ಕೋವಿಡ್‌ ಕಟ್ಟಿ ಹಾಕಿದ ಹಾಂಗ್‌ಕಾಂಗ್‌, ದಕ್ಷಿಣ ಕೊರಿಯಾ


Team Udayavani, May 9, 2020, 6:12 PM IST

ಕೋವಿಡ್‌ ಕಟ್ಟಿ ಹಾಕಿದ ಹಾಂಗ್‌ಕಾಂಗ್‌, ದಕ್ಷಿಣ ಕೊರಿಯಾ

ಮಣಿಪಾಲ: ಚೀನದ ಮೊದಲ ರಾಷ್ಟ್ರವಾಗಿ ಲಾಕ್‌ಡೌನ್‌ ತೆರವು ಮಾಡಿ ಯಥಾಸ್ಥಿತಿಗೆ ಮರಳಿದೆ. ಆದರೆ ಇತರ ರಾಷ್ಟ್ರಗಳು ಬಹುತೇಕ ಲಾಕ್‌ಡೌನ್‌ನಲ್ಲಿದ್ದು, ಕೆಲವು ರಾಷ್ಟ್ರಗಳು ಭಾಗಶಃ ಲಾಕ್‌ಡೌನ್‌ನಲ್ಲಿದೆ. ಆದರೆ ಇದೀಗ ಏಷ್ಯಾದ ಮತ್ತೆರಡು ರಾಷ್ಟ್ರಗಳು ಕೋವಿಡ್‌-19 ಮೆಟ್ಟಿ ನಿಂತಿವೆ.

ಹಾಂಗ್‌ಕಾಂಗ್‌ ಮತ್ತು ದಕ್ಷಿಣ ಕೊರಿಯಾ ದೇಶಗಳು ಯಥಾಸ್ಥಿತಿಗೆ ಮರಳಿವೆ. ಜಗತ್ತಿನ ಇತರ ರಾಷ್ಟ್ರಗಳಲ್ಲಿ ಕೋವಿಡ್‌-19 ಸೋಂಕು ಪತ್ತೆ ಯಾಗುವ ಸಂದರ್ಭದಲ್ಲಿಯೇ ಈ ರಾಷ್ಟ್ರಗಳಲ್ಲಿಯೂ ಸೋಂಕು ಪ್ರಕರಣ ಪತ್ತೆಯಾಗಿತ್ತು. ಇಷ್ಟು ಬೇಗ ಲಾಕ್‌ಡೌನ್‌ ತೆರವಾಗಲು ಸರಕಾರ ಕೈಗೊಂಡ ಹಲವು ಕಾರ್ಯಕ್ರಮಗಳು ಕಾರಣವಾಗಿದೆ.

ತಾಂತ್ರಿಕ ನೆರವು
ಹಾಂಗ್‌ಕಾಂಗ್‌ ಮತ್ತು ದಕ್ಷಿಣ ಕೊರಿಯಾ ಎರಡನೇ ಹಂತಕ್ಕೆ ಕೋವಿಡ್‌-19 ವೈರಸ್‌ ಸೋಂಕದಂತೆ ಅತಿ ಎಚ್ಚರ ವಹಿಸಿತ್ತು. ಇದಕ್ಕಾಗಿ ಪ್ರಾಥಮಿಕ ಹಂತದಲ್ಲಿರಬೇಕಾದರೆ ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷೆಗಳನ್ನು ನಡೆಸಿತು. ಮಾತ್ರವಲ್ಲದೇ ಸೋಂಕಿತರನ್ನು ಟ್ರ್ಯಾಕ್‌ ಮಾಡಿದ ಈ ರಾಷ್ಟ್ರಗಳು, ಅವರ ಟ್ರಾವೆಲ್‌ ಇತಿಹಾಸ ಮತ್ತು ವಾಸವಿರುವ ಸ್ಥಳದ ಕುರಿತಾದ ಮಾಹಿತಿಯನ್ನು ಕಲೆ ಹಾಕಿದವು. ತನ್ನ ಜನರ ಜತೆ ತಾಂತ್ರಿಕ ವಾಗಿ ನಿರಂತರ ಸಂಪರ್ಕವನ್ನು ಇಟ್ಟುಕೊಂಡು ಜಾಗೃತಿ ಮೂಡಿಸಿದವು.

