Hockey: ಜೂನಿಯರ್ ಏಷ್ಯಾ ಕಪ್ ಹಾಕಿ: ಭಾರತ-ಪಾಕಿಸ್ಥಾನ ಫೈನಲ್
ಸೆಮಿಫೈನಲ್‌ನಲ್ಲಿ 3-1 ಅಂತರದಿಂದ ಮಲೇಷ್ಯಾವನ್ನು ಮಣಿಸಿದ ಭಾರತ
Team Udayavani, Dec 4, 2024, 1:18 AM IST
ಮಸ್ಕತ್: ಬುಧವಾರ ರಾತ್ರಿ ನಡೆಯಲಿರುವ ಜೂನಿಯರ್ (ಅಂಡರ್-21) ಏಷ್ಯಾ ಕಪ್ ಪುರುಷರ ಹಾಕಿ ಪಂದ್ಯಾವಳಿಯ ಫೈನಲ್‌ನಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ- ಪಾಕಿಸ್ಥಾನ ಮುಖಾಮುಖಿ ಆಗಲಿವೆ.
ಮಂಗಳವಾರ ನಡೆದ ಸೆಮಿಫೈನಲ್‌ನಲ್ಲಿ ಭಾರತ 3-1 ಅಂತರದಿಂದ ಮಲೇಷ್ಯಾವನ್ನು ಮಣಿಸಿತು. ಮೊದಲ ಉಪಾಂತ್ಯದಲ್ಲಿ ಪಾಕಿಸ್ಥಾನ 4-2 ಗೋಲುಗಳಿಂದ
ಜಪಾನ್‌ಗೆ ಆಘಾತವಿಕ್ಕಿತು. ಭಾರತ ತೀವ್ರ ಎಚ್ಚರಿಕೆಯ ಹಾಗೂ ಅಷ್ಟೇ ಆಕ್ರಮಣಕಾರಿ ಆಟದ ಮೂಲಕ ಮಲೇಷ್ಯಾವನ್ನು ತಡೆದು ನಿಲ್ಲಿಸಿತು. ಮೊದಲ ಗೋಲನ್ನು 10ನೇ ನಿಮಿಷದಲ್ಲಿ ದಿಲ್‌ರಾಜ್ ಸಿಂಗ್ ಬಾರಿಸಿದರು. ಬಳಿಕ 45ನೇ ನಿಮಿಷದಲ್ಲಿ ರೋಹಿತ್ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಬಾರಿಸಿ ಮುನ್ನಡೆಯನ್ನು ವಿಸ್ತರಿಸಿದರು.
52ನೇ ನಿಮಿಷದಲ್ಲಿ ಮಲೇಷ್ಯಾ ಪೆನಾಲ್ಟಿ ಕಾರ್ನರ್ ಒಂದನ್ನು ತಡೆದ ಬಳಿಕ, ರೀಬೌಂಡ್ ಆಗಿ ಬಂದ ಚೆಂಡನ್ನು ಶಾರದಾನಂದ ತಿವಾರಿ ಗೋಲುಪೆಟ್ಟಿಗೆಗೆ ತಳ್ಳುವಲ್ಲಿ ಯಶಸ್ವಿಯಾದರು. ಪಂದ್ಯದ ಮುಕ್ತಾಯಕ್ಕೆ ಇನ್ನೇನು 3 ನಿಮಿಷ ಉಳಿದಿರುವಾಗ ಕಮರುದ್ದೀನ್ ಗೋಲೊಂದನ್ನು ಬಾರಿಸಿ ಮಲೇಷ್ಯಾಕ್ಕೆ ಒಂದಿಷ್ಟು ಸಮಾಧಾನ ತಂದಿತ್ತರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
India Cricket: ಸೀಮಿತ ಓವರ್ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಸ್ಟಾರ್ ಆಲ್ ರೌಂಡರ್
Make America Great Again: ಅಮೆರಿಕದಲ್ಲಿ ಸ್ವದೇಶಿ vs ವಲಸಿಗರು ಜಟಾಪಟಿ
Prashant Kishor: ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಪ್ರಶಾಂತ್ ಕಿಶೋರ್ ಬಂಧನ
Udupi: ಇನ್‌ಸ್ಟಾಗ್ರಾಂ ಲಿಂಕ್ ಬಳಸಿ 12.46 ಲಕ್ಷ ರೂ. ಕಳೆದುಕೊಂಡ ಯುವತಿ
Bajpe: ಗುರುಪುರ ಪೇಟೆಯ ಹಲವೆಡೆ ಕಳವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.