಾಗುತ್ತೆನೆ ಎಂದು ಹೋರಾಟ ಮಾಡುತ್ತಿರುವ ಅಮ್ಮಚ್ಚಿ, ಮದುವೆಯಾದವನು ನನ್ನನ್ನು ಸ್ವೀಕರಿಸಲಿಲ್ಲ ಎಂಬ ತೊಳಲಾಟದಲ್ಲಿ ಅಕ್ಕು. ಇಬ್ಬರ ನಡುವೆ ಮದುವೆಯಾದ ಹೊಸದರಲ್ಲೆ ಗಂಡನನ್ನು ಕಳೆದುಕೊಂಡು, ಅವರಿವರ ಮನೆ ಕೆಲಸ ಮಾಡಿಕೊಂಡು ಮೊಮ್ಮಗಳು ಅಮ್ಮಚ್ಚಿಗೆ ಮದುವೆ ಮಾಡಬೇಕು ಎಂದು ಜೀವನದ ಹೋರಾಟ ಮಾಡುತ್ತಿರುವ ಪುಟ್ಟಮ್ಮತ್ತೆ. ಈ ಮೂವರು ಮುಖ್ಯ ಪಾತ್ರಧಾರಿಗಳ ಕಥೆಯನ್ನು ಹೇಳುತ್ತಾ, ಜಗತ್ತಿನಲ್ಲಿ ಬಹುತೇಕ ಹೆಣ್ಣುಮಕ್ಕಳ ಸ್ಥಿತಿಯನ್ನು ವಿವರಿಸುವ ಸಣ್ಣ ಪ್ರಯತ್ನ ಈ ಚಿತ್ರದಲ್ಲಿ ನಡೆದಿದೆ.
ಹೃದಯ ಸ್ಪರ್ಶಿ ಕಥಾವಸ್ತು “ಥಪ್ಪಡ್’
“ಥಪ್ಪಡ್’ ಸಿನಿಮಾ ಅಮೃತಾ ಎಂಬ ಗೃಹಿಣಿಯೊಬ್ಬರ ಸುತ್ತ ಸುತ್ತುತ್ತದೆ. ತನ್ನ ಗಂಡ ವಿವೇಕ್ (ಪವೈಲ್ ಗುಲಾಟಿ) ಕೆನ್ನೆಗೆ ಹೊಡೆದ ಎಂಬ ಕಾರಣಕ್ಕೆ ಡಿವೋರ್ಸ್‌ಗೆ ಅರ್ಜಿ ಸಲ್ಲಿಸುತ್ತಾಳೆ. ಮುಂದೇನಾಗುತ್ತದೆ ಎಂಬ ಅಂಶಗಳೊಂದಿಗೆ ಸಾಗುವ ಸಾಂಸಾರಿಕ ಚೌಕಟ್ಟೂ ಹೊಂದಿರುವ ಸಿನಿಮಾ ಇದು. ಈ ಸಿನಿಮಾ ನೋಡಿರುವ ಪ್ರೇಕ್ಷಕರು ಟ್ವಿಟರ್‌ನಲ್ಲಿ ಮೆಚ್ಚುಗೆ ಮಾತುಗಳನ್ನು ಆಡಿದ್ದಾರೆ. ಅದರಲ್ಲೂ ಮುಖ್ಯವಾಗಿ ತಾಪ್ಸಿ ಅಭಿನಯ ಬ್ರಿಲಿಯಂಟ್ ಎಂದು ಕೊಂಡಾಡಿದ್ದಾರೆ. “ಅವರು ನನ್ನನ್ನು ಮೊದಲ ಸಲ ಹೊಡೆದರು, ಇನ್ನು ಹೊಡೆಯಲು ಆಗಲ್ಲ ಅಷ್ಟೇ ಸಾಕು” ಎಂಬ ಚಿತ್ರದಲ್ಲಿನ ಡೈಲಾಗ್ ಇಡೀ ಸಿನಿಮಾದ ಕಥೆ ಏನಿರಬಹುದು ಎಂದು ಊಹಿಸುವಂತೆ ಮಾಡುತ್ತದೆ.
