ಕುಂಟುತ್ತಾ ಸಾಗಿದ ಹೆದ್ದಾರಿ ವಿಸರಣ್ತೆ ಕಾಮಗಾರಿ
ಬೈರಾಪುರ ಕೆಳ ಸೇತುವೆ ಮಂದಗತಿ ಕಾಮಗಾರಿ ; ಅಪಘಾತಗಳ ಹೊಣೆ ಸಂಸದರು, ಶಾಸಕರು ಹೊರಲಿ: ಸ್ಥಳೀಯರು
Team Udayavani, Aug 27, 2021, 5:47 PM IST
ಆಲೂರು: ತಾಲೂಕಿನಲ್ಲಿ ಹಾದು ಹೋಗಿರುವ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ-75 ವಿಸ್ತರಣೆ ಕಾಮಗಾರಿ ಮಂದಗತಿಯಲ್ಲಿ ಸಾಗಿದ್ದು ವಾಹನ ಸವಾರರು, ಹೆದ್ದಾರಿ ಬದಿ ಗ್ರಾಮಸ್ಥರು ನಿತ್ಯ ಸಮಸ್ಯೆ ಎದುರಿಸುವಂತಾಗಿದೆ.
ಅಲ್ಲದೆ ಬೈರಾಪುರ ಗ್ರಾಮದಲ್ಲಿ ನಿರ್ಮಿಸುತ್ತಿರುವ ಕೆಳ ಸೇತುವೆ ಕಾಮಗಾರಿಯೂ ಪೂರ್ಣಗೊಳ್ಳದೆ ಆಲೂರು ಪಟ್ಟಣದಿಂದ ಮಗ್ಗೆ ಮಾರ್ಗವಾಗಿ
ಕೆ.ಹೊಸಕೋಟೆ ಕಡೆಗೆ ಹೋಗುವ ವಾಹನ ಸವಾರರು ಹೆದ್ದಾರಿ ದಾಟಲಾಗುತ್ತಿಲ್ಲ.ರಾಷ್ಟ್ರೀಯ ಹೆದ್ದಾರಿ- 75 ರ ವಿಸ್ತರಣೆ ಕಾಮಗಾರಿ ಆರಂಭ ಗೊಂಡು ವರ್ಷಗಳೇ ಕಳೆದಿದ್ದು ಯಾವಾಗ ಪೂರ್ಣಗೊಳ್ಳುತ್ತದೋ ಎಂದು ಹೆದ್ದಾರಿ ಬದಿಯ ಗ್ರಾಮಗಳ ಜನಕಾಯುತ್ತಿದ್ದಾರೆ.
ಅಪಘಾತ ವಲಯ: ಈ ಸೇತುವೆ ಕಾಮಗಾರಿ ಪೂರ್ಣ ಗೊಳ್ಳದ ಕಾರಣ ಹೆದ್ದಾರಿ ದಾಟುವಾಗ ವಾಹನಗಳಡಿ ಸಿಲುಕಿ ಹಲವು ಮಂದಿ ಅಪಘಾತಕ್ಕೆ ಒಳಗಾಗಿದ್ದಾರೆ. ಬೆಂಗಳೂರು ಹಾಸನದಿಂದ ಸಕಲೇಶಪುರ ಧರ್ಮಸ್ಥಳ ಕುಕ್ಕೆ ಸುಬ್ರಹ್ಮಣ್ಯ ಸೇರಿ ಇತರೆ ಧಾರ್ಮಿಕ ಸ್ಥಳಗಳಿಗೆ
ಸಂಪರ್ಕ ಕಲ್ಪಿಸುವ ರಸ್ತೆ ವಿಸ್ತರಣೆ ಮಾಡಲು 600 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ. ಆದರೆ, ನಿಗದಿಯಂತೆ ಕಾಮಗಾರಿ ನಡೆಯದ ಕಾರಣ ಹೆದ್ದಾರಿ ಬದಿ ಗ್ರಾಮಸ್ಥರು, ವ್ಯಾಪಾರಿಗಳು ವಾಹನ ಸವಾರರು ವ್ಯವಸ್ಥೆಗೆ ಹಿಡಿಶಾಪ ಹಾಕುತ್ತಿದ್ದಾರೆ.
