Daily Horoscope: ಉದ್ಯೋಗ ವ್ಯವಹಾರಗಳಲ್ಲಿ ಅಧಿಕ ಪರಿಶ್ರಮ, ನಿಷ್ಠೆ ತೋರಿದರೂ ಅಡಚಣೆ ತೋರೀತು
Team Udayavani, Jun 23, 2023, 7:12 AM IST
ಮೇಷ: ಮಕ್ಕಳ ಬಗ್ಗೆ ವಿಶೇಷ ಗಮನ. ಉದ್ಯೋಗ ವ್ಯವಹಾರಗಳಲ್ಲಿ ಗೌರವ, ಪ್ರಗತಿ. ತಾಳ್ಮೆಯಿಂದ ನಡೆದುಕೊಳ್ಳಿ. ಮೇಲಧಿಕಾರಿಗಳ ಪ್ರೀತಿ ಪ್ರಾಪ್ತಿ. ಸತ್ಕರ್ಮದಲ್ಲಿ ಆಸಕ್ತಿ. ಆತುರದ ನಿರ್ಣಯ ಮಾಡದಿರಿ. ದೇವತಾ ಕಾರ್ಯದಿಂದ ಮನಃಶಾಂತಿ.
ವೃಷಭ: ನಿರೀಕ್ಷಿಸಿದಂತೆ ಅಧಿಕ ಧನಲಾಭ. ಉತ್ತಮ ವಾಕ್‌ಪಟುತ್ವ. ಜನಮನ್ನಣೆ. ಕುಟುಂಬ ಸುಖ ವೃದ್ಧಿ. ಸರಕಾರೀ ವ್ಯವಹಾರಗಳಲ್ಲಿ ಪ್ರಗತಿ. ಕೆಲಸ ಕಾರ್ಯಗಳಲ್ಲಿ ಮೇಲಧಿಕಾರಿಗಳಿಂದ ಪ್ರಶಂಸೆ. ಜ್ಞಾನ ವಿದ್ಯೆಯ ಪ್ರದರ್ಶನ. ಗೌರವ ಪ್ರಾಪ್ತಿ.
ಮಿಥುನ: ಉದ್ಯೋಗ ವ್ಯವಹಾರಗಳಲ್ಲಿ ಅಧಿಕ ಪರಿಶ್ರಮ. ನಿಷ್ಠೆ ತೋರಿದರೂ ಅಡಚಣೆ ತೋರೀತು. ಕೆಲಸ ನಿರ್ವಹಿಸುವಲ್ಲಿ ಜಾಗ್ರತೆ ವಹಿಸಿ. ವಿದ್ಯೆ ಜ್ಞಾನ ಸಂಪಾದನೆ ಕಡೆಗೆ ಗಮನ ಹರಿಸಿದರೆ ಯಶಸ್ಸು ಲಭಿಸಲಿದೆ. ಮಕ್ಕಳಿಂದ ಸಂತೋಷ.
ಕರ್ಕ: ದೂರ ಪ್ರಯಾಣ ಸಂಭವ. ದಂಪತಿಗಳಲ್ಲಿ ಅನುರಾಗ ವೃದ್ಧಿ. ಹೊಸ ವ್ಯವಹಾರಗಳ ಆರಂಭ. ಸಭೆ ಸಮಾರಂಭಗಳಲ್ಲಿ ಭಾಗಿಯಾಗಿ ಮನೋರಂಜನೆ. ಆರೋಗ್ಯ ಗಮನಿಸಿ. ನಷ್ಟ ದ್ರವ್ಯ ಸಿಗುವ ಯೋಗ.
ಸಿಂಹ: ಉದ್ಯೋಗ ವ್ಯವಹಾರಗಳಲ್ಲಿ ಧನವೃದ್ಧಿ. ಪಿತ್ರಾರ್ಜಿತ ಆಸ್ತಿ ವಿಚಾರಗಳ ಜವಾಬ್ದಾರಿ ಹೆಚ್ಚಳ. ಮಾತಿನಲ್ಲಿ ಸ್ಪಷ್ಟತೆಗೆ ಆದ್ಯತೆ ನೀಡಿ. ದಾಕ್ಷಿಣ್ಯ ಪ್ರವೃತ್ತಿಯಿಂದ ತೊಂದರೆ ಸಂಭವ. ದೂರದ ಊರಿನ ಕೆಲಸ ಕಾರ್ಯಗಳಲ್ಲಿ ಪ್ರಗತಿ.
ಕನ್ಯಾ: ಪಾಲುದಾರಿಕಾ ವ್ಯವಹಾರಗಳಲ್ಲಿ ಹೆಚ್ಚಿದ ಜವಾಬ್ದಾರಿ. ದೂರ ಪ್ರಯಾಣ. ದಂಪತಿಗಳಿಂದ ಪರಸ್ಪರ ಸಹಕಾರ. ಮನೋರಂಜನೆ. ಗೃಹದಲ್ಲಿ ಸಂತಸದ ವಾತಾವರಣ. ಮಕ್ಕಳಿಂದ ಶುಭ ವಾರ್ತೆ. ಅದಿಕ ಧನ ವ್ಯಯ ಸಂಭವ.
ತುಲಾ: ಸಣ್ಣ ಪ್ರಯಾಣ. ಸಹೋದ್ಯೋಗಿ ಗಳಿಂದಲೂ ಸಹೋದರ ಸಮಾನರಿಂದಲೂ ಪ್ರೋತ್ಸಾಹ. ಸಹಕಾರ ಪ್ರಾಪ್ತಿ. ದೈತ್ಯ ಉತ್ಸಾಹದಿಂದ ಕೂಡಿದ ಕಾರ್ಯ ವೈಖರಿಯಿಂದ ಪ್ರಗತಿ. ಮಾನ್ಯತೆ ಲಭ್ಯ. ಅವಿವಾಹಿತರಿಗೆ ವಿವಾಹ ಭಾಗ್ಯ.
