ರಾಶಿ ಫಲ: ಆರೋಗ್ಯ ಗಮನಿಸಿ, ದೂರದ ವ್ಯವಹಾರಗಳಲ್ಲಿ ಪ್ರಗತಿ
Team Udayavani, Feb 4, 2023, 7:32 AM IST
ಮೇಷ: ಘರ್ಷಣೆಗೆ ಅವಕಾಶ ನೀಡದೇ ಪಾರದರ್ಶಕತೆಗೆ ಆದ್ಯತೆ ನೀಡಿ ಕಾರ್ಯ ನಿರ್ವಹಿಸುವುದ ರಿಂದ ಉದ್ಯೋಗ ವ್ಯವಹಾರಗಳಲ್ಲಿ ಯಶಸ್ಸು ಲಭ್ಯ. ಧನಾಗಮನ ಅತ್ಯುತ್ತಮ. ಭೂಮ್ಯಾದಿ ವ್ಯವಹಾರಗಳಲ್ಲಿ ಅನುಕೂಲಕರ ಪರಿಸ್ಥಿತಿ. ವಿದ್ಯಾರ್ಥಿಗಳಿಗೆ ಹೆಚ್ಚಿದ ಶ್ರಮ.
ವೃಷಭ: ಧಾರ್ಮಿಕ ಕ್ಷೇತ್ರ ಸಂದರ್ಶನ. ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗಿ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿಯಿಂದ ಕೂಡಿದ ಬದಲಾವಣೆ. ಸಾಂಸಾರಿಕ ಸುಖ ಮಧ್ಯಮ. ಸಹೋದ್ಯೋಗಿ ಗಳೊಂದಿಗೆ ತಾಳ್ಮೆಯಿಂದ ವ್ಯವಹರಿಸಿ.
ಮಿಥುನ: ನಿರೀಕ್ಷೆಯಂತೆ ಉತ್ತಮ ವಾಕ್ ಚತುರತೆಯಿಂದ ಹೆಚ್ಚಿದ ಧನಲಾಭ. ಆರೋಗ್ಯ ಗಮನಿಸಿ. ದೂರದ ವ್ಯವಹಾರಗಳಲ್ಲಿ ಪ್ರಗತಿ. ಸಹೋದರ ಸಮಾನರಿಂದ ಪ್ರೋತ್ಸಾಹ ಸಹಕಾರ. ವಿದ್ಯಾರ್ಜನೆಯಲ್ಲಿ ತಲ್ಲೀನತೆ. ವಿದ್ಯಾರ್ಥಿಗಳ ನಿಮಿತ್ತ ಪರಿಶ್ರಮ.
ಕರ್ಕ: ಉದ್ಯೋಗ ವ್ಯವಹಾರಗಳಲ್ಲಿ ಸಫಲತೆ ಗಳಿಸಲು ಹೆಚ್ಚು ತಾಳ್ಮೆ ಪರಿಶ್ರಮ ಅಗತ್ಯ. ಆರೋಗ್ಯ ಗಮನಿಸಿ. ಹಣಕಾಸಿನ ವಿಚಾರದಲ್ಲಿ ಜಾಗ್ರತೆಯ ನಡೆ ಯಿಂದ ನೆಮ್ಮದಿ ಲಭಿಸೀತು. ಗುರು ಹಿರಿಯರ ಚರ್ಚೆಗೆ ಆಸ್ಪದ ನೀಡದಿರಿ.
ಸಿಂಹ: ಆರೋಗ್ಯ ಗಮನಿಸಿ. ದೀರ್ಘ ಪ್ರಯಾಣದಲ್ಲಿ ಸರಿಯಾದ ನಿಯಮ ಪಾಲಿಸಿ. ಉದ್ಯೋಗ ವ್ಯವಹಾರದಲ್ಲಿ ಅತೀ ಉದಾರತೆಯಿಂದ ತೊಂದರೆ ಸಂಭವ. ಹಣಕಾಸಿನ ಬಗ್ಗೆ ಪಾರದರ್ಶಕತೆ ಇರಲಿ. ವಿಶ್ರಾಂತಿಗೆ ಗಮನಹರಿಸಿ.
ಕನ್ಯಾ: ಸ್ವಜನರಲ್ಲಿ ವಿಶ್ವಾಸ ಪ್ರೀತಿ ಆತ್ಮೀಯತೆ ತೋರುವುದರಿಂದ ಗೌರವಾದಿ ವೃದ್ಧಿ. ಜಲೋತ#ನ್ನ ವಸ್ತುಗಳ ಕ್ರಯ ವಿಕ್ರಯದಲ್ಲಿ ಹೆಚ್ಚಿದ ವರಮಾನ. ಉತ್ತಮ ವಾಕ್‌ಚತುರತೆಯಿಂದ ಜನರಂಜನೆ. ಸಾಂಸಾರಿಕ ಸುಖ ವೃದ್ಧಿ.
