ರಾಶಿ ಫಲ: ನಿರೀಕ್ಷಿತ ಧನಾರ್ಜನೆ, ಸಹೋದ್ಯೋಗಿಗಳಿಂದ ಸಹಕಾರ
Team Udayavani, Feb 28, 2023, 7:26 AM IST
ಮೇಷ: ದೈರ್ಯ ಉತ್ಸಾಹದಿಂದ ಕೂಡಿದ ದಿನ. ಭೂಮಿ, ವಾಹನಾದಿಗಳಿಂದ ನಿರೀಕ್ಷಿತ ಧನಲಾಭ. ಗುರುಹಿರಿಯರ ಉತ್ತಮ ಮಾರ್ಗದರ್ಶನ. ವ್ಯವಹಾರದಲ್ಲಿ ಅಧಿಕ ಶ್ರಮ. ನೂತನ ಮಿತ್ರರ ಸಮಾಗಮ. ದಾಂಪತ್ಯ ತೃಪ್ತಿದಾಯಕ.
ವೃಷಭ: ಉದ್ಯೋಗ ವ್ಯವಹಾರದಲ್ಲಿ ಜವಾಬ್ದಾರಿಯುತ ನಡೆಯಿಂದ ಉತ್ತಮ ಪ್ರಗತಿ. ಆರೋಗ್ಯ ವೃದ್ಧಿ. ಪಾಲುದಾರಿಕಾ ಚಟುವಟಿಕೆಗಳಲ್ಲಿ ಗೌರವ ಆದರಾದಿ ಪ್ರಾಪ್ತಿ. ಅಭಿವೃದ್ಧಿದಾಯಕ ಧನಾರ್ಜನೆ. ಸಾಂಸಾರಿಕ ಸುಖ ಉತ್ತಮ.
ಮಿಥುನ: ಜಲೋತ್ಪನ್ನ ವಸ್ತುಗಳಿಂದಲೂ, ಆಹಾರ ಉದ್ಯಮಗಳಿಂದಲೂ ಪಾಲುದಾರಿಕಾ ವ್ಯವಹಾರಗಳಿಂದ ಅನುಕೂಲಕರ ಪರಿಸ್ಥಿತಿ. ನಿರೀಕ್ಷಿತ ಧನಾರ್ಜನೆ. ಉತ್ತಮ ವಾಕ್‌ಚತುರತೆ. ಸಹೋದ್ಯೋಗಿಗಳಿಂದ ಸಹಕಾರ. ಸಾಂಸಾರಿಕ ಸುಖ ಮಧ್ಯಮ.
ಕರ್ಕ: ಅನಿರೀಕ್ಷಿತ ಗೌರವ ಪ್ರಾಪ್ತಿ. ಆರೋಗ್ಯ ವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ಅಧಿಕ ಧನಾಗಮ. ಮಕ್ಕಳು ಸಂಸಾರದಿಂದ, ವ್ಯವಹಾರದಿಂದ ತೃಪ್ತಿ, ಸಮಾಧಾನ. ಧಾರ್ಮಿಕ ಕೆಲಸಗಳಲ್ಲಿ ಭಾಗಿ. ಸಾರ್ವಜನಿಕ ಸಂಪರ್ಕ ಕಾರ್ಯದಲ್ಲಿ ಶ್ರೇಯಸ್ಸು ಇತ್ಯಾದಿ ಶುಭ ಫಲ.
ಸಿಂಹ: ದೀರ್ಘ ಪ್ರಯಾಣ. ವಿದೇಶ ಮೂಲ ವ್ಯವಹಾರದಲ್ಲಿ ಪ್ರಗತಿ. ಗೃಹೋಪಕರಣ ವಸ್ತುಗಳ ಸಂಗ್ರಹ. ನೂತನ ಉದ್ಯೋಗ ವ್ಯವಹಾರಕ್ಕೆ ಅವಕಾಶ. ಆರೋಗ್ಯ ಮಧ್ಯಮ. ಆಹಾರಾದಿ ಸೇವನೆಯಲ್ಲಿ ಎಚ್ಚರ ವಹಿಸಿ. ಸಾಂಸಾರಿಕ ಸುಖ ತೃಪ್ತಿದಾಯಕ.
ಕನ್ಯಾ: ಆತ್ಮೀಯರಲ್ಲಿ ತಾಳ್ಮೆಯಿಂದ ವ್ಯವಹರಿಸಿ. ಜ್ಞಾನಾರ್ಜನೆಗೆ, ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ. ದೂರದ ವ್ಯವಹಾರಗಳಲ್ಲಿ ಪ್ರಗತಿ. ಧನಾರ್ಜನೆಗೆ ಸಮನಾದ ಖರ್ಚು. ಸಾಂಸಾರಿಕ ವಿಚಾರ ದಲ್ಲಿ ತಾಳ್ಮೆ ಅಗತ್ಯ. ಹಿರಿಯರ ಆರೋಗ್ಯ ಗಮನಿಸಿ.
