ರೀ, ಸ್ವಲ್ಪ ಇಲ್ನೋಡಿ..!ಕೃಷಿ ಬೆಳಕು; ರೈತರ ಪಾಲಿನ ಹೊಂಬೆಳಕು
Team Udayavani, Jul 31, 2023, 2:40 PM IST
ಸಾವಯವ ಕೃಷಿ, ನೈಸರ್ಗಿಕ ಬೇಸಾಯ, ಹೈನುಗಾರಿಕೆ, ಅರಣ್ಯ ಕೃಷಿ ಕುರಿತು ಒಲವು ಹೊಂದಿರುವವರಿಗೆ ನೈಜ ಮಾಹಿತಿ ಹಾಗೂ ಸಲಹೆ ನೀಡುವ ಯುಟ್ಯೂಬ್ ಚಾನೆಲ್ ಒಂದಿದೆ. ಅದರ ಹೆಸರೇ “ಕೃಷಿ ಬೆಳಕು’ ಯೂಟ್ಯೂಬ್ ಚಾನೆಲ್.
ಮೂಲತಃ ಶಿವಮೊಗ್ಗದವರಾದ ಬಾಬು ಅವರು 2020ರಲ್ಲಿ ಈ ಚಾನೆಲ್ ಅನ್ನು ಆರಂಭಿಸಿದರು. ಸದ್ಯ 2.2 ಲಕ್ಷ ಮಂದಿ ಸಬ್‌ಸೆð„ಬರ್‌ಗಳನ್ನು ಹೊಂದಿದ್ದು, ಇದುವರೆಗೆ 380 ವಿಡಿಯೋ ಅಪ್‌ಲೋಡ್ ಮಾಡಿದ್ದಾರೆ. ಈ ಚಾನೆಲ್‌ನಲ್ಲಿ ಗಾಣದ ಎಣ್ಣೆ ತಯಾರಿಕೆ, ಸ್ವದೇಶಿ ಮತ್ತು ವಿದೇಶಿ ತಳಿಯ ವಿವಿಧ ಹಣ್ಣುಗಳನ್ನು ಬೆಳೆಯುವುದು ಹೇಗೆ? ಕುರಿ, ಮೇಕೆ, ನಾಟಿ ಕೋಳಿ, ಹಂದಿ ಸಾಕಾಣಿಕೆ ಮಾಡುವುದು ಹೇಗೆ ಎಂಬುದನ್ನು ವಿವರಿಸುವ ಸಾಕಷ್ಟು ವಿಡಿಯೋಗಳಿವೆ.
ಸಿರಿಧಾನ್ಯ, ಸಹಜ ಕೃಷಿ, ಸಾವಯವ ಕೃಷಿ ಚಟುವಟಿಕೆಗಳ ಬಗ್ಗೆಯೂ ಉತ್ತಮ ಮಾಹಿತಿಯನ್ನು ಈ ಚಾನೆಲ್ ಒದಗಿಸುತ್ತಿದೆ. ಈ ಚಾನೆಲ್‌ನ ವಿಶೇಷ ಏನೆಂದರೆ- ನೇರವಾಗಿ ತೋಟಗಳಿಗೆ ಭೇಟಿ ನೀಡಿ ರೈತರಿಂದಲೇ ವಿಚಾರಗಳನ್ನು ಪ್ರಚುರಪಡಿಸುತ್ತಾರೆ. ರೈತರ ಸಮಗ್ರ ಅಭಿವೃದ್ಧಿ, ಯುವಕರು ಬೇಸಾಯದಲ್ಲಿ ತೊಡಗಿಕೊಂಡು ಸುಸ್ಥಿರ ಮತ್ತು ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಸಹಾಯ ಮಾಡುವುದು, ಕೃಷಿಯ ವಾಸ್ತವ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಉದ್ದೇಶದಿಂದ ಕೃಷಿ ಸಾಧಕರು, ವಿಜ್ಞಾನಿಗಳು ಹಾಗೂ ತಜ್ಞರಿಂದ ಸಮಗ್ರ ಮಾಹಿತಿ ಒದಗಿಸುವುದೇ ಈ ಚಾನೆಲ್‌ನ ಮುಖ್ಯ ಉದ್ದೇಶವಾಗಿದೆ.
*ಪರಮ್ ಆರುಂಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.