ಆನ್‌ಲೈನ್ ಉತ್ಪನ್ನ ಮಾರಾಟಕ್ಕೆ ಹಾಪ್‌ಕಾಮ್ಸ್ ಸಿದ್ಧ
Team Udayavani, Mar 16, 2020, 3:08 AM IST
ಬೆಂಗಳೂರು: ತೋಟದ ಬೆಳೆಗಾರರ ಸಹಕಾರಿ ಮಾರಾಟ ಮತ್ತು ಸಂಸ್ಕರಣ ಸಂಘ ನಿಯಮಿತ (ಹಾಪ್ ಕಾಮ್ಸ್), ರೈತರನ್ನು ಗಮನದಲ್ಲಿಟ್ಟುಕೊಂಡು ಆನ್‌ಲೈನ್ ಮಾರುಕಟ್ಟೆ ಸೃಷ್ಟಿಸಲು ಸಿದ್ಧತೆ ನಡೆಸಿದ್ದು, ಆ ನಿಟ್ಟಿನಲ್ಲಿಯೇ ಈಗ ಕಾರ್ಯತಂತ್ರ ರೂಪಿಸುತ್ತಿದೆ.
ಈ ಹಿಂದೆ ಮಾವು ಅಭಿವೃದ್ಧಿ ನಿಗಮವೂ ಆನ್‌ಲೈನ್ ಹಾಗೂ ಅಂಚೆ ಮೂಲಕ ತಾಜಾ ಮಾವಿನ ಹಣ್ಣುಗಳನ್ನು ಗ್ರಾಹಕರಿಗೆ ಮಾರಾಟ ಮಾಡಿ, ಮಾವು ಬೆಳೆಗಾರರ ಮೆಚ್ಚುಗೆಗೆ ಪಾತ್ರವಾಗಿತ್ತು. ಅಲ್ಲದೆ, ಗ್ರಾಹಕ-ರೈತರ ನಡುವೆ ನೇರ ಮಾರುಕಟ್ಟೆಯನ್ನೂ ಸೃಷ್ಟಿ ಮಾಡಿಕೊಟ್ಟಿತ್ತು. ಆ ರೀತಿಯಲ್ಲಿಯೇ ಆಲೋಚನೆ ಮಾಡಿರುವ ಹಾಪ್‌ಕಾಮ್ಸ್, ಈಗ ರೈತರಿಂದ ಖರೀದಿಸಿದ ಉತ್ಪನ್ನಗಳನ್ನು ಆನ್‌ಲೈನ್ ಮೂಲಕ ಮಾರಾಟ ಮಾಡುವ ಚಿಂತನೆ ನಡೆಸಿದೆ. ಈ ಸಂಬಂಧ ಖಾಸಗಿ ಕಂಪನಿಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳುವ ಇರಾದೆಯಲ್ಲಿದೆ.
ರೈತರಿಂದ ನೇರವಾಗಿ ಪಡೆದ ಉತ್ಪನ್ನಗಳನ್ನು ಆನ್‌ಲೈನ್ ಮೂಲಕ ಗ್ರಾಹಕರಿಗೆ ನೇರವಾಗಿ ತಲುಪಿಸಬೇಕಾದರೆ ಸಾಕಷ್ಟು ಖರ್ಚು, ವೆಚ್ಚ ಬರಲಿವೆ. ಹೀಗಾಗಿ, ಈ ಅನುದಾನ ತರುವುದು ಹೇಗೆ ಎಂಬ ಪ್ರಶ್ನೆ ಹಾಪ್‌ಕಾಮ್ಸ್‌ನ ಮುಂದಿದೆ. ಅನುದಾನ ಹೊಂದಿಸುವ ಬಗ್ಗೆಯೂ ಹಾಪ್‌ಕಾಮ್ಸ್‌ನ ಆಡಳಿತ ಮಂಡಳಿ ಸಮಾಲೋಚನೆ ನಡೆಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಹಲವು ಕಂಪನಿಗಳು ಮುಂದೆ ಬಂದಿವೆ: ಹಾಪ್‌ಕಾಮ್ಸ್‌ನ ಉತ್ಪನ್ನಗಳಿಗೆ ಆನ್‌ಲೈನ್‌ನಲ್ಲಿ ಮಾರುಕಟ್ಟೆ ಸೃಷ್ಟಿಸಿಕೊಡುವ ಸಂಬಂಧ ಈಗಾಗಲೇ ಹಲವು ಕಂಪನಿಗಳು ಹಾಪ್‌ಕಾಮ್ಸ್‌ನ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿವೆ. ಅದರಲ್ಲಿ “ಬಿಗ್ ಮಾರ್ಕೆಟ್’ ಸಂಸ್ಥೆಯೂ ಹಾಪ್‌ಕಾಮ್ಸ್‌ನೊಂದಿಗೆ ಮಾತುಕತೆ ನಡೆಸುತ್ತಿದೆ. ಹಾಪ್‌ಕಾಮ್ಸ್ “ಬಿಗ್ ಮಾರ್ಕೆಟ್’ನೊಂದಿಗೆ ಕೈ ಜೋಡಿಸುವ ಉತ್ಸಾಹದಲ್ಲಿದೆ. ಆ ಹಿನ್ನೆಲೆಯಲ್ಲಿಯೇ ಪ್ರಾಯೋಗಿಕ ಮಾರಾಟ ಕೂಡ “ಬಿಗ್ ಮಾರ್ಕೆಟ್’ನ ಆನ್‌ಲೈನ್‌ನಲ್ಲಿ ನಡೆದಿದೆ ಎಂದು ಹಾಪ್‌ಕಾಮ್ಸ್ ಅಧಿಕಾರಿಗಳು ಹೇಳಿದ್ದಾರೆ.
ಈಗಿನ ಪ್ರಾಯೋಗಿಕ ಮಾರಾಟದಲ್ಲಿ ನಿರೀಕ್ಷೆಯಷ್ಟು ಹಾಪ್‌ಕಾಮ್ಸ್ ಉತ್ಪನ್ನಗಳು ಮಾರಾಟವಾಗುತ್ತಿಲ್ಲ. ಒಮ್ಮೇಲೆ ನಾವು ಲಾಭ ನಿರೀಕ್ಷೆ ಮಾಡುವುದೂ ಒಳ್ಳೆಯದಲ್ಲ. ಕೆಲವು ಸಲ ತರಕಾರಿ ಮತ್ತು ಹಣ್ಣಿನ ಉತ್ಪನ್ನ ಮಾರಾಟವಾಗದೆ ಹೋದರೆ ಸಮಸ್ಯೆಗಳು ಉಂಟಾಗುತ್ತವೆ. ಆ ಬಗೆಗಿನ ನಷ್ಟದ ಬಗ್ಗೆಯೂ ಹಾಪ್‌ಕಾಮ್ಸ್ ಆಲೋಚನೆ ಮಾಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ತಿಂಗಳಿಗೆ 4-5 ಲಕ್ಷ ರೂ. ವಹಿವಾಟು: ಮಾರಾಟ ವಿಸ್ತರಣೆಗೆ ಮಹತ್ವ ನೀಡಿರುವ ಹಾಪ್‌ಕಾಮ್ಸ್, ಇದೀಗ ಬೆಂಗಳೂರಿನ ದೊಡ್ಡ, ದೊಡ್ಡ ಅಪಾರ್ಟ್‌ಮೆಂಟ್‌ಗಳಲ್ಲಿ ತನ್ನ ವಾಹನಗಳ ಮೂಲಕ ಹಣ್ಣು ಮತ್ತು ತರಕಾರಿ ಮಾರಾಟ ಮಾಡುತ್ತಿದೆ. ತಿಂಗಳಿಗೆ ಸುಮಾರು 4 ರಿಂದ 5 ಲಕ್ಷ ರೂ.ವ್ಯಾಪಾರ ವಹಿವಾಟು ನಡೆಸುತ್ತಿದೆ. ಕಮ್ಮನಹಳ್ಳಿ ವ್ಯಾಪ್ತಿಯ ನಂದಿ ಸೆಕ್ಟರ್, ಶಿವಾಜಿನಗರದ ಎಂಬೆಸಿಸ್ ಅಪಾರ್ಟ್‌ಮೆಂಟ್, ಜಯನಗರದ ಮಂತ್ರಿ ಗಾರ್ಡನ್, ಕೊಡಿಗೇಹಳ್ಳಿಯ ಶ್ರೀರಾಮ್, ಪ್ರಸ್ಟೀಜ್, ಶೋಭಾ ಸೇರಿದಂತೆ ಹಲವು ಅಪಾರ್ಟ್‌ಮೆಂಟ್‌ಗಳಿಗೆ ಹಾಪ್‌ಕಾಮ್ಸ್ ವಾಹನಗಳು ತೆರಳಲಿವೆ.