ಭಾವನಾತ್ಮಕ ನಟನೆಯ ಮೂಲಕ ಮನ ಕಲಕುವ “ಛಪಾಕ್’
ಆಸಿಡ್ ದಾಳಿ ಸಂತ್ರಸ್ಥೆ ಜೀವನ ಕುರಿತ ಛಪಾಕ್ ಚಿತ್ರ ರಿಲೀಸ್ ಆಗಿದೆ. ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಆಸಿಡ್ ಸಂತ್ರಸ್ತೆ ಲಕ್‌ಷ್ಮಿà ಅಗರ್‌ವಾಲ್ ಪಾತ್ರದ ಹೆಸರಾದ ಮಾಲತಿ ಪಾತ್ರದಲ್ಲಿ ನಟಿಸಿದ್ದಾರೆ. ಅಂದವಾದ ಮುಖ ವಿಕಾರವಾದಾಗ ಹೊರಗೆ ಬಾರದೆ ಮನೆಯೊಳಗೆ ಕಾಲಕಳೆಯುತ್ತಿದ್ದ ಮಾಲತಿ, ತನಗಾದ ಅನ್ಯಾಯ ಬೇರಾರಿಗೂ ಆಗಬಾರದೆಂದು ನ್ಯಾಯಕ್ಕಾಗಿ ಒಂದು ದಿನ ಮನೆಯಿಂದ ಕಾಲ್ಕಿಳುತ್ತಾಳೆ. ಕೋರ್ಟ್ ಮೆಟ್ಟಿಲೇರುತ್ತಾಳೆ. ಕೊನೆಗೆ ಆಕೆಗೆ ನ್ಯಾಯ ದಕ್ಕುತ್ತಾ? ಇದೇ “ಚಪಾಕ್’ ಚಿತ್ರದ ಎಳೆ.
ಇನ್ನು ಮುಂಬರುವ ದಿನಗಳಲ್ಲಿ 1960ರ ದಶಕದಲ್ಲಿ ಮುಂಬಹಿನಲ್ಲಿ ಕುಖ್ಯಾತಿ ಪಡೆದಿದ್ದ ವೇಶ್ಯವಾಟಿಕೆ ನಡೆಸುತ್ತಿದ್ದ ಗಂಗೂಬಾಯಿ ಕೋಠಿವಾಲಿ ಬದುಕಿನ ಕುರಿತು ಹುಸೇನ್ ಝೈದಿ ಬರೆದಿರುವ ಕಾದಂಬರಿಯನ್ನು ಸಂಜಯ್ ಲೀಲಾ ಬನ್ಸಾಲಿ ಅವರು ಸಿನಿಮಾ ಮಾಡುತ್ತಿದ್ದು, ಈ ಚಿತ್ರದಲ್ಲಿ ನಟಿ ಆಲಿಯಾ ಭಟ್ ನಟಿಸುತ್ತಿದ್ದಾರೆ. ಜತೆಗೆ ಐಎಎಫ್ ವಿಮಾನ ಹಾರಾಟ ನಡೆಸಿದ ಮೊದಲ ಮಹಿಳಾ ಪೈಲಟ್ ಗುಂಜನ್ ಸಕ್ಸೇನಾ ಅವರ ಜೀವನವು ಕಥೆಯಾಗುತ್ತಿದ್ದು, ಚಿತ್ರವನ್ನು ಶರಣ್ ಶರ್ಮಾ ನಿರ್ದೇಶಿಸಲಿದ್ದಾರೆ. ಈ ಚಿತ್ರದಲ್ಲಿ ಮೋಹಕ ತಾರೆ ದಿವಂಗತ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್‌ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಇದರೊಂದಿಗೆ ಪ್ರಸಕ್ತ ವರ್ಷ ಚಿತ್ರರಂದದಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ಚಿತ್ರಗಳಲ್ಲಿ ತಲೈವಿ ಕೂಡ ಒಂದಾಗಿದ್ದು, ಪ್ರಖ್ಯಾತ ನಟಿ ಹಾಗೂ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ ಜೀವನ ಆಧಾರಿತ ಚಿತ್ರ ಇದಾಗಿದೆ. ಜಯಲಲಿತಾ ಅವರ ಪಾತ್ರದಲ್ಲಿ ಕಂಗನಾ ರನಾವತ್ ಅವರು ಕಾಣಿಸಿಕೊಳ್ಳುತ್ತಿದ್ದು, ಚಿತ್ರದ ಪೋಸ್ಟರ್ ಈಗಾಗಲೇ ಪ್ರೇಕ್ಷಕರ ಗಮನ ಸೆಳೆಯುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sullia: ಅಪಘಾತ; ಪರಾರಿಯಾಗಿದ್ದ ಲಾರಿ ವಶಕ್ಕೆ
K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Kasargod: ನಾಟಕ ತಂಡ ಸಂಚರಿಸುತ್ತಿದ್ದ ಬಸ್ ಮಗುಚಿ ಇಬ್ಬರು ನಟಿಯರ ಸಾವು
Kasaragod: ಎಡನೀರು ಶ್ರೀ ವಿಷ್ಣುಮಂಗಲ ದೇವಸ್ಥಾನದಿಂದ ಕಳವು; ಆರೋಪಿಯ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.