ಮಳೆ ಅಬ್ಬರಕ್ಕೆ ಮನೆ, ರಸ್ತೆಗಳು ಜಲಾವೃತ
Team Udayavani, Oct 23, 2019, 3:09 AM IST
ನೀರಲ್ಲಿ ನಿಂತು ಮನವಿ
ಮಹಾಲಿಂಗಪುರ: ಮಳೆಯಿಂದ ಹಾನಿಗೊಳಗಾದ ರಸ್ತೆ ದುರಸ್ತಿಗೆ ಆಗ್ರಹಿಸಿ ನೀರಲ್ಲೇ ನಿಂತು ಬಾಲಕಿ ಡಿಸಿಎಂ ಗೋವಿಂದ ಕಾರಜೋಳ ಅವರಿಗೆ ಮನವಿ ಮಾಡಿದ ವಿಡಿಯೋ ವೈರಲ್ ಆಗಿದೆ. ಪಟ್ಟಣದ 17ನೇ ವಾರ್ಡ್ ವ್ಯಾಪ್ತಿಯ ಕೋಡಿಹಾಳ ವಸತಿಯಲ್ಲಿನ ಮನೆ ಮತ್ತು ರಸ್ತೆಗಳು ಜಲಾವೃತವಾಗಿವೆ. ಕೋಡಿಹಾಳ ನಿವಾಸಿ ಮಾಳಪ್ಪ ಮಠದ ಪುತ್ರಿ ಅನ್ನಪೂರ್ಣ, ರನ್ನಬೆಳಗಲಿ-ಚಿಮ್ಮಡ ರಸ್ತೆ ಜಲಾವೃತಗೊಂಡು ತೊಂದರೆಯಾದರೂ ಗಮನ ಹರಿಸುತ್ತಿಲ್ಲ ಎಂದು ಡಿಸಿಎಂ ಗೋವಿಂದ ಕಾರಜೋಳ ಅವರಿಗೆ ಮನವಿ ಬಂಡೆಗಲ್ಲು ಆಪರೇಷನ್ ಮಾಡಿಕೊಂಡಿದ್ದಾಳೆ.
ಬಂಡೆಗಲ್ಲು ಆಪರೇಷನ್
ಗೋಕಾಕ: ಮಳೆಯಿಂದ ನಗರದ ಮಲ್ಲಿ ಕಾರ್ಜುನ (ಮಲ್ಲಿಕಸಾಬ) ಗುಡ್ಡದ ಮೇಲಿ ರುವ ಬೃಹತ್ ಬಂಡೆಗಲ್ಲು ಕುಸಿದು ಕೆಳಗೆ ಬೀಳುವ ಆತಂಕ ನಿರ್ಮಾಣವಾಗಿದೆ. ಎನ್‌ಡಿಆರ್‌ಎಫ್ ತಂಡದಿಂದ ಕಾರ್ಯಾಚರಣೆ ಆರಂಭಗೊಂಡಿದೆ. ಬಂಡೆಗಲ್ಲಿನ ಕೆಳ ಭಾಗದ ಸುಮಾರು 2-3 ಅಡಿಯಷ್ಟು ಮಣ್ಣು ಕುಸಿ ದಿದೆ. ಹೀಗಾಗಿ ಅಂದಾಜು 110 ಟನ್ ತೂಕದ ಹಾಗೂ 15 ಅಡಿಯಷ್ಟು ಅಗಲವಿರುವ ಬಂಡೆ ಗ ಲ್ಲು ಕೆಳಗೆ ಜಾರಿ ಅದರ ಮುಂದಿನ ಅಂದಾಜು 211 ಟನ್ 25 ಅಡಿಯಷ್ಟು ಅಗಲದ ಬಂಡೆಗಲ್ಲಿಗೆ ಡಿಕ್ಕಿ ಹೊಡೆದಿದೆ. ಈ ಬಂಡೆಗಳನ್ನು ಸ್ಫೋಟಿಸಿ ತೆರವು ಮಾಡಲು ನಿರ್ಧರಿಸಲಾಗಿದೆ.
