Daily Horoscope: ಅನ್ಯರಿಗೆ ಸಹಾಯ ಮಾಡಲು ಹೋಗಿ ತೊಂದರೆಗೊಳಗಾಗದಿರಿ
Team Udayavani, Jun 20, 2023, 7:08 AM IST
ಮೇಷ: ದೇವತಾ ಭಕ್ತಿ ಶ್ರದ್ಧೆ. ವಾಕ್ ಚತುರೆಯಿಂದ ಕೂಡಿದ ಕಾರ್ಯವೈಖರಿ. ಸರಕಾರಿ ವ್ಯವಹಾರಗಳಲ್ಲಿ ಪ್ರಗತಿ. ಸ್ವಾಸಾಮರ್ಥ್ಯದಿಂದ ಪರಿಶ್ರಮದಿಂದ ಕೂಡಿದ ಅಧಿಕ ಧನಾರ್ಜನೆ. ಎಲ್ಲಾ ಜನರಿಂದಲೂ ಗೌರವ ಆದರ ಮನ್ನಣೆ ದೊರಕುವ ದಿನ.
ವೃಷಭ: ಸಂಪೂರ್ಣ ದೇವತಾನುಗ್ರಹದಿಂದ ಕೂಡಿದ ದಿನ. ಧಾರ್ಮಿಕ ಕಾರ್ಯಗಳ ನೇತೃತ್ವ. ದೂರದ ವ್ಯವಹಾರಗಳಲ್ಲಿ ಅನಿರೀಕ್ಷಿತ ಅಭಿವೃದ್ಧಿ. ಗುರುಹಿರಿಯರ ಪ್ರೋತ್ಸಾಹ. ಆಸ್ತಿ ವಿಚಾರದಲ್ಲಿ ಉತ್ತಮ ಬೆಳವಣಿಗೆ. ಗೃಹದಲ್ಲಿ ಸಂತಸದ ವಾತಾವರಣ.
ಮಿಥುನ: ಹೆಚ್ಚಿದ ದೇಹಾಯಾಸ ಪರಿಶ್ರಮದಿಂದ ಕೂಡಿದ ಕಾರ್ಯವೈಖರಿ. ಅನ್ಯರಿಗೆ ಸಹಾಯ ಮಾಡಲು ಹೋಗಿ ತೊಂದರೆಗೊಳಗಾಗದಿರಿ. ಧಾರ್ಮಿಕ ಕಾರ್ಯಗಳಿಗೆ ಧನವ್ಯಯ. ಹಣಕಾಸಿನ ವಿಚಾರಗಳಲ್ಲಿ ಸಾಹಸ ಪ್ರವೃತ್ತಿ ಸಲ್ಲದು.
ಕರ್ಕ: ಆರ್ಥಿಕ ವಿಚಾರದಲ್ಲಿ ಅಧಿಕ ಗಮನಹರಿಸುವಿಕೆ. ಸಾಹಸ ಪ್ರವೃತ್ತಿಯಿಂದ ಕೂಡಿದ ಕಾರ್ಯ. ಹೆಚ್ಚಿದ ಜನಸಂಪರ್ಕ. ಉದ್ಯೋಗ ವ್ಯವಹಾರಗಳಲ್ಲಿ ವಾಕ್‌ಚತುರತೆಯ ನಡೆ. ಆಸ್ತಿ ವಿಚಾರ ದಲ್ಲಿ ಗೊಂದಲ. ಅವಿವಾಹಿತರಿಗೆ ವಿವಾಹ ಯೋಗ.
ಸಿಂಹ: ಅಧ್ಯಯನದಲ್ಲಿ ಆಸಕ್ತಿ. ಅನ್ಯರಲ್ಲಿ ಅವಲಂಭಿಯಾಗದೇ ಗಾಂಭೀರ್ಯದಿಂದ ಕೂಡಿದ ವ್ಯವಹಾರದಿಂದ ಯಶಸ್ಸು. ಆರೋಗ್ಯದಲ್ಲಿ ಸುಧಾರಣೆ. ಹಣಕಾಸಿನ ವಿಚಾರದಲ್ಲಿ ಅಜಾಗ್ರತೆಯಿಂದ ನಷ್ಟ ಸಂಭವ. ಗುರು ಹಿರಿಯರಿಂದ ಸಂತೋಷ.
ಕನ್ಯಾ: ದೈಹಿಕ ಮಾನಸಿಕ ಸಂತುಷ್ಟತೆ. ವಿದ್ಯಾರ್ಥಿಗಳಿಗೆ ಅನುಕೂಲಕರ ಅಭಿವೃದ್ಧಿದಾಯಕ ದಿನ. ಗೌರವ ಆದರಗಳು ಲಭಿಸುವ ಅವಕಾಶ. ಉದ್ಯೋಗ ವ್ಯವಹಾರಗಳಲ್ಲಿ ಜವಾಬ್ದಾರಿಯುತ ನಡೆಯಿಂದ ಕೀರ್ತಿ, ತೃಪ್ತಿ.
ತುಲಾ: ಮನೋರಂಜನೆಯಿಂದ ಕೂಡಿದ ದಿನ. ಅವಿವಾಹಿತರಿಗೆ ವಿವಾಹ ಭಾಗ್ಯ. ದೂರ ಪ್ರಯಾಣ ಸಂಭವ. ಆಸ್ತಿ ಹೂಡಿಕೆ ವಿಚಾರದಲ್ಲಿ ಪ್ರಗತಿ. ಜಲೋತ್ಪನ್ನ ವಸ್ತುಗಳ ಕ್ರಯ ವಿಕ್ರಯಗಳಲ್ಲಿ ಪ್ರಗತಿ. ಸರಕಾರಿ ಕೆಲಸ ಕಾರ್ಯಗಳಲ್ಲಿ ಪ್ರಗತಿ. ನಿರೀಕ್ಷಿತ ಧನ ವೃದ್ಧಿ.
