ರಾಶಿ ಫಲ: ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ, ಉಳಿತಾಯದಲ್ಲಿ ಆಸಕ್ತಿ
Team Udayavani, Feb 22, 2023, 7:26 AM IST
ಮೇಷ: ವ್ಯಾಪಾರ ವ್ಯವಹಾರ ಉದ್ಯೋಗದಲ್ಲಿ ವಿಶ್ವಾಸ ಪಾತ್ರರಾಗಿ ಜವಾಬ್ದಾರಿ ನಿರ್ವಹಿಸಿ. ಪರರ ಹಣ ನಿರ್ವಹಿಸುವಾಗ ಪಾರದರ್ಶಕತೆಗೆ ಆದ್ಯತೆ ನೀಡಿ. ಧೈರ್ಯದಿಂದ ಕೆಲಸ ಮಾಡಿರಿ. ಅವಿವಾಹಿತರಿಗೆ ವಿವಾಹ ಭಾಗ್ಯ. ಮನೋರಂಜನೆಯಿಂದ ಕೂಡಿದ ದಿನಚರಿ.
ವೃಷಭ: ಗೃಹ, ವಾಹನಾದಿ ಸುಖ ವೃದ್ಧಿ. ನೂತನ ಬಂಧುಮಿತ್ರರ ಸಂಗಮ. ಕೆಲಸ ಕಾರ್ಯಗಳಲ್ಲಿ ಗೌರವಾನ್ವಿತ ಪ್ರಗತಿ. ಸಂದರ್ಭಕ್ಕೆ ಸರಿಯಾಗಿ ಜಾಣತನ ಜವಾಬ್ದಾರಿ ಪ್ರದರ್ಶಿಸಿ ಜನಮನ್ನಣೆ ಲಭ್ಯ. ಉತ್ತಮ ಪ್ರಗತಿದಾಯಕ ಧನಾರ್ಜನೆ.
ಮಿಥುನ: ಧಾರ್ಮಿಕ ಚಟುವಟಿಕೆಗಳಲ್ಲಿ ತಲ್ಲೀನತೆ. ದೇವತಾ ಸ್ಥಳಗಳ ಸಂದರ್ಶನ, ಮನಃತೃಪ್ತಿ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ. ಉಳಿತಾಯದಲ್ಲಿ ಆಸಕ್ತಿ. ಗುರುಹಿರಿಯರಿಗೆ ಉತ್ತಮ ಸ್ಥಾನ ಲಾಭದಿಂದ ಸಂತೋಷ.
ಕರ್ಕ: ದೂರ ಪ್ರಯಾಣ. ಗುರುಹಿರಿಯರಿಗೆ ಸಂತೋಷಪ್ರದರಾಗಿರಿ. ತಾಳ್ಮೆ ಸಹನೆಯಿಂದ ಜನಪದರೊಂದಿಗೆ ವ್ಯವಹರಿಸಿ ಕಾರ್ಯ ಸಾಧಿಸಿಕೊಳ್ಳಿ. ವಿದ್ಯಾರ್ಥಿಗಳಿಗೆ ಹೆಚ್ಚಿದ ಪರಿಶ್ರಮ. ಆರೋಗ್ಯ ಗಮನಿಸಿ. ನಿರೀಕ್ಷಿತ ಧನ ಸಂಪತ್ತು ವೃದ್ಧಿ.
ಸಿಂಹ: ಹೆಚ್ಚಿದ ಜವಾಬ್ದಾರಿಯಿಂದ ದೇಹಾಯಾಸ ತೋರಿತು. ಹಠಮಾರಿತನ ಸಲ್ಲದು. ಮಾತಿನಲ್ಲಿ ಸಹನೆ ಇರಲಿ. ದಾಂಪತ್ಯದಲ್ಲಿ ಪರಸ್ಪರರಿಂದ ಸಹಕಾರ. ಸಹೋದರ ಸಮಾನರಿಂದ ಉತ್ತಮ ಪ್ರೋತ್ಸಾಹ ಸಹಕಾರ ಲಭಿಸೀತು.
ಕನ್ಯಾ: ಪಾಲುದಾರಿಕಾ ವ್ಯವಹಾರಗಳಲ್ಲಿ ಜಾಗ್ರತೆಯ ನಡೆ ಇರಲಿ. ಆರೋಗ್ಯ ಗಮನಿಸಿ. ದೀರ್ಘ ಪ್ರಯಾಣ. ಅಧ್ಯಯನಶೀಲರಿಗೆ ಸರ್ವ ವಿಧದ ಸೌಲಭ್ಯ ಲಭಿಸೀತು. ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷಿತ ಅಭಿವೃದ್ಧಿ. ಆಸ್ತಿ ವಿಚಾರದಲ್ಲಿ ನಿರ್ಣಯ ಸಾಧ್ಯ.
