Daily Horoscope: ಆರೋಗ್ಯ ಬಗ್ಗೆ ಗಮನಹರಿಸಿ, ಅತೀ ದೇಹಾಯಾಸ ಸಂಭವ
Team Udayavani, Jul 6, 2023, 7:17 AM IST
ಮೇಷ: ಅಧಿಕ ಹಠ ಮಾಡದೇ ಸಹನೆ ಪರಸ್ಪರ ಸಹಕಾರದಿಂದ ಕಾರ್ಯಪ್ರವೃತ್ತರಾದರೆ ಯಶಸ್ಸು ಲಭಿಸಲಿದೆ. ಆರೋಗ್ಯ ಗಮನಿಸಿ. ಹಣಕಾಸಿನ ವಿಚಾರದಲ್ಲಿ ಪ್ರಗತಿ. ಉದ್ಯೋಗ ವ್ಯವಹಾರಗಳಲ್ಲಿ ಪ್ರಾಮಾಣಿಕತೆಯ ಪ್ರದರ್ಶನದಿಂದ ಪ್ರೋತ್ಸಾಹ ದಾಂಪತ್ಯ ತೃಪ್ತಿ.
ವೃಷಭ: ಆರೋಗ್ಯ ಸುದೃಢ. ಗೌರವ ಸ್ಥಾನ ಮಾನಾಧಿಗಳ ವೃದ್ಧಿ. ಜನಮನ್ನಣೆ. ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರಿಯತೆ. ದೀರ್ಘ ಪ್ರಯಾಣ. ದೇಶ ವಿದೇಶಗಳ ವ್ಯವಹಾರಗಳಲ್ಲಿ ಅಭಿವೃದ್ಧಿ. ಬಂಧುಮಿತ್ರರ ಭೇಟಿಯಿಂದ ಮಾನಸಿಕ ನೆಮ್ಮದಿ.
ಮಿಥುನ: ಸಂಶೋಧಕರಿಗೆ ಆಶಾವಾದ. ಪ್ರವೃತ್ತರಿಗೆ ಅನುಕೂಲಕರ ದಿನ. ಆರೋಗ್ಯ ಬಗ್ಗೆ ಗಮನಹರಿಸಿ.ಅತೀ ದೇಹಾಯಾಸ ಸಂಭವ. ದೂರದ ಮಿತ್ರರ ಭೇಟಿ. ದಾಂಪತ್ಯದಲ್ಲಿ ಅನುರಾಗ ವೃದ್ಧಿ. ಗುರುಹಿರಿಯರ ಮಾರ್ಗದರ್ಶನದ ಲಾಭ.
ಕರ್ಕ: ಪರರಿಗೆ ಉಪಕಾರ ಮಾಡಲು ಹೋಗಿ ತೊಂದರೆ ಆಹ್ವಾನಿಸದಿರಿ. ಪಾರದರ್ಶಕತೆ ಸ್ಪಷ್ಟತೆಯೊಂದಿಗೆ ವ್ಯವಹರಿಸಿ. ಉದ್ಯೋಗ ವ್ಯವಹಾರಗಳಲ್ಲಿ ಪ್ರಯತ್ನಕ್ಕೆ ತಕ್ಕ ಪ್ರತಿಫಲ ದೊರಕಲಿದೆ. ಮಾತೃ ಸಮಾನರಿಂದ ಪ್ರೋತ್ಸಾಹ. ಗೃಹದಲ್ಲಿ ಸಂತಸ.
ಸಿಂಹ: ಆರೋಗ್ಯ ಬಗ್ಗೆ ಗಣನೀಯ ಎಚ್ಚರ ಅಗತ್ಯ. ಆಹಾರ ಸೇವನೆಯಲ್ಲಿ ಮುಂಜಾಗ್ರತೆ ವಹಿಸಿರಿ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ. ದಂಪತಿ ಗಳಲ್ಲಿ ಪರಸ್ಪರ ಸಹಕಾರ. ವಿದ್ಯಾರ್ಥಿಗಳಿಗೆ ಅನುಕೂಲಕರ ಪರಿಸ್ಥಿತಿ. ದೇವತಾ ಪ್ರಾಥನೆಯಿಂದ ನೆಮ್ಮದಿ.
ಕನ್ಯಾ: ಆರೋಗ್ಯ ವೃದ್ಧಿ. ಗೃಹೋಪಯೋಗಿ ವಸ್ತುಗಳ ಸಂಗ್ರಹ. ಬಂಧುಮಿತ್ರರ ಸಮಾಗಮ. ಆಸ್ತಿ ಸಂಚಯನಕ್ಕೆ ಆದ್ಯತೆ. ಹೂಡಿಕೆಗಳಲ್ಲಿ ಲಾಭ. ದಂಪತಿಗಳಲ್ಲಿ ಪರಸ್ಪರ ಅನುರಾಗ ವೃದ್ಧಿ. ಮಕ್ಕಳಿಂದ ಸಂತೋಷದ ವಾರ್ತೆ. ವ್ಯವಹಾರಗಳಲ್ಲಿ ಗೌರವ ಪ್ರಾಪ್ತಿ.
ತುಲಾ: ಸಮಾಜದಲ್ಲಿ ಹೆಚ್ಚಿದ ಗೌರವ ಆದರ ಮಾನ್ಯತೆ. ಅಧಿಕ ಮನಃ ಸಂತೋಷ. ಸಂದರ್ಭಕ್ಕೆ ಸರಿಯಾಗಿ ಸಿಗುವ ಸಹಾಯದಿಂದ ಕೆಲಸ ಕಾರ್ಯಗಳಲ್ಲಿ ಗಣನೀಯ ಪ್ರಗತಿ. ಹಣಕಾಸಿನ ವಿಚಾರದಲ್ಲಿ ಸರಿಯಾದ ಲೆಕ್ಕಾಚಾರ ಅಗತ್ಯ. ಮಾತಿನಲ್ಲಿ ಸ್ಪಷ್ಟತೆಗೆ ಆದ್ಯತೆ ನೀಡಿ.
