![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, May 17, 2022, 3:28 PM IST
ಕನಕಗಿರಿ: ಕಳೆದ ನಾಲ್ಕೈದು ದಿನಗಳಿಂದ ನಾಪತ್ತೆಯಾಗಿದ್ದ ಅನ್ಯ ಧರ್ಮದ ಇಬ್ಬರು ಪ್ರೇಮಿಗಳು ವಿರೋಧದ ನಡುವೆಯೂ ವಿವಾಹವಾಗಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.
ಸ್ಥಳೀಯ ಹಿಂದೂ ಸಮಜದ ಯುವಕ ಕನಕರೆಡ್ಡಿ ಹಾಗೂ ಮುಸ್ಲಿಂ ಸಮುದಾಯದ ಯುವತಿ ದಿಲ್ ಶಾದ್ ಕೆಲ ತಿಂಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು.
ಮೇ 10ರಂದು ಇಬ್ಬರು ದೇವಸ್ಥಾನವೊಂದರಲ್ಲಿ ಮದುವೆ ಆಗಿರುವ ಕುರಿತ ಸುದ್ದಿ ಸ್ಥಳೀಯ ಯುವಕರ ವ್ಯಾಟ್ಸ್‌ಆ್ಯಪ್ ಸ್ಟೇಟಸ್‌ಗಳಲ್ಲಿ ಹರಿದಾಡುತ್ತಿತ್ತು. ಅದನ್ನು ಅರಿತ ಯುವತಿಯ ಪಾಲಕರು ಹಾಗೂ ಸಮುದಾಯದ ಜನರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಯುವಕನ ವಿರುದ್ಧ ದೂರು ದಾಖಲು ಮಾಡುವಂತೆ ಒತ್ತಾಯಿಸಿದ್ದರು. ಶನಿವಾರ ತಡರಾತ್ರಿ ಯುವಕ, ಯುವತಿ ಠಾಣೆಗೆ ಆಗಮಿಸಿದ್ದರು.
ಈ ವಿಷಯ ಅರಿತ ಎರಡು ಸಮಾಜದ ಕೆಲ ಯುವಕರು ಹಾಗೂ ಹಿರಿಯರು ಠಾಣೆ ಮುಂದೆ ಜಮಾಯಿಸಿದ್ದರು. ಪೋಷಕರ ಅಳಲು: ಯುವತಿಯ ಕೊನೆಯ ನಿರ್ಧಾರಕ್ಕೆ ಕಾದು ಕುಳಿತ್ತಿದ್ದ ಪೊಲೀಸರು ಕೊನೆಯದಾಗಿ ಯುವತಿಯ ಮನವೊಲಿಸಲು ಪ್ರತ್ಯೇಕ ಕೊಠಡಿಯಲ್ಲಿ ಪೊಲೀಸರ ಸುರಕ್ಷತೆಯಲ್ಲಿ ಪಾಲಕರಿಗೆ ಕೆಲ ಗಂಟೆಗಳ ಕಾಲ ಮಾತನಾಡಲು ಅವಕಾಶ ನೀಡಿದರು.
ಹೆತ್ತವರು ಹಾಗೂ ಸಮುದಾಯದ ಪ್ರಮುಖರು ಸಾಕಷ್ಟು ಸಮಯ ಚರ್ಚಿಸಿ, ಅತ್ತು ಕಣ್ಣೀರು ಸುರಿಸಿದರೂ ಯುವತಿ ಮಾತ್ರ ಪ್ರೀತಿಸಿದವನನ್ನೇ ವಿವಾಹವಾಗುವೆ ಎನ್ನುವ ಮಾತೇ ಆಡಿದಳು. ಮಧ್ಯರಾತ್ರಿ 2 ಗಂಟೆವರೆಗೆ ಮಾತುಕತೆ ನಡೆಸಲಾಯಿತು. ಹಾಗೆಯೇ ಮಹಿಳಾ ಸಾಂತ್ವನ ಕೇಂದ್ರಕ್ಕೆ ಯುವಕ- ಯುವತಿಯನ್ನು ಕರೆದೊಯ್ಯಲಾಯಿತು. ರವಿವಾರ ಬೆಳಗ್ಗೆ ತೋಟವೊಂದರಲ್ಲಿ ಸ್ಥಳಾಂತರಿಸಲಾಯಿತು.
ಅಲ್ಲಿಯು ಎರಡು ಸಮಾಜದ ಜನರು ಹೊರಟಾಗ ಅಲ್ಲಿಂದ ತಾವರಗೇರಾ ಪೊಲೀಸ್ ಠಾಣೆಗೆ ಕರೆದೊಯ್ದರು. ಕೊನೆಗೆ ಯುವತಿಯ ಜತೆ ಮಾತನಾಡಲು ಪಾಲಕರಿಗೆ ಅವಕಾಶ ನೀಡಲಾಗಿತ್ತು. ಆದರೆ ಪಾಲಕರ ಮನವೊಲಿಕೆ ಫಲಕಾರಿಯಾಗದೇ ಯುವತಿ ಯುವಕನ ಮನೆಗೆ ಹೋದಳು.
Gangavati: 15 ದಿನದಲ್ಲೇ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು…
Gangavathi: ಬ್ರಹ್ಮಾವರ ಮೂಲದ ದೇಗುಲ ಕಟ್ಟಡ ಎಂಜಿನಿಯರ್ ಕೊಪ್ಪಳದಲ್ಲಿ ಆತ್ಮಹ*ತ್ಯೆ
Tawargera: ಲಾರಿ-ಬುಲೆರೋ ವಾಹನ ಡಿಕ್ಕಿ; ಇಬ್ಬರು ಸಾವು
Kanakagiri: ಬ್ಯಾಂಕಿನಲ್ಲಿಯೇ ವೃದ್ಧ ಗ್ರಾಹಕನ ಹಣ ಎಗರಿಸಿದ ಖದೀಮರು
Koppal: ರಾಜ್ಯದಲ್ಲಿ ನಾವು ಸ್ಟ್ರಾಂಗ್ ಇದ್ದಿದ್ದರಿಂದ ಇವಿಎಂ ಕಿತಾಪತಿ ನಡೆದಿಲ್ಲ; ತಂಗಡಗಿ
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.