ಎಸ್‌ಎಂಎಸ್‌ ನೆರವು
ಕೋವಿಡ್‌-19 ಸೋಂಕಿತರು/ಶಂಕಿತರು ತಮ್ಮ ಮನೆಯ ಸನಿಹ ಅಥವಾ ತಮ್ಮ ನಗರಗಳಿಗೆ ಬಂದರೆ ಅದರ ಸುಳಿವು ಸ್ಥಳೀಯರಿಗೆ ದೊರೆಯುತ್ತಿದ್ದವು. ಉದಾಹರಣೆಗೆ ವಿದೇಶದಿಂದ ಬಂದ ವ್ಯಕ್ತಿಯಾಗಿದ್ದರೆ ಅಥವಾ ಕೋವಿಡ್‌-19ವೈರಸ್‌ ಸಂಪರ್ಕ ವಿರುವ ವ್ಯಕಿಯ ಜತೆ ಪ್ರಯಾಣಿಸಿದ್ದರೆ ಅಂತಹ ಮಾಹಿತಿ ಗಳು ಸರಕಾರಕ್ಕೆ ಲಭ್ಯವಾಗುತ್ತಿತ್ತು. ಸರಕಾರ ಅವುಗಳನ್ನು ಎಸ್‌ಎಂಎಸ್‌ಗಳ ಮೂಲಕ ಮತ್ತು ವಿಶಿಷ್ಟ ಆ್ಯಪ್‌ಗ್ಳ ಮೂಲಕ ಜನರಿಗೆ ರವಾನಿಸಿ ಎಚ್ಚರ ವಹಿಸುತ್ತಿತ್ತು.

ಸಂಪರ್ಕ ಬಂದ್‌
ತನ್ನ ಆರಂಭಿಕ ನಿರ್ಣಾಯಕ ಕ್ರಮಗಳಲ್ಲಿ ಚೀನದೊಂದಿಗಿನ ಎಲ್ಲಾ ಸಂಪರ್ಕ, ವಹಿವಾಟು ಬಂದ್‌ ಮಾಡಿದವು. ದ್ವೀಪದ ಬಂದರುಗಳಲ್ಲಿ ಕ್ರೂಸ್‌ ಹಡಗುಗಳು ನಿಲ್ಲಿಸುವುದನ್ನು ತಡೆದವು. ಸಾಮಾಜಿಕ ಅಂತರವನ್ನು ಪರಿಣಾಮಕಾರಿಯಾಗಿ ಅನುಕರಣೆ ಮಾಡಿದ್ದರ ಫಲವಾಗಿ ಸಹಜ ಸ್ಥಿತಿಯತ್ತ ನಿಧಾನವಾಗಿ ಮರಳುತ್ತಿವೆ. ಜತೆಗೆ ಎಷ್ಟೋ ಸಂಶೋಧನ ವರದಿಗಳು ಮತ್ತು ತಜ್ಞರೂ ಸಾಮಾಜಿಕ ಅಂತರ ಸೋಂಕಿನ ಪ್ರಸರಣ ಕಡಿಮೆ ಮಾಡುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದರು. ಈ ಮಾತಿಗೆ ಹಾಂಗ್‌ಕಾಂಗ್‌ ಮತ್ತು ದಕ್ಷಿಣ ಕೊರಿಯಾ ರಾಷ್ಟ್ರಗಳು ನಿದರ್ಶನವಾಗಿವೆ.

ವ್ಯಾಪಕ ಪರೀಕ್ಷೆ
ಕೋವಿಡ್‌ -19 ಸೋಂಕು ತನ್ನ ದೇಶದ ಆರ್ಥಿಕತೆಯನ್ನು ಬುಡಮೇಲು ಮಾಡದಂತೆ ತಡೆದ ಕೆಲವೇ ದೇಶಗಳ ಪೈಕಿ ದಕ್ಷಿಣ ಕೊರಿಯಾ ಕೂಡ ಒಂದು. ಚೀನಾದಂತೆ ಸಂಪೂರ್ಣ ನಗರಗಳನ್ನು ನಿರ್ಬಂಧಿಸುವ ಬದಲು ಪ್ರಕರಣಗಳು ಹೆಚ್ಚಿರುವ ಪ್ರದೇಶಗಳನ್ನು ಮಾತ್ರ ಲಾಕ್‌ಡೌನ್‌ ಮಾಡಿತು. ಸೋಂಕಿತ, ಶಂಕಿತ ಎನ್ನದೇ ವ್ಯಾಪಕವಾಗಿ ಪರೀಕ್ಷೆ ನಡೆಸಿತು.