ತುಲಾ: ಹಠಮಾರಿತನ ಸಲ್ಲದು. ಸುಮ್ಮನೆ ನಿಷ್ಠುರಕ್ಕೆ ಕಾರಣವಾಗದಿರಿ. ತಾಳ್ಮೆ ಸಹನೆಯಿಂದ ವ್ಯವಹರಿಸಿ ನಿರೀಕ್ಷಿತ ಗುರಿಸಾಧಿಸಿಕೊಳ್ಳಿ. ಹಣಕಾಸಿನ ವಿಚಾರದಲ್ಲಿ ಉತ್ತಮ ಪ್ರಗತಿ. ಆಸ್ತಿ ವಿಚಾರದಲ್ಲಿ ಹೆಚ್ಚು ಪರಿಶ್ರಮ ಅಗತ್ಯ.
ವೃಶ್ಚಿಕ: ಆರೋಗ್ಯ ವೃದ್ಧಿ. ಹೆಚ್ಚಿದ ಸ್ಥಾನಮಾನ ಗೌರವ. ಬಂಧು ಮಿತ್ರರ ಸಹಕಾರ. ಕೈತುಂಬಾ ಉದ್ಯೋಗ ವ್ಯವಹಾರ ಸಂಭವ. ಸಾಂಸಾರಿಕ ಸುಖ ವೃದ್ಧಿ. ಗುರುಹಿರಿಯರ ಉತ್ತಮ ಮಾರ್ಗದರ್ಶನ ಪ್ರಾಪ್ತಿ. ವಿದ್ಯಾರ್ಥಿಗಳಿಗೆ ಹೆಚ್ಚಿದ ಪರಿಶ್ರಮ.
ಧನು: ಉದ್ಯೋಗ ವ್ಯವಹಾರಗಳಲ್ಲಿ ಉತ್ತಮ ಬದಲಾವಣೆ ಸಂಭವ. ದೀರ್ಘ ಪ್ರಯಾಣದಿಂದ ಲಾಭ. ನೂತನ ಮಿತ್ರರ ಸಮಾಗಮ. ಆಸ್ತಿ ಭೂಮಿ ಕಟ್ಟಡ ವಿಚಾರಗಳಲ್ಲಿ ಮುನ್ನಡೆ. ಸಾಂಸಾರಿಕ ಸುಖ ಮಧ್ಯಮ. ಆಸ್ತಿ ವಿಚಾರದಲ್ಲಿ ತಲ್ಲೀನತೆ.
ಮಕರ: ಮಕ್ಕಳಿಂದ ಹೆಚ್ಚಿದ ಸಂತೋಷ. ಬಹು ಮಿತ್ರರ ಸಮಾಗಮ. ಉದ್ಯೋಗ ವ್ಯವಹಾರಗಳಲ್ಲಿ ವಿಫುಲ ಅವಕಾಶ. ಸಾಂಸಾರಿಕ ಸುಖ ವೃದ್ಧಿ. ಅನಿರೀಕ್ಷಿತ ಧನಾಮನ ಹಾಗೂ ಹೆಚ್ಚಿದ ಉಳಿತಾಯ. ಧನಾರ್ಜನೆಯ ಅತ್ತುತ್ತಮ ಅವಕಾಶ.
ಕುಂಭ: ಆಸ್ತಿ ವಿಚಾರದಲ್ಲಿ ಪ್ರಗತಿ. ಬಂಧು ಮಿತ್ರರ ಸಹಕಾರ. ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷಿತ ಪ್ರಗತಿ. ಧನಾರ್ಜನೆಗೆ ಉತ್ತಮ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಅವಕಾಶ ಗೌರವಾದಿ ಪ್ರಾಪ್ತಿ. ದಾಂಪತ್ಯ ತೃಪ್ತಿದಾಯಕ.
ಮೀನ: ಗೃಹೋಪ ವಸ್ತುಗಳ ಸಂಗ್ರಹ. ಆರೋಗ್ಯ ಗಮನಿಸಿ. ಸಹೋದರ ಸಮಾನರಿಂದಲೂ ಉತ್ತಮ ಸಹಕಾರ ಸಂಭವ. ಹೆಚ್ಚಿದ ವರಮಾನ. ಗೃಹದಲ್ಲಿ ಸಂತಸದ ವಾತಾವರಣ. ಬಂಧು ಮಿತ್ರರ ಸಮಾಗಮ. ಸಂತಸದಿಂದ ಕೂಡಿದ ದಿನ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಈ ರಾಶಿಯವರಿಗೆ ಧೈರ್ಯ ಮತ್ತು ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ
Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
Daily Horoscope: ಉದ್ಯೋಗ ಹುಡುಕುವವರಿಗೆ ಶುಭಸೂಚನೆ, ಅನವಶ್ಯ ಭೀತಿಯನ್ನು ದೂರವಿಡಿ
Daily Horoscope: ಸಕಾರಾತ್ಮಕ ಚಿಂತನೆಯಿಂದ ಯಶಸ್ಸು, ಪ್ರತಿಭೆ ವೃದ್ಧಿಗೆ ಅವಕಾಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.