ರಾಶಿ ಫಲ: ಅವಿವಾಹಿತರಿಗೆ ವಿವಾಹ ಭಾಗ್ಯ ಒದಗುವುದು, ಅಧಿಕ ಧನ ಸಂಪಾದನೆ
Team Udayavani, Feb 18, 2023, 7:20 AM IST
ಮೇಷ: ಆರೋಗ್ಯ ಗಮನಿಸಿ. ಆಹಾರ ಸೇವನೆಯಲ್ಲಿ ಮಂಜಾಗ್ರತೆ ಅಗತ್ಯ. ಧಾರ್ಮಿಕ ಕಾರ್ಯಗಳಲಿ ಆಸಕ್ತಿ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲ. ಮಾತೃ ಸಮಾನರಿಂದ ನಿರೀಕ್ಷಿತ ಪ್ರೋತ್ಸಾಹ ಸಹಕಾರ ಲಭ್ಯ. ಉದ್ಯೋಗದಲ್ಲಿ ನಿರೀಕ್ಷಿತ ಧನಪ್ರಾಪ್ತಿ.
ವೃಷಭ: ಧಾರ್ಮಿಕ ಕಾರ್ಯಗಳಲ್ಲಿ ತಲ್ಲೀನತೆ. ದೂರ ಪ್ರಯಾಣ ತೀರ್ಥ ಕ್ಷೇತ್ರಗಳ ಸಂದರ್ಶನ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿದಾ ಯಕ ಅಭಿವೃದ್ಧಿ ಬದಲಾವಣೆ. ಉತ್ತಮ ಧನಾರ್ಜನೆ ಉಳಿತಾಯಕ್ಕೆ ಚಿಂತನೆ. ಗೃಹದಲ್ಲಿ ಸಂತಸದ ದಿನ.
ಮಿಥುನ: ಅವಿವಾಹಿತರಿಗೆ ವಿವಾಹ ಭಾಗ್ಯ ಒದಗುವುದು. ನೂತನ ಪಾಲುದಾರಿಕಾ ವ್ಯವಹಾರಗಳಲ್ಲಿ ಪ್ರಗತಿ ಅಭಿವೃದ್ಧಿ. ನಿರೀಕ್ಷಿಸಿದಂತೆ ಉದ್ಯೋಗ ವ್ಯವಹಾರಗಳಲ್ಲಿ ಸಫಲತೆ. ಅಧಿಕ ಧನಸಂಪಾದನೆ. ಉತ್ತಮ ವಾಕ್‌ಚತುರತೆಯ ನಡೆ.
ಕರ್ಕ: ಆರೋಗ್ಯ ವೃದ್ಧಿ. ಗುರುಹಿರಿಯರ ಮಾರ್ಗದರ್ಶನ. ವಿವಾಹ ಭಾಗ್ಯ. ನೂತನ ಮಿತ್ರರ ಸಮಾಗಮ. ಗೃಹದಲ್ಲಿ ಸಂಭ್ರಮದ ವಾತಾವರಣ. ಉದ್ಯೋಗದಲ್ಲಿ ಶ್ರೇಯಸ್ಸು ಪ್ರಗತಿ, ಕಾರ್ಯಸಾಧನೆ. ಸಾಹಸದಿಂದ ಧನವೃದ್ಧಿ.
ಸಿಂಹ: ವಿದ್ಯಾರ್ಥಿಗಳಿಗೆ ವಿಫುಲ ಅವಕಾಶ. ಪ್ರೋತ್ಸಾಹ ಧನ ಲಾಭ ಸಂಭವ. ಉದ್ಯೋಗಸ್ಥರಿಗೆ ಅಧಿಕ ಪರಿಶ್ರಮ, ಹೆಚ್ಚಿದ ಜವಾಬ್ದಾರಿ. ಮಾತಿನಲ್ಲಿ ತಾಳ್ಮೆ ಸಹನೆ ಅಗತ್ಯ. ಅನಗತ್ಯ ಚರ್ಚೆಗೆ ಅವಕಾಶ ನೀಡದಿರಿ. ಗೃಹ ಉಪಯೋಗಿ ವಸ್ತು ಸಂಗ್ರಹ.
ಕನ್ಯಾ: ಗೃಹದಲ್ಲಿ ಸಂತಸದ ವಾತಾವರಣ. ಆಸ್ತಿ ಸಂಚಯನದಲ್ಲಿ ಆಸಕ್ತಿ. ಬಂಧು ಮಿತ್ರರ ಆಗಮನದಿಂದ ಹೆಚ್ಚಿದ ಖುಷಿ. ಅವಿವಾಹಿತರಿಗೆ ಉತ್ತಮ ಸಂಬಂಧ ಒದಗುವ ಕಾಲ. ಆರ್ಥಿಕವಾಗಿ ಸುದೃಢ. ಹೆಚ್ಚಿದ ವರಮಾನ. ನೂತನ ಹೂಡಿಕೆ ಸಂಭವ.
