ಹುರ್ರೇ, ನಾನೂ ಅಡುಗೆ ಕಲಿತೆ!
Team Udayavani, May 20, 2020, 4:50 AM IST
“ಅಡುಗೆ ಅನ್ನೋದು ಕಲೆ. ಅದನ್ನು ಯಾರು ಬೇಕಾದರೂ ಮಾಡಬಹುದು. ಆದರೆ, ಪ್ರೀತಿಯಿಂದ ಮಾಡಿದ ಅಡುಗೆಗೆ ರುಚಿ ಹೆಚ್ಚು’ ಅಂತ ಹೇಳ್ಳೋದನ್ನು ಕೇಳಿದ್ದೆ. ಆದ್ರೆ, ನಾನು ಮಾತ್ರ ಯಾವತ್ತೂ ಟ್ರೈ ಮಾಡಿರಲಿಲ್ಲ. ಓದು, ಕೆಲಸ ಅಂತ ಬ್ಯುಸಿ ಇದ್ದ ನನಗೆ, ಅನ್ನ- ಸಾರು ಬಿಟ್ಟರೆ ಬೇರೇನೂ ಮಾಡಲು ಗೊತ್ತಿರಲಿಲ್ಲ.
ಅಮ್ಮನಂತೆ, ಬಗೆಬಗೆಯ, ರುಚಿರುಚಿಯಾದ ಅಡುಗೆ ಮಾಡುವುದನ್ನು, ಕಲ್ಪಿಸಿಕೊಳ್ಳಲೂ ಸಾಧ್ಯವಿರಲಿಲ್ಲ. ಆದರೆ, ಈ ಲಾಕ್‌ಡೌನ್‌ನಲ್ಲಿ, ಅಡುಗೆ ಮನೆಯೇ ನನ್ನಿಷ್ಟದ ಸ್ಥಳವಾಗಿತ್ತು ಅಂದರೆ ನಂಬಲೇಬೇಕು. ಅಮ್ಮನಿಂದ ಪ್ರೇರಣೆ, ಸಹಾಯ ಪಡೆದು ಶುರುವಾದ ಸ್ವಯಂ ಪಾಕದ ಕೆಲಸ, ಈಗ ಮನೆ ಮಂದಿಗೆಲ್ಲ ಅಡುಗೆ ಮಾಡುವ ಮಟ್ಟಕ್ಕೆ ಬಂದು ನಿಂತಿದೆ.
ಮೊದಮೊದಲು ರೇಗಿಸುತ್ತಿದ್ದ ಅಪ್ಪ, ಈಗ ನನ್ನ ಕೈ ಅಡುಗೆಗೆ ಮನಸೋತು- “ದಿನಾ ನೀನೇ ಅಡುಗೆ ಮಾಡು ಮಗಳೇ’ ಎನ್ನುತ್ತಾರೆ. ಇದರಿಂದ, ಅಮ್ಮನ ಅಡುಗೆ ಮನೆಯ ಕೆಲಸಕ್ಕೆ ಕೊಂಚ ವಿರಾಮ ಸಿಕ್ಕಿದೆ. ನನಗಂತೂ, ನಾನೂ ರುಚಿಯಾದ ಅಡುಗೆ ಮಾಡಬಲ್ಲೆ ಎನ್ನುವ ಆತ್ಮವಿಶ್ವಾಸ ಜೊತೆಯಾಗಿದೆ. ಅಮ್ಮನಿಂದ ಮತ್ತು ಯುಟ್ಯೂಬ್ ಸಹಾಯದಿಂದ ಹೊಸ ರುಚಿ ಮಾಡಲು ಕಲಿತಿದ್ದೇನೆ. ಅಡುಗೆ ಕಲಿಸಿದ ಕೊರೊನಾ ರಜೆಗೆ, ಥ್ಯಾಂಕ್ಸ್ ಹೇಳಿದ್ದೇನೆ…
* ಪವಿತ್ರಾ ಭಟ್, ಜಿಗಳೇಮನೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.