Bharath Rathna: ಸೂಕ್ತ ಸಮಯದಲ್ಲಿ ಸಿದ್ಧಗಂಗಾ ಶ್ರೀಗೂ ಭಾರತ ರತ್ನ ಗೌರವ: ವಿಜಯೇಂದ್ರ
Team Udayavani, Feb 4, 2024, 11:18 PM IST
ವಿಜಯಪುರ: ಸಿದ್ಧಗಂಗಾ ಮಠದ ಲಿಂ| ಡಾ|ಶಿವಕುಮಾರ ಶ್ರೀಗಳಿಗೆ ಭಾರತ ರತ್ನ ಗೌರವ ಬರಬೇಕೆಂಬ ಆಗ್ರಹ ಹಿಂದಿನಿಂದಲೂ ಇದೆ. ಎಲ್ಲದಕ್ಕೂ ಸಮಯ ಕೂಡಿ ಬರಬೇಕು. ಮುಂದಿನ ದಿನಗಳಲ್ಲಿ ಒಳ್ಳೆಯದಾಗುತ್ತದೆ. ಸೂಕ್ತ ಸಮಯದಲ್ಲಿ ಅವರಿಗೂ ಭಾರತ ರತ್ನ ಸಿಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ಮಂಡ್ಯ ಜಿಲ್ಲೆಯಲ್ಲಿ ನಡೆದಿರುವ ಹನುಮಧ್ವಜ ಗಲಾಟೆ ಕಾಂಗ್ರೆಸ್ ಪಕ್ಷದ ಪಿತೂರಿ. ಗ್ರಾ.ಪಂ.ನಲ್ಲಿ ಅನುಮತಿ ಪಡೆದೇ ಧ್ವಜಸ್ತಂಭ ನಿರ್ಮಿಸಲಾಗಿತ್ತು. ಆದರೂ ಕಾಂಗ್ರೆಸ್ ಪಿತೂರಿಯಿಂದ ಗಲಾಟೆ ನಡೆದಿದೆ. ಬೆಳಗಾವಿಯ ಎಂ.ಕೆ. ಹುಬ್ಬಳ್ಳಿಯಲ್ಲೂ ಭಗವಾಧ್ವಜ ವಿಷಯದಲ್ಲಿ ಗಲಾಟೆ ನಡೆದಿದೆ. ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾಕ ಸಮುದಾಯದ ಓಲೈಕೆಯಿಂದಾಗಿ ಇಂಥ ಘಟನೆಗಳು ನಡೆಯುತ್ತಿವೆ. ಇದರಿಂದಾಗಿ ನಾವು ಭಾರತದಲ್ಲಿ ಇದ್ದೇವಾ ಅಥವಾ ಬೇರೆ ದೇಶದಲ್ಲಿದ್ದೇವಾ ಎಂಬ ಅನುಮಾನ ಮೂಡುವಂತಾಗಿದೆ ಎಂದರು.
ರಾಮಮಂದಿರ ಪುನಃಶ್ಚೇತನ ಸ್ವಾಗತಾರ್ಹ
ರಾಮನ ಅಸ್ತಿತ್ವವನ್ನೇ ಪ್ರಶ್ನಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಇಂಥ ಸ್ಥಿತಿಯಲ್ಲಿ ರಾಜ್ಯದಲ್ಲಿ ನೂರು ರಾಮ ಮಂದಿರಗಳ ಪುನಃಶ್ಚೇತನ ಮಾಡುವ ತೀರ್ಮಾನ ಮಾಡಲಾಗಿದೆ ಎಂಬ ಸರಕಾರದ ಹೇಳಿಕೆ ಸ್ವಾಗತಾರ್ಹ. ಭಗವಾನ ರಾಮನನ್ನು ಕಾಂಗ್ರೆಸ್ ಪಕ್ಷದವರು ಅಪ್ಪಿಕೊಂಡಿರುವುದು ಸಂತಸ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.