ಇಂದಿನಿಂದ ಗಡಿಯಲ್ಲಿ ಬಿಗಿ ತಪಾಸಣೆ: ದಕ್ಷಿಣ ಕನ್ನಡ ಪ್ರವೇಶಿಸುವವರ ಮೇಲೆ ನಿಗಾ!
Team Udayavani, Feb 22, 2021, 5:45 AM IST
ಮಹಾನಗರ: ಕೊರೊನಾ ಲಾಕ್‌ಡೌನ್ ಸಂದರ್ಭ ಭಾಗಶಃ ಕೇರಳ-ಕರ್ನಾಟಕ ಗಡಿ ಬಂದ್ ಮಾಡಿದ್ದ ಮಾದರಿಯಲ್ಲಿಯೇ ಮತ್ತೂಮ್ಮೆ ಫೆ. 22ರಿಂದ ಗಡಿ ಬಂದ್ ಆರಂಭವಾಗಲಿದೆ. ಕೇರಳದಿಂದ ದಕ್ಷಿಣ ಕನ್ನಡ ಜಿಲ್ಲಾ ಪ್ರವೇಶಕ್ಕೆ ಇರುವ ಒಟ್ಟು ಗಡಿಗಳ ಪೈಕಿ 4 ಗಡಿಗಳಲ್ಲಿ (ನೆಗೆಟಿವ್ ವರದಿ ಕಡ್ಡಾಯ) ಮಾತ್ರ ಪ್ರವೇಶಿಸಲು ಜಿಲ್ಲಾಡಳಿತ ಅವಕಾಶ ನೀಡಿದೆ.
ಇನ್ನು, ಮುಂದೆ ಕೇರಳದಿಂದ ಕರ್ನಾಟಕಕ್ಕೆ ಬರುವವರು “ಕೊರೊನಾ ನೆಗೆಟಿವ್’ ವರದಿ ತರುವುದು ಕಡ್ಡಾಯ. ಇದಕ್ಕಾಗಿ ಫೆ. 22ರಿಂದ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ನಡೆಯಲಿದೆ. ಇದೇ ಕಾರಣಕ್ಕೆ ಚೆಕ್‌ಪೋಸ್ಟ್‌ಗಳಲ್ಲಿ ಆರೋಗ್ಯ ಇಲಾಖೆಯ 2 ತಂಡಗಳು ಕಾರ್ಯನಿರ್ವಹಿಸಲಿವೆ. ಕೇರಳ ಭಾಗದಿಂದ ಉದ್ಯೋಗಕ್ಕೆಂದು ದ.ಕ. ಜಿಲ್ಲೆಗೆ ದಿನನಿತ್ಯ ಬಂದು ಹೋಗುವವರು ಪ್ರತಿ 15 ದಿನಗಳಿಗೊಮ್ಮೆ ಆರ್‌ಟಿಪಿಸಿಆರ್ ಪರೀಕ್ಷೆ ನಡೆಸಬೇಕು.
ಫೆ. 22ರಿಂದ ಬೆಳಗ್ಗೆ 8ರಿಂದ ಮಧ್ಯಾಹ್ನ 1 ಹಾಗೂ ಮಧ್ಯಾಹ್ನ 1ರಿಂದ ಸಂಜೆ 5ರ ವರೆಗೆ ಲ್ಯಾಬ್ ಟೆಕ್ನಿಶನ್, ಆರೋಗ್ಯ ಇಲಾಖೆ ಅಧಿಕಾರಿಗಳು ಕೇರಳದಿಂದ ಬರುವ ನೆಗೆಟಿವ್ ಪ್ರಮಾಣ ಪತ್ರ ಹೊಂದಿರದ ಪ್ರಯಾಣಿಕರಿಗೆ ರ್ಯಾಟ್, ಆರ್‌ಟಿ-ಪಿಸಿಆರ್ ಪರೀಕ್ಷೆ ನಡೆಸಲಿದ್ದಾರೆ. ಆದರೆ ಕರ್ನಾಟಕಕ್ಕೆ ಪ್ರವೇಶಿಸಲು ವರದಿ ಬರುವಲ್ಲಿವರೆಗೆ ಕಾಯುವುದು ಅನಿವಾರ್ಯ. ಪೊಲೀಸ್ ಇಲಾಖೆಯಿಂದ ಮೂರು ಪಾಳಿಯಲ್ಲಿ ತಲಾ ಎರಡು ಸಿಬಂದಿ ತಂಡವನ್ನು ನಿಯೋಜಿಸಿ ಕಚೇರಿಗೆ ವರದಿ ನೀಡಲು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.
