ಮಧ್ಯಪ್ರದೇಶದಲ್ಲೂ ಹಿಜಾಬ್ ಬ್ಯಾನ್?
Team Udayavani, Feb 8, 2022, 10:00 PM IST
ಭೋಪಾಲ್: ಕರ್ನಾಟಕದಲ್ಲಿ ಆರಂಭವಾದ ಹಿಜಾಬ್ ಗಲಾಟೆ ನೆರೆ ರಾಜ್ಯಗಳಿಗೂ ಹಬ್ಬಲಾರಂಭಿಸಿದ್ದು, ಇದೀಗ ಮಧ್ಯಪ್ರದೇಶದ ಶಾಲೆಗಳಲ್ಲೂ ಹಿಜಾಬ್ ನಿಷೇಧಿಸುವ ಚಿಂತನೆ ಆರಂಭವಾಗಿದೆ.
ಈ ಬಗ್ಗೆ ಶಿಕ್ಷಣ ಸಚಿವ ಇಂದರ್ ಸಿಂಗ್ ಪರ್ಮಾರ್ ಮಂಗಳವಾರ ಮಾತನಾಡಿದ್ದು, “ಶಾಲೆಗಳಲ್ಲಿ ಡ್ರೆಸ್ ಕೋಡ್ ಮಾಡಲಾಗುವುದು. ಹಿಜಾಬ್ ಸಮವಸ್ತ್ರದ ಭಾಗವಲ್ಲದ್ದರಿಂದ ಅದನ್ನು ನಿಷೇಧಿಸಲಾಗುವುದು’ ಎಂದಿದ್ದಾರೆ.
“ಶಾಲೆಗಳಲ್ಲಿ ವಸ್ತ್ರ ಸಂಹಿತೆ ತರುವ ಬಗ್ಗೆ ಶಿಕ್ಷಣ ಇಲಾಖೆ ಕೆಲಸ ಮಾಡುತ್ತಿದೆ. ಮುಂದಿನ ಶೈಕ್ಷಣಿಕ ವರ್ಷದಿಂದಲೇ ಅದು ಆರಂಭವಾಗಲಿದೆ. ಸಮವಸ್ತ್ರದ ಭಾಗವಲ್ಲದ ಹಿಜಾಬ್ಗ ನಿಷೇಧವಿರಲಿದೆ’ ಎಂದು ಸಚಿವರು ಹೇಳಿದ್ದಾರೆ.
ಇದನ್ನೂ ಓದಿ:ಅತಿಥಿ ಶಿಕ್ಷಕನ ಮೇಲೆ ಹಲ್ಲೆ : ಫೆ. 9 ರಂದು ರಬಕವಿ ಬನಹಟ್ಟಿ ಬಂದ್ಗೆ ಕರೆ
ಪುದುಚೇರಿಯಲ್ಲಿ ಚರ್ಚೆ:
ಪುದುಚೇರಿಯ ಅರಿಯಾಂಕುಪ್ಪಮ್ನ ಶಾಲೆಯೊಂದರಲ್ಲಿ ಶಿಕ್ಷಕರೊಬ್ಬರು ಹಿಜಾಬ್ ಧರಿಸಿದ್ದ ವಿದ್ಯಾರ್ಥಿನಿಗೆ ತರಗತಿಗೆ ಬರಲು ತಡೆದಿದ್ದಾರೆ ಎನ್ನುವ ದೂರು ಶಿಕ್ಷಣ ಇಲಾಖೆಗೆ ಬಂದಿದೆ. ಆ ಹಿನ್ನೆಲೆ ಶಾಲಾ ಶಿಕ್ಷಣ ನಿರ್ದೇಶನಾಲಯವು ತನಿಖೆ ನಡೆಸಲು ಶಾಲೆಯ ಮುಖ್ಯಸ್ಥರಿಗೆ ಆದೇಶಿಸಿದೆ. ಆ ವರದಿಯನ್ನಾಧರಿಸಿ ಮುಂದಿನ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಲಾಗಿದೆ.
ಸಮವಸ್ತ್ರ ಧರಿಸುವ ಕುರಿತು ಆಯಾ ಶಾಲೆ-ಕಾಲೇಜುಗಳು ಮಾರ್ಗಸೂಚಿ ಹೊರಡಿಸಿರುತ್ತವೆ. ಅವುಗಳನ್ನು ಎಲ್ಲರೂ ಪಾಲಿಸಬೇಕು. ಅದರಲ್ಲಿ ಗೊಂದಲವೇನಿದೆ? ವಸ್ತ್ರಸಂಹಿತೆ ಪಾಲಿಸುತ್ತೇವೆ ಎಂದು ವಿದ್ಯಾರ್ಥಿಗಳು ಮತ್ತು ಹೆತ್ತವರು ಲಿಖಿತ ದಾಖಲೆಗೂ ಸಹಿ ಹಾಕಿದ್ದಾರೆ.
– ಪ್ರಹ್ಲಾದ್ ಜೋಷಿ, ಕೇಂದ್ರ ಸಂಸದೀಯ ವ್ಯವ ಹಾರಗಳ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
MUST WATCH
ಹೊಸ ಸೇರ್ಪಡೆ
IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
ಬೆಳಗಾವಿ-ಐಫೋನ್ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.