ತುಲಾ: ಉತ್ತಮ ಆರೋಗ್ಯ. ಅಧಿಕ ಧನಾರ್ಜನೆ. ಗೃಹ, ವಾಹನ, ಭೂಮಿ ವಿಚಾರಗಳಲ್ಲಿ ಒಳ್ಳೆ ಬದಲಾವಣೆ. ಅವಿವಾಹಿತರಿಗೆ ವಿವಾಹ ಭಾಗ್ಯ. ಉದ್ಯೋಗದಲ್ಲಿ ಹೆಚ್ಚಿನ ಶ್ರಮ. ನಿರೀಕ್ಷಿತ ಸ್ಥಾನ ಲಾಭ. ಗುರುಹಿರಿಯರಿಂದ ಸಂತೋಷದ ವಾರ್ತೆ.
ವೃಶ್ಚಿಕ: ಉದ್ಯೋಗ ವ್ಯವಹಾರದಲ್ಲಿ ಹೆಚ್ಚಿನ ಗಮನದಿಂದ ಯಶಸ್ಸು. ಅಧಿಕ ಧನಾರ್ಜನೆಗೆ ಅವಕಾಶ. ಗುರುಹಿರಿಯರ ಸಹಕಾರ ಮಾರ್ಗದರ್ಶನ. ದಾಂಪತ್ಯದಲ್ಲಿ ಹೆಚ್ಚಿದ ಪ್ರೀತಿ ವಾತ್ಸಲ್ಯ. ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ ಇತ್ಯಾದಿ ಶುಭಫಲ.
ಧನು: ಸಣ್ಣ ಪ್ರಯಾಣದಿಂದ ನಿರೀಕ್ಷಿತ ಸ್ಥಾನಸುಖ. ಉತ್ತಮ ಧನಸಂಪಾದನೆ. ಕುಟುಂಬಸುಖ ವೃದ್ಧಿ. ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚಿನ ಆಸಕ್ತಿ. ಆರೋಗ್ಯದಲ್ಲಿ ಸುಧಾರಣೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ಶ್ರಮದಿಂದ ಕಾರ್ಯ ಸಫಲತೆ.
ಮಕರ: ಉತ್ತಮ ಧನಾಗಮವಿದ್ದರೂ ಖರ್ಚಿಗೆ ಹಲವು ದಾರಿ. ಆರೋಗ್ಯದಲ್ಲಿ ಉತ್ತಮ ಸುಧಾರಣೆ. ಮಾತಿನಲ್ಲಿ ತಾಳ್ಮೆ ಹಿಡಿತದಿಂದ ಸಫಲತೆ. ದಾಂಪತ್ಯ ಸುಖ ವೃದ್ಧಿ. ಹಿರಿಯರ ಆರೋಗ್ಯ ಗಮನಿಸಿ. ಪಾಲುದಾರಿಕಾ ವ್ಯವಹಾರದಲ್ಲಿ ಪ್ರಗತಿ.
ಕುಂಭ: ದೀರ್ಘ ಪ್ರಯಾಣದಿಂದ ನಿರೀಕ್ಷಿತ ಸುಖ. ಆಸ್ತಿ ವಿಚಾರಗಳಲ್ಲಿ ಎಚ್ಚರಿಕೆ ನಡೆಯಿಂದ ಪ್ರಗತಿ. ಸಾಂಸಾರಿಕ ವಿಚಾರದಲ್ಲಿ ತಾಳ್ಮೆ ಇರಲಿ. ಗುರುಹಿರಿಯರ ಆರೋಗ್ಯ ವೃದ್ಧಿ. ಹಣಕಾಸಿನ ವಿಚಾರದಲ್ಲಿ ಅತ್ಯುತ್ತಮ ಪ್ರಗತಿ.
ಮೀನ: ಆರೋಗ್ಯ ಗಮನಿಸಿ. ದಾಂಪತ್ಯ ತೃಪ್ತಿದಾಯಕ. ಮಕ್ಕಳಿಂದ ಸಂತೋಷ ವೃದ್ಧಿ. ವಿದ್ಯಾರ್ಥಿಗಳಿಗೆ ವಿಪುಲ ಅವಕಾಶ. ಪಾಲುಗಾರಿಕಾ ವ್ಯವಹಾರಸ್ಥರು ಸಹನೆಯಿಂದ ಕಾರ್ಯ ಸಾಧಿಸಿಕೊಳ್ಳಿ. ಉದ್ಯೋಗಸ್ಥರಿಗೆ ಅಧಿಕ ಶ್ರಮದಿಂದ ಧನಾರ್ಜನೆ. ನೂತನ ಅವಕಾಶಗಳು ಒದಗಿ ಬರುವುವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Daily Horoscope: ಕಾರ್ಯವೈಖರಿ ಸುಧಾರಣೆಗೆ ಚಿಂತನೆ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Horoscope: ಪುತ್ರಿಗೆ ದೂರದಿಂದ ವಿವಾಹ ಪ್ರಸ್ತಾವ ಬರಲಿದೆ
Horoscope: ಈ ರಾಶಿಯವರಿಗೆ ಧೈರ್ಯ ಮತ್ತು ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ
Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.