ಲಾಕ್‌ಡೌನ್‌ ಮಧ್ಯೆಯೂ ಇವರ ಬೆಳೆಗೆ ಬೆಲೆ ಸಿಕ್ಕಿತು!

ಕೈಹಿಡಿದ ಗ್ರಾಹಕರು; ರೈತಸೇತುವಿನಿಂದಾಗಿ ನಿರುಮ್ಮಳ

Team Udayavani, Apr 16, 2020, 6:36 AM IST

ಲಾಕ್‌ಡೌನ್‌ ಮಧ್ಯೆಯೂ ಇವರ ಬೆಳೆಗೆ ಬೆಲೆ ಸಿಕ್ಕಿತು!

ಮಂಗಳೂರು/ ಉಡುಪಿ: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ರೈತರು ಬೆಳೆದ ಬೆಳೆಗಳ ಮಾರಾಟಕ್ಕೆ ಅನುಕೂಲವಾಗುವಂತೆ ರೈತ ಹಾಗೂ ಗ್ರಾಹಕರ ನಡುವೆ ನೇರ ಸಂಪರ್ಕ ಕಲ್ಪಿಸಲು “ಉದಯವಾಣಿ’ ಆರಂಭಿಸಿದ “ರೈತಸೇತು’ ಅಂಕಣಕ್ಕೆ ಸಾಕಷ್ಟು ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಈ ಅಂಕಣವು ಹಲವು ರೀತಿಯಲ್ಲಿ ಬೆಳೆ ಗಾರರಿಗೂ ಮತ್ತು ಗ್ರಾಹಕರಿಗೂ ಸಂಪರ್ಕ ಕಲ್ಪಿಸುತ್ತಿದೆ. ಇದುವರೆಗೆ ಬೆಳೆಗಾರ ನಿರ್ದಿಷ್ಟ ಗ್ರಾಹಕ, ವ್ಯಾಪಾರಿಯನ್ನೇ ಅವಲಂಬಿಸಬೇಕಿತ್ತು. ಆದರೆ ಈಗ ಸಾಕಷ್ಟು ಗ್ರಾಹಕರು ದೂರವಾಣಿ ಕರೆ ಮಾಡುತ್ತಿರುವುದರಿಂದ ರೈತರಿಗೆ ಆಯ್ಕೆಗೆ ಅವಕಾಶ ಸಿಗುತ್ತಿದೆ.

ಮಂಗಳೂರಿನ ಮೇರಿಹಿಲ್‌ ಸಚಿನ್‌ ಖಾಸಗಿ ಕಂಪೆನಿ ಉದ್ಯೋಗಿ. ತಮ್ಮ ಮನೆಯ ಸುತ್ತಲೂ 60 ತೆಂಗಿನಮರಗಳನ್ನು ಹಾಕಿಕೊಂಡು, ಪ್ರತಿ ವರ್ಷವೂ ತೆಂಗಿನಕಾಯಿಗಳನ್ನು ಹತ್ತಿರದ ಮಾರುಕಟ್ಟೆಯಲ್ಲಿ ಮಾರುತ್ತಿದ್ದರು. ಈ ಬಾರಿ ಲಾಕ್‌ಡೌನ್‌ ಕಾರಣದಿಂದ ಅದು ಸಾಧ್ಯವಾಗಲಿಲ್ಲ. ಸುಮಾರು 1,600 ತೆಂಗಿನ ಕಾಯಿಗಳನ್ನು ಮಾರುವ ಬಗ್ಗೆ ಯೋಚಿಸುತ್ತಿದ್ದರು. ಈ ಸಂದರ್ಭದಲ್ಲಿ ರೈತಸೇತುವಿಗೆ ಮಾಹಿತಿ ಕಳಿಸಿ ಎ. 9 ರಂದು ಪ್ರಕಟವಾಯಿತು. ಆ ಬೆನ್ನಲ್ಲೆ ಹಲವಾರು ಮಂದಿ ದೂರವಾಣಿ ಕರೆ ಮಾಡಿ ಚರ್ಚಿಸಿ ಖರೀದಿಸಿ ದರು. ಇದುವರೆಗೆ ಸುಮಾರು 800ಕ್ಕೂ ಹೆಚ್ಚು ತೆಂಗಿನಕಾಯಿಗಳು ಮಾರಾಟವಾಗಿವೆ.

