Karnataka: ಸಾಹಿತಿಗಳಿಗೆ ಜೀವಬೆದರಿಕೆ ಪತ್ರ – ಗೃಹಸಚಿವರ ಭೇಟಿ
Team Udayavani, Aug 22, 2023, 11:12 PM IST
ಬೆಂಗಳೂರು: ಸಾಹಿತಿಗಳಿಗೆ ಬಂದಿರುವ ಬೆದರಿಕೆ ಕರೆ ಹಾಗೂ ಪತ್ರದ ಬಗ್ಗೆ ಹಿರಿಯ ಅಧಿಕಾರಿಗಳಿಂದ ತನಿಖೆ ನಡೆಸಲಾಗುವುದು ಎಂದು ಗೃಹ ಸಚಿವ ಡಾ| ಜಿ. ಪರಮೇಶ್ವರ್ ಭರವಸೆ ನೀಡಿದ್ದಾರೆ.
ಡಾ| ಕೆ.ಮರುಳಸಿದ್ದಪ್ಪ, ಪ್ರೊ| ಎಸ್.ಜಿ. ಸಿದ್ದರಾಮಯ್ಯ, ಬಂಜೆಗೆರೆ ಜಯಪ್ರಕಾಶ್ ಸೇರಿ ಹಿರಿಯ ಸಾಹಿತಿಗಳ ಜತೆಗೆ ವಿಧಾನಸೌಧದಲ್ಲಿ ಮಂಗಳವಾರ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ರಾಜ್ಯದ ಹೆಸರಾಂತ ಸಾಹಿತಿಗಳ ಪೈಕಿ ಕೆಲವರು ಮರಳುಸಿದ್ದಪ್ಪ ನೇತೃತ್ವದಲ್ಲಿ ಭೇಟಿ ಮಾಡಿದ್ದರು. ತಮಗೆ ಬೆದರಿಕೆ ಕರೆಗಳು ಬರುತ್ತಿರುವ ಬಗ್ಗೆ ಹದಿನೈದು ದಿನಗಳ ಹಿಂದೆ ಪತ್ರ ಬರೆದಿದ್ದರು. ಅನೇಕ ಸಾಹಿತಿಗಳಿಗೆ ಈ ರೀತಿ ಬೆದರಿಕೆ ಪತ್ರ, ಕರೆಗಳು ಬಂದಿರುವ ವಿಚಾರವನ್ನು ನನ್ನ ಗಮನಕ್ಕೆ ತಂದಿದ್ದಾರೆ. ನಮ್ಮನ್ನು ಯಾವ ರೀತಿ ರಕ್ಷಣೆ ಮಾಡುತ್ತೀರಿ? ಎಂದು ಕೇಳಿದರು ಎಂದು ವಿವರಿಸಿದರು.
ಈ ಬೆದರಿಕೆ ಪತ್ರದ ಪ್ರತಿಯನ್ನು ನಾನು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಕಳುಹಿಸಿದ್ದೇನೆ. ಅನೇಕ ಬೆದರಿಕೆ ಪತ್ರಗಳ ಪ್ರತಿ ಕೊಟ್ಟಿ¨ªಾರೆ. ಯಾವ ರೀತಿ ಬೆದರಿಕೆ ಹಾಕುತ್ತಾರೆ. ಯಾವ ರೀತಿ ಮಾತನಾಡುತ್ತಾರೆ ಎಂದು ತಿಳಿದುಕೊಂಡಿದ್ದೇನೆ. ಇದು ಸೈದ್ಧಾಂತಿಕ ವಿಚಾರ ಎಂಬುದನ್ನು ನಾವು ಗಮನಿಸಿದ್ದೇವೆ. ಒಂದು ವರ್ಗ ಒಂದು ಸಿದ್ಧಾಂತ ನಂಬಿದ್ರೆ, ಇನ್ನೊಂದು ವರ್ಗ ವಿರುದ್ಧವಾಗಿದೆ ಎಂದರು.
ಪ್ರತ್ಯೇಕ ತಂಡ ರಚನೆ-ಭರವಸೆ
ನಾವು ಸಾಹಿತಿಗಳ ರಕ್ಷಣೆ ಮಾಡುತ್ತೇವೆ. ಪರ್ಸನಲ್ ಸೆಕ್ಯೂರಿಟಿ, ಗನ್ ಮ್ಯಾನ್ ಸೌಲಭ್ಯ ಕೊಡುತ್ತೇವೆ ಎಂದು ಹೇಳಿದ್ದೇನೆ. ಬಂದಿರುವ ದೂರುಗಳ ಬಗ್ಗೆ ಹಿರಿಯ ಅಧಿಕಾರಿಗಳಿಂದ ತನಿಖೆ ನಡೆಸುತ್ತೇವೆ. ಇದಕ್ಕೆ ಪ್ರತ್ಯೇಕವಾದ ತಂಡ ರಚನೆ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್.ಅಶೋಕ್
BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.