ಟಿಬಿ ಡ್ಯಾಂನಿಂದ 1.75 ಲಕ್ಷ ಕ್ಯುಸೆಕ್ ನೀರು ಬಿಡುಗಡೆ
ಗಂಗಾವತಿ: ತುಂಗಭದ್ರಾ ಜಲಾಶಯಕ್ಕೆ ಅಧಿ ಕ ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ ಡ್ಯಾಂನಿಂದ ನದಿಗೆ 1.75 ಲಕ್ಷಕ್ಕೂ ಹೆಚ್ಚು ನೀರನ್ನು ಹರಿಸಲಾಗುತ್ತಿದ್ದು, ಪ್ರವಾಹ ಸೃಷ್ಟಿಯಾಗಿದೆ. ಕಂಪ್ಲಿ ಸೇತುವೆ ಮೇಲೆ ನೀರು ಹರಿಯುತ್ತಿರುವುದರಿಂದ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ. ವಿರೂಪಾಪುರಗಡ್ಡಿ ಹತ್ತಿರದ ಪುರಾತನ ಸೇತುವೆ (ಆಕ್ವಿಡೆಕ್ಟ್) ಒಳಗೆ ನೀರು ಹರಿಯುತ್ತಿದ್ದು, ವಿರೂಪಾಪುರಗಡ್ಡಿ, ನವವೃಂದಾವನ, ಋಷಿಮುಖ ಪರ್ವತ, ಪಂಪಾ ಸರೋವರದ ಸುತ್ತ ಹೆಚ್ಚುವರಿ ನೀರು ಬಂದು ಸಂಪರ್ಕ ಕಡಿತವಾಗಿದೆ. ಶ್ರೀಕೃಷ್ಣದೇವರಾಯ ಸಮಾಧಿ (60 ಕಾಲಿನ ಮಂಟಪ) ಸಂಪೂರ್ಣ ಮುಳುಗಿದೆ. ಅಂಜನಾದ್ರಿಬೆಟ್ಟದ ಕೆಳಭಾಗದಲ್ಲಿ ಮತ್ತು ಹನುಮನಹಳ್ಳಿ ಉತ್ತರ ಭಾಗದಲ್ಲಿ ನದಿ ನೀರು ಹಳ್ಳ ಸೇರಿ ಹರಿಯುತ್ತಿದೆ. ಗಂಗಾವತಿ-ಮುನಿರಾಬಾದ್, ಗಂಗಾವತಿ-ಕಂಪ್ಲಿ, ಆನೆಗೊಂದಿ-ಹನುಮನಹಳ್ಳಿ ಸಂಪರ್ಕ ಬಂದ್ ಆಗಿದೆ. ನದಿ ತೀರದ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.
ಹಲವೆಡೆ ಸಂಪರ್ಕ ಕಡಿತ
ಚಿಕ್ಕಮಗಳೂರು: ಚಿಕ್ಕಮಗಳೂರು ತಾಲೂಕಿನ ಶಿರಗೊಳ ಗ್ರಾಮದ ಸಮೀಪ ರಸ್ತೆ ಕೊಚ್ಚಿ ಹೋಗಿದ್ದು, ಸಂಪರ್ಕ ಕಡಿತಗೊಂಡಿದೆ. ತರೀಕೆರೆ ತಾಲೂಕಿನಲ್ಲಿ ಕೆರೆಗಳೆಲ್ಲ ತುಂಬಿ ಕೋಡಿಬಿದ್ದು, ರಸ್ತೆ ಮೇಲೆ ನೀರು ಹರಿಯುತ್ತಿದೆ. ಹಲವು ಗ್ರಾಮಗಳಿಗೆ ಸಂಪರ್ಕ ಕಡಿತಗೊಂ ಡಿದೆ. ತರೀಕೆರೆ ತಾಲೂಕಿನಲ್ಲಿ ಮಳೆ ಇಲ್ಲವಾದರೂ ತುಂಬಿದ ಕೆರೆಗಳು ಸಮಸ್ಯೆ ಸೃಷ್ಟಿಸಿವೆ. ಈಗಲೂ ಕೆರೆ ನೀರು ರಸ್ತೆ ಮೇಲೆ ಹರಿಯುತ್ತಿರುವುದರಿಂದ ಗಡಿಹಳ್ಳಿ-ಅಣ್ಣಾಪುರ ರಸ್ತೆ ಸಂಪರ್ಕ ಕಡಿತಗೊಂಡಿದೆ. ಸೋಮವಾರದಿಂದಲೂ ಅಣ್ಣಾಪುರ, ಹೊಸೂರು, ನಂದಿಪುರ ಗ್ರಾಮಗಳು ಸಂಪರ್ಕ ಕಳೆದುಕೊಂಡಿವೆ. ಕಾಟಿಗನೆರೆ, ಬೇಗೂರು, ಸಿದ್ದಾಪುರ ಸೇರಿ ಹಲವು ಗ್ರಾಮಗಳು ಜಲಾವೃತಗೊಂಡಿವೆ. ಚಿಕ್ಕಮಗಳೂರು ತಾಲೂಕಿನ ಆಲ್ದೂರು, ಖಾಂಡ್ಯ ಹೋಬಳಿ ಸೇರಿ ಗಿರಿಶ್ರೇಣಿಗಳಲ್ಲಿ ಮಂಗಳವಾರ ಮಧ್ಯಾಹ್ನದ ನಂತರ ಉತ್ತಮ ಮಳೆಯಾಗುತ್ತಿದೆ.
ಶಿವಮೊಗ್ಗ: ತಗ್ಗಿದ ಮಳೆ ಅಬ್ಬರ
ಶಿವಮೊಗ್ಗ: ವಾರದಿಂದ ಅಬ್ಬರಿಸುತ್ತಿದ್ದ ಮಳೆ ಸೋಮವಾರ ಮಧ್ಯಾಹ್ನದಿಂದ ಬಿಡುವು ಕೊಟ್ಟಿದೆ. ಮಂಗಳವಾರ ಸಂಜೆ ಹೊಸ ನಗರ, ತೀರ್ಥಹಳ್ಳಿ, ಶಿವಮೊಗ್ಗ ಭಾಗದಲ್ಲಿ ತುಂತುರು ಮಳೆಯಾಗುತ್ತಿದ್ದು ರಾತ್ರಿವರೆಗೂ ಮುಂದುವರಿದಿತ್ತು. ಸೋಮವಾರ ಬೆಳಗ್ಗೆ 8ರಿಂದ ಮಂಗಳವಾರ ಬೆಳಗ್ಗೆ 8ರವರೆಗೆ ಜಿಲ್ಲೆಯಲ್ಲಿ ಆರು ಮಿ.ಮೀ. ಮಳೆಯಾಗಿದೆ. ಅಲ್ಲಲ್ಲಿ ಮನೆ ಕುಸಿದ ಪ್ರಕರಣಗಳು ವರದಿಯಾಗಿವೆ. ಸಿಡಿಲು ಬಡಿದ ಪರಿಣಾಮ ಅನೇಕ ಮನೆ-ವಾಣಿಜ್ಯ ಮಳಿಗೆಗಳ ವಿದ್ಯುತ್ ಮೀಟರ್‌ಗಳು ಸುಟ್ಟು ಹೋಗಿವೆ. ಆನಂದಪುರ ಭಾಗದಲ್ಲಿ ಎರಡು ಹಳ್ಳಿಗಳ ನಡುವಿನ ಧರೆ ಕುಸಿದಿದ್ದು ಸಂಪರ್ಕ ಕಡಿತಗೊಂಡಿದೆ.
