ಕಣೆ ನೊಣ ಕಾಟ; ಭತ್ತ ಬೆಳೆಯಲು ಹಿಂದೇಟು
Team Udayavani, Jan 11, 2021, 5:34 PM IST
ಸಿರುಗುಪ್ಪ: ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ಬೆಳೆದ ಭತ್ತಕ್ಕೆ ಕಾಣಿಸಿಕೊಂಡ ಕಣೆಹುಳು ಕಾಟ ಹಿಂಗಾರು ಹಂಗಾಮಿನಲ್ಲಿ ಕಾಣಿಸಿಕೊಂಡಿದ್ದು, ರೈತರ ಮೇಲೆ ಪರಿಣಾಮ ಬೀರಿದೆ. ಲೀಜ್ ಮೇಲೆ ಭತ್ತ ಬೆಳೆಯುತ್ತಿದ್ದ ಬೆಳೆಗಾರರು ಈ ಬಾರಿ ಲೀಜ್ ಮೇಲೆ ಭತ್ತ ಬೆಳೆಯುವುದನ್ನು ಕೈ ಬಿಟ್ಟಿದ್ದು, ಜಮೀನಿನ ಮಾಲೀಕರು ಭತ್ತ ನಾಟಿ ಮಾಡಲು ಹಿಂದೆ ಮುಂದೆ ನೋಡುವ ಪರಿಸ್ಥಿತಿ ಉಂಟಾಗಿದೆ. ತಾಲೂಕಿನಲ್ಲಿ ಹಿಂಗಾರು ಹಂಗಾಮಿನಲ್ಲಿ ಸುಮಾರು 28 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬೆಳೆ ಬೆಳೆಯಲಾಗುತ್ತಿದ್ದು, ಆದರೆ ಕಣೆ ಹುಳುವಿನ ಕಾಟದಿಂದ ಮುಂಗಾರು ಹಂಗಾಮಿನಲ್ಲಿ ಬೆಳೆದ ಭತ್ತದ ಬೆಳೆಯು ಸರಿಯಾಗಿ ಇಳುವರಿ ಬಾರದೆ ಒಂದು ಎಕರೆಗೆ 15-20 ಚೀಲ ಮಾತ್ರ ಇಳುವರಿ ಕಣೆನೊಣ ಹುಳುವಿನ ಬಾಧೆ ಕಾಣಿಸಿಕೊಂಡಿದ್ದರಿಂದ 10ಎಕರೆಯಲ್ಲಿ ಭತ್ತವನ್ನು ಲೀಜ್‌ಗೆ ಬೆಳೆಯುತ್ತಿದ್ದ ಲೀಜ್‌ದಾರರು ಈ ಬಾರಿ ಗದ್ದೆ ಲೀಜ್ ಮಾಡುವುದನ್ನು ಬಿಟ್ಟಿರುವುದರಿಂದ ಅನಿವಾರ್ಯವಾಗಿ ನಾವೇ ಭತ್ತ ನಾಟಿ ಮಾಡುತ್ತಿದ್ದೇವೆ. ಕಣೆನೊಣ ಹುಳುವಿನ ಬಾಧೆಯಿಂದ ಸಾಕಷ್ಟು ಲೀಜ್‌ದಾರರು ಈ ಬಾರಿ ಭತ್ತ ಬೆಳೆಯುವುದನ್ನು ಕೈಬಿಟ್ಟಿದ್ದಾರೆ.
ವೈ.ಕೃಷ್ಣರೆಡ್ಡಿ, ಕರೂರು ರೈತ. ಬಂದಿರುವುದರಿಂದ ಹಿಂಗಾರು ಹಂಗಾಮಿನಲ್ಲಿ ಲೀಜ್ ಮೇಲೆ ಭತ್ತ ಬೆಳೆಯುತ್ತಿದ್ದ ಲೀಜ್ ದಾರರು ಮುಂಗಾರು ಹಂಗಾಮಿನಲ್ಲಿ ಭತ್ತದಲ್ಲಿ ಇಳುವರಿ ಕಡಿಮೆಯಾಗಿರುವುದರಿಂದ ಹಿಂಗಾರು ಹಂಗಾಮಿನಲ್ಲಿ ಲೀಜ್ ಮೇಲೆ ಭತ್ತ ಬೆಳೆಯಲು ಮುಂದಾಗಿಲ್ಲ, ಇದರಿಂದಾಗಿ ತಾಲೂಕಿನಲ್ಲಿ 5 ಸಾವಿರಕ್ಕೂ ಹೆಚ್ಚು ಪ್ರದೇಶದಲ್ಲಿ ಲೀಜ್ ಮೇಲೆ ಭತ್ತ ಬೆಳೆಯುತ್ತಿದ್ದ ಬೆಳೆಗಾರರು ಈ ಬಾರಿ ಭತ್ತ ಬೆಳೆಯುವುದನ್ನು ಕೈ ಬಿಟ್ಟಿದ್ದಾರೆ.
