ಸೊಂಟ, ಕಾಲು ಸುಭದ್ರ
Team Udayavani, Jun 2, 2020, 4:54 AM IST
ಯೋಗದಲ್ಲಿ, ಪಶ್ಚಿಮೋತ್ತಾಸನ ಬಹಳ ಮುಖ್ಯ. ಏಕಕಾಲಕ್ಕೆ ಸೊಂಟ, ಬೆನ್ನು ಹಾಗೂ ಶಿರದ ಭಾಗವನ್ನು ಕ್ರಿಯಾಶೀಲವಾಗಿಡುವ ಆಸನವಿದು. ಈ ಆಸನ ಹಾಕುವಾಗ ಉಸಿರನ್ನು ಎಳೆದುಕೊಳ್ಳುವ, ನಂತರ ಬಿಡುವ ಕ್ರಮವನ್ನು ಸರಿಯಾಗಿ ಹೃದಯರಾಗ ತಿಳಿದುಕೊಳ್ಳಬೇಕು.
ಮೊದಲು ಕೈಯನ್ನು ಭುಜದ ಭಾಗಕ್ಕಿಂತ ಸ್ವಲ್ಪ ಮೇಲೆತ್ತಿ. ನಂತರ ಸೊಂಟವನ್ನು ಮುಂದಕ್ಕೆ ಬಾಗಿಸಿ, ಕಾಲಿನ ಬೆರಳು, ಪಾದವನ್ನು ಹಿಡಿದುಕೊಳ್ಳಬೇಕು. ಮುಂದಕ್ಕೆ ಬಾಗುವಾಗ ಉಸಿರನ್ನು ಬಿಡುತ್ತಾ ಹೊಟ್ಟೆ ಖಾಲಿ ಮಾಡಿಕೊಳ್ಳಬೇಕು. ಪಾದವನ್ನು ಮುಟ್ಟುವ ಪ್ರಕ್ರಿಯೆ ಇದೆಯಲ್ಲ, ಇದು ಬಹಳ ಕಷ್ಟದ್ದು. ಹಾಗಾಗಿ, ಆರಂಭದಲ್ಲಿ ಪಾದ ಮುಟ್ಟಲು ಆಗದೇ ಇದ್ದರೆ, ಮಂಡಿಯನ್ನು ಎರಡೂ ಕೈಯಲ್ಲಿ ಹಿಡಿಯಬಹುದು. ಈ ರೀತಿ ಮಾಡುವಾಗ ಮೊಣಕೈ ನೇರವಾಗಿರಬೇಕು. ಬೆನ್ನು, ಸೊಂಟ ನೋವು ಇರುವಾಗ ಈ ಆಸನ ಮಾಡಬಾರದು.
ಇದೇ ರೀತಿ ವಕ್ರಾಸನ ಮಾಡುವುದರಿಂದ, ಸೊಂಟ ಹಾಗೂ ಬೆನ್ನು ನೋವಿನಿಂದ ಪಾರಾಗಬಹುದು. ಮೊದಲು ಪದ್ಮಾಸನದಲ್ಲಿ ಕುಳಿತು ಉಸಿರನ್ನು ಎಳೆದು, ಬಿಡುವ ಕ್ರಿಯೆ ಮಾಡಿ. ಆನಂತರ, ಎರಡೂ ಕಾಲುಗಳನ್ನು ಮುಂದೆ ಚಾಚಿ ಬಲಗೈಯನ್ನು ಬೆನ್ನಹಿಂದೆ ಇಡಿ. ಬಲಗಾಲನ್ನು ಎಡಗಾಲ ತೊಡೆಯ ಪಕ್ಕದಲ್ಲಿ ತಂದು ನಿಲ್ಲಿಸಿ. ಕತ್ತನ್ನು ಬಲಭಾಗಕ್ಕೆ ತಿರುಗಿಸಿ. ನಂತರ ಎಡಗೈಯನ್ನು ಬಲಗಾಲಿನ ಪಕ್ಕದಲ್ಲಿ ಊರಿ. ಎಷ್ಟು ಹೊತ್ತು ಸಾಧ್ಯವೋ ಅಷ್ಟು ಹೊತ್ತು ಹೀಗೇ ಕುಳಿತಿರಿ. ಹೀಗೆ ಮಾಡಿದರೆ, ಕೈ, ಕಾಲು, ಸೊಂಟದ ಭಾಗದಲ್ಲಿ ರಕ್ತದ ಚಲನೆ ಚೆನ್ನಾಗಿ ಆಗುತ್ತದೆ. ಬೆನ್ನಹುರಿ ಬಲವಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.