ಕೃಷ್ಣಾ, ತುಂಗಭದ್ರಾ ಅಬ್ಬರಕ್ಕೆ ರಾಯಚೂರು ಜಿಲ್ಲೆ ತತ್ತರ
ರಾಯಚೂರು: ಕೃಷ್ಣಾ, ತುಂಗಭದ್ರಾ ನದಿ ಉಕ್ಕಿ ಹರಿಯುತ್ತಿರುವುದರಿಂದ ರಾಯಚೂರು ಜಿಲ್ಲೆಯಲ್ಲಿ ನೆರೆ ಎದುರಾಗಿದೆ. ನಾರಾಯಣಪುರ ಜಲಾಶಯದಿಂದ 2.57 ಲಕ್ಷ ಕ್ಯೂಸೆಕ್, ಟಿಬಿ ಡ್ಯಾಂನಿಂದ 1.75 ಲಕ್ಷ ಕ್ಯೂಸೆಕ್ ನೀರು ಬಿಟ್ಟಿದ್ದರಿಂದ ಲಿಂಗಸುಗೂರು, ದೇವದುರ್ಗ ಹಾಗೂ ರಾಯಚೂರು ತಾಲೂಕಿನ ನದಿ ತೀರದ ಗ್ರಾಮಗಳು ಜಲಾ ವೃತವಾಗಿವೆ. ದೇವದುರ್ಗ ತಾಲೂಕಿನ ಚಿಂಚೋಡಿಯಲ್ಲಿ ಪ್ರವಾಹಕ್ಕೆ ಸಿಲುಕಿದ್ದ ಮೂವರು ಕುರಿಗಾಹಿಗಳು, 89 ಕುರಿಗ ಳನ್ನು ರಕ್ಷಿಸಲಾಗಿದೆ. ಕೃಷ್ಣಾ ತೀರದ ಚಿಂಚೋಡಿ, ಹಿರೆರಾಯ ಕುಂಪಿ, ಬಸವಂತಪುರ, ಕೊಪ್ಪರ, ಗೂಗಲ್, ಅರಶಿಷಣಿಗಿ, ಗುರ್ಜಾಪುರ ಹಾಗೂ ತುಂಗಭದ್ರಾ ತೀರದ ಸಿಂಗಾಪುರ, ಮುಕ್ಕುಂದ, ಒಳಬಳ್ಳಾರಿ, ದಡೇಸುಗೂರು, ಮಾನವಿ ತಾಲೂಕಿನ ಚೀಕಲಪರ್ವಿ, ರಾಯಚೂರು ತಾಲೂಕಿನ ಬಿಚ್ಚಾಲಿ, ಕಟಕನೂರು, ಹಳೇ ತುಂಗಭದ್ರಾ ಸೇರಿ ಇನ್ನಿತರ ಗ್ರಾಮಗಳಲ್ಲಿ ಅಪಾರ ಪ್ರಮಾಣದ ಹಾನಿಯಾಗಿದೆ.
ಐಹೊಳೆ ದೇವಾಲಯ ಮತ್ತೆ ಜಲಾವೃತ
ಅಮೀನಗಡ: ಭಾರೀ ಮಳೆ ಹಾಗೂ ಮಲಪ್ರಭಾ ನದಿ ಪ್ರವಾಹದಿಂದ ಐತಿಹಾಸಿಕ ರಾಷ್ಟ್ರೀಯ ಪ್ರವಾಸಿ ತಾಣ ಬಾಗಲಕೋಟೆ ಜಿಲ್ಲೆಯ ಐಹೊಳೆಯ ದೇವಾಲಯಗಳು ಮತ್ತೂಮ್ಮೆ ಜಲಾವೃತಗೊಂಡಿವೆ. ಚಾಲುಕ್ಯರ ಕಾಲದ ಮಾರುತೇಶ್ವರ ದೇವಾಲಯ, ಕೊರವರ್ ದೇವಾಲಯ(ವೇನಿಯರ್), ಅಳ್ಳಿ ಬಸಪ್ಪ ದೇವಾಲಯ, ಹುಚ್ಚಪ್ಪಯ್ಯ ದೇವಸ್ಥಾನ, ಗಳಗನಾಥ ದೇವಾಲಯಗಳು ಜಲಾವೃತಗೊಂಡಿವೆ. ಐಹೊಳೆಯಿಂದ ಪಟ್ಟದಕಲ್ಲು, ಕ್ಯಾದಿಗೇರಿಯಿಂದ ಚಿಲ್ಲಾಪೂರ ಗ್ರಾಮಕ್ಕೆ ಹೋಗುವ ರಸ್ತೆ ಸಂಪರ್ಕ ಸ್ಥಗಿತವಾಗಿದೆ.