ಅವೈಜ್ಞಾನಿಕ, ಕಳಪೆ ಕಾಮಗಾರಿ: ಈ ಕಾಮಗಾರಿ ನಡೆಯುವ ವೇಳೆ ರಾ.ಹೆದ್ದಾರಿ ಪ್ರಾಧಿಕಾರ ಎಂಜಿನಿ ಯರ್‌ಗಳಾಗಲಿ ಅಥವಾ ಇಲಾಖಾ ಅಧಿಕಾರಿಗಳಾಗಲಿಪರಿಶೀಲನೆ ನಡೆಸಿಲ್ಲ. ರಸ್ತೆ ಪಕ್ಕದ ಸರ್ವೀಸ್ ರಸ್ತೆಗೆ 6 ತಿಂಗಳಿಂದ ಅಡ್ಡಲಾಗಿ ತಡೆಗೊಡೆ ನಿರ್ಮಾಣ ಮಾಡ ಲಾಗುತ್ತಿದೆ. ಅವೈಜ್ಞಾನಿಕ ಕಾಮಗಾರಿಯಿಂದ ಕೂಡಿದ್ದು ಹಲವು ಬಾರಿ ಬಿದ್ದು ಹೋಗಿದೆ. ಮತ್ತೆಕಟ್ಟಲಾಗುತ್ತಿದೆ.
ರಸ್ತೆ ಬಿರುಕು ಆತಂಕ: ಕೆಳ ಸೇತುವೆ ಕಾಮಗಾರಿಗೆ ಆಳವಾಗಿ ಕಾಲುವೆ ತೋಡುತ್ತಿರುವುದರಿಂದ ಸೇತುವೆ ಬಲಭಾಗದಲ್ಲಿ ವಾಹನ ಓಡಾಡಲು ಅನುವು ಮಾಡಿಕೊಳ್ಳಲಾಗಿದೆ. ಆದರೆ, ಈ ಸ್ಥಳದಲ್ಲಿ 10 ರಿಂದ 15 ಅಡಿ ಅಗಲ ರಸ್ತೆ ಬಿರುಕು ಬಿಟ್ಟಿದೆ. ಈ ರಸ್ತೆಯಲ್ಲಿ ಬೆಂ -ಮಂಗಳೂರು ಕಡೆಗೆ ಬಾರಿ ಗಾತ್ರದ ವಾಹನ ಓಡಾಡುವುದರಿಂದ ಯಾವಾಗ ರಸ್ತೆ ಕುಸಿಯುತ್ತದೆಯೋ ಎಂಬ ಆತಂಕ ಎದುರಾಗಿದೆ. ಅವಘಡ ಸಂಭವಿಸುವ ಮುನ್ನ
ಸಂಬಂಧಪಟ್ಟ ಅಧಿಕಾರಿಗಳು ಕ್ರಮಕೈಗೊಳ್ಳಬೇಕಾಗಿದೆ.
ಕುಂಟುತ್ತಾ ಸಾಗಿದ ಸೇತುವೆ ಕಾಮಗಾರಿ
ಆಲೂರು ಪಟ್ಟಣದ ಮಗ್ಗೆ ಮಾರ್ಗವಾಗಿ ಕೆ.ಹೊಸಕೋಟೆಕಡೆಗೆ ಹೋಗುವವರು ಈ ರಾಷ್ಟ್ರೀಯ ಹೆದ್ದಾರಿಯನ್ನು ದಾಟಿಕೊಂಡೆ ಹೋಗಬೇಕಿದೆ. ವಾಹನ ದಟ್ಟಣೆ ತಪ್ಪಿಸಲು ಹೆದ್ದಾರಿ ವಾಹನ ಯಾವುದೇ ಅಡೆ ತಡೆಯಿಲ್ಲದೇ ಸರಾಗವಾಗಿ ಸಂಚರಿಸಲು ಬೈರಾಪುರ ಗ್ರಾಮದಲ್ಲಿ ಹೆದ್ದಾರಿ ಕಾಮಗಾರಿ ಅಡ್ಡಲಾಗಿ ಸೇತುವೆ ನಿರ್ಮಾಣಮಾಡಲಾಗುತ್ತಿದೆ.
ಪ್ರಯಾಣಿಕರು ಹೈರಾಣ
ಸದ್ಯ ಸೇತುವೆ ಕಾಮಗಾರಿಯೇನೋ ಮುಕ್ತಯವಾಗಿ ಆಲೂರಿನಿಂದ ಮಗ್ಗೆ ಮಾರ್ಗವಾಗಿ ಕೆ.ಹೊಸಕೋಟೆ ಗ್ರಾಮದಕಡೆ ವಾಹನಗಳು ಸಂಚರಿಸುತ್ತಿವೆ. ಆದರೆಕೆಳಭಾಗದ ಹೆದ್ದಾರಿ ಕಾಮಗಾರಿ ಮಾತ್ರ ಪೂರ್ಣಗೊಂಡಿಲ್ಲ. ಅದೇಕಾರಣ ಬೆಂಗಳೂರು-ಮಂಗಳೂರು ಹೋಗುವ ಹಾಗೂ ಬರುವ ಭಾರೀ ಗಾತ್ರದ ವಾಹನ ಸೇತುವೆ ಪಕ್ಕದಲ್ಲೇ ಹಾದುಹೋಗುತ್ತವೆ. ಇದರಿಂದ ಸಂಚಾರ ದಟ್ಟಣೆ ಉಂಟಾಗಿ ಸವಾರರು ಹೈರಾಣಾಗಿದ್ದಾರೆ.