ಎರಡು ದಿನಕ್ಕೆ ಒಂದು ಬಾರಿ ಹಾಪ್‌ಕಾಮ್ಸ್ ವಾಹನಗಳು ತೆರಳಲಿದ್ದು, ದಿನಕ್ಕೆ 10 ಸಾವಿರ ರೂ.ದಿಂದ 15 ಸಾವಿರ ರೂ.ವರೆಗೆ ವ್ಯಾಪಾರ ವಹಿವಾಟು ನಡೆಯುತ್ತದೆ ಎಂದು ಹಾಪ್‌ಕಾಮ್ಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಹಿಂದೆ ತೋಟದ ಬೆಳೆಗಾರರ ಸಹಕಾರಿ ಮಾರಾಟ ಮತ್ತು ಸಂಸ್ಕರಣ ಸಂಘ ನಿಯಮಿತದ ಅಧಿಕಾರಿಗಳು ಅಪಾರ್ಟ್‌ಮೆಂಟ್ ಕೇಂದ್ರೀಕರಿಸಿ ಹಾಪ್‌ಕಾಮ್ಸ್ ಮಳಿಗೆಗಳನ್ನು ತೆರೆಯುವ ಆಲೋಚನೆ ಮಾಡಿದ್ದರು. ಆದರೆ, ಅದು ಸಾಧ್ಯವಾಗಿರಲಿಲ್ಲ. ನಂತರ ವಾಹನಗಳ ಮೂಲಕ ಹಣ್ಣು-ತರಕಾರಿಗಳ ಮಾರಾಟಕ್ಕೆ ಹಾಪ್‌ಕಾಮ್ಸ್ ಮುಂದಾಗಿತ್ತು.
ಹಾಪ್‌ಕಾಮ್ಸ್ ತನ್ನ ಮಾರುಕಟ್ಟೆ ವಿಸ್ತರಣೆಯತ್ತ ಚಿಂತನೆ ಹರಿಸಿದೆ. ಆ ನಿಟ್ಟಿನಲ್ಲಿಯೇ ಹಲವು ಯೋಜನೆಗಳನ್ನು ರೂಪಿಸುತ್ತಿದೆ. ಇದರಲ್ಲಿ ಆನ್‌ಲೈನ್ ಮಾರುಕಟ್ಟೆ ಕೂಡ ಸೇರಿದೆ. ಆನ್‌ಲೈನ್ ಮಾರುಕಟ್ಟೆ ಲಾಭ-ನಷ್ಟ ನೋಡಿಕೊಂಡು ಮುಂದುವರಿಯಲಾಗುವುದು.
-ಡಾ. ಬಿ.ಎನ್.ಪ್ರಸಾದ್, ವ್ಯವಸ್ಥಾಪಕ ನಿರ್ದೇಶಕ, ಹಾಪ್‌ಕಾಮ್ಸ್
* ದೇವೇಶ ಸೂರಗುಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Food Department Operation: ಬಿಪಿಎಲ್ ಚೀಟಿದಾರರಿಗೆ ಎಪಿಎಲ್ ಕಾವು!
Shakti scheme; ಪುರುಷರಿಗೆ ಉಚಿತ ಪ್ರಯಾಣ ಸೌಲಭ್ಯ ಇಲ್ಲ: ರಾಮಲಿಂಗಾರೆಡ್ಡಿ
MUST WATCH
ಹೊಸ ಸೇರ್ಪಡೆ
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Bhairathi Ranagal Review: ರೋಣಾಪುರದ ರಣಬೇಟೆಗಾರ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.