ಮಾರಾಟ ಸುಲಭ
ಸಚಿನ್‌ ಅವರಿಗೆ ಮಾಹಿತಿಗಾಗಿ ವಿವಿಧ ಭಾಗಗಳಿಂದ ಕರೆಗಳು ಬರುತ್ತಿವೆ. ಅಲ್ಲದೆ, ಹತ್ತಿರದ ಮನೆ ಮಂದಿಯೂ ತೆಂಗಿನಕಾಯಿ ಖರೀದಿ ಮಾಡುತ್ತಿದ್ದಾರೆ. ತೆಂಗಿನಕಾಯಿಯನ್ನು ಗ್ರಾಹಕರ ಆಯ್ಕೆಯಂತೆ ಸುಲಿದು ಮತ್ತು ಸುಲಿಯದೆ ನೀಡುತ್ತಿದ್ದಾರೆ.

ಕೈಹಿಡಿದ ಗ್ರಾಹಕರು
ಇದೇ ರೀತಿಯ ಅನುಭವ ಉಡುಪಿ ಕಿನ್ನಿಮೂಲ್ಕಿಯ ಎ. ಡಿ’ಸಿಲ್ವಾ ಅವರದ್ದು. ತಮ್ಮ 25 ಸೆಂಟ್ಸ್‌ ಜಾಗದಲ್ಲಿ 30ರಿಂದ 40 ತೆಂಗಿನ ಮರ ಗಳನ್ನು ಹಾಕಿಕೊಂಡಿರುವ ಇವರು, ನಗರದ ಸಗಟು ವ್ಯಾಪಾರಿಗಳಿಗೆ ಮಾರುತ್ತಿದ್ದರು. ಲಾಕ್‌ಡೌನ್‌ ಕಾರಣದಿಂದ ಈ ಬಾರಿ ಅದು ಸಾಧ್ಯವಾಗಲಿಲ್ಲ. ಸುಮಾರು 400 ತೆಂಗಿನಕಾಯಿಗಳನ್ನು ಮಾರಾಟ ಮಾಡಲು ಮಾರ್ಗ ಹುಡುಕುತ್ತಿದ್ದರು. ಯಾವುದಕ್ಕೂ ಇರಲಿ ಎಂದು ರೈತಸೇತು ಅಂಕಣಕ್ಕೆ ಮಾಹಿತಿ ಕಳಿಸಿದರು. ಅದು ಎ. 12ರಂದು ಪ್ರಕಟವಾಯಿತು. ಪ್ರಕಟವಾದ ಬೆನ್ನಲ್ಲೇ ಹಲವಾರು ದೂರವಾಣಿ ಕರೆಗಳು ಬಂದವು. ಹಿರಿಯಡ್ಕದ ಒರ್ವ ಗ್ರಾಹಕರು ಎಲ್ಲ ತೆಂಗಿನಕಾಯಿಗಳನ್ನು ಖರೀದಿಸಿದ್ದಾರೆ.

ಅನುಕೂಲವಾಗಿದೆ
ನನಗೆ ಇದರಿಂದ ಅನುಕೂಲವಾಗಿದೆ. ಹಿಂದಿಗಿಂತ ಹೆಚ್ಚಿನ ದರ ಸಿಕ್ಕಿದೆ. 50ಕ್ಕೂ ಹೆಚ್ಚು ಮಂದಿ ಕರೆಮಾಡಿ ವಿಚಾರಿಸಿದ್ದರು. ರೈತಸೇತು ಅಂಕಣದಿಂದ ತುಂಬಾ ಸಹಾಯವಾಗಿದ್ದು, ಬೆಳೆಗಾರರು ತಮ್ಮ ಬೆಳೆಯ ಮೊತ್ತವನ್ನು ನಿಗದಿ ಮಾಡಲು ಸಾಧ್ಯವಾಗಲಿದೆ.
-ಎ. ಡಿ’ಸಿಲ್ವಾ ತೆಂಗು ಬೆಳೆಗಾರರು