ಮಳೆಗೆ ಕುಸಿದ ಐತಿಹಾಸಿಕ ದೇಗುಲ
ಹೊಳಲ್ಕೆರೆ: ಸೋಮವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಚಿತ್ರದುರ್ಗ ಜಿಲ್ಲೆಯ ಲೋಕದೊಳಲು ಶ್ರೀ ದೊಡ್ಡಹೊಟ್ಟೆ ಲಕ್ಷ್ಮೀರಂಗನಾಥಸ್ವಾಮಿ ಬೆಟ್ಟದ ಐತಿಹಾಸಿಕ ಶ್ರೀದೊಡ್ಡಹೊಟ್ಟೆ ಲಕ್ಷ್ಮೀರಂಗನಾಥ ಸ್ವಾಮಿಯ ಮೂಲ ದೇವಾಲಯ ಸಂಪೂರ್ಣ ಕುಸಿದಿದೆ. ಮಳೆ ರಭಸಕ್ಕೆ ಶ್ರೀಲಕ್ಷ್ಮೀರಂಗನಾಥ ಸ್ವಾಮಿಯ ಮೂಲ ವಿಗ್ರಹವಿರುವ ಬಂಡೆ ಹೊರತುಪಡಿಸಿ ದೇವಸ್ಥಾನದ ಗರ್ಭಗುಡಿ, ಪ್ರಾಂಗಣ, ಪ್ರವೇಶದ್ವಾರ, ಮೆಟ್ಟಿಲುಗಳು ಸೇರಿದಂತೆ ದೇವಸ್ಥಾನದ ಮುಂಭಾಗ ಸಂಪೂರ್ಣ ಕುಸಿದು ಹೋಗಿದೆ. ಬೆಟ್ಟದ ಮೇಲಿರುವ ಬಂಡೆಗಳು ತಪ್ಪಲಿನಲ್ಲಿರುವ ಆಂಜನೇಯಸ್ವಾಮಿ ದೇವಸ್ಥಾನ ತನಕ ಕೊಚ್ಚಿಕೊಂಡು ಹೋಗಿವೆ.
ಬೆಟ್ಟದ ಮೇಲಿರುವ ಈ ದೇವಾಲಯ ಲೋಕದೊಳಲು ಗ್ರಾಮದಿಂದ ಸುಮಾರು ಮೂರು ಸಾವಿರ ಅಡಿ ಎತ್ತರದಲ್ಲಿದೆ. ಹರಕೆ ಹೊತ್ತ ಭಕ್ತರು ಮಾತ್ರ ಮೂಲ ವಿಗ್ರಹವಿರುವ ಬೆಟ್ಟದ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಬೆಟ್ಟದ ಬಂಡೆಯಲ್ಲಿರುವ ಮೆಟ್ಟಿಲುಗಳ ಸಹಾಯದಿಂದ ಬೆಟ್ಟ ಹತ್ತುವ ವ್ಯವಸ್ಥೆಯಿದೆ. ಮಳೆಯಿಂದಾಗಿ ಹಿಂದೆ ಇಂತಹ ಕುಸಿತ ಆಗಿರಲಿಲ್ಲ. ಈಗ ದೇವಸ್ಥಾನ ಸಂಪೂರ್ಣ ಕುಸಿದ ಪರಿಣಾಮ ಲಕ್ಷಾಂತರ ಭಕ್ತರಲ್ಲಿ ಆತಂಕ ಸೃಷ್ಟಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?
ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
Ambedkar Row: ಕಾಂಗ್ರೆಸ್ ಎಂದರೆ ಫೇಕ್ ಗಾಂಧಿಗಳ ಪಕ್ಷ: ಛಲವಾದಿ ನಾರಾಯಣಸ್ವಾಮಿ
Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?
Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.