ಬಸ್ ಪ್ರಯಾಣಿಕರ ಗಮನಕ್ಕೆ
ಕೇರಳದಿಂದ ಬಸ್‌ಗಳ ಮೂಲಕ ಪ್ರಯಾಣಿಸುವವರು 72 ಗಂಟೆಗಳ ಒಳಗೆ ನಡೆಸಲಾದ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಹೊಂದಿರುವ ಬಗ್ಗೆ ಖಚಿತಗೊಳಿಸಿದ ಬಳಿಕವೇ ಬಸ್‌ಗಳಲ್ಲಿ ಪ್ರಯಾಣಿಸಲು ಅನುವು ಮಾಡಲು ಆಯಾ ಬಸ್‌ಗಳ ನಿರ್ವಾಹಕರು ಕ್ರಮವಹಿಸಬೇಕೆಂದು ಜಿಲ್ಲಾಧಿಕಾರಿಗಳು ಈಗಾಗಲೇ ನಿರ್ದೇಶನ ನೀಡಿದ್ದಾರೆ.
ವಿಮಾನ ನಿಲ್ದಾಣದಲ್ಲಿ ತಪಾಸಣೆ
ಕೆಲವು ಕಡೆಗಳಲ್ಲಿ ಕೊರೊನಾ ಆತಂಕ ಹೆಚ್ಚಾಗುತ್ತಿರುವ ಪರಿಣಾಮ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಕೋವಿಡ್ ಪರೀಕ್ಷೆ ಮಾಡಿಸುವ ಕಾರ್ಯ ಫೆ. 22ರಿಂದ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬರಲಿದೆ.
ಪ್ರಯಾಣಿಕರು ನೆಗೆಟಿವ್ ವರದಿಯನ್ನು ತಂದು ಬರಬೇಕು. ಜತೆಗೆ ಮಂಗಳೂರಿಗೆ ಬಂದ ಬಳಿಕ ಕೂಡ ಪರೀಕ್ಷೆ ನಡೆಸಬೇಕಿದೆ.
ಕೊರೊನಾ ಎಚ್ಚರಿಕೆ ಅಗತ್ಯ
ದ.ಕ. ಜಿಲ್ಲೆಯಲ್ಲಿ ಕೊರೊನಾ ಸ್ವಲ್ಪಮಟ್ಟಿ ನಲ್ಲಿ ನಿಯಂತ್ರಣ ದಲ್ಲಿದೆ ಯಾದರೂ ಮೈಮರೆಯುವಂತಿಲ್ಲ. ಆದರೂ ನಗರದಲ್ಲಿ ಬಹುತೇಕ ಮಂದಿ ಮಾಸ್ಕ್ ಬಳಕೆಗೆ ಹೆಚ್ಚಿನ ಒತ್ತು ನೀಡುತ್ತಿಲ್ಲ. ಬಹುತೇಕ ಬಸ್‌ಗಳಲ್ಲಿ, ಹೊಟೇಲ್, ಸಭೆ, ಸಮಾರಂಭಗಳಲ್ಲಿ ಸಾಮಾಜಿಕ ಅಂತರ ಸಹಿತ ಕೊರೊನಾ ಮಾರ್ಗಸೂಚಿ ಸಮರ್ಪಕವಾಗಿ ಪಾಲನೆ ಯಾಗುತ್ತಿಲ್ಲ. ರಾಜ್ಯಕ್ಕೆ ಕೊರೊನಾ ಎರಡನೇ ಅಲೆಯ ಆತಂಕವಿದ್ದು, ಸ್ವಯಂ ಮುನ್ನೆಚ್ಚರಿಕೆ ವಹಿಸುವುದು ಅಗತ್ಯವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Charmady Ghat: ಬಿದಿರುತಳ ಅರಣ್ಯದಲ್ಲಿ ಕಾಡ್ಗಿಚ್ಚು
Puttur: ಅನಾಥ ಸ್ಥಿತಿಯಲ್ಲಿ ಎರಡು ಬೈಕ್; ವಶಕ್ಕೆ ಪಡೆದುಕೊಂಡ ಪೊಲೀಸರು
ತುಬಚಿ- ಬಬಲೇಶ್ವರ ಏತ ನೀರಾವರಿ: 3,048 ಎಕರೆ ಸ್ವಾಧೀನ, ಹಣ ಬಿಡುಗಡೆಗೆ ಎಂ.ಬಿ.ಪಾಟೀಲ ಸೂಚನೆ
Vijayapura; ಕಾರ್ಮಿಕರ ಕೂಡಿ ಹಾಕಿ ರಾಕ್ಷಸಿ ಕೃತ್ಯ: ಎಲ್ಲ 5 ಆರೋಪಿಗಳ ಬಂಧನ
Tarikere: ತಂದೆ ಸಾವಿನ ವಿಷಯ ಗೊತ್ತಿಲ್ಲದೆ ಹಸೆಮಣೆ ಏರಿದ ಮಗಳು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.