ಮತ್ತಷ್ಟು ಬೇಡಿಕೆ
ತೆಂಗಿನಕಾಯಿಗಳನ್ನು ಹೇಗೆ ಮಾರಾಟ ಮಾಡುವುದೆಂಬ ಯೋಚನೆಯಲ್ಲಿದ್ದೆ. ಅದು ಬಗೆಹರಿದಿದೆ. ರೈತಸೇತು ಅಂಕಣದಿಂದ ಅನುಕೂಲವಾಗಿದ್ದು, ಶೇ. 50ರಷ್ಟು ತೆಂಗಿನಕಾಯಿ ಮಾರಾಟವಾಗಿದೆ. ಮತ್ತಷ್ಟು ಬೇಡಿಕೆ ಬರುತ್ತಿದೆ.
-ಸಚಿನ್‌ ತೆಂಗು ಬೆಳೆಗಾರರು

ನಿಮ್ಮ ಬೆಳೆ ಮಾಹಿತಿ ನೀಡಿ
ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸಾವಿರಾರು ರೈತರು ತಾವು ಬೆಳೆದ ತರಕಾರಿ, ಹಣ್ಣು ಹಾಗೂ ಆಹಾರ ಬೆಳೆಗಳನ್ನು ಮಾರಲಾಗದೆ ಸಂಕಷ್ಟದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಉದಯವಾಣಿಯು ಗ್ರಾಹಕರೊಂದಿಗೆ ಸಂಪರ್ಕ ಕಲ್ಪಿಸಲು ಮುಂದಾಗಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ರೈತರು, ತರಕಾರಿ ಬೆಳೆಗಾರರು ಈ ಅಂಕಣದ ಪ್ರಯೋಜನ ಪಡೆಯಬಹುದು. ತಮ್ಮ ಬೆಳೆ ಹಾಗೂ ಸಂಪರ್ಕ ಸಂಖ್ಯೆಯನ್ನು ನಮ್ಮ ವಾಟ್ಸಪ್‌ಗೆ ಕಳಿಸಿದರೆ ಪ್ರಕಟಿಸಲಾಗುವುದು. ನೀಡಬೇಕಾದ ಮಾಹಿತಿ: ಹೆಸರು, ಉತ್ಪನ್ನದ ಹೆಸರು, ಲಭ್ಯವಿರುವ ಬೆಳೆ ಪ್ರಮಾಣ, ಊರಿನ ಹೆಸರು, ಸಂಪರ್ಕ ಸಂಖ್ಯೆ, ಉತ್ಪನ್ನದ ಬೆಲೆ.

ವಾಟ್ಸಪ್‌ ಸಂಖ್ಯೆ : 76187 74529

ಟಾಪ್ ನ್ಯೂಸ್

Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?

Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?

Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ

Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ

Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ

Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ

ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ

ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

Cancer ಔಷಧವನ್ನೇ ಡ್ರಗ್‌ ಆಗಿ ಬಳಸುವ ಯುವಕರು: ಅಶೋಕ್‌

Cancer ಔಷಧವನ್ನೇ ಡ್ರಗ್‌ ಆಗಿ ಬಳಸುವ ಯುವಕರು: ಅಶೋಕ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10(1

Mannagudda: ಗುಜರಿ ಕಾರುಗಳ ಪಾರ್ಕಿಂಗ್‌; ಸಾರ್ವಜನಿಕರಿಗೆ ಸಮಸ್ಯೆ

9(1

Mangaluru: ರಸ್ತೆ, ಸರ್ಕಲ್‌ಗೆ ಸ್ಥಳೀಯ ನಾಮಕರಣ ಪ್ರಸ್ತಾವ

6

Mangaluru; ಕೆಲರೈ- ವಾಮಂಜೂರು ಸಂಪರ್ಕ ರಸ್ತೆ ಅವ್ಯವಸ್ಥೆ

5

Mangaluru: ವೆನ್ಲಾಕ್‌ನಲ್ಲಿ  ದೊರೆಯಲಿದೆ ಕಿಮೋಥೆರಪಿ

4(1

Ullal: ತೊಕ್ಕೊಟ್ಟು ಜಂಕ್ಷನ್‌ – ಭಟ್ನಗರ ರಸ್ತೆಯಲ್ಲಿ ಉಲ್ಟಾ ಸಂಚಾರ!

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?

Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?

Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ

Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ

Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ

Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ

ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ

ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.