ಆ್ಯತ್ಲೀಟ್‌ಗಳಿಗೆ ಹೊಡೆತ: ಕೋಚ್ ರಾಧಾಕೃಷ್ಣನ್
8 ತಿಂಗಳ ಒಲಿಂಪಿಕ್ಸ್ ಅರ್ಹತಾ ಅವಧಿ ಅಮಾನತು ನಿರ್ಧಾರ
Team Udayavani, Apr 9, 2020, 6:02 AM IST
ಹೊಸದಿಲ್ಲಿ: ಮುಂದಿನ ನವೆಂಬರ್ ತಿಂಗಳ ಅಂತ್ಯದವರೆಗೆ ಒಲಿಂಪಿಕ್ಸ್ ಅರ್ಹತಾ ಅವಧಿಯನ್ನು ವಿಶ್ವ ಆ್ಯತ್ಲೆಟಿಕ್ಸ್ ಅಮಾನತುಗೊಳಿಸುವ ನಿರ್ಧಾರ ಮಾಡಿರುವುದರಿಂದ ಭಾರತೀಯ ಟ್ರ್ಯಾಕ್ ಆ್ಯಂಡ್ ಫೀಲ್ಡ್ ಸ್ಪರ್ಧಿಗಳಿಗೆ ಬಲುದೊಡ್ಡ ಹೊಡೆತವಾಗಿದೆ ಎಂದು ಭಾರತೀಯ ತಂಡದ ಉಪ ಮುಖ್ಯ ಕೋಚ್ ರಾಧಾಕೃಷ್ಣನ್ ನಾಯರ್ ಹೇಳಿದ್ದಾರೆ.
ಆ್ಯತ್ಲೀಟ್ಸ್ ಆಯೋಗ, ಕಾಂಟಿನೆಂಟಲ್ ಸಂಸ್ಥೆಗಳ ಅಧ್ಯಕ್ಷರು ಮತ್ತು ಕೌನ್ಸಿಲ್‌ನ ಸಲಹೆ ಪಡೆದ ಬಳಿಕ ವಿಶ್ವ ಆ್ಯತ್ಲೆಟಿಕ್ಸ್ ಎ.6ರಿಂದ ನ. 30ರ ನಡುವಣ ಅವಧಿಯನ್ನು ಅಮಾನತುಗೊಳಿಸಲು ನಿರ್ಧರಿಸಿದೆ. ಈ ಅವಧಿಯ ನಡುವೆ ಜರಗುವ ಯಾವುದೇ ಸ್ಪರ್ಧೆಗಳ ಫಲಿತಾಂಶವನ್ನು ಟೋಕಿಯೊ ಒಲಿಂಪಿಕ್ಸ್‌ನ ಪ್ರವೇಶ ಗುಣಮಟ್ಟ ಅಥವಾ ವಿಶ್ವ ರ್‍ಯಾಂಕಿಂಗಿಗೆ ಪರಿಗಣಿಸುವಂತಿಲ್ಲ ಮತ್ತು ಈ ಸಂಬಂಧ ಯಾವುದೇ ಪ್ರಕಟನೆಯನ್ನು ಕೂಡ ಹೊರಡಿಸುವಂತಿಲ್ಲ.
ಅರ್ಹತೆ ಗಳಿದವರಿಗೆ ಚಿಂತೆಯಿಲ್ಲ
ಇದೇ ವೇಳೆ 2021ರ ಒಲಿಂಪಿಕ್ಸ್‌ಗೆ ಈಗಾಗಲೇ ಅರ್ಹತೆ ಗಳಿಸಿದ ಸುಮಾರು 6,500 ಆ್ಯತ್ಲೀಟ್‌ಗಳು ಇಂಟರ್‌ನ್ಯಾಶನಲ್ ಒಲಿಂಪಿಕ್ ಸಮಿತಿ (ಐಒಸಿ) ಪುನರ್ ಪ್ರಕಟಿಸಿದ ಅರ್ಹತಾ ನಿಯಮಗಳ ಅಡಿಯಲ್ಲಿ ಇದ್ದಾರೆ. ಇನ್ನುಳಿದವರು ಗೇಮ್ಸ್‌ಗೆ ಹೇಗೆ ಅರ್ಹತೆ ಗಳಿಸಬೇಕೆಂಬ ಮಾರ್ಗಸೂಚಿಯನ್ನು ಇದೀಗ ಐಒಸಿ ಪ್ರಕಟಿಸಿದೆ. 2021ರ ಜೂ. 29 ಅರ್ಹತೆ ಗಳಿಸಲು ಕೊನೆಯ ದಿನವೆಂದು ತಿಳಿಸಿದೆ. ಟೋಕಿಯೊ ಒಲಿಂಪಿಕ್ಸ್ 2021ರ ಜುಲೈ 23ರಂದು ಆರಂಭವಾಗಿ ಆ. 8ರಂದು ಅಂತ್ಯಗೊಳ್ಳಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Hebri: ಎನ್‌ಕೌಂಟರ್ ತನಿಖೆ ನಡೆಸುವ ಹೆಬ್ರಿ ಪೊಲೀಸ್ ಠಾಣೆ ಇಲ್ಲಗಳ ಆಗರ!
CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್.ಅಶೋಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.