ಕೊರಿಯಾದ ಆರೋಗ್ಯ ಅಧಿಕಾರಿಗಳು ಫೆಬ್ರವರಿ ಅಂತ್ಯದಲ್ಲಿ 2,59,000ಕ್ಕೂ ಹೆಚ್ಚು ಜನರಿಗೆ ಪರೀಕ್ಷೆಗಳನ್ನು ನಡೆಸಿ 8,000 ಕ್ಕೂ ಹೆಚ್ಚು ಸೋಂಕುಗಳನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡುವಲ್ಲಿ ಯಶಸ್ವಿಯಾದರು.ಇದರಿಂದ ಅಷ್ಟೂ ಮಂದಿ ಮತ್ತಷ್ಟು ಜನರಿಗೆ ಸೋಂಕು ಹರಡುವುದನ್ನು ತಡೆಯಲು ಸಾಧ್ಯವಾಯಿತು. ಇದರಿಂದ ಕೋವಿಡ್‌-19 ಎರಡನೇ ಹಂತದಲ್ಲಿ ಹೆಚ್ಚು ಸಮಸ್ಯೆಯಿಲ್ಲದೇ ದಾಟಲು ಸಾಧ್ಯವಾಯಿತು. ನೂರಾರು ವಾಕ್‌-ಇನ್‌ ಮತ್ತು ಡ್ರೈವ್‌-ಥ್ರೂ ಪರೀûಾ ಕೇಂದ್ರಗಳನ್ನು ದಕ್ಷಿಣ ಕೊರಿಯಾ ಸ್ಥಾಪಿಸಿತ್ತು. ವೈರಸ್‌ ಸಂಪರ್ಕಕ್ಕೆ ಬಂದಿ ರುವ ಜನರ ಮೂಲವನ್ನು ಪತ್ತೆಹಚ್ಚಿ ಅವರನ್ನು ಕ್ವಾರಂಟೇನ್‌ಗೆ ಒಳಪಡಿಸಿತ್ತು.

ದಕ್ಷಿಣ ಕೊರಿಯಾದ ಸರಕಾರ ಪೂರ್ಣ ಲಾಕ್‌ಡೌನ್‌ ಜಾರಿಗೊಳಿಸಲಿಲ್ಲ. ಪರಿಣಾಮವಾಗಿ ವ್ಯಾವಹಾರಿಕ ಕ್ಷೇತ್ರಗಳು ಕಾರ್ಯನಿರ್ವಹಿಸುತ್ತಿದ್ದವು. ಮನೆಯಿಂದ ಕೆಲಸ ಮಾಡಲು ಸರಕಾರ ಉತ್ತೇಜನ ನೀಡಿತ್ತು. ಪ್ರತಿ ಮನೆಗಳಿಗೂ ಮಾಸ್ಕ್ಗಳು ಸೇರಿದಂತೆ ಇತರ ವೈದ್ಯಕೀಯ ಸಾಧನಗಳನ್ನು ಉಚಿತವಾಗಿ ಪೂರೈಸಿತು. ಇದು ಸಾರ್ವಜನಿಕರನ್ನು ಹೆಚ್ಚು ಜಾಗೃತರನ್ನಾಗಿಸಿತಲ್ಲದೇ, ಸರಕಾರದ ನಿಯಮಗಳನ್ನು ಪಾಲಿಸಲು ಸಹಾಯ ಮಾಡಿತು. ಲಾಕ್‌ಡೌನ್‌ ಜಾರಿಯಲ್ಲಿದ್ದರೂ ಜನರೇ ಸ್ವಯಂ ಪ್ರೇರಿತರಾಗಿ ಅದನ್ನು ಪಾಲಿಸುತ್ತಿದ್ದರು. ಈ ಸರಕಾರದ ಪೂರ್ವಸಿದ್ಧತೆ ಹಾಗೂ ಜನರ ಸ್ವಯಂ ಪ್ರೇರಿತ ಪಾಲಿಸುವಿಕೆ ಎರಡೂ ದೇಶವನ್ನು ದೊಡ್ಡ ಸಂಕಟದಿಂದ ಪಾರು ಮಾಡಿದವು.

ಟಾಪ್ ನ್ಯೂಸ್

2-kunigal

Kunigal: ನಾಮಫಲಕಕ್ಕೆ ಬಸ್ ಡಿಕ್ಕಿ, ಪಲ್ಟಿ; ಮಂಗಳೂರು ಮೂಲದ ಚಾಲಕ ಸಾವು; 8 ಮಂದಿಗೆ ಗಾಯ

1-horoscope

Daily Horoscope: ದೀರ್ಘ‌ಕಾಲದ ಸಮಸ್ಯೆಗಳಿಂದ ಬಿಡುಗಡೆ, ಅಪರಿಚಿತರೊಡನೆ ವಾದ ಬೇಡ

Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!

Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!

1-NASA

NASA ಹನುಮ ಸಾಹಸ: ಸೂರ್ಯನ ಬಳಿ ಸುಳಿದು ಸುಡದೆ ಪಾರು!

BUS driver

RTO; ಫಿಟ್‌ನೆಸ್‌ ಸರ್ಟಿಫಿಕೇಟ್‌ಗಿನ್ನು ಆರ್‌ಟಿಒ ಬೇಕಿಲ್ಲ!

Pro Kabaddi: ಹರಿಯಾಣ- ಪಾಟ್ನಾ ಫೈನಲ್‌ ಹಣಾಹಣಿ

Pro Kabaddi: ಹರಿಯಾಣ- ಪಾಟ್ನಾ ಫೈನಲ್‌ ಹಣಾಹಣಿ

1-kkk

ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಇನ್ನು ಕರಾವಳಿ ಪ್ರದೇಶಾಭಿವೃದ್ಧಿ ಮಂಡಳಿಯಾಗಿ ಕಾರ್ಯನಿರ್ವಹಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-NASA

NASA ಹನುಮ ಸಾಹಸ: ಸೂರ್ಯನ ಬಳಿ ಸುಳಿದು ಸುಡದೆ ಪಾರು!

1-osamu

Suzuki; ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ಒಸಾಮು ಸುಜುಕಿ ವಿಧಿವಶ

26/11 ದಾಳಿಯ ಸಂಚುಕೋರ ಅಬ್ದುಲ್ ರೆಹಮಾನ್ ಮಕ್ಕಿ ಪಾಕಿಸ್ತಾನದಲ್ಲಿ ಹೃದಯಾಘಾತದಿಂದ ಸಾ*ವು

26/11 ದಾಳಿಯ ಸಂಚುಕೋರ ಅಬ್ದುಲ್ ರೆಹಮಾನ್ ಮಕ್ಕಿ ಪಾಕಿಸ್ತಾನದಲ್ಲಿ ಹೃದಯಾಘಾತದಿಂದ ಸಾ*ವು

ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ

ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ

New York:ಆಸ್ತಿ ಹಂಚಿದ ಶ್ರೀಮಂತ ಹೂಡಿಕೆದಾರ ಬಫೆಟ್‌; ಕುಟುಂಬದ 4 ಫೌಂಡೇಶನ್‌ ಆಸ್ತಿ ಹಂಚಿಕೆ

New York:ಆಸ್ತಿ ಹಂಚಿದ ಶ್ರೀಮಂತ ಹೂಡಿಕೆದಾರ ಬಫೆಟ್‌; ಕುಟುಂಬದ 4 ಫೌಂಡೇಶನ್‌ ಆಸ್ತಿ ಹಂಚಿಕೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

2-kunigal

Kunigal: ನಾಮಫಲಕಕ್ಕೆ ಬಸ್ ಡಿಕ್ಕಿ, ಪಲ್ಟಿ; ಮಂಗಳೂರು ಮೂಲದ ಚಾಲಕ ಸಾವು; 8 ಮಂದಿಗೆ ಗಾಯ

courts

Kasaragod: ಯೂತ್‌ ಕಾಂಗ್ರೆಸ್‌ ಕಾರ್ಯಕರ್ತರಿಬ್ಬರ ಕೊ*ಲೆ; ಇಂದು ತೀರ್ಪು; ಭಾರೀ ಬಂದೋಬಸ್ತು

11

Surathkal: ಸಿಲಿಂಡರ್‌ ಸ್ಫೋ*ಟ ಪ್ರಕರಣ; ಮತ್ತೋರ್ವ ಮಹಿಳೆಯ ಸಾವು

1-horoscope

Daily Horoscope: ದೀರ್ಘ‌ಕಾಲದ ಸಮಸ್ಯೆಗಳಿಂದ ಬಿಡುಗಡೆ, ಅಪರಿಚಿತರೊಡನೆ ವಾದ ಬೇಡ

Vijay Hazare Trophy: ಅರುಣಾಚಲ ಎದುರಾಳಿ; ರಾಜ್ಯಕ್ಕೆ 4ನೇ ಜಯದ ನಿರೀಕ್ಷೆ

Vijay Hazare Trophy: ಅರುಣಾಚಲ ಎದುರಾಳಿ; ರಾಜ್ಯಕ್ಕೆ 4ನೇ ಜಯದ ನಿರೀಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.