ವೃಶ್ಚಿಕ: ಆರೋಗ್ಯ ಸುದೃಢ. ಎಲ್ಲಾ ವಿಧದ ಕೆಲಸ ಕಾರ್ಯಗಳಲ್ಲಿ ನಿರೀಕ್ಷಿಸಿದಂತೆ ಪ್ರಗತಿ. ಉತ್ತಮ ಧನ ಲಾಭ. ಯೋಗ್ಯ ನೆಂಟಸ್ತಿಕೆ ಕೂಡಿ ಬರುವುದು. ಧಾರ್ಮಿಕ ಆಚರಣೆಗಳಲ್ಲಿ ಅಡಚಣೆ ತೋರಿಬರಬಹುದು. ಹಿರಿಯರ ಆರೋಗ್ಯ ಗಮನಿಸಿ.
ಧನು: ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ. ಜನಪ್ರಶಂಸೆ ಲಭಿಸುವುದು. ಮೇಲಧಿಕಾರಿಗಳ ಸಹಕಾರ. ಮಾರ್ಗದರ್ಶನದ ಲಾಭ. ಅನೇಕ ಹೂಡಿಕೆಗಳಲ್ಲಿ ಆಸಕ್ತಿ ಹಾಗೂ ಕ್ರಿಯಾಶೀಲತೆ ಸಂಭವ. ಉತ್ತಮ ಧನಾರ್ಜನೆ. ಮಕ್ಕಳಿಂಗ ಗೌರವಕ್ಕಾಗಿ ಪರಿಶ್ರಮ.
ಮಕರ: ಕೆಲಸ ಕಾರ್ಯಗಳಲ್ಲಿ ನಿಷ್ಠೆ ಏಕಾಗ್ರತೆ ಯಿಂದ ಮೆಚ್ಚುಗೆ. ಸಂದಭೋìಚಿತವಾದ ಯೋಜನೆ ಯೋಚನೆಯಿಂದ ಸಫಲತೆ. ಹಣಕಾಸಿನ ವಿಚಾರದಲ್ಲಿ ಆಯವ್ಯಯ ಸಮಾನವಾಗಿರುವುದು. ಮಕ್ಕಳಿಂದ ಸುಖ ಸಂತೋಷವೃದ್ಧಿ. ಸಾಂಸಾರಿಕ ಸುಖ ತೃಪ್ತಿ.
ಕುಂಭ: ಪಾಲುದಾರಿಕಾ ವ್ಯವಹಾರಗಳಲ್ಲಿ ಹೆಚ್ಚಿದ ಜವಾಬ್ದಾರಿ. ಉತ್ತಮ ಜವಾಬ್ದಾರಿ ಯುತ ವಾಕ್ ಚತುರತೆಯಿಂದ ಅಧಿಕ ಧನಾಗಮನ. ದೂರದ ಮಿತ್ರರ ಸಲಹೆ ಸಹಕಾರದಿಂದ ಅಧಿಕ ಉಳಿತಾಯ ಸಂಭವ. ಆಸ್ತಿ ವಿಚಾರದಲ್ಲಿ ಪಾರದರ್ಶಕತೆಯಿರಲಿ.
ಮೀನ: ಗುರುಹಿರಿಯರ ಉತ್ತಮ ಮಾರ್ಗದರ್ಶನದ ಲಾಭ. ಹಣಕಾಸಿನ ವಿಚಾರದಲ್ಲಿ ನಿರೀಕ್ಷಿತ ಧನಲಾಭ. ಉದ್ಯೋಗ ವ್ಯವಹಾರಗಳಲ್ಲಿ ಪರಿಶ್ರಮ ಕಂಡುಬಂದರೂ ಜಯ ಸಾಧಿಸಿದ್ದರಿಂದ ಮನಃ ಸಮಾದಾನವಿರುವುದು. ಗೃಹೋಪಯೋಗಿ ವಸ್ತು ಸಂಗ್ರಹ. ದಾಂಪತ್ಯ ಸುಖ ತೃಪ್ತಿದಾಯಕ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಸಕಾರಾತ್ಮಕ ಚಿಂತನೆಯಿಂದ ಯಶಸ್ಸು, ಪ್ರತಿಭೆ ವೃದ್ಧಿಗೆ ಅವಕಾಶ
Daily Horoscope; ಅರ್ಧಕ್ಕೆ ನಿಂತಿರುವ ಕಾರ್ಯವನ್ನು ಪೂರ್ಣಗೊಳಿಸುವ ಪ್ರಯತ್ನ
Horoscope: ಈ ರಾಶಿಯವರಿಗೆ ಇಂದು ಅನಿರೀಕ್ಷಿತ ಧನಪ್ರಾಪ್ತಿ ಆಗಲಿದೆ
Horoscope: ಹೇಗಿದೆ ನೋಡಿ ಇಂದಿನ ನಿಮ್ಮ ರಾಶಿಫಲ
Daily Horoscope: ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ, ಉದ್ಯೋಗಾಸಕ್ತರಿಗೆ ಶುಭ ಸಮಾಚಾರ
MUST WATCH
ಹೊಸ ಸೇರ್ಪಡೆ
Hydarabad: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಏನೇನಿದೆ ಮಾರ್ಗಸೂಚಿಯಲ್ಲಿ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.