ತುಲಾ: ಉದ್ಯೋಗ ವ್ಯವಹಾರಗಳಲ್ಲಿ ತಲ್ಲೀನತೆ. ಕಾರ್ಯಸಾಧಿಸಿದ ಸಂತೋಷ. ನಿರೀಕ್ಷಿತ ಸ್ಥಾನ ಗೌರವಾದಿ ಲಭ್ಯ. ದೂರದ ವ್ಯವಹಾರಗಳಿಂದ ಅಧಿಕ ಧನಾರ್ಜನೆ. ಉತ್ತಮ ವಾಕ್‌ಚತುರತೆ. ಮನೆಯಲ್ಲಿ ಸಂತಸದ ವಾತಾವರಣ. ಗುರುಹಿರಿಯರಿಗೆ ಹೆಚ್ಚಿದ ಜವಾಬ್ದಾರಿ.
ವೃಶ್ಚಿಕ: ದೀರ್ಘ ಪ್ರಯಾಣದಿಂದ ದೇಹಾ ಯಾಸ ಸಂಭವ. ಆರೋಗ್ಯದ ಬಗ್ಗೆ ಉದಾ ಸೀನತೆ ಸಲ್ಲದು. ನೂತನ ಮಿತ್ರರ ಭೇಟಿ. ಸಹೋದ್ಯೋಗಿಗಳ ಸಹಕಾರದಿಂದ ಕೆಲಸ ಕಾರ್ಯಗಳಲ್ಲಿ ಪ್ರಗತಿ. ಅವಿವಾಹಿತರಿಗೆ ವಿವಾಹ ಭಾಗ್ಯ ಕೂಡಿ ಬರುವುದು.
ಧನು: ಸರಿಯಾದ ನಿಯಮ ಪಾಲನೆಯಿಂದ ಆರೋಗ್ಯ ವೃದ್ಧಿ. ಉತ್ತಮ ಧನಾರ್ಜನೆ. ನಿರೀಕ್ಷಿತ ಸಹಾಯ ಲಭ್ಯ. ಸಣ್ಣ ಪ್ರಯಾಣ ಯೋಗ. ಸಾಂಸಾರಿಕ ಸುಖ ಮಧ್ಯಮ. ವಿದ್ಯಾರ್ಥಿಗಳು ಪರರ ಸಹಾಯ ಪಡೆದು ನಿರೀಕ್ಷಿತ ಸಾಧನೆ. ಧಾರ್ಮಿಕ ಕಾರ್ಯಗಳಲ್ಲಿ ಪರಿಶ್ರಮ.
ಮಕರ: ಆರೋಗ್ಯದಲ್ಲಿ ಸುಧಾರಣೆ. ದೂರದ ವ್ಯವಹಾರಗಳಿಂದ ಉತ್ತಮ ಧನಾರ್ಜನೆ. ಆಸ್ತಿ ವಿಚಾರದಲ್ಲಿ ಪ್ರಗತಿ. ಸಾಂಸಾರಿಕ ಸುಖ ಮಧ್ಯಮ. ಮಕ್ಕಳ ಬಗ್ಗೆ ಹೆಚ್ಚಿದ ಗಮನ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ಒದಗುವ ಸಂಭವ.
ಕುಂಭ: ದೀರ್ಘ ಪ್ರಯಾಣ ನಿರೀಕ್ಷಿತ ಸಫಲತೆ. ಉತ್ತಮ ಸ್ಥಾನಗೌರವಾದಿ ಲಭ್ಯ. ಅಧಿಕ ಧನಾರ್ಜನೆ. ನೂತನ ಮಿತ್ರರ ಭೇಟಿ. ಆಸ್ತಿ ವಿಚಾರದಲ್ಲಿ ಹೆಚ್ಚಿದ ಜವಾಬ್ದಾರಿ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾದ ತೃಪ್ತಿ. ದಾಂಪತ್ಯ ಸುಖ ತೃಪ್ತಿದಾಯಕ.
ಮೀನ: ಹಣಕಾಸಿನ ವಿಚಾರದಲ್ಲಿ ಜಾಗ್ರತೆಯ ನಡೆ ಅಗತ್ಯ. ಮಾತನಾಡುವಾಗ ದಾಕ್ಷಿಣ್ಯಕ್ಕೆ ಒಳಗಾಗದಿರಿ. ಸರಿಯಾದ ದಾಖಲೆಯೊಂದಿಗೆ ವ್ಯವಹರಿಸಿ. ದೂರದ ವ್ಯವಹಾರ ನಿಮಿತ್ತ ಪ್ರಯಾಣ ಸಂಭವ. ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ತಕ್ಕ ಫಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Daily Horoscope: ಕಾರ್ಯವೈಖರಿ ಸುಧಾರಣೆಗೆ ಚಿಂತನೆ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Horoscope: ಪುತ್ರಿಗೆ ದೂರದಿಂದ ವಿವಾಹ ಪ್ರಸ್ತಾವ ಬರಲಿದೆ
Horoscope: ಈ ರಾಶಿಯವರಿಗೆ ಧೈರ್ಯ ಮತ್ತು ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ
Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Politics: ಕುಸುಮಾರನ್ನು ಎಂಎಲ್ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.