ತುಲಾ: ಮನೋರಂಜನೆಯಲ್ಲಿ ತಲ್ಲೀನತೆ. ಆಹಾರ ಸೇವನೆಯಲ್ಲಿ ಜಾಗ್ರತೆ ವಹಿಸಿ. ಉದ್ಯೋಗ ವ್ಯವಹಾರಗಳಲ್ಲಿ ಅಪವಾದ ಬರದಂತೆ ಎಚ್ಚರ ವಹಿಸಿ. ಪಾರದರ್ಶಕತೆಗೆ ಆದ್ಯತೆ ನೀಡಿ. ಆರ್ಥಿಕತೆಯಲ್ಲಿ ಪ್ರಗತಿ ತೋರುವುದು. ಸಾಂಸಾರಿಕ ಸುಖ ತೃಪ್ತಿದಾಯಕ.
ವೃಶ್ಚಿಕ: ನಿರೀಕ್ಷೆಗೂ ಮೀರಿದ ಧನ ಸಂಪತ್ತು ಪ್ರಾಪ್ತಿ. ಉದ್ಯೋಗ ವ್ಯವಹಾರಗಳಲ್ಲಿ ಗೌರವ ಕೀರ್ತಿ ಲಭಿಸಿದ್ದರಿಂದ ಮನಃತೃಪ್ತಿ. ಜನಮನ್ನಣೆ. ಸ್ಪಷ್ಟತೆಯಿಂದ ಲಾಭ. ನಾಯಕತ್ವ ಗುಣ ವೃದ್ಧಿ. ಗೃಹದಲ್ಲಿ ಸಂತಸದ ವಾತಾವರಣ.
ಧನು: ವಿದ್ಯಾರ್ಜನೆಯಲ್ಲಿ ಆಸಕ್ತಿ. ಅನಿರೀಕ್ಷಿತ ಸುಖ ವ್ಯವಸ್ಥೆಗಳು ಲಭಿಸುವುದು. ಪದವಿ ಪ್ರಾಪ್ತಿ.. ಮಾನಸಿಕ ತೃಪ್ತಿ. ಯೋಚಿಸಿದಂತೆ ಕಾರ್ಯಗಳು ನಡೆಯುವುದು. ಗುರುಹಿರಿಯರ ಮಾರ್ಗದರ್ಶನದ ಲಾಭ. ಅವಿವಾಹಿತರಿಗೆ ಯೋಗ್ಯ ಸಂಬಂಧ ಒದಗುವುದು.
ಮಕರ: ಕೆಲಸ ಕಾರ್ಯಗಳಲ್ಲಿ ಯಶಸ್ಸು. ಗೌರವ ವೃದ್ಧಿ. ಜನಮನ್ನಣೆ ಲಭ್ಯ. ಪದವಿ ಪ್ರಾಪ್ತಿ. ಮಾನಸಿಕ ತೃಪ್ತಿ. ಯೋಚಿಸಿದಂತೆ ಕಾರ್ಯಗಳು ನಡೆಯುವುವು. ಗುರುಹಿರಿಯ ಉತ್ತಮ ಮಾರ್ಗದರ್ಶನದ ಲಾಭ. ಮಾನಸಿಕವಾಗಿ ನೆಮ್ಮದಿಯ ದಿನ.
ಕುಂಭ: ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾದ ತೃಪ್ತಿ. ಧಾರ್ಮಿಕ ಕ್ಷೇತ್ರಗಳ ಸಂದರ್ಶನ. ಕೆಲಸಕಾರ್ಯಗಳಲ್ಲಿ ಉತ್ತಮ ಬದಲಾವಣೆ ತೋರಿಬಂದಾವು. ಹೂಡಿಕೆಗಳಲ್ಲಿ ಆಸಕ್ತಿ. ಬಂಧುಮಿತ್ರರ ಸಹಕಾರ. ಮಕ್ಕಳಿಂದ ಸಂತೋಷದ ವಾರ್ತೆ.
ಮೀನ: ಅಧಿಕ ಧನ ಸಂಪಾದನೆ. ಉದ್ಯೋಗದಲ್ಲಿ ಕೀರ್ತಿ ಅಭಿವೃದ್ಧಿ. ದಂಪತಿಗಳಲ್ಲಿ ಪರಸ್ಪರ ಸಹಕಾರ ಪ್ರೀತಿ ವೃದ್ಧಿ. ಹೂಡಿಕೆಗಳಲ್ಲಿ ಆಸಕ್ತಿ. ಆರೋಗ್ಯ ವೃದ್ಧಿ. ಜವಾಬ್ದಾರಿಯುತ ನಡೆಯಿಂದ ಪ್ರವೃತ್ತಿಯಲ್ಲಿ ಲಾಭ. ವಿದ್ಯಾರ್ಥಿಗಳಿಗೆ ಹೆಚ್ಚಿದ ಪರಿಶ್ರಮ. ಗುರುಹಿರಿಯರ ಆರೋಗ್ಯ ಗಮನಿಸಿ. ದೇವತಾ ಕಾರ್ಯಗಳಲ್ಲಿ ಭಾಗವಹಿಸಿದ ತೃಪ್ತಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್
Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ
Mangaluru: ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.