ಭಾರತ ತಂಡದ ಆಸೀಸ್ ಪ್ರವಾಸ ಅತ್ಯಗತ್ಯ: ಲಬುಶೇನ್
Team Udayavani, May 5, 2020, 6:22 AM IST
ಸಿಡ್ನಿ: ಕೋವಿಡ್-19 ಕಾರಣ ದಿಂದ ಒಂದು ವೇಳೆ ಭಾರತವು ಮುಂಬರುವ ಆಸ್ಟ್ರೇಲಿಯ ಕ್ರಿಕೆಟ್ ಪ್ರವಾಸ ಕೈಗೊಳ್ಳಲಿದ್ದರೆ ನಾವು ಆಘಾತಕ್ಕೆ ಒಳಗಾಗಲಿದ್ದೇವೆ ಎಂದು ಆಸ್ಟ್ರೇಲಿಯದ ಖ್ಯಾತ ಬ್ಯಾಟ್ಸ್ ಮನ್ ಮಾರ್ನಸ್ ಲಬುಶೇನ್ ಅಭಿಪ್ರಾಯಪಟ್ಟಿದ್ದಾರೆ.
ಭಾರತದ ಆಸ್ಟ್ರೇಲಿಯ ಪ್ರವಾಸವು ಅಕ್ಟೋಬರ್‌ನಲ್ಲಿ ನಡೆಯಲಿರುವ ಟಿ20 ತ್ರಿಕೋನ ಸರಣಿಯೊಂದಿಗೆ ಆರಂಭಗೊಳ್ಳಲಿದೆ. ಡಿಸೆಂಬರ್‌ನಲ್ಲಿ ನಡೆಯುವ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯೊಂದಿಗೆ ಈ ಸರಣಿ ಮುಕ್ತಾಯಗೊಳ್ಳಲಿದೆ. ಸದ್ಯ ಪ್ರಯಾಣಕ್ಕೆ ನಿರ್ಬಂಧ ಮತ್ತು ಸಾಂಕಮಿಕ ರೋಗ ನಿಯಂತ್ರಣಕ್ಕೆ ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬ ಹಿನ್ನೆಲೆಯಲ್ಲಿ ಈ ಪ್ರವಾಸ ಅನಿಶ್ಚಿತತೆಯಲ್ಲಿದೆ.
ಅಕಸ್ಮಾತ್ ಭಾರತದ ವಿರುದ್ಧ ನಾವು ಕ್ರಿಕೆಟ್ ಆಡದಿದ್ದರೆ ನಾನು, ತಂಡ ಮತ್ತು ದೇಶ ಆಘಾತಕ್ಕೆ ಒಳಗಾಗುವ ಸಾಧ್ಯತೆಯಿದೆ ಎಂದರು ಲಬಿಶೇನ್.
ಆಸ್ಟ್ರೇಲಿಯವು ಕೋವಿಡ್-19 ಹರಡು ವಿಕೆಯ ವೇಗವನ್ನು ನಿಯಂತ್ರಿಸಿದ ರೀತಿಯಿಂದ ಯಾವುದೇ ಸಮಸ್ಯೆ ಯಿಲ್ಲದೆ ಭಾರತವು ಪ್ರವಾಸಗೈಯುವ ಸಾಧ್ಯತೆಯಿದೆ ಎಂದು ಲಬುಶೇನ್‌ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.