ಹೀಗೂ ಉಂಟು: ಸಮಕಾಲೀನರಲ್ಲಿ ಓರ್ವ ಸಿಎಂ ಆದರೂ ಮತ್ತೊಬ್ಬರಿಗೆ ಸಚಿವ ಸ್ಥಾನವೂ ಸಿಗಲಿಲ್ಲ!
ಬೆಳ್ತಂಗಡಿ ಕ್ಷೇತ್ರ ಅಸ್ತಿತ್ವಕ್ಕೆ ಬಂದಾಗ ಮೊದಲ ಶಾಸಕರಾಗಿ ಡಿ. ರತ್ನವರ್ಮ ಹೆಗ್ಗಡೆ ಚುನಾಯಿತರಾದರು.
Team Udayavani, Apr 4, 2023, 1:41 PM IST
ಬೆಳ್ತಂಗಡಿ: ಇಲ್ಲಿನ ವಿಧಾನಸಭಾ ಕ್ಷೇತ್ರದಲ್ಲಿ 15 ಬಾರಿ ಶಾಸಕತ್ವಕ್ಕೆ ಚುನಾವಣೆ ನಡೆದಿದ್ದು, 8 ಮಂದಿ ಶಾಸಕರಾಗಿದ್ದಾರೆ. 1952ರಲ್ಲಿ ಮದ್ರಾಸ್ ಪ್ರಾಂತ್ಯದ ಭಾಗವಾಗಿ ನಡೆದ ಚುನಾವಣೆಯಲ್ಲಿ ಪುತ್ತೂರು ವಿ.ಸ. ಕ್ಷೇತ್ರದ ಭಾಗವಾಗಿತ್ತು. ಬಳಿಕ 1957ರಲ್ಲಿ ಸ್ವತಂತ್ರ್ಯ ಬೆಳ್ತಂಗಡಿ ಕ್ಷೇತ್ರ ಅಸ್ತಿತ್ವಕ್ಕೆ ಬಂದಾಗ ಮೊದಲ ಶಾಸಕರಾಗಿ ಡಿ. ರತ್ನವರ್ಮ ಹೆಗ್ಗಡೆ ಚುನಾಯಿತರಾದರು.
1962, 67ರಲ್ಲಿ ವೈಕುಂಠ ಬಾಳಿಗ ಶಾಸಕರಾಗಿದ್ದರು. 1968ರಲ್ಲಿ ಕೆ. ಚಿದಾನಂದ ಪೂಜಾರಿ ಶಾಸಕರಾದರು. 1972ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಕೆ. ಸುಬ್ರಹ್ಮಣ್ಯ ಗೌಡ ಆಯ್ಕೆಯಾದರು. 1978ರ ಚುನಾವಣೆಯಲ್ಲಿ ಕೆ. ಗಂಗಾಧರ ಗೌಡ ಕಾಂಗ್ರೆಸ್‌ನಲ್ಲಿ ಗೆಲುವು ಸಾಧಿಸಿದ್ದಲ್ಲದೆ, ಬೆಳ್ತಂಗಡಿ ತಾ|ನಿಂದ ಗೆದ್ದು ಅತೀ ಕಿರಿಯ ಸಚಿವರಾಗಿ ಅನುಭವ ಹೊಂದಿದ ಏಕಮಾತ್ರ ಶಾಸಕರು ಎಂಬ ದಾಖಲೆ ಅವರ ಹೆಸರಲ್ಲೇ ಉಳಿದಿದೆ.
ಅಂದು 28ನೇ ವಯಸ್ಸಿನಲ್ಲಿ ಅವರು ಯುವಜನ ಸೇವೆ ಮತ್ತು ಕ್ರೀಡಾ ಸಚಿವರಾಗಿದ್ದರು. 1989ರಲ್ಲಿ ಮತ್ತೆ ಸ್ಪರ್ಧಿಸಿದ ಕೆ.ಗಂಗಾಧರ ಗೌಡರು ಎರಡನೇ ಬಾರಿಗೆ ಶಾಸಕರಾದರು. ಬಳಿಕ ಬೆಳ್ತಂಗಡಿಯಲ್ಲಿ ಐದು ಬಾರಿ ಶಾಸಕರಾಗಿ ಇತಿಹಾಸ ನಿರ್ಮಿಸಿದವರು ಕೆ. ವಸಂತ ಬಂಗೇರ. 1983ರಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದು ಜಯಗಳಿಸಿದ್ದರು. 1985ರಲ್ಲಿ ಮತ್ತೆ ಚುನಾಯಿತರಾದರು. ಅಂದು ರಾಜ್ಯದಲ್ಲಿ ಬಿಜೆಪಿ ಪಕ್ಷದಿಂದ ಗೆದ್ದ ಇಬ್ಬರಲ್ಲಿ ಒಬ್ಬರು ಕೆ. ವಸಂತ ಬಂಗೇರರು
ಮತ್ತೊಬ್ಬರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು. ಸಮಕಾಲೀನರಾಗಿರುವ ಇವರಲ್ಲಿ ಯಡಿಯೂರಪ್ಪ ಹಲವು ಬಾರಿ ಶಾಸಕರಾಗಿ, ಮುಖ್ಯಮಂತ್ರಿ ಸ್ಥಾನವನ್ನೂ ಅಲಂಕರಿಸಿದರೆ, ಬಂಗೇರ ಅವರು ಬಿಜೆಪಿ, ಜನತಾದಳ, ಕಾಂಗ್ರೆಸ್‌ನಿಂದ ಸ್ಪರ್ಧಿಸಿದರೂ ಸಚಿವರಾಗುವ ಕನಸು ಈಡೇರಿಲ್ಲ.
– ಚೈತ್ರೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಸಿ.ಟಿ.ರವಿ ಮನಸ್ಸಲ್ಲೇ ಕೊಳೆ ತುಂಬಿದೆ, ಫೆನಾಯಿಲ್ ಹಾಕಿ ತೊಳೆದುಕೊಳ್ಳಲಿ: ಸಚಿವೆ ಲಕ್ಷ್ಮೀ
Bantwal: ತುಂಬೆ ಜಂಕ್ಷನ್; ಸರಣಿ ಅಪಘಾತ
Kasaragod ಅಪರಾಧ ಸುದ್ದಿಗಳು: ವಿದ್ಯಾರ್ಥಿನಿಯರಿಗೆ ಕಿರುಕುಳ; ಕೇಸು ದಾಖಲು
Brahmavar: ಆರೂರು; ಬೆಂಕಿ ತಗಲಿ ಗಾಯಗೊಂಡಿದ್ದ ಮಹಿಳೆ ಸಾವು
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.