ಅಪಘಾತಗಳಿಗೆ ಶಾಸಕ, ಸಂಸದರೇ ನೇರ ಹೊಣೆ
ಹಾಸನ -ಮಂಗಳೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸುಮಾರು3 ವರ್ಷಗಳಿಂದಲೂ ಮಂದಗತಿಯಿಂದ ನಡೆಯುತ್ತಿದೆ. ಇದರಿಂದ ಜನಸಾಮಾನ್ಯರು, ಸವಾರರು, ಅಪಘಾತಗಳಿಂದ ಹೈರಾಣಾಗಿದ್ದಾರೆ. ಆದರೂ, ಸಂಸದ ಪ್ರಜ್ವಲ್ ರೇವಣ್ಣ, ಶಾಸಕ ಎಚ್.ಕೆ.ಕುಮಾರಸ್ವಾಮಿ ಅವರು ಇಲಾಖೆ ಅಧಿಕಾರಿಗಳು, ಗುತ್ತಿಗೆದಾರರಿಗೆ ಬಿಸಿ ಮುಟ್ಟಿಸುವ ಕೆಲಸ ಮಾಡಲಿಲ್ಲ. ಈ ಬಗ್ಗೆ ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ಮಾಡಲಾಗುವುದು ಎಂದು ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಕಣಗಾಲ್ ಮೂರ್ತಿ ಎಚ್ಚರಿಸಿದ್ದಾರೆ
ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿತನ ಗುತ್ತಿಗೆದಾರರ ಮಂದಗತಿ ಕಳಪೆಕಾಮಗಾರಿಯಿಂದ ರಸ್ತೆ ಅಪಘಾತಗಳು ಸಂಭವಿಸುತ್ತಿವೆ. ಮೃತರ ಕುಟುಂಬಕ್ಕೆ ಹೊಣೆಯಾರು?. ನೇರ ಹೊಣೆಯನ್ನು ಸಂಸದರು, ಶಾಸಕರು ಹೊರಬೇಕು.
– ಗಣೇಶ್, ಸ್ನೇಹಜೀವಿ ಬಾರ್ ಅಂಡ್ ರೆಸ್ಟೋರೆಂಟ್ ಮಾಲಿಕ, ಬೈರಾಪುರ
ಹೆದ್ದಾರಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದ್ದು ಹಾಸನ ಹಾಗೂ ಸಕಲೇಶಪುರದ ಭಾಗದಿಂದ ಬರುವ ಸವಾರರು ಹರಸಾಹಸ ಪಡುವಂತಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರಗಳ ವಿರುದ್ಧ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ಮಾಡಲಾಗುತ್ತದೆ.
– ಸಿ.ಡಿ.ಅಶೋಕ್, ಮಾಜಿ ಅಧ್ಯಕ್ಷರು
ಗ್ರಾಮ ಪಂಚಾಯ್ತಿ ಬೈರಾಪುರ
ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿ ಮಂದಗತಿಯಲ್ಲಿ ಸಾಗಿರುವುದರಿಂದ ರಸ್ತೆ ಬದಿ ಬೀದಿ ಬದಿವ್ಯಾಪಾರಿಗಳಿಗೆ ತೊಂದರೆಯಾಗಿದೆ. 2-3ವರ್ಷದಿಂದ ವ್ಯಾಪಾರವಿಲ್ಲದೆ ಹಲವು ಕುಟುಂಬ ಬೀದಿಗೆ ಬಿದ್ದಿವೆ.ಆದರೆ, ಶಾಸಕರು, ಸಂಸದರುಈ ಬಗ್ಗೆಕ್ರಮಕೈಗೊಂಡಿಲ್ಲ.
– ರುದ್ರೇಗೌಡ, ಸದಸ್ಯರು ಗ್ರಾಪಂ ಬೈರಾಪುರ
– ಟಿ.ಕೆ.ಕುಮಾರಸ್ವಾಮಿ ಆಲೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ
Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ
Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ
Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
MUST WATCH
ಹೊಸ ಸೇರ್ಪಡೆ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.