ಇದನ್ನೂ ಓದಿ:ಕೋವಿಡ್ ವಿರುದ್ಧ ನಿರ್ಣಾಯಕ ಹೋರಾಟ; ಮೊದಲ ಹಂತದಲ್ಲಿ ಲಸಿಕೆ ಉಚಿತ: ಪ್ರಧಾನಿ ಮೋದಿ
ಹಿಂಗಾರು ಹಂಗಾಮಿನ ನಾಟಿ ಹಂತದಲ್ಲಿಯೇ ಭತ್ತದ ಸಸಿಮಡಿಗಳಲ್ಲಿ ಕಣೆನೊಣದ ಕಾಟ ಕಾಣಿಸಿಕೊಂಡಿರುವುದರಿಂದ ಕೆಲವು ರೈತರು ಕಣೆಹುಳು ಕಾಟಕ್ಕೆ ನಾಟಿ ಮಾಡದೆ ಕೈಬಿಡುವ ನಿರ್ಧಾರಕ್ಕೆ ಬಂದಿದ್ದಾರೆ. ಮಲೆನಾಡು ಪ್ರದೇಶದ ಭತ್ತದ ಗದ್ದೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಣೆಹುಳು ಕಾಟ ಈ ಬಾರಿ ತಾಲೂಕಿನಲ್ಲಿಯೂ ಕಾಣಿಸಿಕೊಂಡಿದ್ದು, ಹಿಂಗಾರು ಹಂಗಾಮಿನಲ್ಲಿ ರೈತರು ಭತ್ತ ಬೆಳೆಯಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣ ಮಾಡಿದೆ.
ಹಿಂಗಾರು ಹಂಗಾಮು ಪ್ರಾರಂಭವಾಗಿ ತಿಂಗಳು ಕಳೆಯುತ್ತಾ ಬಂದಿದ್ದು, ತುಂಗಭದ್ರಾ ಕಾಲುವೆ ವ್ಯಾಪ್ತಿಯ ಮತ್ತು ತುಂಗಭದ್ರಾ ನದಿ, ಗರ್ಜಿಹಳ್ಳ, ಕೆಂಚಿಹಳ್ಳ, ದೊಡ್ಡ ಹಳ್ಳ, ವೇದಾವತಿ ಹಗರಿನದಿ ಸೇರಿದಂತೆ ಬೋರ್‌ವೆಲ್ ನೀರನ್ನು ಬಳಸಿ ಭತ್ತ ನಾಟಿ ಮಾಡುತ್ತಿದ್ದರು. ಆದರೆ ತುಂಗಭದ್ರಾ ನದಿ ಪಾತ್ರದ ಹಳ್ಳಿಗಳ ರೈತರು ನಾಟಿ ಮಾಡಿದ ಶೇ.30ರಷ್ಟು ಪ್ರದೇಶದಲ್ಲಿ ಈಗಾಗಲೇ ಕಣೆಹುಳು ರೋಗ ಕಾಣಿಸಿಕೊಂಡಿದ್ದು, ಈ ಭಾಗದಲ್ಲಿ ನಾಟಿ ಮಾಡಿದ ಭತ್ತದ ಪೈರು ಕಣೆಹುಳು ರೋಗಬಾಧೆಗೆ ತುತ್ತಾಗಿ ಬಡ್ಡೆ ಬೆಳೆಯದೆ ಉದ್ದವಾಗಿ ಬೆಳೆದು ಹಳದಿ ಬಣ್ಣಕ್ಕೆ ತಿರುಗಿದೆ.
ಈ ಭಾಗದಲ್ಲಿ ಭತ್ತದ ಸಸಿ ಮಡಿಗಳಲ್ಲಿಯೇ ಕಣೆನೊಣ ಹುಳು ಕಾಣಿಸಿಕೊಂಡಿದ್ದರಿಂದ ನಾಟಿ ಕಾರ್ಯ ಕೈ ಬಿಟ್ಟಿದ್ದಾರೆ. ಮುಂಗಾರು ಹಂಗಾಮಿನಲ್ಲಿ ತಾಲೂಕಿನಲ್ಲಿ ಅತೀ ಹೆಚ್ಚು ಸುರಿದ ಮಳೆಯಿಂದಾಗಿ ಕಣೆ ಹುಳು ರೋಗ ತಗುಲಿ ಇಳುವರಿ ಕಡಿಮೆಯಾಗಿದ್ದಲ್ಲದೆ ಕಣೆ ಹುಳು ರೋಗಕ್ಕೆ ಔಷ ಧ ಸಿಂಪಡಿಸಿ ಮಾಮೂಲು ಖರ್ಚಿಗಿಂತ ಹೆಚ್ಚು ವೆಚ್ಚ ಮಾಡಿದ್ದರು. ಇಳುವರಿ ಕಡಿಮೆಯಾಗಿ ರೈತರನ್ನು ಸಂಕಷ್ಟಕ್ಕೆ ದೂಡಿತ್ತು. ಬೆಲೆ ಕುಸಿತದಿಂದ ಪಾರಾಗಿ ಉತ್ತಮ ಬೆಲೆ ಸಿಗುತ್ತಿದೆ ಎಂದು ನಿಟ್ಟುಸಿರು ಬಿಟ್ಟಿದ್ದ ರೈತರಿಗೆ ಈಗ ಕಣೆ ಹುಳು ಬಾಧೆ ಕಾಡಲಾರಂಭಿಸಿದ್ದು, ಇಲ್ಲಿಯವರೆಗೆ ಅತಿ ಹೆಚ್ಚು ಮಳೆ ಸುರಿಯುವ ಮಳೆನಾಡಿನ ಭತ್ತ ಬೆಳೆಯುವ ರೈತರಿಗೆ ಕಾಟ ಕೊಡುತ್ತಿದ್ದ ಕಣೆ ಹುಳು ಈಗ ತಾಲೂಕಿನ ರೈತರನ್ನು ನಿದ್ದೆಗೆಡಿಸಿದೆ.
ಆರ್.ಬಸವರೆಡ್ಡಿ ಕರೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.