ವೃಶ್ಚಿಕ: ಹೆಚ್ಚಿದ ಪರಿಶ್ರಮ. ದೇಹಾಯಾಸ ಆಗದಂತೆ ನಿಗಾವಹಿಸಿ. ಗೃಹದಲ್ಲಿ ಸಂತಸದ ವಾತಾವರಣ. ಬಂಧುಮಿತ್ರರ ಭೇಟಿ ಸಹಕಾರ. ಗುರುಹಿರಿಯರ ಉತ್ತಮ ಮಾರ್ಗದರ್ಶನದ ಲಾಭ. ದಂಪತಿಗಳಲ್ಲಿ ಹೆಚ್ಚಿದ ಪರಸ್ಪರ ಪ್ರೀತಿ ಪ್ರೋತ್ಸಾಹ.
ಧನು: ಸಣ್ಣ ಪ್ರಯಾಣ. ಲೆಕ್ಕಾಚಾರದ ಆರ್ಥಿಕ ಸ್ಥಿತಿ. ಉದ್ಯೋಗ ವ್ಯವಹಾರಗಳಲ್ಲಿ ಪರಿಶ್ರಮ ಜವಾಬ್ದಾರಿಯುತ ನಡೆಯಿಂದ ಪ್ರಗತಿ ಸಂಭವ. ಸಹೋದರ ಸಮಾನರು, ಸಹೋದ್ಯೋಗಿಗಳಿಂದ ಉತ್ತಮ ಸಹಕಾರ. ಶಿಸ್ತುಬದ್ಧ ನಿಯಮಗಳಲ್ಲಿ ಆಸಕ್ತಿ.
ಮಕರ: ಪಾಲುಗಾರಿಕಾ ವ್ಯವಹಾರಗಳಲ್ಲಿ ಅಭಿವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ಆರ್ಥಿಕ ಪ್ರಗತಿ. ದಂಪತಿಗಳಲ್ಲಿ ಅನ್ಯೋನ್ಯತೆ. ಗುರುಹಿರಿಯರ ಸಹಕಾರ. ಮಾರ್ಗದರ್ಶನದ ಲಾಭ. ಗೃಹದಲ್ಲಿ ಸಂತೋಷದ ವಾತಾವರಣ.
ಕುಂಭ: ನಿರೀಕ್ಷಿಸಿದ ಧನ ಲಾಭ. ಆರೋಗ್ಯದಲ್ಲಿ ಗಣನೀಯ ವೃದ್ಧಿ. ಗೃಹದಲ್ಲಿ ಸಂಭ್ರಮದ ವಾತಾವರಣ. ನೂತನ ಬಂಧುಮಿತ್ರರ ಆಗಮನ. ವಿದ್ಯಾರ್ಥಿಗಳಿಗೆ ಎಲ್ಲಾ ವಿಧದ ಸೌಕರ್ಯ ಲಭ್ಯ. ಭೂಮಿ ಆಸ್ತಿ ವಿಚಾರದಲ್ಲಿ ಪ್ರಗತಿ.
ಮೀನ: ದೀರ್ಘ ಪ್ರಯಾಣ. ಹೂಡಿಕೆಗಳಲ್ಲಿ ಆಸಕ್ತಿ. ದೂರದ ವ್ಯವಹಾರಗಳಲ್ಲಿ ಪ್ರಗತಿ. ದಂಪತಿಗಳಲ್ಲಿ ಅನುರಾಗ ವೃದ್ಧಿ. ಆರೋಗ್ಯ ಗಮನಿಸಿ. ಸಂದಭೋìಚಿತವಾಗಿ ಆಲೋಚನೆ ಉಪಾಯದಿಂದ ಕಾರ್ಯ ಸಫಲತೆ. ಭೂಮಿ ಆಸ್ತಿ ವಿಚಾರಗಳಲ್ಲಿ ಆಸಕ್ತಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ರಾಯಚೂರಲ್ಲಿ ಮತ್ತೋರ್ವ ಬಾಣಂತಿ, ಹಸುಗೂಸು ಸಾವು
Borewell Tragedy: 10 ದಿನದ ಕಾರ್ಯಾಚರಣೆ ಬಳಿಕ ಬದುಕಿ ಬಂದ ಬಾಲೆ, ಇದು ಪವಾಡ ಎಂದ ಪೋಷಕರು
Mysuru: ಯೋಗಾನರಸಿಂಹಸ್ವಾಮಿ ದೇಗುಲದಲ್ಲಿ ಭಕ್ತರಿಗೆ 2 ಲಕ್ಷ ಲಡ್ಡು ವಿತರಣೆ
Mysuru: ಕೆಆರ್‌ಎಸ್ ರಸ್ತೆಗೆ “ಸಿದ್ದರಾಮಯ್ಯ ಆರೋಗ್ಯ ಮಾರ್ಗ’ ನಿಶ್ಚಿತ: ಲಕ್ಷ್ಮಣ್
Sandalwood: ಪ್ರತಿಭೆ ಪ್ರದರ್ಶಿಸಲು ಕಲಾವಿದರಿಗೆ ಸೂಕ್ತ ವೇದಿಕೆ ಅಗತ್ಯ: ನಟ ಡಾಲಿ ಧನಂಜಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.