ವೃಶ್ಚಿಕ: ತಾಳ್ಮೆ ಸಹನೆಯಿಂದ ವ್ಯವಹರಿಸಿದರೆ ಅಧಿಕ ಸ್ಥಾನ ಗೌರವಾದಿ ಲಭ್ಯ. ಹೆಚ್ಚಿದ ವರಮಾನ. ವಿದ್ಯಾರ್ಥಿಗಳಿಗೆ ಸಾಧನೆ ಮಾಡಲು ಅನುಕೂಲಕರ ವಾತಾವರಣ ಲಭಿಸುವುದು. ಜನಮನ್ನಣೆ ಪ್ರೋತ್ಸಾಹ ಲಭ್ಯ. ಅವಿವಾಹಿತರಿಗೆ ಯೋಗ್ಯ ನೆಂಟಸ್ಥಿಕೆ.
ಧನು: ದೂರ ಪ್ರಯಾಣ. ಹೂಡಿಕೆಗಳಲ್ಲಿ ಆಸಕ್ತಿ. ಉದ್ಯೋಗ ವ್ಯವಹಾರಗಳಲ್ಲಿ ಹೆಚ್ಚಿದ ಜವಾಬ್ದಾರಿ. ದಂಪತಿಗಳಲ್ಲಿ ಅನುರಾಗ ವೃದ್ಧಿ. ಸಂದಭೋìಚಿತವಾಗಿ ವ್ಯವಹರಿಸುವುದರಿಂದ ಜನಮನ್ನಣೆ, ಪ್ರೀತಿ ಸಂಪಾದನೆ. ಹಿರಿಯರ ಪ್ರೋತ್ರಾಹ .
ಮಕರ: ಆರೋಗ್ಯ ವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಲಭಿಸಿದ್ದರಿಂದ ಮನಃತೃಪ್ತಿ. ಪಾಲುದಾರಿಕಾ ವ್ಯವಹಾರಗಳಲ್ಲಿ ಸಾಮಾನ್ಯ ಪ್ರಗತಿ. ಬಂಧು ಮಿತ್ರರ ಸಹಕಾರ. ಗೃಹದಲ್ಲಿ ಸಂಭ್ರಮದ ವಾತಾವರಣ.
ಕುಂಭ: ದೂರ ಪ್ರಯಾಣ. ಆಸ್ತಿ ವಿಚಾರದಲ್ಲಿ ಹೂಡಿಕೆ ಪ್ರಗತಿ. ಉತ್ತಮ ಧನ ಸಂಪಾದನೆ. ಸಂದರ್ಭಕ್ಕೆ ಸರಿಯಾಗಿ ವಾಕ್‌ಚತುರತೆ ಪ್ರದರ್ಶನ. ಕೈಗೂಡಿದ ಕೆಲಸ ಕಾರ್ಯಗಳಿಗೆ ಸಹೋದರ ಸಮಾನರಿಂದ ಸಹಾಯ ಸಹಕಾರ ಲಭ್ಯ. ಮಕ್ಕಳಿಂದ ಸಂತೋಷ ವೃದ್ಧಿ.
ಮೀನ: ಆರೋಗ್ಯ ಸುದೃಢ. ಸಮಾಜಮುಖೀ ಕೆಲಸ ಕಾರ್ಯಗಳಲ್ಲಿ ಭಾಗಿಯಾದ ಸಂತೋಷ. ಜನಮನ್ನಣೆ. ವಾಹನಾದಿ ಸೌಕರ್ಯ ಪ್ರಾಪ್ತಿ. ಧಾರ್ಮಿಕ ವಿಚಾರಗಳಲ್ಲಿ ಆಸಕ್ತಿ. ದೇವತಾ ಕಾರ್ಯಗಳಲ್ಲಿ ಆಸಕ್ತಿ. ದೇವತಾ ಕಾರ್ಯಗಳನ್ನು ಗೌರವಿಸಿದ ತೃಪ್ತಿ. ಗೃಹದಲ್ಲಿ ಸಂಭ್ರಮದ ವಾತಾವರಣ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope; ದಿನವಿಡೀ ಒಂದಾದ ಮೇಲೊಂದರಂತೆ ಬರುವ ಕೆಲಸಗಳು…
Horoscope: ಈ ರಾಶಿಯವರಿಗೆ ಸಂಸಾರದಲ್ಲಿ ಮಾನಸಿಕ ನೆಮ್ಮದಿ ಇರಲಿದೆ
Horoscope: ಈ ರಾಶಿಯ ಅವಿವಾಹಿತರಿಗೆ ಯೋಗ್ಯ ಸಂಗಾತಿ ಸಿಗುವ ಭರವಸೆ
Daily Horoscope: ಅವಿವಾಹಿತರಿಗೆ ವಿವಾಹ ಯೋಗ, ವಸ್ತ್ರ ಆಭರಣ ವ್ಯಾಪಾರಿಗಳಿಗೆ ಅಧಿಕ ಲಾಭ
Horoscope: ಹೆಚ್ಚಿನ ಜವಾಬ್ದಾರಿಗಳಿಗೆ ಸಿದ್ಧತೆ, ಗೃಹಿಣಿಯರ ಸ್ವಂತ ಆದಾಯ ಗಳಿಕೆ ವೃದ್ಧಿ
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್
Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.